ಪುಣೆ ಕೋಟಿ -ಚೆನ್ನಯ ಟ್ರೋಫಿ-2019 ಕ್ರಿಕೆಟ್‌ ಪಂದ್ಯಾಟ


Team Udayavani, Mar 9, 2019, 2:07 PM IST

9.jpg

ಪುಣೆ: ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಡಲಾಗುತ್ತಿದ್ದ ಕ್ರೀಡೆಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಆಡಲಾ ಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ವೇಳೆಯಲ್ಲಿ  ತಮ್ಮಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಲು, ಮನೋರಂಜನೆಗಾಗಿ  ಹಲವಾರು ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಪವಾಡ ಪುರುಷರಾದ ಕೋಟಿ-ಚೆನ್ನಯರ ಕಾಲದಲ್ಲಿಯೇ  ಇಂತಹ ಕ್ರೀಡೆಗಳು ಬಹಳ ಪ್ರಸಿದ್ಧಿಯನ್ನು ಪಡೆದಿದ್ದವು. ಇಂದಿನ  ಪರಿಸ್ಥಿಯಲ್ಲಿ   ನಮ್ಮಲ್ಲಿಯ ಸವಲತ್ತುಗಳು ಹೆಚ್ಚಾದಂತೆ ನೂತನವಾಗಿ  ವಿವಿಧ ಕಾನೂನುಗಳನ್ನೂ ಸೇರ್ಪಡೆಗೊಳಿಸಿ  ಬೇರೆಯೇ ರೀತಿಯಲ್ಲಿ    ಕ್ರೀಡಾಕೂಟಗಳು ಅಯೋಜನೆಗೊಳ್ಳುತ್ತಿವೆ.  ಇದಕ್ಕೆ ಒಗ್ಗಿಕೊಂಡ  ಇಂದಿನ ಯುವ ಜನತೆ ತಮ್ಮ ಆಸಕ್ತಿಯ ಕ್ರೀಡಾ   ಕ್ಷೇತ್ರಗಳಲ್ಲಿ ತಮ್ಮನ್ನು ಬಹು ಬೇಗನೆ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರಿಕೆಟ್‌ಗೆ ಯುವಕರು ಬಹಳ ಬೇಗನೆ  ಆಕರ್ಷಿತರಾಗುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ಜಾತಿ, ಮತ ಭೇದವಿಲ್ಲದೆ  ತಾಯ್ನಾಡನ್ನು ಬಿಟ್ಟು ಹೊರ ರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ತುಳು-ಕನ್ನಡಿಗರು ಕೂಡಾ ಕ್ರೀಡಾ ಸಂಸ್ಥೆಗಳನ್ನು ಕಟ್ಟಿಕೊಂಡು ನಮ್ಮವರಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಮಾಡಿ ಕೊಡುತ್ತಿರುವುದು ಅಭಿನಂದನೀಯವಾಗಿದೆ ಎಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ನುಡಿದರು.

ಪುಣೆಯ  ಕ್ರೀಡಾ ಸೇವಾ ಸಂಸ್ಥೆ  ಕೋಟಿ-ಚೆನ್ನಯ ಗ್ರೂಪ್‌ನವರ ವತಿಯಿಂದ   ಮಾ. 7ರಂದು    ಪುಣೆಯ  ಎಸ್‌ಪಿ ಕಾಲೇಜು ಮೈದಾನದಲ್ಲಿ ನಡೆದ ಮೂರನೇ ವಾರ್ಷಿಕ  ಕೋಟಿ-ಚೆನ್ನಯ  ಟ್ರೋಫಿ -2019 ಕ್ರಿಕೆಟ್‌ ಪಂದ್ಯಾಟವನ್ನು ಉದ್ಘಾಟಿಸಿ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು  ಮಾತನಾಡಿದ ಅವರು, ಪುಣೆಯ ಕೋಟಿ ಚೆನ್ನಯ ಗ್ರೂಪ್‌ನವರು ಕಳೆದ ಮೂರು  ವರ್ಷಗಳಿಂದ  ಪುಣೆಯ ತುಳು ಕನ್ನಡಿಗರಿಗಾಗಿ  ಕ್ರಿಕೆಟ್‌ ಪಂದ್ಯಾಟವನ್ನು ಅಯೋಜಿಸುತ್ತಿದ್ದು, ಉತ್ತಮ ರೀತಿಯಲ್ಲಿ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿ¨ªಾರೆ. ಯಾವುದೇ ರೀತಿಯ ಪ್ರಥಮ ದರ್ಜೆಯ ಕೂಟಗಳಿಗೆ ಕಡಿಮೆಯಿಲ್ಲದಂತಹ ಇಂದಿನ ಈ ಪಂದ್ಯಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿ¨ªಾರೆ. ಸಾಮಾಜಿಕ ಸೇವಾ ಕಾರ್ಯಗಳನ್ನು ಕೂಡಾ ಮಾಡಿಕೊಂಡು ಬರುತ್ತಿರುವ  ಈ ಸಂಸ್ಥೆಗೆ ಉಜ್ವಲ ಭವಿಷ್ಯವಿದೆ. ಇನ್ನೂ ಉತ್ತಮ ರೀತಿಯಲ್ಲಿ  ವರ್ಷದಿಂದ ವರ್ಷಕ್ಕೆ ಇಂತಹ ಪಂದ್ಯಾಟಗಳನ್ನು ಆಯೋಜಿಸಲು ಇವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕಾದ ಕೆಲಸ ಕ್ರೀಡಾ ಪೋಷಕರಿಂದ  ಆಗಬೇಕು ಎಂದರು.

  ಉದ್ಘಾಟನಾ ಸಮಾರಂಭದಲ್ಲಿ ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ಹರೀಶ್‌ ಕುಲಾಲ್‌ ಮುಂಡ್ಕೂರು  ಅವರು ಅತಿಥಿಯಾಗಿ ಉಪಸ್ಥಿತರಿದ್ದು, ತೆಂಗಿನ ಕಾಯಿ ಒಡೆದು  ಬ್ಯಾಟಿಂಗ್‌ ಮಾಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.   ಈ ಸಂದರ್ಭದಲ್ಲಿ ಎಸ್‌ಪಿ  ಕಾಲೇಜ್‌ನ ಉಪನ್ಯಾಸಕ ಕೆ. ಮಂಗಳೂರ್ಕರ್‌  ಮತ್ತು ಆಟಗಾರರು ಉಪಸ್ಥಿತರಿದ್ದರು.

ಕೋಟಿ-ಚೆನ್ನಯ ಗ್ರೂಪ್‌ನ ಅಧ್ಯಕ್ಷರಾದ  ಗಿರೀಶ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ   ಸಂಜೆ ಜರಗಿದ   ಪ್ರಶಸ್ತಿ ವಿತರಣಾ ಸಮಾರಂಭದ ವೇದಿಕೆಯಲ್ಲಿ   ವಿಶ್ವನಾಥ್‌ ಪೂಜಾರಿ ಕಡ್ತಲ, ಪುಣೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಶೇಖರ ಪೂಜಾರಿ, ಪುಣೆ ದೇವಾಡಿಗ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ಪುಣೆ ತುಳು ಕೂಟದ ಯುವ ವಿಭಾಗದ ಅಧ್ಯಕ್ಷ ರೋಹನ್‌ ಶೆಟ್ಟಿ, ಕಾತ್ರಜ್‌ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ತ  ಬಾಲಕೃಷ್ಣ ಗೌಡ,  ಉಪಸ್ಥಿತರಿದ್ದರು. ಅತಿಥಿ-ಗಣ್ಯರ‌ನ್ನು ಕೋಟಿ-ಚೆನ್ನಯ ಗ್ರೂಪ್‌ನ ಪ್ರಮುಖರು ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು. ವೇದಿಕೆಯಲ್ಲಿ  ಶೇಖರ್‌ ಪೂಜಾರಿ, ರೋಹನ್‌ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಪುಣೆಯ ವಿವಿಧೆಡೆಯಿಂದ ಆಗಮಿಸಿದ್ದ ಕ್ರಿಕೆಟ್‌ಪಟುಗಳು ಟೂರ್ನಿಯಲ್ಲಿ ಭಾಗವಹಿಸಿ ದ್ದರು. ಸೀಮಿತ ಓವರ್‌ಗಳ ಈ ಪಂದ್ಯಾಟದಲ್ಲಿ  ಸುಮಾರು 8  ತಂಡಗಳು ಭಾಗವಹಿಸಿದ್ದವು.  ಲೀಗ್‌  ಮಾದರಿಯಲ್ಲಿ ನಡೆದ ಈ ಕ್ರಿಕೆಟ್‌ ಪಂದ್ಯಾಟದ ಫೈನಲ್‌ ಪಂದ್ಯದಲ್ಲಿ  ಪುಣೆಯ ಸಾಯಿ ಕ್ರಿಕೆಟರ್ಸ್‌   ತಂಡವು ಮಸಕಾ ಸೀ ಫುಡ್‌  ತಂಡವನ್ನು ಸೋಲಿಸಿ ತೃತೀಯ  ಬಾರಿಗೆ  ಹ್ಯಾಟ್ರಿಕ್‌ ವಿಜೇತರಾಗಿ ಕೋಟಿ-ಚೆನ್ನಯ  ಟ್ರೋಫಿ ಮತ್ತು ನಗದು 22,222 ರೂ. ಗಳನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನಿಯಾದ ಮಸಕಾ ತಂಡವು ಟ್ರೋಫಿ ಮತ್ತು 11,111 ರೂ.   ನಗದನ್ನು ಪಡೆಯಿತು. ತೃತೀಯ ಸ್ಥಾನಿಯಾದ  ತುಳು ಕೂಟ ಪುಣೆ ತಂಡಕ್ಕೆ  ಟ್ರೋಫಿಯನ್ನಿತ್ತು ಸತ್ಕರಿಸಲಾಯಿತು.

ಸಂತೋಷ್‌ ಹಿರಿಯಡ್ಕ, ದಯಾನಂದ ಪೂಜಾರಿ ಮತ್ತು  ಮನೀಶ್‌ ಶೆಟ್ಟಿ ಮುಂಬಯಿ ಅವರು ಹಿಂದಿ, ಇಂಗ್ಲಿಷ್‌,  ಕನ್ನಡ,  ತುಳುವಿನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು. ಅಪಾಯರ್‌ಗಳಾಗಿ ಕುಮಾರ್‌ ಠಕ್ಕರ್‌, ಅಜಿತ್‌ ಬಾಲೆರಾವ್‌ ಮತ್ತು ಹೃಶಿಕೇಶ್‌  ಸಹಕರಿಸಿದರು. ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಸಂಸ್ಥೆಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಪಂದ್ಯಾಟದಲ್ಲಿ ಊಟ,  ಚಹಾ,   ತಿಂಡಿಯ ವ್ಯವಸ್ಥೆಯನ್ನು ದಾನಿಗಳ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು. ಕೋಟಿ ಚೆನ್ನಯ ಗ್ರೂಪ್‌ನ ಪದಾಧಿಕಾರಿಗಳು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು. ಶಂಕರ ಪೂಜಾರಿ ಬಂಟಕಲ್‌ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇಂತಹ  ಪಂದ್ಯಾಟಗಳನ್ನು ಆಯೋಜಿಸುವುದರಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಾರೆ. ಅವರಿಗೆ ಉತ್ತಮ ಬೇಡಿಕೆಯೊಂದಿಗೆ ಕ್ರೀಡಾಸಕ್ತಿಯು  ಬೆಳೆಯುತ್ತದೆ. ಆದಷ್ಟು ಯುವ ಪೀಳಿಗೆಗೆ ಉತ್ತೇಜನ, ಪ್ರೋತ್ಸಾಹ ನೀಡುವ ಕಾರ್ಯ ಇಂತಹ ಸಂಸ್ಥೆಗಳಿಂದ ಆಗಬೇಕು. ಕೋಟಿ-ಚೆನ್ನಯ ಗ್ರೂಪ್‌ಗೆ ನಮ್ಮೆಲ್ಲರ  ಸಹಕಾರ ಸದಾಯಿದೆ 
 – ಶೇಖರ್‌ ಪೂಜಾರಿ (ಮಾಜಿ ಅಧ್ಯಕ್ಷರು: ಬಿಲ್ಲವ ಸಂಘ ಪುಣೆ).

ನಮ್ಮಲ್ಲಿರುವ  ಯುವಕರಿಗೆ ಒಳ್ಳೆಯ ಅವಕಾಶವನ್ನು ಕೋಟಿ-ಚೆನ್ನಯ  ಗ್ರೂಪ್‌ನಂತೆ ಬೇರೆ ಬೇರೆ  ತುಳು ಕನ್ನಡಿಗ ಕ್ರೀಡಾ ಸಂಸ್ಥೆಗಳು ಮಾಡಿಕೊಡುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಮಕ್ಕಳಿಗೆ ಎಳೆವೆಯಲ್ಲಿಯೇ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಉತ್ತಮ ರೀತಿಯಲ್ಲಿ ಇಂತಹ ಪಂದ್ಯಾಟಗಳನ್ನು ಆಯೋಜಿಸಿದರೆ ವರ್ಷದಿಂದ ವರ್ಷಕ್ಕೆ  ಹೆಚ್ಚಿನ ಸಂಖ್ಯೆಯ ಕ್ರೀಡಾಸಕ್ತರು ಪಾಲ್ಗೊಳ್ಳಬಹುದು. ಕೋಟಿ-ಚೆನ್ನಯ ಗ್ರೂಪ್‌ಗೆ ಅಭಿನಂದನೆಗಳು 
-ರೋಹನ್‌ ಶೆಟ್ಟಿ (ಅಧ್ಯಕ್ಷರು: ಯುವ ವಿಭಾಗ  ತುಳುಕೂಟ ಪುಣೆ).

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.