ಬಿಎಸ್‌ವೈ ಕೋಪಕ್ಕೆ ಯಾರು ಕಾರಣ?


Team Udayavani, May 1, 2017, 11:21 AM IST

BSY-650-01.jpg

ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಾಗಿ ಗೊತ್ತಿರದ ಸಂಘ ಪರಿವಾರದವರು ಚೆನ್ನಾಗಿ ಅರಿತಿರುವ ಸಂತೋಷ್‌ಜಿ  ಮೇಲ್ನೋಟಕ್ಕೆ ಪಕ್ಷದ ಒಬ್ಬ ಮುಖಂಡ. ಆದರೆ, ಮೂಲ ಬಿಜೆಪಿಯ ಕಾರ್ಯಕರ್ತರಿಗೆ ಸಂತೋಷ್‌ ಶಕ್ತಿ ಸಾಮರ್ಥ್ಯ ಚೆನ್ನಾಗಿ ಗೊತ್ತಿದೆ. ತೆರೆ ಮರೆಯಲ್ಲಿದ್ದು ಕೆಲಸ ಮಾಡುವ ಅವರದು ಅಂಡರ್‌ಗ್ರೌಂಡ್‌ ವರ್ಕ್‌ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಬಹುಶಃ ಸಂತೋಷ್‌ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರಿಗೂ ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡು ನಿಭಾಯಿಸಿಕೊಳ್ಳುವುದು ಕಷ್ಟ. ಸಂತೋಷ್‌ ನೇರವಾಗಿ ಆರ್‌ಎಸ್‌ಎಸ್‌ನಿಂದಲೇ ಪಕ್ಷಕ್ಕೆ ನಿಯೋಜಿತಗೊಂಡಿರುವುದರಿಂದ, ಅವರ ಮೇಲೆ ಅಧಿಕಾರ ಚಲಾಯಿಸುವ ಅಧಿಕಾರ ಯಡಿಯೂರಪ್ಪನವರಿಗೂ ಇಲ್ಲ! 

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯವರನ್ನು ಬಿಜೆಪಿ ಘೋಷಣೆ ಮಾಡಿದ್ದೇ ತಡ ಪಕ್ಷದ ವರ್ಚಸ್ಸು ಬದಲಾಯಿತು. ಬಣಗಳೆಲ್ಲ ತಲೆಕೆಳಗಾಗಿ ಇಡೀ ಪಕ್ಷ ಒಗ್ಗಟ್ಟಾಯಿತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುನ್ಸೂಚನೆ ಆಗಲೇ ಲಭಿಸಿತ್ತು. 2016, ಏಪ್ರಿಲ್‌ ತಿಂಗಳಲ್ಲಿ ಯಡಿಯೂರಪ್ಪನವರನ್ನು ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಾಗಲೂ ಇದೇ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ದೇಶಾದ್ಯಂತ ಇರುವ ಮೋದಿ ಹವಾ, ಯಡಿಯೂರಪ್ಪನವರ ಜನಪ್ರಿಯತೆ ಎರಡೂ ಕೂಡಿಕೊಂಡು ಬಿಜೆಪಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲಿದೆ ಎಂಬ ವಾತಾವರಣ ಮೂಡಿತ್ತು. ಇದೀಗ ನಿಧಾನವಾಗಿ ಅಂತಹ ಆಶೆಗಳೆಲ್ಲ ಕರಗುತ್ತಿವೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಯಡಿಯೂರಪ್ಪನವರನ್ನು ಹೊರತುಪಡಿಸಿ ಬೇರಾರೂ ಹೇಳುವ ಸ್ಥಿತಿಯಲ್ಲಿಲ್ಲ!

ಏಕೆಂದರೆ, ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಮತ್ತೆ ಬೀದಿಗೆ ಬಂದಿದೆ. ಯಡಿಯೂರಪ್ಪ ಹಾಗೂ  ಈಶ್ವರಪ್ಪ ನಡುವಿನ ಮಾತಿನ ಸಮರ ಮುನಿಸು, ಜಗಳಕ್ಕೆ ಮಾತ್ರ ಸೀಮಿತವಾಗುತ್ತಿದ್ದ ಭಿನ್ನಮತ ,ಈ ಬಾರಿ ಇದ್ದಕ್ಕಿದ್ದಂತೆ ಮತ್ತಷ್ಟು ತಾರಕಕ್ಕೇರಿದೆ. ಎರಡೂ ಬಣಗಳ ಮಾತುಗಳನ್ನು ಆಲಿಸಿದಾಗ ಗೊತ್ತಾಗುವುದೇನೆಂದರೆ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಬಹಳ ಗಂಭೀರವಾಗಿದೆ, ಮುಂದಿನ ಚುನಾವಣೆಯಲ್ಲಿ ಅದು ಪಕ್ಷಕ್ಕೆ ಮಾರಕವಾದರೆ ಅಚ್ಚರಿ ಪಡುವ ಅಗತ್ಯವಿಲ್ಲ!

ಬಿಜೆಪಿಯ ಒಳಜಗಳದ ಪರ್ವಕಾಲದಲ್ಲಿ ಮತ್ತೂಂದು ಹೆಸರು ಎದ್ದು ನಿಂತಿದೆ. ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಗಳ ಹಿಂದೆ ರಾಷ್ಟ್ರೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಇದ್ದಾರೆ, ಇದರ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುತ್ತೇನೆಂದು ಯಡಿಯೂರಪ್ಪನವರೇ ದೃಢಧ್ವನಿಯಲ್ಲಿ ಹೇಳುವ ಮೂಲಕ ಮತ್ತೂಬ್ಬ ನಾಯಕ ಪರದೆಯ ಮುಂದೆ ಬಂದಿದ್ದಾರೆ. ಇದುವರೆಗೆ ಪರದೆಯ ಹಿಂದೆಯೇ ಕೆಲಸ ಮಾಡುತ್ತಿದ್ದ ಸಂತೋಷ್‌ರನ್ನು ಪರದೆಯ ಮುಂದೆ ತಂದ ಹೆಗ್ಗಳಿಕೆ ಯಡಿಯೂರಪ್ಪನವರಿಗೇ ಸಲ್ಲುತ್ತದೆ!

ಜನಪ್ರಿಯತೆಯಲ್ಲಿ, ಅದನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ, ಬಿಗಿಹಿಡಿತದಲ್ಲಿ ಯಡಿಯೂರಪ್ಪನವರನ್ನು ಮೀರಿಸುವ ನಾಯಕ ಕರ್ನಾಟಕ ಬಿಜೆಪಿಯಲ್ಲಿ ಮತ್ತೂಬ್ಬರಿಲ್ಲ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅವರ ವಿರುದ್ಧ ನೇರವಾಗಿ ತೊಡೆ ತಟ್ಟುವ ಸಾಮರ್ಥ್ಯ ರಾಜ್ಯ ಬಿಜೆಪಿಯಲ್ಲಂತೂ ಯಾರಿಗೂ ಇಲ್ಲ. ಅಂತಹ ಒಬ್ಬ ನಾಯಕನಿಗೇ ಬಗಲ ಮುಳ್ಳಾಗಿ ಕಾಡುವಂತಹ ಶಕ್ತಿ ಈ ಸಂತೋಷ್‌ರಿಗಿದೆಯಾ, ಹಾಗಾದರೆ ಈ ಸಂತೋಷ್‌ ಯಾರು?
ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಾಗಿ ಗೊತ್ತಿರದ ಸಂಘ ಪರಿವಾರ ದವರು ಚೆನ್ನಾಗಿ ಅರಿತಿರುವ ಸಂತೋಷ್‌ಜಿ  ಮೇಲ್ನೋಟಕ್ಕೆ 
ಪಕ್ಷದ ಒಬ್ಬ ಮುಖಂಡ. ಆದರೆ, ಮೂಲ ಬಿಜೆಪಿಯ ಕಾರ್ಯಕರ್ತರಿಗೆ ಸಂತೋಷ್‌ ಶಕ್ತಿ ಸಾಮರ್ಥ್ಯ ಚೆನ್ನಾಗಿ ಗೊತ್ತಿದೆ. ತೆರೆ ಮರೆಯಲ್ಲಿದ್ದು ಕೆಲಸ ಮಾಡುವ ಅವರದು ಅಂಡರ್‌ಗ್ರೌಂಡ್‌ ವರ್ಕ್‌ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಹಾಗಾದರೆ, ಅಂತಹ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿರುವ ಅಥವಾ ಯಡಿಯೂರಪ್ಪ ಹಾಗೆಂದು ಭಾವಿಸಿರುವ  ಸಂತೋಷ್‌ ಯಾರು? ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಸಂತೋಷ್‌ ನೇರವಾಗಿ ಪಕ್ಷ ರಾಜಕಾರಣಕ್ಕೆ ಬಂದವರಲ್ಲ. 1993ರಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಮೈಸೂರು ವಿಭಾಗ್‌ ಉಸ್ತುವಾರಿಯಾಗಿ ನಿಯುಕ್ತಿಗೊಂಡವರು. ಮುಂದೆ ಶಿವಮೊಗ್ಗ ವಿಭಾಗ್‌ ಪ್ರಚಾರಕ್‌ (ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ನಾಲ್ಕು ಜಿಲ್ಲೆಗಳ ವ್ಯಾಪ್ತಿ) ಆಗಿ ನಂತರ 2006ರಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಮುಂದಿನ 8 ವರ್ಷಗಳ ಕಾಲ ಅದೇ ಜವಾಬ್ದಾರಿ ನಿರ್ವಹಿಸಿದರು. ಸದ್ಯ 2 ವರ್ಷದಿಂದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. 7 ರಾಜ್ಯದ ಹೊಣೆಗಾರಿಕೆ ಅವರದು.
  
ಮೂಲತಃ ಚಾಮರಾಜನಗರದವರಾದ ಸಂತೋಷ್‌ ಬಿಇ ಪದವೀಧರ. ಕೆಲಸಕ್ಕೆ ರಾಜೀನಾಮೆ ಕೊಟ್ಟು ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ತಾಂತ್ರಿಕ ಜ್ಞಾನದ ಜೊತೆಗೆ ಭಾರತೀಯ ಸಾಹಿತ್ಯ, ವಿಶ್ವದ ಇತಿಹಾಸ, ಆಧುನಿಕ ಭಾರತ ಸಾಧನೆಗಳ ಬಗ್ಗೆ ಅಧ್ಯಯನ ಮಾಡಿರುವ ಅವರಿಗೆ ಇಂಗ್ಲಿಷ್‌ ಭಾಷಾ ಜ್ಞಾನ ಅತ್ಯುತ್ತಮವಾಗಿರುವುದರಿಂದ ಹೈಕಮಾಂಡ್‌ ಜತೆ ಸುಲಭ ಸಂವಹನ ಸಾಧ್ಯವಾಯಿತು.

ಸಂತೋಷ್‌ ಶಿವಮೊಗ್ಗ ವಿಭಾಗ್‌ ಪ್ರಚಾರಕರಾಗಿದ್ದ ವೇಳೆ ಅವರ ಸಂಘಟನಾ ಕೌಶಲ ಪೂರ್ಣವಾಗಿ ಬೆಳಕಿಗೆ ಬಂತು. ದತ್ತಪೀಠದ ಹೋರಾಟವನ್ನು ತೆರೆಯ ಹಿಂದಿಂದ ರೂಪಿಸಿ, ಅದರ ತಂತ್ರಗಾರಿಕೆಗಳನ್ನು ನಿರ್ಧರಿಸಿದ್ದೇ ಇವರು. ದತ್ತಪೀಠದಲ್ಲಿ ಮಾಲಾಧಾರಣೆ ಶುರುವಾಗಿ ಅದೊಂದು ಹಿಂದೂ ಧಾರ್ಮಿಕ ಕೇಂದ್ರವಾಗಿ ಬದಲಾಗುವುದರ ಹಿಂದೆ ಇವರ ಪಾತ್ರ ದೊಡ್ಡದು. ಶಿವಮೊಗ್ಗದ ಮಧುಕೃಪಾದಲ್ಲಿ (ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ವಿಭಾಗ್‌ ಕಚೇರಿ) ಕುಳಿತುಕೊಂಡು ದತ್ತಪೀಠದ ಹೋರಾಟಗಳನ್ನು ನಿರ್ದೇಶಿಸಿದರು. ಆಗ ದತ್ತಪೀಠ ಹೋರಾಟದ ನಾಯಕತ್ವ ವಹಿಸಿದ್ದ ಸಿ.ಟಿ.ರವಿ, ಸುನೀಲ್‌ ಕುಮಾರ್‌ ಪ್ರತಿ ಹಂತದಲ್ಲೂ ಇವರಿಂದ ತಂತ್ರಗಾರಿಕೆಯ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದರು.
 
ಆ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್‌ ನಡುವೆ ಆತ್ಮೀಯ ಸಂಬಂಧವಿತ್ತು. ಈ ಪ್ರೀತಿಯೇ ಸಂತೋಷ್‌ ಬಿಜೆಪಿ ಪ್ರವೇಶಿಸಲು ಪ್ರಬಲ ಕಾರಣ.

ಇಬ್ಬರ ನಡುವೆ ಒಡಕು ಬಂದಿದ್ದೆಲ್ಲಿ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಉತ್ತರ ಹೇಳುತ್ತಾರೆ. ಯಡಿಯೂರಪ್ಪನವರ ಏಕಪಕ್ಷೀಯ ರಾಜಕೀಯವೇ ಇದಕ್ಕೆ ಕಾರಣವೆಂದು ಒಂದು ಗುಂಪು ಹೇಳಿದರೆ, ಯಡಿಯೂರಪ್ಪನವರನ್ನು ಸಂತೋಷ್‌ ಮೂಲೆಗುಂಪು ಮಾಡಲು ಹೊರಟಿದ್ದಾರೆಂದು ಮತ್ತೂಂದು ಗುಂಪು ಹೇಳುತ್ತದೆ. ಈ ಬಿರುಕು ಹುಟ್ಟಿದ್ದು ನಿನ್ನೆ ಮೊನ್ನೆಯಲ್ಲ. ಅಂದಾಜು 2011ರಿಂದಲೇ ಇದು ಶುರುವಾಯಿತು. ಆಗ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿ ಮನಸ್ಸಿಲ್ಲದ ಮನಸ್ಸಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ಅಂತಹ ತೀರ್ಮಾನ ಕೈಗೊಳ್ಳುವುದಕ್ಕೆ ಸಂತೋಷ್‌ ಹೈಕಮಾಂಡ್‌ಗೆ ನೀಡಿದ ವರದಿ ಕಾರಣ ಎನ್ನುತ್ತವೆ ಮೂಲಗಳು. ಯಡಿಯೂರಪ್ಪನವರು ಭ್ರಷ್ಟಾಚಾರ ನಡೆಸಿದ್ದಾರೆ, ಹೀಗೆಯೇ ಮುಂದುವರಿದರೆ ಇದು ಪಕ್ಷಕ್ಕೆ ಮಾರಕವಾಗುತ್ತದೆ ಎನ್ನುವುದನ್ನು ಮನಗಾಣಿಸುವಲ್ಲಿ ಅವರು ಯಶಸ್ವಿಯಾದರು. ಇಲ್ಲಿಂದ ಇಬ್ಬರ ನಡುವೆ ನಡುವೆ ಹುಟ್ಟಿದ ಸಿಟ್ಟು ಮೊನ್ನೆ ಮೊನ್ನೆ ನೇರ ಆರೋಪವಾಗುವ ಮೂಲಕ ಹೊರ ಜಗತ್ತಿಗೂ ಗೊತ್ತಾಗಿದೆ.

ಯಡಿಯೂರಪ್ಪ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆಂದು ಈಶ್ವರಪ್ಪನವರ ಗುಂಪು ಹೇಳಿಕೊಳ್ಳುತ್ತದೆ. ಅಂತಹದ್ದೇ ಬಿಗಿ ಸ್ವಭಾವ ಸಂತೋಷ್‌ರಲ್ಲೂ ಇರುವುದೇ ಬಿಕ್ಕಟ್ಟಿಗೆ ಕಾರಣ. ಯಡಿಯೂರಪ್ಪ ಹೇಗೆ ರಾಜಿಯಾಗುವುದಿಲ್ಲವೋ, ಸಂತೋಷ್‌ ಕೂಡ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಇಂತಹ ಎರಡು ಸ್ವಭಾವಗಳು ನಿರ್ಣಾಯಕ ಸ್ಥಾನದಲ್ಲಿದ್ದರೆ ಅದು ವಿಭಜನೆಯಲ್ಲಿ ಪರ್ಯಾವಸಾನವಾಗುವುದು ಸಹಜ. ಅದು ಹಾಗೆಯೇ ಆಯಿತು.  

ಬಹುಶಃ ಸಂತೋಷ್‌ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರಿಗೂ ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡು ನಿಭಾಯಿಸಿಕೊಳ್ಳುವುದು ಕಷ್ಟ. ಸಂತೋಷ್‌ ನೇರವಾಗಿ ಆರ್‌ಎಸ್‌ಎಸ್‌ನಿಂದಲೇ ಪಕ್ಷಕ್ಕೆ ನಿಯೋಜಿತಗೊಂಡಿರುವುದರಿಂದ, ಅವರ ಮೇಲೆ ಅಧಿಕಾರ ಚಲಾಯಿಸುವ ಅಧಿಕಾರ ಯಡಿಯೂರಪ್ಪನವರಿಗೂ ಇಲ್ಲ! ಈ ತೊಡಕು ಬಿಎಸ್‌ವೈರನ್ನು ಬಾಧಿಸುತ್ತಿದೆ. ಸಂತೋಷ್‌ ಬೆಂಬಲವಿರುವುದರಿಂದಲೇ ರಾಯಣ್ಣ ಬ್ರಿಗೇಡ್‌ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೂ ಈಶ್ವರಪ್ಪ ಬಚಾವಾಗುತ್ತಿದ್ದಾರೆಂದು ಬಿಎಸ್‌ವೈ ಅಳಲು. ಅದು ಸತ್ಯವೆಂದು ಪಕ್ಷದೊಳಗಿನ ಹಲವರು ಹೇಳುತ್ತಾರೆ.  

ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ವಾಪಸ್ಸಾಗಿ ರಾಜ್ಯಾಧ್ಯಕ್ಷರಾದ ಮೇಲೂ  ಅವರ ವರ್ತನೆಗಳು ಬದಲಾಗಿಲ್ಲವೆೆಂದು  ಸಂತೋಷ್‌ ಹಲವು ಬಾರಿ ಪಕ್ಷದ ವೇದಿಕೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಮೂಲಗಳು ಹೇಳುತ್ತವೆ. ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯುವ ಉದಾರತೆ ಇರದಿದ್ದರೆ ಹೇಗೆ ಎಂಬುದೇ ಅವರ ಆತಂಕವೆಂದು ಹೇಳಲಾಗಿದೆ.

ಇಂತಹ ಕೆಲವು ಭಿನ್ನಮತದ ಕಾರಣ ಹಿಂದೆಯೇ ಶುರುವಾದ ಭಿನ್ನಮತ ಈಗ ಈಶ್ವರಪ್ಪ ರೂಪದಲ್ಲಿ ಸ್ಫೋಟಗೊಂಡಿದೆ ಎಂಬುದು ಬಲ್ಲವರ ಮಾತು. ರಾಯಣ್ಣ ಬ್ರಿಗೇಡ್‌ ಮಾಡಿ ಈಶ್ವರಪ್ಪನವರು ಸ್ಪಷ್ಟವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೂ ಬಚಾವಾಗಲು ಕಾರಣ ಸಂತೋಷ್‌ ಎನ್ನುವುದು ಯಡಿಯೂರಪ್ಪನವರ ಪರೋಕ್ಷ ಆಕ್ರೋಶ.

ಮೇಲ್ನೋಟಕ್ಕೆ ನೋಡಿದರೆ ಈಶ್ವರಪ್ಪನವರದ್ದು ಪಕ್ಷವಿರೋಧಿ ಚಟುವಟಿಕೆಯೆಂದು ಸುಲಭವಾಗಿ ಹೇಳಬಹುದು. ಒಂದು ಪಕ್ಷಕ್ಕೇ ತೊಡಕಾಗುವ ಅವರ ಈ ಸಂಘಟನೆಯ ಉಸಾಬರಿ ಯಾಕೆ ಬೇಕು ಎನ್ನುವ ಬಿಎಸ್‌ವೈ ಪ್ರಶ್ನೆ ಸಕಾಲಿಕ. ಅಂತಹ ಬ್ರಿಗೇಡ್‌ಗೆ ಸಂತೋಷ್‌ ಬೆಂಬಲ ಯಾಕೆ ಎಂದು ಕೇಳುವುದಾದರೆ, ಅವರು ಈ ಮೂಲಕ ಬಿಎಸ್‌ವೈಗೆ ಲಗಾಮು ಹಾಕಿ ಹಿಡಿದಿಡುತ್ತಿದ್ದಾರೆ,  ಜೊತೆ ಜೊತೆಗೆ ಅಧಿಕಾರ ರಾಜಕಾರಣದತ್ತ ಚಲಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಹೌದೇ?

– ನಿರೂಪ

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.