ಸರಕಾರ ಎಡವಿದ್ದು ನಿಜಾನ?


Team Udayavani, Mar 23, 2017, 5:41 PM IST

umashree.jpg

ಅಂಗನವಾಡಿ ನೌಕರರಿಗೆ ನಿಜವಾಗಿಯೂ ಘಾಸಿ ಮಾಡಿದವರು ವಿಪಕ್ಷದವರು… 

ರಾಜಧಾನಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ-ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರದ್ದೇ ಇದೀಗ ರಾಜ್ಯಾದ್ಯಂತ ಚರ್ಚೆ. ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲೂ ಈ ವಿಷಯ ಪ್ರತಿಧ್ವನಿಸಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದಷ್ಟೇ ಅಲ್ಲದೆ, ಎರಡೂ ಸದನಗಳಲ್ಲಿ ಅವರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ, ಪ್ರತಿಭಟನೆ ನಡೆದು ಕಲಾಪ ಮುಂದೂಡಿದ ಘಟನೆಯೂ ನಡೆಯಿತು. 

3 ದಿನಗಳಿಂದ ಹಸುಗೂಸುಗಳೊಂದಿಗೆ ಮಹಿಳೆಯರು ರಸ್ತೆಧಿಯಲ್ಲೇ ಮಲಗಿ ಹಗಲು-ರಾತಿ ಪ್ರತಿಭಟನೆಯಲ್ಲಿ ತೊಡಗಿರುವುದು ಮನಕಲಕುವಂತಿದೆ. ಇಂತಹ ಪರಿಸ್ಥಿತಿಗೆ ಏನು ಕಾರಣ? ಅವರ ಬೇಡಿಕೆಗಳು ನ್ಯಾಯಯುತವಾ? ದಿಢೀರ್‌ ಬೀದಿಗಿಳಿದು ಮುಷ್ಕರ ನಡೆಸುವ ಸ್ಥಿತಿ ಯಾಕೆ ನಿರ್ಮಾಣವಾಯಿತು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರೊಂದಿಗೆ ನೇರಾ ನೇರ ಮಾತು.

– ಅಂಗನವಾಡಿ ನೌಕರರು ಮತ್ತು ಸಹಾಯಕಿಯರು ಪ್ರತಿ ವರ್ಷ ವೇತನ ಹೆಚ್ಚಳಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವಂತಾಗಿದೆಯಲ್ಲಾ?
ಹಕ್ಕುಗಳನ್ನು ಪ್ರತಿಪಾದನೆ ಮಾಡಲು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಒಂದು ಮಾರ್ಗ. ಅದರಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

– ಈ ಬಾರಿ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋಗಿ ಅಹೋರಾತ್ರಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ರಸ್ತೆಯಲ್ಲಿ ಮಲಗುವಂತಾಯಿತಲ್ಲಾ? ಇದರಲ್ಲಿ ಸರ್ಕಾರದ ವೈಫ‌ಲ್ಯವಿದೆಯಾ?
ಪ್ರತಿಭಟನೆ ಮೂಲಕ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿ. ಅವರ ಪ್ರತಿಭಟನೆಯ ಹಕ್ಕು ಹತ್ತಿಕ್ಕುವ ಉದ್ದೇಶವೂ ಸರ್ಕಾರಕ್ಕೆ ಇಲ್ಲ. ಪ್ರತಿ ಬಾರಿಯೂ ಅವರು ಹೋರಾಟಕ್ಕೆ ಬರುವಾಗ ಮಕ್ಕಳೊಂದಿಗೆ ಬರುತ್ತಾರೆ. ಈ ಬಾರಿ ಮಾಧ್ಯಮಗಳು ಅದನ್ನು ಹೆಚ್ಚಿನ ರೀತಿಯಲ್ಲಿ ಬಿಂಬಿಸಿದವು. ಇಲ್ಲಿ ಸರ್ಕಾರದ ವೈಫ‌ಲ್ಯ ಇಲ್ಲ.

– ತಮ್ಮ ಮಕ್ಕಳೊಂದಿಗೆ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ಮಾಡಿದ್ದು ಗಂಭೀರ ವಿಚಾರವಲ್ಲವೇ? ಮಾಧ್ಯಮಗಳು ಇದನ್ನು ತೋರಿಸಿದ್ದು ತಪ್ಪೇ?
ಹಾಗೆಂದು ಹೇಳುತ್ತಿಲ್ಲ. ಮಹಿಳೆಯರು ತಮ್ಮ ಮಕ್ಕಳೊಂದಿಗೆ ರಸ್ತೆಯಲ್ಲಿ ಮಲಗಿದ್ದಾರೆ ಎಂದಾಗ ಜನ ಅಯ್ಯೋ ಪಾಪ ಎನ್ನುವುದು ಸಹಜ. ಸಾಮಾನ್ಯವಾಗಿ ನಗರದಲ್ಲಿ ಪ್ರತಿಭಟನೆ ನಡೆಯುವುದು ಯಾವುದಾದರೂ ಮೈದಾನದಲ್ಲಿ. ಆದರೆ, ಇವರು ನೇರವಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಾರೆ. ಮಹಿಳೆಯರು ಎಂಬ ಕಾರಣಕ್ಕೆ ಜನರೂ ಅನುಕಂಪ ತೋರಿಸುತ್ತಾರೆ. ಆದರೆ, ಈ ರೀತಿಯ ಹೋರಾಟದಿಂದ ತಮ್ಮ ಬಗ್ಗೆ ಅನುಕಂಪ ತೋರಿಸುತ್ತಿರುವ ಜನರಿಗೆ ತೊಂದರೆಯಾಗುತ್ತದೆ ಎಂಬುದನ್ನು ಹೋರಾಟಗಾರರು ಅರ್ಥಮಾಡಿಕೊಳ್ಳಬೇಕು.

– ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಪರಿಸ್ಥಿತಿ ಎದುರಾಗಿದೆಧಿಯಲ್ಲವೇ?
ಹಾಗೇನೂ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ವರ್ಷ ಅವರ ವೇತನ ಹೆಚ್ಚಳ ಮಾಡಿಕೊಂಡು ಬಂದಿದೆ. ಆದರೂ ಅವರಿಗೆ ಸಮಾಧಾನ ಇಲ್ಲ.

– ಪ್ರತಿಭಟನೆ ಆರಂಭವಾದ ಕೂಡಲೇ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಿ ಹೋರಾಟ ಹಿಂತೆಗೆದುಕೊಳ್ಳುವಂತೆ ಮಾಡಬಹುದಿತ್ತಲ್ಲಾ?
ಹೋರಾಟ ಆರಂಭವಾದ ಕೂಡಲೇ ನಾನು ಮನವೊಲಿಸಲು ಪ್ರಯತ್ನಿಸಿದಾಗ ಅವರು ಒಪ್ಪಿಕೊಳ್ಳಲಿಲ್ಲ. ನಂತರ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಧಿಲಾಧಿಯಿತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಈಗಾಗಲೇ ಬಜೆಟ್‌ ಮಂಡನೆಯಾಗಿ ಅದರ ಮೇಲೆ ಚರ್ಚೆ ನಡೆಯುತ್ತಿದೆ. ಜತೆಗೆ ಎರಡು ಕ್ಷೇತ್ರಗಳ ಉಪ ಚುನಾವಣೆ ಇದೆ. ಹೀಗಾಗಿ ಚುನಾವಣೆ ಮುಗಿದ ನಂತರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ. ಸರ್ಕಾರ ನಿಮ್ಮ ಜತೆಗಿದೆ ಎಂದು ಭರವಸೆ ನೀಡಿದ್ದರು. ಆದರೆ, ಅದಕ್ಕೂ ಒಪ್ಪದೆ ಅವರು ಆಹೋರಾತ್ರಿ ಪ್ರತಿಭಟನೆ ಮುಂದುವರಿಸಿದರು. 

– ಮಾತುಕತೆ ಸಂದರ್ಭದಲ್ಲಿ ಧರಣಿ ವಾಪಸ್‌ ಪಡೆಯಲು ಒಪ್ಪಿಲ್ಲಧಿವಂತಲ್ಲಾ?
ನಿಡುಮಾಮಿಡಿ ಸ್ವಾಮೀಜಿ ಮತ್ತು ಸಾಹಿತಿ ಕೆ.ಮರುಳಸಿದ್ದಪ್ಪ ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿಅವರು ಮಾತುಕತೆಗೆ ಬಂದಾಗ ಮುಖ್ಯಮಂತ್ರಿಗಳು ಹಿಂದೆ ಹೇಳಿದ ಮಾತನ್ನೇ ಪುನರುಚ್ಚರಿಸಿದರು. ಆಗ 
ವರಲಕ್ಷಿ ¾à ಅವರು, “ಕೇವಲ ಬಾಯಿಮಾತಿನಲ್ಲಿ ಭರವಸೆ ಕೊಟ್ಟರೆ ಹೋರಾಟದಲ್ಲಿ ನಿರತರಾಗಿರುವವರಿಗೆ ಏನು ಹೇಳಿ ಸಮಾಧಾನ ಮಾಡುವುದು? ಚರ್ಚೆಗೆ ದಿನಾಂಕ ನಿಗದಿಪಡಿಸಿ ಲಿಖೀತವಾಗಿ ಕೊಡಿ. ಪ್ರತಿಭಟನೆ ವಾಪಸ್‌ ತೆಗೆದುಕೊಳ್ಳುವಂತೆ ಮನವೊಲಿಸುತ್ತೇನೆ’ ಎಂದಿದ್ದರು. ಅದಕ್ಕೆ ಒಪ್ಪಿದ ಮುಖ್ಯಮಂತ್ರಿಗಳು ಏ. 19ಕ್ಕೆ ದಿನಾಂಕ ನಿಗದಿಪಡಿಸಿದ ನೋಟಿಸ್‌ ಲಿಖೀತ ರೂಪದಲ್ಲಿ ನೀಡಿದರು. ಆದರೆ, ಸರ್ಕಾರದ ಮಾತು ಕೇಳದೆ ಪ್ರತಿಭಟನೆ ಮುಂದುವರಿಸಿದ್ದಾರೆ.

– ಹೋರಾಟಗಾರರ ಮನವೊಲಿಸುವ ಕಾರ್ಯವನ್ನು ಇನ್ನಷ್ಟು ಪರಿಣಾಮಧಿಕಾರಿಯಾಗಿ ಮಾಡಲು ಅವಕಾಶವಿತ್ತಲ್ಲವೇ?
ಸರ್ಕಾರ, ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸಿಧಿರುವ ಮುಖ್ಯಮಂತ್ರಿಗಳು ಲಿಖೀತವಾಗಿ ಭರವಸೆ ಕೊಟ್ಟ ಮೇಲೆ ಸರ್ಕಾರ ಮತ್ತು ಸಿಎಂ ಮೇಲೆ ವಿಶ್ವಾಸ ಇಡಬೇಕು. ಕಳೆದ ನಾಲ್ಕು ವರ್ಷ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ ಸರ್ಕಾರದ ಜತೆ ಮೃದುವಾಗಿ ನಡೆದುಕೊಳ್ಳಬೇಕಿತ್ತು. ಆದರೆ, ಯಾವುದಕ್ಕೂ ಸ್ಪಂದಿಸದ ಅವರ ನಡವಳಿಕೆ ಗೌರವಯುತವಾದುದಲ್ಲ. ಹೋರಾಟ ಹಿಂತೆಗೆದುಕೊಳ್ಳುವ ಬಗ್ಗೆ ಮನವೊಲಿಸಲಾಗುವುದು ಎಂದು ಹೇಳಿ ಹೋದವರು ನಂತರ ಅದರಲ್ಲಿ ವಿಫ‌ಲರಾದರು ಎಂದರೆ ಏನು ಮಾಡಲು ಸಾಧ್ಯ?

– ಮಹಿಳೆಯರು, ಮಕ್ಕಳು ಬೀದಿಯಲ್ಲೇ ಮಲಗಿದ್ದರೂ ಸರ್ಕಾರ ಅವರಿಗೆ ಸೌಲಭ್ಯ ಒದಗಿಸುವಲ್ಲಿ ವಿಫ‌ಲವಾಯಿತು?
ಇದು ಆರೋಪವಷ್ಟೆ, ಸತ್ಯವಲ್ಲ. ಆಹೋರಾತ್ರಿ ರಸ್ತೆಯಲ್ಲೇ ಪ್ರತಿಭಟನೆ ಮುಂದುಧಿವರಿಸುವ ಕುರಿತು ಅವರು ತಕ್ಷಣದ ತೀರ್ಮಾನ ಕೈಗೊಂಡರೂ ಪೊಲೀಸರು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮಾರನೇ ದಿನ ನಾನು ಮತ್ತು ಮುಖ್ಯಮಂತ್ರಿಗಳು ಖುದ್ದು ಮೇಯರ್‌ ಮತ್ತು ಬಿಬಿಎಂಪಿ ಜತೆ ಮಾತನಾಡಿ ಇತರೆ ಸೌಲಭ್ಯಗಳನ್ನು ಒದಗಿಸಿದೆವು. ಫ್ರೀಡಂ ಪಾರ್ಕ್‌ನ 50 ಶೌಚಾಲಯದ ಜತೆ 50 ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಧಿಲಾಯಿತು. ಕುಡಿಯುವ ನೀರಿಗಾಗಿ ಟ್ಯಾಂಕರ್‌ ವ್ಯವಸ್ಥೆ ಒದಗಿಸಿದ್ದೆವು. ಆರೋಗ್ಯ ಇಲಾಖೆಯವರು ಸ್ಥಳದಲ್ಲೇ ಇದ್ದು ಕರ್ತವ್ಯ ನಿರ್ವಹಿಸಿದರು. ಮಹಿಳಾ ಪೊಲೀಸರನ್ನೂ ಹಾಕಿದ್ದೆವು. ಸಾಧ್ಯವಾದ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿದ್ದೇವೆ.

– ಹೋರಾಟ ಈ ಮಾರ್ಗ ಹಿಡಿಯಲು ಪ್ರತಿಪಕ್ಷಗಳ ಪಾತ್ರವಿದೆಯೇ?
ಖಂಡಿತವಾಗಿ. ಹೋರಾಟದ ಸ್ಥಳಕ್ಕೆ ಮೇಲಿಂದ ಮೇಲೆ ಹೋಗುತ್ತಿರುವ ಪ್ರತಿಪಕ್ಷಧಿದವರು ಅಲ್ಲಿರುವ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರಲ್ಲಿ ಅಂಗನವಾಡಿ ನೌಕರರ ತಪ್ಪು ಇಲ್ಲ. ರಾಜಕೀಯ ಮಾಡದೆ ಹೋರಾಟ ಮಾಡಿಕೊಂಡು ಬಂದಧಿವರು ಅವರು. ಯಾವುದಾದರೂ ಒಂದು ರೂಪದಲ್ಲಿ ಅಥವಾ ದಾರಿಯಲ್ಲಿ ಗುರಿಧಿಮುಟ್ಟಬೇಕು ಎಂಬ ಆಸೆ ಹೋರಾಟದ ಮನಸ್ಸುಗಳಿಗೆ ಇರುತ್ತದೆ. ಯಾರೇ ಏನಾದರೂ ಹೇಳಿದಾಗ ಗುರಿ ತಲುಪಲು ಅದೊಂದು ದಾರಿ ಎಂದು ಭಾವಿಸುತ್ತಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರತಿಪಕ್ಷದವರ ಮಾತು ಕೇಳುವುದರಿಂದ ಅವರಿಗೆ ಅಷ್ಟು ಸಹಾಯ ಆಗಲಾರದೇನೋ ಅಂತ ನನ್ನ ಅಭಿಪ್ರಾಯ.

– ಅಂದರೆ, ಹೋರಾಟಗಾರರಿಗೆ ರಾಜಕೀಯ ಬೆಂಬಲ ನೀಡುವುದು ತಪ್ಪೇ?
ನಾನು ಈ ಮಾತನ್ನು ರಾಜಕೀಯ ದೃಷ್ಟಿಕೋನದಿಂದ ಹೇಳುತ್ತಿಲ್ಲ. ಸಹಜವಾಗಿ ಹೋರಾಟಗಾರರಿಗೆ, ಅಮಾಯಕರಿಗೆ ಗುರಿ ಸಾಧನೆ ಮಾಡಿಕೊಳ್ಳಲು ದಾರಿ ಬೇಕು. ಅದನ್ನು ರಾಜಕೀಯ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು. ಪ್ರತಿ ವರ್ಷ ಅಂಗನವಾಡಿ ನೌಕರರು ಸರ್ಕಾರದ ಸಹಾಯದೊಂದಿಗೆ ತಮ್ಮ ಬೇಡಿಕೆ ಹೇಗೆ ಈಡೇರಿಸಿಕೊಂಡಿದ್ದಾರೋ, ಈಗಲೂ ಸ್ವಂತ ಬುದ್ಧಿ ಮತ್ತು ಸ್ವಂತ ತೀರ್ಮಾನದಿಂದ ಬೇಡಿಕೆ ಈಡೇರಿಸಿಕೊಳ್ಳುವ ಕೆಲಸ ಆಗಬೇಕು.

– ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಈ ರೀತಿಯ ರಾಜಕೀಯ ಮಾಡುವುದು ಸಾಮಾನ್ಯ ತಾನೆ?
ಅದಕ್ಕೊಂದು ನೈತಿಕತೆ ಬೇಕಲ್ಲವೇ? ಜೆಡಿಸ್‌ನವರು ಇಷ್ಟೆಲ್ಲಾ ಮಾತನಾಡುತ್ತಾರಲ್ಲಾ? ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು? ಅಂಗನವಾಡಿ ಕಾರ್ಯಕರ್ತೆಯರಿಗೆ 100 ರೂ., ಸಹಾಯಕಿಯರಿಗೆ 50 ರೂ. ವೇತನ ಹೆಚ್ಚಿಸಿದ್ದರು. ಅದೇ ರೀತಿ ಬಿಜೆಪಿಯವರು ತಮ್ಮ 5 ವರ್ಷ ಅಧಿಕಾರಾವಧಿಯಲ್ಲಿ ಎಷ್ಟು ಮಾತ್ರ ಹೆಚ್ಚಳ ಮಾಡಿದ್ದರು? ಈಗ ಅನುಕಂಪದ ಮಾತನಾಡುತ್ತಿರುವ ಜೆಡಿಎಸ್‌ ಮತ್ತು ಬಿಜೆಪಿಯವರು ತಮ್ಮ 7 ವರ್ಷದ ಆಡಳಿತದಲ್ಲಿ ಪ್ರತಿ ವರ್ಷ ವೇತನ ಹೆಚ್ಚಳ ಮಾಡಿದ್ದರೆ ಪ್ರಸ್ತುತ ಅಂಗನವಾಡಿ ನೌಕರರ ವೇತನ 10ರಿಂದ 12 ಸಾವಿರ ರೂ. ಆಗುತ್ತಿತ್ತು. ಆಡಳಿತ ನಡೆಸಿದ ಸಂದರ್ಭದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಅಂಗನವಾಡಿ ನೌಕರರಿಗೆ ನಿಜವಾಗಿಯೂ ಘಾಸಿ ಮಾಡಿದವರು ಪ್ರತಿಪಕ್ಷದವರು. ಹೀಗಿರುವಾಗ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೇನು ನೈತಿಕತೆ ಇದೆ? ಹಾಗೆಂದು ನಾವು ಕರ್ತವ್ಯದಿಂದ ನುಣುಚಿಕೊಳ್ಳುತ್ತಿಲ್ಲ. 

– ನಿಮಗೆ ಹೆಚ್ಚು ಕಾಳಜಿ ಇದೆ ಎಂದಾದರೆ ಅಂಗನವಾಡಿ ನೌಕರರಿಗೆ ಸಮಾಧಾನವಾಗುವಂತೆ ಮಾಡಿ ಸಮಸ್ಯೆ ಬಗೆಹರಿಸಬಹುದಲ್ಲವೇ?
ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಏರಿಸುತ್ತಲೇ ಇದ್ದೇವೆ. ಆದರೆ, ಒಂದೇ ಬಾರಿ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಒಂದು ಸರ್ಕಾರ ನಡೆಸುವ ಸಂದರ್ಭದಲ್ಲಿ ಎಲ್ಲಾ ದೃಷ್ಟಿಕೋನದಿಂದಲೂ ನೋಡಬೇಕಾಗುತ್ತದೆ. ಇವರಂತೆ ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿದ್ದಾರೆ. ಅವರ ಬಗ್ಗೆಯೂ ಗಮನಿಸಬೇಕಾಗುತ್ತದೆ. ಆದರೂ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲಸ ಮಾಡಿದೆ. ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ 7000 ರೂ. ನೀಡುತ್ತಿದ್ದು, ಇದರಲ್ಲಿ ರಾಜ್ಯದ ಪಾಲು 5,200 ರೂ. ಆದರೆ, ಕೇಂದ್ರದ ಪಾಲು ಕೇವಲ 1,800 ರೂ.

– ಅಂದರೆ ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರವೇ ಕಾರಣವೆನ್ನುತ್ತೀರಾ? ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ 2011-12ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 3000 ರೂ. ನಿಗದಿಪಡಿಸಿತ್ತು. ಆಗ ಕೇಂದ್ರದ ಪಾಲು ಶೇ. 90 ಮತ್ತು ರಾಜ್ಯದ ಪಾಲು ಶೇ. 10 ಇತ್ತು. ಆದರೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಪಾಲು ಶೇ. 40 ಮತ್ತು ರಾಜ್ಯದ ಪಾಲು ಶೇ. 60 ಎಂದು ಮಾಡಿ ಕೇಂದ್ರ ನೀಡುತ್ತಿದ್ದ 3000 ರೂ.ಅನ್ನು 1800ಕ್ಕೆ ಇಳಿಸಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಸಂಸದರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ದೇಶಾದ್ಯಂತ ಅಂಗನವಾಡಿ ನೌಕರರಿಗೆ ಏಕರೂಪದ ಗೌರವಧನ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿ. ಅಂಗನವಾಡಿ ನೌಕರರ ವೇತನ ಆರು ಸಾವಿರ ರೂ. ನಿಗದಿಪಡಿಸಲಿ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಅವರಿಗೆ ಜವಾಬ್ದಾರಿ ಇಲ್ಲವೇ?

– ಎಲ್ಲಾ ನೌಕರರಿಗೂ ಕನಿಷ್ಠ ವೇತನ ಕಾಯ್ದೆ ಜಾರಿಯಾಗುತ್ತದಲ್ಲ..
ಕೇಂದ್ರ ಮಾರ್ಗಸೂಚಿ ಪ್ರಕಾರ ಇವರು ಸೇವಾ ನಿಯಮಾವಳಿ ವ್ಯಾಪ್ತಿಗೆ ಬರುತ್ತಾರೆ. ಗೌರವಧನ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಹೀಗಾಗಿ ಕನಿಷ್ಠ ವೇತನ ವ್ಯಾಪ್ತಿಗೆ ಬರುವುದಿಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರಿಂದ ಕೇಂದ್ರವೇ ಬದಲಾವಣೆಗಳನ್ನು ಮಾಡಬೇಕು.

– ಹೋರಾಟನಿರತರಿಗೆ ಏನು ಹೇಳಲು ಬಯಸುತ್ತೀರಿ?
ರಾಜಕೀಯ ಪ್ರತಿಫ‌ಲಗಳನ್ನು ಬಯಸಿ ಪ್ರತಿಪಕ್ಷಗಳು ದಾರಿ ತಪ್ಪಿಸಲು ಪ್ರಯತ್ನಿಸಿದರೂ ಅದಕ್ಕೆ ಮನ್ನಣೆ ನೀಡದೆ ಇಷ್ಟು ವರ್ಷ ಸ್ವಂತ ತೀರ್ಮಾನದ ಮೇಲೆ ಹೋರಾಟ ಮಾಡಿದಂತೆ ಈ ಬಾರಿಯೂ ಮುಂದುವರಿಸಿ. ಸರ್ಕಾರ ಯಾವತ್ತೂ ನಿಮ್ಮ ಬಗ್ಗೆ ಕಠೊರವಾಗಿ ನಡೆದುಕೊಂಡಿಲ್ಲ. ಅದೇ ರೀತಿ ಹೋರಾಟಗಾರರೂ ಮೃದುವಾಗಿ ವರ್ತಿಸಿ. ಸರ್ಕಾರ ಯಾವತ್ತೂ ನಿಮ್ಮೊಂದಿಗಿದೆ. ಮುಖ್ಯಮಂತ್ರಿಗಳು ಈಗಾಗಲೇ ನೀಡಿರುವ ಭರವಸೆಯಂತೆ ಸಾಧ್ಯವಾದ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲಾಗುವುದು. ಇಷ್ಟು ಭರವಸೆ ಕೊಟ್ಟ ಮೇಲೂ ಮುಷ್ಕರ ಮುಂದುವರಿಸುವುದು ಸಾಧುವಲ್ಲ. ದಯವಿಟ್ಟು ಮುಷ್ಕರ ವಾಪಸ್‌ ಪಡೆಯಿರಿ.

ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.