CONNECT WITH US  

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆ

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆಯು ಸಂಸ್ಥೆಯ ಅಧ್ಯಕ್ಷ  ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜ. 27ರಂದು ಬೆಳಗ್ಗೆ 10.30ರಿಂದ ಮಂಗಳೂರಿನ ಹೊಟೇಲ್‌ ಗೋಲ್ಡ್‌ ಪಿಂಚ್‌ನ  ಸಿಲ್ವರ್‌ ಬೆಲ್ಸ್‌ ಹಾಲ್‌ನಲ್ಲಿ ನಡೆಯಿತು.

ಒಕ್ಕೂಟದ ಕಾರ್ಯದರ್ಶಿ  ವಿಜಯಪ್ರಸಾದ ಆಳ್ವರವರು 2018-2019ನೇ ಸಾಲಿನ ಈವರೆಗಿನ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಹಾಗೂ ಒಕ್ಕೂಟಕ್ಕೆ ಎಫ್‌ಸಿಆರ್‌ಎ ನೋಂದಣಿ ಶೀಘ್ರವೇ ದೊರಕಲಿದೆ ಎಂದರು. ಒಕ್ಕೂಟದ ಕೋಶಾಧಿಕಾರಿ  ಕೊಲ್ಲಾಡಿ ಬಾಲಕೃಷ್ಣ  ರೈ ಅವರು ವೆಚ್ಚದ ವಿವರವನ್ನು ನೀಡಿದರು. ಈ ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ  ಒಕ್ಕೂಟದ ವತಿಯಿಂದ ಈವರೆಗೆ ಕೈಗೊಂಡ ಸಮಾಜಸೇವೆಯ ವಿವರವನ್ನು ಹಾಗೂ ಆರ್ಥಿಕವಾಗಿ ನೀಡಿದ ಸಹಾಯಧನ ಮೊತ್ತಕ್ಕೆ ಮಂಜೂರು ಪಡೆಯಲಾಯಿತು. ಇದೇ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ  ಕರ್ನಿರೆ ವಿಶ್ವನಾಥ ಶೆಟ್ಟಿಯವರು ದಾನವಾಗಿ ನೀಡಿದ ಬಳುRಂಜೆ ಗ್ರಾಮದ ಕರ್ನಿರೆಯ 1 ಎಕ್ರೆ ಜಾಗದಲ್ಲಿ ಒಕ್ಕೂಟವು ಈಗಾಗಲೇ ವಸತಿಯೋಜನೆ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈ ಬಗ್ಗೆ   ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ನಾವು ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಯೋಜನೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಒಕ್ಕೂಟದ ಜತೆ ಕಾರ್ಯದರ್ಶಿ  ಜಯಕರ ಶೆಟ್ಟಿ ಇಂದ್ರಾಳಿಯವರು ಮಂಗಳೂರಿನ ಲೈಟ್‌ ಹೌಸ್‌ ರಸ್ತೆಗೆ ಸಾವಿರಾರು ಕುಟುಂಬಗಳಿಗೆ ಅನ್ನದಾತರಾದ ದಿ|  ಮೂಲ್ಕಿ ಸುಂದರಾಂ ಶೆಟ್ಟಿಯವರ ಹೆಸರನ್ನಿಡಲು ಮಹಾನಗರ ಪಾಲಿಕೆ ನಿರ್ಣಯದ ಅನುಷ್ಠಾನದ ಬಗ್ಗೆ ತಮ್ಮ ಎಲ್ಲ ಬಂಟರ ಸಂಘಗಳು ಹಾಗೂ ಒಕ್ಕೂಟವು ಕಾರ್ಯಗತವಾಗಲು ಸಂಬಂಧಪಟ್ಟ ಹಿತೈಷಿಗಳ  ಸಹಕಾರದಿಂದ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು. ಇದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ,  ಈಗಾಗಲೇ ಬಂದ 170 ಅಶಕ್ತ ಕುಟುಂಬಗಳ ಫಲಾನುಭವಿಗಳ ಅರ್ಜಿಗಳನ್ನು ಮಂಜೂರು ಮಾಡಿ ಧನ ಸಹಾಯ ನೀಡಲಾಗಿದ್ದು ಹಾಗೂ  ಆಶ್ರಯ ಯೋಜನೆಯ ನೂರು ಮನೆಗಳ ಯೋಜನೆಯಡಿ ಈಗಾಗಲೇ 35 ಮನೆ‌ಗಳಿಗೆ ಮಂಜೂರಾತಿ ನೀಡಲಾಗಿದೆ. ಅದರ  ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ  ಉಳಿದ ಮನೆಗಳಿಗೆ ಶೀಘ್ರವೇ ಮಂಜೂರಾತಿ ನೀಡಲಾಗುವುದು. ಈ ಸಮಾಜ ಸೇವಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಕ್ಕೆ ಧನಸಹಾಯ  ನೀಡಲಾಗುವುದು ಎಂದರು.      ನಮ್ಮ ಆಡಳಿತ ಮಂಡಳಿ ಸದಸ್ಯರಲ್ಲಿ ನಿರ್ದೇಶಕರು, ಮಹಾಪೋಷಕರು, ಪೋಷಕರು ಹಾಗೂ ಇತರ ಆಡಳಿತ ಮಂಡಳಿ ಸದಸ್ಯರಲ್ಲಿ ಹೆಚ್ಚಿನ ಸದಸ್ಯರು ಮುಂಬಯಿ ಹಾಗೂ ಆಸುಪಾಸಿನ ನಗರಗಳಿಗೆ ಹತ್ತಿರವಿರುವುದರಿಂದ ಮುಂಬಯಿಯಲ್ಲಿ  ಚುನಾವಣೆ ನಡೆಸುವುದು ಸೂಕ್ತವೆಂದು  ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಅಧ್ಯಕ್ಷರಾದ  ಐಕಳ ಹರೀಶ್‌ ಶೆಟ್ಟಿಯವರು ಆಡಳಿತ ಮಂಡಳಿ ಸದಸ್ಯರಲ್ಲಿ  ಸಮಾಲೋಚನೆ ಮಾಡಿ ಜಾಗತಿಕ ಬಂಟರ ಸಂಘಗಳ  ಒಕ್ಕೂಟದ ಪದಾಧಿಕಾರಿಗಳ ಚುನಾವಣೆಯ ಮಾರ್ಚ್‌ 17ರಂದು ಸಂಜೆ 4ರಿಂದ 6 ರವರೆಗೆ ಬಂಟರ ಸಂಘದ, ಅನೆಕ್ಸ್‌ ಬಿಲ್ಡಿಂಗ್‌, ಬಂಟರ ಭವನ, ಕುರ್ಲಾ ಈಸ್ಟ್‌ ಮುಂಬಯಿ ಇಲ್ಲಿ ನಡೆಸಲಾಗುವುದೆಂದು ಘೋಷಿದರು. ಹಾಗೂ  ನ್ಯಾಯವಾದಿ  ಕೆ. ಪೃಥ್ವಿರಾಜ್‌ ರೈ ಅವರನ್ನು  ಈಗಾಗಲೇ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದ್ದು ಅವರಿಗೆ ಚುನಾವಣಾ ಪ್ರಕ್ರಿಯೆ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳ ಕಡತವನ್ನು ಕಾರ್ಯದರ್ಶಿಯವರು  ನೀಡಿ ಆಡಳಿತ ಕಚೇರಿಯಿಂದ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಲು ತಿಳಿಸಿದರು. ಅದೇ ದಿನ ಸಂಜೆ 6ರಿಂದ ಆಡಳಿತ ಮಂಡಳಿ ಸಭೆಯು ನಡೆಯಲಿದ್ದು ತದನಂತರ ಸಭಾ ಕಾರ್ಯಕ್ರಮವು ನಡೆಯುವುದೆಂದು ಪ್ರಕಟಿಸಿದರು.

ಪೋಷಕ ಸದಸ್ಯರಾದ ಆರ್‌. ಉಪೇಂದ್ರ ಶೆಟ್ಟಿ,   ಜೆ. ಪಿ. ಶೆಟ್ಟಿ ಮುಂಬಯಿ, ಆಡಳಿತ ಮಂಡಳಿ ಸದಸ್ಯರಾದ   ಕರ್ನಲ್‌ ಶರತ್‌ ಭಂಡಾರಿ, ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ರತ್ನಾಕರ್‌ ಶೆಟ್ಟಿ ಮುಂಡ್ಕೂರು,  ವಸಂತ ಶೆಟ್ಟಿ,  ರವೀಂದ್ರನಾಥ ಶೆಟ್ಟಿ, ಅಮರನಾಥ ಶೆಟ್ಟಿ,  ಸುದರ್ಶನ್‌ ಶೆಟ್ಟಿ,  ಇನ್ನಿತರ ಆಡಳಿತ ಮಂಡಳಿ ಸದಸ್ಯರು, ಆಡಳಿತಾಧಿಕಾರಿ ಹಾಗೂ ಸಿಬಂದಿ ವರ್ಗದವರು ಹಾಜರಿದ್ದರು. ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ವಂದಿಸಿದರು.


Trending videos

Back to Top