CONNECT WITH US  

 ರಾಮದಾಸ ಉಪಾಧ್ಯಾಯರಿಗೆ ಗೌರವ ಡಾಕ್ಟರೇಟ್‌

ಮುಂಬಯಿ: ಫ್ಲೋರಿಡಾದ ಇಂಡಿಯನ್‌ ಫೂರಂ ಆಫ್‌ ಯೋಗ ಸಂಸ್ಕೃತಂ ಯೂನಿವರ್ಸಿಟಿಯಿಂದ  ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್‌ ರಾಮದಾಸ ಉಪಾಧ್ಯಾಯ ರೆಂಜಾಳ ಅವರಿಗೆ ಗೌರವ ಡಾಕ್ಟರೇಟ್‌ ಲಭಿಸಿದೆ.

ಬೆಂಗಳೂರು ಸುಬ್ರಹ್ಮಣ್ಯಪುರದ ಬನಶಂಕರಿಯ ಶ್ರೀ  ಶಿವರಾತ್ರೀಶ್ವರ ಕೇಂದ್ರದ ಎಎಸ್‌ಎಸ್‌ ಕಾಲೇಜ್‌ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಹತ್ತನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಇಂಡಿಯನ್‌ ಫೂರಂ ಆಫ್‌ ಯೋಗ ಸಂಸ್ಕೃತಂ ಯೂನಿವರ್ಸಿಟಿ ಕುಲಪತಿ ಡಾ|  ಬಿ.ವಿ. ಕೆ. ಶಾಸ್ತ್ರಿ ಮತ್ತು ಡಾ| ಎಸ್‌. ಕೃಷ್‌ಯಪ್ಪ, ಡಾ| ಸಿ.ಎನ್‌. ಮಂಜುನಾಥ್‌, ಪತ್ರಕರ್ತ ಹಮೀದ್‌ ಪಾಳ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದು ವೇದಾಂಗ, ಜ್ಯೋತಿಷ ಅಧ್ಯಯನಕ್ಕಾಗಿ ರಾಮದಾಸ ಉಪಾಧ್ಯಾಯರಿಗೆ ಗೌರವ ಡಾಕ್ಟರೇಟ್‌ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ರೆಂಜಾಳ ಗುರುರಾಜ ಉಪಾಧ್ಯಾಯ ಮತ್ತು ವಸಂತಿ ಗುರುರಾಜ್‌ ದಂಪತಿ ಪುತ್ರರಾದ ರಾಮದಾಸ್‌ ಉಪಾಧ್ಯಾಯ ಅವರು ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಯೋಗ ಸಂಸ್ಕೃತಂ ವಿಶ್ವವಿದ್ಯಾಲಯ ಫ್ಲೋರಿಡಾ ಜಾಗತಿಕವಾಗಿ ಭಗದ್ಗೀತಾ ಪ್ರೇರಣೆ, ಧರ್ಮ ಪರಂಪರೆ, ಆಧ್ಯಾತ್ಮಿಕ, ಯೋಗ, ಭಾಷೆ, ಉನ್ನತ ಶಿಕ್ಷಣ, ಭಾರತೀಯ ಪರಂಪರೆ, ಸತ್ಸಂಗ ಜ್ಯೋತಿಷ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Trending videos

Back to Top