CONNECT WITH US  

ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿ: ನಾಟಕ ಪ್ರದರ್ಶನ, ಸಮ್ಮಾನ

ಪುಣೆ: ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಆಯೋಜನೆಯಲ್ಲಿ ಫೆ. 8 ರಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ, ಬಂಟರ ಭವನದ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ  ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದ ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ ಪೊಪ್ಪ ಪ್ರದರ್ಶನಗೊಂಡಿತು.

ಈ ನಾಟಕದ ಮಧ್ಯಂತರದಲ್ಲಿ ಲೀಲಾಧರ ಶೆಟ್ಟಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ತಂಡದ ಪ್ರಸಿದ್ಧ ಕಲಾವಿದರಾದ ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಮರ್ವಿನ್‌ ಶಿರ್ವ, ನಿರ್ದೇಶಕ ಶರತ್‌ ಉಚ್ಚಿಲ ಹಾಗೂ ನಾಟಕ ತಂಡದ ಮುಂಬಯಿ  ಸಂಚಾಲಕ ದಿನೇಶ್‌ ಶೆಟ್ಟಿ ಕಾಪು  ಇವರನ್ನು ಸತ್ಕರಿಸಲಾಯಿತು.

ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಅಂಬಿಕಾ ವಿ. ಶೆಟ್ಟಿ ಮತ್ತು ಸದಸ್ಯರು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ಗಣೇಶ್‌ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ  ಶೇಖರ್‌ ಸಿ. ಶೆಟ್ಟಿ ಹಾಗೂ ಸುಭಾಷ್‌ ಎ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧಾಕರ್‌ ಸಿ. ಶೆಟ್ಟಿ, ಕೋಶಾಧಿಕಾರಿ ಪುಷ್ಪರಾಜ್‌ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ವಸಂತ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ  ಸುಧಾಕರ ಟಿ. ಶೆಟ್ಟಿ,   ಪದಾಧಿಕಾರಿಗಳಾದ  ಅರುಣ್‌ ಎಂ. ಶೆಟ್ಟಿ, ದಾಮೋದರ  ಜಿ. ಶೆಟ್ಟಿ, ಸಂಜೀವ ಆರ್‌. ಶೆಟ್ಟಿ, ಸಚ್ಚಿದಾನಂದ ಎಸ್‌. ಶೆಟ್ಟಿ, ಸುರೇಶ್‌ ವಿ. ಶೆಟ್ಟಿ, ಪ್ರಕಾಶ್‌ ಎಂ. ಶೆಟ್ಟಿ,  ವಿವೇಕ್‌ ಕೆ. ಶೆಟ್ಟಿ,  ದಿವಾಕರ ಎನ್‌. ಶೆಟ್ಟಿ,  ಜಯ ಎಸ್‌. ಶೆಟ್ಟಿ, ರಮೇಶ್‌ ಎಸ್‌. ಶೆಟ್ಟಿ, ಸಂಪತ್‌ ಪಿ. ಶೆಟ್ಟಿ, ರಾಜೇಶ್‌ ಎಲ್‌. ಶೆಟ್ಟಿ, ರತ್ನಾಕರ ಆರ್‌. ಶೆಟ್ಟಿ, ಜಗದೀಶ್‌ ಬಿ. ಶೆಟ್ಟಿ  ಉಪಸ್ಥಿತರಿದ್ದರು.

ಈ ಸಂದರ್ಭ ಲೀಲಾಧರ ಶೆಟ್ಟಿ  ಮಾತನಾಡಿ ಪುಣೆ ಬಂಟರ ಸಂಘದ ಈ ವೇದಿಕೆಯಲ್ಲಿ ಸಿಕ್ಕಿದ ಗೌರವ ನನ್ನ ಸೌಭಾಗ್ಯವಾಗಿದೆ. ಪುಣೆಯಲ್ಲಿ ಸಂತೋಷ್‌ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜ ಬಾಂಧವರ ಹಾಗೂ ದೇವರ ಆಶೀರ್ವಾದದಿಂದ ಈ ಭವ್ಯವಾದ ಭವನ ನಿರ್ಮಾಣಗೊಂಡಿದ್ದು  ಸಮಾಜದ ಹೆಮ್ಮೆಯಾಗಿದೆ. ನಾನೆಂದೂ ಇಂತಹ ಅಪೂರ್ವವಾದ ಭವನವನ್ನು ಬೇರೆಲ್ಲೂ ಕಂಡಿಲ್ಲ. ಇಂದು ನಮಗೆ ಕಲಾಸೇವೆಗೆ ಅವಕಾಶ ನೀಡಿರುವುದಕ್ಕೆ ವಂದನೆಗಳು. ಮುಂದೆಯೂ ನಮ್ಮ ನಾಡಿನ  ತುಳುಭಾಷೆ, ಸಂಸ್ಕೃತಿ, ಕಲಾಪ್ರಕಾರಗಳಿಗೆ ಸಂಘದ ಪ್ರೋತ್ಸಾಹ ನಿರಂತರವಾಗಿರಲಿ ಎಂದರು.

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ಲೀಲಾಧರ ಶೆಟ್ಟಿ ಸಮಾಜ ಸೇವೆಯಲ್ಲಿ ಹಾಗೂ ಕಲಾಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದು ಅವರನ್ನು ಇಂದು ಗೌರವಿಸಿರುವುದಕ್ಕೆ ಅಭಿಮಾನವೆನಿಸುತ್ತಿದೆ. ಅವರೊಬ್ಬ ಯಾವುದೇ  ಆಡಂಬರವಿಲ್ಲದ ಹೃದಯ ಶ್ರೀಮಂತಿಕೆ ಹೊಂದಿದ    ದಾರ್ಶನಿಕ ವ್ಯಕ್ತಿಯಾಗಿ¨ªಾರೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ವಿಶೇಷ ಸಹಕಾರವನ್ನು ನೀಡಿದ್ದು  ನಿಜವಾಗಿಯೂ ಅಭಿನಂದನಾರ್ಹರು ಎಂದರು.

ನಾಟಕದ ಮೊದಲು ಶಶಿಕಿರಣ್‌ ಶೆಟ್ಟಿ ಚಾವಡಿಯಲ್ಲಿ  ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಪದಾಧಿಕಾರಿಗಳು ಹಾಗೂ ನಾಟಕ ತಂಡದ ಕಲಾವಿದರು ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ದ. ಪ್ರಾದೇಶಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ. ಶೆಟ್ಟಿ ಲೀಲಾಧರ ಶೆಟ್ಟಿಯವರ ಸಮ್ಮಾನಪತ್ರ  ವಾಚಿಸಿದರು. ನಾಟಕ ಪ್ರದರ್ಶನದಲ್ಲಿ ಪುಣೆ ಬಂಟರ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉ.ಮತ್ತು ದ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಪುಣೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು


Trending videos

Back to Top