CONNECT WITH US  

ಜವಾಬ್‌:  ಸಾಧಕರಿಗೆ ಗೌರವಾರ್ಪಣೆ

ಮುಂಬಯಿ: ಜುಹೂ- ಅಂಧೇರಿ- ವಸೋìವಾ- ವಿಲೇ ಪಾರ್ಲೆ ಅಸೋಸಿಯೇಶನ್‌ ಬಂಟ್ಸ್‌ ಜವಾಬ್‌ 22ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಅಂಧೇರಿ ಪಶ್ಚಿಮದ ಗ್ರೀನ್‌ ಎಕರ್ ಸಮೀಪದ ಲೋಖಂಡ್‌ವಾಲಾ ಕಾಂಪ್ಲೆಕ್ಸ್‌ ರೆಸಿಡೆಂಟ್ಸ್‌ ಅಸೋಸಿಯೇಶನ್‌ ಮೈದಾನದಲ್ಲಿ ದಿ| ನ್ಯಾಯವಾದಿ ಆನಂದ ವಿ. ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಜವಾಬ್‌ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜವಾಬ್‌ನ ಮಾಜಿ ಅಧ್ಯಕ್ಷ, ವಿಶ್ವಸ್ತ, ವಿಸ್ವಾತ್‌ ಕೆಮಿಕಲ್ಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಬಿ. ವಿವೇಕ್‌ ಶೆಟ್ಟಿ,  ಆರ್ಯಭಟ ಪ್ರಶಸ್ತಿ ಪುರಸ್ಕೃತ ಹುರ್ಲಾಡಿ ರಘುವೀರ್‌ ಶೆಟ್ಟಿ, ತುಂಗಾ ಹಾಸ್ಪಿಟಲ್‌ನ ರಾಜೇಶ್‌ ಬಿ. ಶೆಟ್ಟಿ ಇವರನ್ನು  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ  ನಿಕಟಪೂರ್ವ ಅಧ್ಯಕ್ಷ ಶಿವರಾಮ ನಾಯ್ಕ, ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕೆ., ಗೌರವ ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ, ಜತೆ ಕೋಶಾಧಿಕಾರಿ ಶೇಖರ್‌ ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಎ. ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ರಘು ಎಲ್‌. ಶೆಟ್ಟಿ, ಸದಸ್ಯ ನೋಂದಾವಣಿ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್‌ ಎನ್‌. ಶೆಟ್ಟಿ, ಪತ್ರಿಕಾ ಮಾಧ್ಯಮ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಎಂ. ಶೆಟ್ಟಿ, ಡಾ| ಸದಾನಂದ ಶೆಟ್ಟಿ, ಬಿ. ಡಿ. ಶೆಟ್ಟಿ, ವಿಶ್ವನಾಥ ಎಸ್‌. ಹೆಗ್ಡೆ. ಶಂಕರ್‌ ಟಿ. ಶೆಟ್ಟಿ, ರಮೇಶ್‌ ಯು. ಶೆಟ್ಟಿ, ಎನ್‌. ಸಿ. ಶೆಟ್ಟಿ, ಆನಂದ ಪಿ. ಶೆಟ್ಟಿ, ನಾಗೇಶ್‌ ಎನ್‌. ಶೆಟ್ಟಿ, ವಿಶ್ವಸ್ತರುಗಳಾದ ದಿವಾಕರ ಎಂ. ಶೆಟ್ಟಿ,  ರಘು ಎಲ್‌. ಶೆಟ್ಟಿ, ಬಿ. ವಿವೇಕ್‌ ಶೆಟ್ಟಿ, ಗೀತಾ ಎಂ. ಶೆಟ್ಟಿ, ಜಯರಾಮ ಎನ್‌. ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ, ರಮೇಶ್‌ ವಿ. ಶೆಟ್ಟಿ, ಬಿ. ಆರ್‌. ಪೂಂಜ, ದಿವಾಕರ ಎಸ್‌. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಸುಧಾಕರ್‌ ಶೆಟ್ಟಿ, ಆನಂದ ಪಿ. ಶೆಟ್ಟಿ, ಸಿಎ ರವೀಂದ್ರ ಎನ್‌. ಶೆಟ್ಟಿ, ರತ್ನಾಕರ ರೈ, ರಘುರಾಮ ಕೆ. ಶೆಟ್ಟಿ, ಶೇಖರ್‌ ಎ. ಶೆಟ್ಟಿ, ನಾಗೇಶ್‌ ಎನ್‌. ಶೆಟ್ಟಿ, ಪಾಂಡುರಂಗ ಎಸ್‌. ಶೆಟ್ಟಿ, ಸುಬ್ಬಯ್ಯ ವಿ. ಶೆಟ್ಟಿ, ಮನ್‌ಮೋಹನ್‌ ಆರ್‌. ಶೆಟ್ಟಿ, ಭರತ್‌ ಶೆಟ್ಟಿ, ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವನ್ನು  ಕವಿತಾ  ಐ. ಆರ್‌. ಶೆಟ್ಟಿ  ನಿರ್ವಹಿಸಿದರು. ಜವಾಬ್‌ ಕೋಶಾಧಿಕಾರಿ ಅಶೋಕ್‌ ಕುಮಾರ್‌ ರಾಜು ಶೆಟ್ಟಿ ಅವರು ವಂದಿಸಿದರು. 

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು
 

Trending videos

Back to Top