ಮತ್ತೂಂದು ಹತ್ಯೆಯಾಗೊಲ್ಲ ಅನ್ನೋಕೆ ಖಾತ್ರಿಯೇನು?


Team Udayavani, Sep 21, 2017, 9:52 AM IST

21STATE–21.jpg

ಗೌರಿ ಲಂಕೇಶ್‌ ಹಂತಕರನ್ನು ಪತ್ತೆ ಮಾಡದಿರುವುದು ಹಾಗೂ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗದಿರುವ ವಿಚಾರದಲ್ಲಿ ಪ್ರಗತಿಪರ ಚಿಂತಕರು, ಆಯ್ದ ಮಠಾಧೀಶರು ರಾಜ್ಯ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಮೂರೂವರೆ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಮೀನ-ಮೇಷ ಎಣಿಸಲಾಗುತ್ತಿದೆ. ಡಾ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಿದ್ದರೆ ಗೌರಿ  ಹತ್ಯೆಯಾಗುತ್ತಿರಲಿಲ್ಲ ಎಂಬುದು ಅವರ ಪ್ರತಿಪಾದನೆ. ಈ ಬಗ್ಗೆ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರೊಂದಿಗೆ ಮಾತುಕತೆಗೆ ಇಳಿದಾಗ…

ಗೌರಿ ಲಂಕೇಶ್‌ ಹತ್ಯೆ ನಂತರ ನಾನೇ ಮುಂದಿನ ಟಾರ್ಗೆಟ್‌ ಅಂತ ನೀವು ಹೇಳಿದ್ದೀರಲ್ವಾ? 
ಹೌದು, ಗೌರಿ ಹತ್ಯೆಯ ನಂತರ ಮಠಾಧೀಶರು, ಮಾತಾಜಿ ಗಳು, ಪ್ರಗತಿಪರ ಹೋರಾಟಗಾರರು, ಸಾಹಿತಿಗಳು, ಚಿಂತ­ಕರು ನನ್ನ ಬಳಿ ಆ ಅಭಿಪ್ರಾಯ ವ್ಯಕ್ತಪಡಿಸಿದರು. ನೀವೇ ಮುಂದಿನ ಟಾರ್ಗೆಟ್‌ ಹುಷಾರಾಗಿರಿ ಅಂದರು. ಹೀಗಾಗಿ, ನಾನು ಹೇಳಿದೆ. 

ನೀವೇ ಟಾರ್ಗೆಟ್‌ ಅಂತ ಹೇಳಲು ಏನು ಆಧಾರ?
ಇಡೀ ದೇಶದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿ ಶಾಂತಿ ಕದಡುವ, ದ್ವೇಷ ಬಿತ್ತುವ ಕೆಲಸ ಆಗುತ್ತಿದೆ. ಬಹುತ್ವ ನಾಶ ಮಾಡಿ ಏಕ ಸಂವಿಧಾನ, ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ ಇರಬೇಕು ಎಂಬ ಗುರಿಯೊಂದಿಗೆ ಬಹುಸಂಸ್ಕೃತಿಗಳನ್ನು ನಿರಂತರ­ವಾಗಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಭಾಗವಾಗಿ ವಿಚಾರವಾದಿಗಳ ಹತ್ಯೆ ನಡೆಯುತ್ತಿದೆ. ಧಾಬೋಲ್ಕರ್‌, ಪನ್ಸಾರೆ, ಡಾ| ಎಂ.ಎಂ. ಕಲಬುರ್ಗಿ, ಗೌರಿ ಹತ್ಯೆ ಇದೇ ಹಿನ್ನೆಲೆಯಲ್ಲಿ ಆದ ಪ್ರಕರಣಗಳು. ಹೀಗಾಗಿ, ಮುಂದಿನ ಟಾರ್ಗೆಟ್‌ ನಾನು ಆಗಿರಬಹುದು ಎಂದುಕೊಂಡಿರಬಹುದು. 

ಕರ್ನಾಟಕದಲ್ಲಿ ನಡೆದ ಪ್ರಕರಣಗಳಿಗೆ ದೇಶದ ವಿದ್ಯ ಮಾನಗಳ ಜತೆ ತಳುಕು ಹಾಕುವುದು ಎಷ್ಟು ಸರಿ? 
ನೋಡಿ, ಜಾಗತಿಕವಾಗಿ ನೋಡುವುದಾದರೆ ಬಲಪಂಥೀಯ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ. ಅದಕ್ಕೆ ಭಾರತವೂ ಹೊರತಲ್ಲ. ಕಾಶ್ಮೀರದಿಂದ ಕೇರಳದವರೆಗೆ “ಹಿಂಸಾಕುಂಡ’ ಆಗಿದೆ. ನಾವು ಮುಸ್ಲಿಂ ಭಯೋತ್ಪಾದನೆ, ನಕ್ಸಲೀಯರ ಭಯೋತಾದನೆ ಬಗ್ಗೆ ನೋಡಿದ್ದೆವು, ಆದರೆ, ಇದೀಗ ದೇಶದಲ್ಲಿ ಹಿಂದೂ ಭಯೋತ್ಪಾದಕತೆ ನಡೆಯುತ್ತಿದೆ. ಇದಕ್ಕೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಹಾಗೂ ಸರಕಾರದ ನೇತೃತ್ವ ವಹಿಸಿರುವವರ ಕುಮ್ಮಕ್ಕು ಇದೆ. 

ಈ ಹತ್ಯೆಗೂ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಕ್ಕೂ ಏನು ಸಂಬಂಧ? 
ಖಂಡಿತಾ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ಪ್ರಧಾನಿ ಎಂದು ನನಗಂತೂ ಅನಿಸುತ್ತಿಲ್ಲ. ಅವರು ಕೇವಲ ಹಿಂದೂಗಳಿಗಷ್ಟೇ ತಾವು ಪ್ರಧಾನಿ ಎಂಬ ನಿಲುವನ್ನು, ಅದರಲ್ಲೂ ಸರ್ವಾಧಿಕಾರಿ ಧೋರಣೆಯನ್ನು ತಾಳಿದ್ದಾರೆ. ಅವರು ಕ್ರಿಶ್ಚಿಯನ್‌, ಮುಸ್ಲಿಂ, ಬೌದ್ಧ ಹಾಗೂ ಸಿಖರ, ಲಿಂಗಾಯತರ ಪ್ರಧಾನಿಯಾಗಿಲ್ಲ. ಹೀಗಾಗಿ, ಹಿಂದೂ ಭಯೋತ್ಪಾದಕರು ಹುಟ್ಟಿಕೊಂಡಿದ್ದಾರೆ.  

ತನಿಖೆ ಇನ್ನೂ ನಡೆಯುತ್ತಿರುವಾಗ ಇಂಥ ಹೇಳಿಕೆಗಳು ಎಷ್ಟು ಸರಿ? ಇದೆಲ್ಲ ವೃಥಾರೋಪ ಎನಿಸುವುದಿಲ್ಲವೇ?
ಆನುಮಾನವೇ ಬೇಡ. ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುವುದಿಲ್ಲ. ಆದರೆ, ಹಿಂದೂ ಭಯೋತ್ಪಾದಕರದೇ ಕೆಲಸ ಇದು. 

ಗೌರಿ ಅವರನ್ನು ಅವರೇಕೆ ಹತ್ಯೆ ಮಾಡಬೇಕು? 
ಏಕೆಂದರೆ ಮೊದಲು ಪತ್ರಕರ್ತರು ಸೇರಿದಂತೆ ವಿಚಾರ ವಾದಿಗಳು, ಬರಹಗಾರರು, ಚಿಂತಕರ ಲೇಖನ, ಮಾತುಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿತ್ತು. ಆದರೆ, ಇವರ ಚಿಂತನೆ, ಲೇಖನಗಳಿಗೆ ಶಕ್ತಿ ಇದೆ ಎಂದು ಗೊತ್ತಾದ ಅನಂತರ ಬಲ­ಪಂ­ಥೀಯ ಸಂಘಟನೆಗಳಿಗೆ ಸಹಿಸಲು ಆಗುತ್ತಿಲ್ಲ. ಹೇಗಾದರೂ ಮಾಡಿ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ. ಈ ಮೂಲಕ ಪರೋಕ್ಷವಾಗಿ ತಾವು ಬಿಜೆಪಿಗೆ ಸಹಾಯ ಮಾಡಬಹುದು ಎಂದು ಭ್ರಮೆ ಅವರದು. 

ಯಾರಿಗೆ ಭ್ರಮೆ? ಈ ಹತ್ಯೆಯಿಂದ ಬಿಜೆಪಿಗೆ ಏನು ಲಾಭ? ಹತ್ಯೆಗಳಿಂದ ರಾಜಕೀಯ ಬೇಳೆ ಬೇಯಿಸುವಷ್ಟು ಕೆಳ ಮಟ್ಟಕ್ಕೆ ಇಳಿದಿದೆಯೇ ಕರ್ನಾಟಕದ ರಾಜಕಾರಣ?
ಹೌದು, ಕೆಲವು ಹಿಂದೂಪರ ಸಂಘಟನೆಗಳಿಗೆ ವಿಚಾರವಾದಿ ಗಳ ಸದ್ದು ಅಡಗಿಸಿ ಎಚ್ಚರಿಕೆ ಕೊಟ್ಟರೆ ಬೇರೆ ಯಾರೂ ಮಾತನಾಡುವುದಿಲ್ಲ, ಇದು ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯವಾಗಬಹುದು ಎಂಬ ಭ್ರಮೆ ಇದೆ. ಆದರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಅತಿ ದೊಡ್ಡ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು ಎಂಬುದು ಮುಖ್ಯ. ಹೀಗಾಗಿ, ಇವರ ಹತ್ಯೆ ಅವರಿಗೆ ಯಾವ ಲಾಭವೂ ತಂದುಕೊಡದು.

ಗೌರಿ ಹತ್ಯೆಯಲ್ಲಿ ನಕ್ಸಲರ ಪ್ರತ್ಯೇಕ ಗುಂಪಿನ ಕೈವಾಡ ಇರಬಹುದು ಎಂದೂ ಹೇಳಲಾಗುತ್ತಿದೆಯಲ್ಲಾ? 
ಅಂತಹ ವದಂತಿಗಳನ್ನು ಕೆಲವರು ವ್ಯವಸ್ಥಿತವಾಗಿ ಹರಡುತ್ತಿ ದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಸಂಪರ್ಕ ವಾಹಿನಿಯಾಗಿ ಕೆಲಸ ಮಾಡುತ್ತಿದ್ದ ಗೌರಿಯನ್ನು ನಕ್ಸಲರೇ ಕೊಲ್ತಾರಾ? ಒಂದೊಮ್ಮೆ ನಕ್ಸಲೀಯರು ಕೃತ್ಯ ಎಸಗಿದ್ದೇ ಆದರೆ ಈ ಹಿಂದಿನ ಘಟನೆಗಳ ಆಧಾರದಲ್ಲಿ ನೋಡುವು ದಾದರೆ ಅವರು ಕ್ಲೈಮ್‌ ಮಾಡುತ್ತಿದ್ದರು. 

ನಕ್ಸಲರ ವಿಚಾರ ಬಂದಾಗ ವದಂತಿ ಎನ್ನುತ್ತೀರಿ. ಆದರೆ ಬಲಪಂಥೀಯರ ವಿಚಾರ ಬಂದಾಗ “ಇವರೇ’ ಎನ್ನುತ್ತೀರಿ. ತನಿಖೆ ನಡೆಯುವ ಮೊದಲೇ ನೀವು ತೀರ್ಪು ಹೇಗೆ ಕೊಡುತ್ತೀರಿ? 
ನಾನು ಇಡೀ ದೇಶದಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಆಗುತ್ತಿರುವ ವಿದ್ಯಮಾನ, ರಾಜ್ಯದಲ್ಲಿ ನಡೆದ ಘಟನೆಗಳ ಆಧಾರದಲ್ಲಿ ನನ್ನ ಅನಿಸಿಕೆ ಹೇಳಿದ್ದೇನೆ.  ವಿಚಾರವಾದಿಗಳ ಹತ್ಯೆ, ವೈಚಾರಿಕತೆಯ ವಿರೋಧ ಘಟನಾವಳಿಗಳನ್ನು ಅವಲೋ­ಕಿಸಿದರೆ ಖಂಡಿತವಾಗಿಯೂ ಇದು ಸ್ಪಷ್ಟವಾಗುತ್ತದೆ. 

ಒಬ್ಬರು ಬಲಪಂಥೀಯರು ಅಂತ, ಮತ್ತೂಬ್ಬರು ನಕ್ಸಲರು ಅಂತ ಹೇಳಿಕೆ ಕೊಡುವುದರಿಂದ ತನಿಖೆ ದಿಕ್ಕು ತಪ್ಪುವುದಿಲ್ಲವೇ? 
ತನಿಖೆ ಎಲ್ಲ ಆಯಾಮಗಳಿಂದ ಸಮಗ್ರವಾಗಿ ನಡೆಯ ಬೇಕು. ನಕ್ಸಲರ ವಿಚಾರವಾಗಲಿ, ವೈಯಕ್ತಿಕ ದ್ವೇಷವಾಗಲಿ, ರಾಮಚಂದ್ರಾಪುರ ಮಠದ ಶ್ರೀಗಳ ವಿರುದ್ಧದ ಆರೋಪ ಗಳಾಗಲಿ ಪ್ರಧಾನ ಕಾರಣಗಳು ಅಲ್ಲವೇ ಅಲ್ಲ. ಆದರೆ, ಎಲ್ಲ ದರ ಬಗ್ಗೆಯೂ ತನಿಖೆ ನಡೆಯಲಿ, ಸತ್ಯ ಸಾಯಬಾರದು ಅಷ್ಟೆ. ಕಲಬುರ್ಗಿಯವರ ಪ್ರಕರಣದಂತಾಗಬಾರದು. 

ನಿಮ್ಮ ಮಾತಿನ ಅರ್ಥ? 
ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆಗೆ ಹದಿನೈದು ದಿನಗಳ ಮುಂಚೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಐದು ಜನರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಲಾಗಿತ್ತು. ಅದಾದ ಅನಂತರ ಕಲಬುರ್ಗಿಯವರ ಹತ್ಯೆ ನಡೆಯಿತು. ಆಗಲೇ ಸರಕಾರ ಎಚ್ಚೆತ್ತುಕೊಂಡು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೆ ಆಯೋಜಕರ್ಯಾರು, ಪ್ರಾಯೋಜಕ ರ್ಯಾರು, ಆರೋಪಿಗಳಾರು ಎಂಬುದು ಗೊತ್ತಾಗುತ್ತಿತ್ತು. ಗೌರಿ ಹತ್ಯೆಯಾಗುತ್ತಿರಲಿಲ್ಲ. 

ಹಾಗಾದರೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿತಾ? 
ಖಂಡಿತವಾಗಿಯೂ ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆ ಆರೋಪಿಗಳನ್ನು ಬಂಧಿಸದಿರುವುದು ರಾಜ್ಯ ಸರಕಾರದ ವೈಫ‌ಲ್ಯ. ಆಗ ಗೃಹ ಸಚಿವರಾಗಿದ್ದ ಡಾ| ಜಿ. ಪರಮೇಶ್ವರ್‌ ಅವರು ಇದರ ನೈತಿಕ ಹೊಣೆ ಹೊರಬೇಕು.

ಎಸ್‌ಐಟಿ ತನಿಖೆಯಿಂದ ಗೌರಿ ಹತ್ಯೆ ಹಂತಕರು ಪತ್ತೆಯಾಗುವ ವಿಶ್ವಾಸವಿದೆಯಾ? 
ಆಗಬೇಕು, ಆ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. 

ವಿಜಯದಶಮಿ ಒಳಗೆ ಹಂತಕರ ಬಂಧಿಸಬೇಕು ಎಂದು ಗಡುವು ನೀಡಿದ್ದೀರಿ?
ಅದು ಹೋರಾಟಗಾರರು, ಚಿಂತಕರು, ಸಾಹಿತಿಗಳ ಆಗ್ರಹ. 

ಅಷ್ಟರಲ್ಲಿ ಹಂತಕರನ್ನು ಪತ್ತೆ ಮಾಡದಿದ್ದರೆ? 
ಹೋರಾಟಗಾರರೆಲ್ಲಾ ಕುಳಿತು ಮುಂದಿನ ಹೋರಾಟ ಏನಿರಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ.

ರಾಜ್ಯ ಸರಕಾರದ ವಿರುದ್ಧವೂ ನಿಮ್ಮ ಹೋರಾಟ ನಡೆಯುತ್ತಾ?
ಹೌದು, ಇದರಲ್ಲಿ ಸಂಶಯವೇ ಇಲ್ಲ. ಇಂದು ಕಾಂಗ್ರೆಸ್‌ ಸೇರಿ ಜಾತ್ಯತೀತ ಹಾಗೂ ಎಡಪಂಥೀಯ ವಿಚಾರಧಾರೆಯ ಪಕ್ಷಗಳು ದುರ್ಬಲವಾಗಿವೆ. ಇದರ ಲಾಭ ಕೋಮುವಾದಿ ಪಕ್ಷಗಳು ಪಡೆಯುತ್ತಿವೆ. ಇವರು ಗಟ್ಟಿಯಾಗಿದ್ದಿದ್ದರೆ ಇಂತಹ ಘಟನೆಗಳೇ ಆಗುತ್ತಿರಲಿಲ್ಲ. 

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವೇ ಇದೆಯಲ್ಲಾ? 
ಇದೆ, ಕಾಂಗ್ರೆಸ್‌ ಸರಕಾರವೂ ಇದೆ, ಕಾಂಗ್ರೆಸ್‌ ಪಕ್ಷವೂ ಗಟ್ಟಿಯಾಗೇ ಇದೆ. ಆದರೆ, ಪ್ರಗತಿಪರ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಕಾಂಗ್ರೆಸ್‌ ಸಹ ವಿಫ‌ಲವಾಗಿದೆ. ಕಾಂಗ್ರೆಸ್‌ನ ಮೂಲ ಸಿದ್ಧಾಂತವೇ ಪ್ರಗತಿಪರವಾದ. ಆದರೆ, ಇಲ್ಲಿ ಆ ಕಾಂಗ್ರೆಸ್‌ ಕೋಮುವಾದ ಹತ್ತಿಕ್ಕುವಲ್ಲಿ ಎಡವಿದೆ. 

ಗೌರಿ ಹತ್ಯೆಯ ಅನಂತರ ನಿಮಗೆ ಬೆದರಿಕೆ ಕರೆಗಳು ಬರುತ್ತಿವೆಯಾ? 
ಇಲ್ಲ ಆ ರೀತಿಯೇನೂ ಇಲ್ಲ. ಆದರೆ, ಕಲಬುರ್ಗಿ, ಗೌರಿ ಹತ್ಯೆಯಾದ ಅನಂತರ ಮೂರನೇ, ನಾಲ್ಕನೇ ಹತ್ಯೆಯಾಗುವು ದಿಲ್ಲ ಎಂಬ ಖಾತರಿ ಏನು? 

ರಾಜ್ಯ ಸರಕಾರ ಪೊಲೀಸ್‌ ಭದ್ರತೆ ಒದಗಿಸಿದೆಯಲ್ಲವೇ? 
    ಹೌದು, ಒದಗಿಸಿದೆ. ನಾನೇ ಕಲಬುರ್ಗಿ ಅವರ ಹತ್ಯೆಯ ಅನಂತರ ಹಿಟ್‌ ಲಿಸ್ಟ್‌ನಲ್ಲಿ ಇರುವವರಿಗೆ ಭದ್ರತೆ ಕೊಡಲು ಒತ್ತಾಯಿಸಿದ್ದೆ. ಅದರಂತೆ ಕೊಟ್ಟಿದ್ದಾರೆ. 

ಸ್ವಾಮೀಜಿಗಳಿಗೆ ಭದ್ರತೆ ಬೇಕೇ?
ಅಗತ್ಯ ಇರುವವರು ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. 

ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿ ಕುರಿತ ನಿಮ್ಮ ಹೋರಾಟ ಫ‌ಲ ನೀಡುತ್ತಾ? 
ಮೂರೂವರೆ ವರ್ಷ ಹೋರಾಟ ಮಾಡಿದ್ದೇನೆ. ನಾನೊಬ್ಬನೇ ಅಲ್ಲ ಸಹಸ್ರಾರು ಮಂದಿ ಇದರ ಮುಂಚೂಣಿಯಲ್ಲಿದ್ದರು. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಚ್ಚಾಗಿ ನಂಬಿದ್ದೇನೆ. ಅವರು ನುಡಿದಂತೆ ನಡೆಯುತ್ತಾರೆ ಎಂಬ ವಿಶ್ವಾಸವಿದೆ. 

ಮೌಡ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ಸಂಪುಟದಲ್ಲೇ ಅಪಸ್ವರ ಇದೆಯಲ್ಲಾ? 
ಅಪಸ್ವರ ಇತ್ತು, ಈಗಿಲ್ಲ. ಮುಖ್ಯಮಂತ್ರಿಯವರಲ್ಲಿ ಬದ್ಧತೆ ಇದೆ, ಆದರೆ, ಅವರ ಸಹೋದ್ಯೋಗಿಗಳಲ್ಲಿ ಗೊಂದಲ ಇತ್ತು. ಇದೀಗ ಎಲ್ಲ ನಿವಾರಿಸಿ ಮುಂದಿನ ಚಳಿಗಾಲದ ಅಧಿ­­ವೇಶ­ನದಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ. ನಾವೂ ಕಾಯುತ್ತಿದ್ದೇವೆ. 

ಈ ಸರಕಾರದಲ್ಲೇ ಜಾರಿಯಾಗುವ ವಿಶ್ವಾಸ ಇದೆಯಾ? 
ಮೊದಲೇ ಹೇಳಿದೆನಲ್ಲಾ ನನಗೆ ಈ ಸರಕಾರಕ್ಕಿಂತ ಸಿದ್ದರಾಮಯ್ಯ ಅವರ ಮೇಲೆ ಮಾತ್ರ ನಂಬಿಕೆಯಿದೆ. ಅವರು ಮೂಢನಂಬಿಕೆಯ ದಾಸರಲ್ಲ. 

ಗೌರಿ ಹತ್ಯೆ, ಮೌಡ್ಯ ಪ್ರತಿಬಂಧಕ ಕಾಯ್ದೆ ರಾಜಕೀಯ ಸ್ವರೂಪ ಪಡೆಯುವುದು ಸರಿಯಾ? 
ತಪ್ಪು. ರಾಜಕೀಯ ಪಕ್ಷಗಳು ಇಂತಹ ವಿಚಾರಗಳಲ್ಲಿ ರಾಜಕೀಯ ಲಾಭಕ್ಕಾಗಿ ಹವಣಿಸುವುದು ಹೀನತನ. ಕಲಬುರ್ಗಿ ಹತ್ಯೆ ಧಾರ್ಮಿಕ ಹತ್ಯೆ, ಗೌರಿ ಹತ್ಯೆ ರಾಜಕೀಯ ಹತ್ಯೆ. ಆದರೆ ಈ ವಿಚಾರದಲ್ಲಿ ಸತ್ಯ ಮರೆಯಾಗಬಾರದು ಅಷ್ಟೇ. ಇನ್ನು ಮೌಡ್ಯ ಪ್ರತಿಬಂಧಕ ಕಾಯ್ದೆಯ ಅಗತ್ಯ ಇದೆ ಎಂಬುದು ಇದೀಗ ಸರಕಾರಕ್ಕೂ ಮನವರಿಕೆಯಾಗಿದೆ ಎಂಬುದು ನನ್ನ ಅನಿಸಿಕೆ. 

ಮೌಡ್ಯಪ್ರತಿಬಂಧಕ ಕಾಯ್ದೆ ವಿಚಾರದಲ್ಲಿ ಸಮಗ್ರ ಚರ್ಚೆ ಅಗತ್ಯ ಎಂಬ ಒತ್ತಾಯವಿದೆಯಲ್ಲಾ? 
ಆಗಲಿ, ನಾವಂತೂ ಬೇಡ ಎನ್ನುವುದಿಲ್ಲ. ಅದಕ್ಕಾಗಿ ಮೂರು ದಿನ ವಿಶೇಷ ಅಧಿವೇಶನ ಕರೆದು ಎಲ್ಲ ಪಕ್ಷಗಳ ಅಭಿಪ್ರಾಯ-ಸಲಹೆ ಪಡೆದು ಅಗತ್ಯವಾದರೆ ಮತ್ತಷ್ಟು ಅಂಶ ಸೇರಿಸಿಯೇ ಜಾರಿಗೊಳಿಸಲಿ.

ಸಂದರ್ಶನ ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.