ಜೀವಿತಾವಧಿ ಸರ್ವಾಧಿಕಾರ!


Team Udayavani, Mar 14, 2018, 8:25 AM IST

xi.jpg

ನ್ಯೂಕ್ಲಿಯರ್‌ ಸಪ್ಲೆ„ಯರ್‌ ಗ್ರೂಪ್‌ನಲ್ಲಿ ಸೇರುವ ಭಾರತದ ಅವಕಾಶಕ್ಕೂ ಚೀನಾದ ಈ ಜೀವಿತಾವಧಿ ಅಧ್ಯಕ್ಷರು ತಡೆಯಾಗಬಹುದು. ಇದುವರೆಗಂತೂ ಭಾರತಕ್ಕೆ ಕೊಡುವುದಾದರೆ ಪಾಕಿಸ್ತಾನಕ್ಕೂ ಕೊಡಿ ಎಂಬ ಅವರ ಮಾತು ಜಾಗತಿಕ ಮಟ್ಟದಲ್ಲಿ ಆಗಾಗ ಕಿರಿಕ್‌ ಮಾಡುತ್ತಲೇ ಇದೆ.

ಅಧಿಕಾರವೆಂಬ ಅಫೀಮು ಮತ್ತದರ ಸುತ್ತಲಿನ ಸವಲತ್ತು, ಅಧಿಕಾರ ಬಿಟ್ಟು ಹೋದ ನಂತರದಲ್ಲಿ ಕಾಡುವ‌ ಒಂಟಿತನ, ನಿರಾಸೆ, ಎಲ್ಲರೂ ತಮ್ಮನ್ನು ನಿರ್ಲಕ್ಷಿಸುತ್ತಿ¨ªಾರೆ ಎಂಬ ವಿಚಾರಗಳು ಎಂಥ ದೊಡ್ಡ ನಾಯಕನನ್ನೂ ಅಂಗಾತ ಮಲಗಿಸಿಬಿಡುತ್ತವೆ. ಜಾಗತಿಕ ಮಟ್ಟದಲ್ಲಿ ರಾಜಕೀಯ ನೋಡಿದಾಗ ಈ ಅಂಶ ಸ್ಪಷ್ಟವಾಗಿ ಗೋಚರಿಸಿಯೇ ತೀರುತ್ತದೆ. ಈ ಕಾರಣಕ್ಕಾಗಿಯೇ ಅಧಿಕಾರಕ್ಕೆ ಏರಿದ ಅದೆಷ್ಟೋ ಮಂದಿ ಅಧಿಕಾರ ಕೈಬಿಡಲು ಆಗದೇ ಅಡ್ಡದಾರಿ ಹಿಡಿದು ಗಟ್ಟಿಯಾಗಿ ಕುರ್ಚಿ ಹಿಡಿದಿಟ್ಟುಕೊಳ್ಳುವುದನ್ನೂ ನಾವು ನೋಡುತ್ತಲೇ ಇದ್ದೇವೆ. ಇವರೆಲ್ಲಾ ಇದಕ್ಕೆ ನೀಡುವ ನೆಪ; ನಾವು ಮಾಡುವುದು ಬೇಕಾದಷ್ಟಿದೆ, ಹಾಗಾಗಿ ಇನ್ನಷ್ಟು ಸಮಯ ಅಧಿಕಾರದಲ್ಲಿ ಇರಲೇಬೇಕು.

ರಷ್ಯಾ ಗಮನಿಸುವುದಾದರೆ ಕಳೆದೆರಡು ದಶಕಗಳಿಂದ ಇದು ಎಲ್ಲರ ಅರಿವಿಗೂ ಬರುತ್ತದೆ. ಅಲ್ಲಿ ವ್ಲಾದಿಮಿರ್‌ ಪುಟಿನ್‌ ಒಮ್ಮೆ ಅಧ್ಯಕ್ಷ, ಮತ್ತೂಮ್ಮೆ ಪ್ರಧಾನಿ ಗಾದಿಯಲ್ಲಿ ಮುಂದುವರಿಯುತ್ತಲೇ ಇ¨ªಾರೆ. ಅಲ್ಲಿನ ಅಧಿಕಾರಾವಧಿ ಮೇಲಿನ ಸೀಮಿತತೆಯಿಂದಾಗಿ ಅವರು ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಲೇ ಇದ್ದಾರೆ. ಅದೃಷ್ಟವಶಾತ್‌ ಅವರು ಸಂವಿಧಾನವನ್ನು ತಿದ್ದಲು ಹೋಗಿಲ್ಲ ಅಷ್ಟೇ. ಇನ್ನು ಟರ್ಕಿಯಲ್ಲೂ ಎಲ್ಲಾ ಸಾಂವಿಧಾನಿಕ ಶಿಸ್ತುಗಳನ್ನು ಬದಿಗೆ ತೂರಿ ರಿಕ್ಯಾಪ್‌ ತಯ್ಯಪ್‌ ಎರ್ಡ್‌ಗಾನ್‌ ಅವರು ಮತ್ತೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಇದ್ದಾರೆ.

ಇಂಥದ್ದೇ ಅಧಿಕಾರದ ಹಪಹಪಿತನಕ್ಕೆ ಕಾರಣವಾಗಿರುವ ದೇಶ ನೆರೆಯ ಚೀನಾ. ಪಕ್ಕಾ ಕಮ್ಯೂನಿಸ್ಟರ ಆಡಳಿತವಿರುವ ಅಲ್ಲಿ, ಆಡಳಿತ ನಡೆಸಲು ಇರುವುದು ಒಂದೇ ಪಕ್ಷ. ಅಧ್ಯಕ್ಷರಿರಲಿ ಅಥವಾ ಪ್ರಧಾನಿ ಇರಲಿ ಎಲ್ಲವೂ ಎಡಪಕ್ಷದ ಒಳಗೇ ಆಗಬೇಕು. ಹೀಗಾಗಿ ಚುನಾವಣೆ ಎಂಬುದು ಅಲ್ಲಿನವರಿಗೆ ಹೆಚ್ಚು ಕಡಿಮೆ ಗೊತ್ತೇ ಇಲ್ಲದ ಸಂಗತಿ. ಗೊತ್ತಿದ್ದರೂ ನೆಪಮಾತ್ರಕ್ಕೆ ಎಂದು ಹೇಳುವಂತಿಲ್ಲ ಬೇರೆ. ಇಂಥ ದೇಶ ದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು, ತಮ್ಮ ಅಧಿಕಾರಾವಧಿಯನ್ನು ರಬ್ಬರ್‌ ಸ್ಟಾಂಪ್‌ ಪಾರ್ಲಿಮೆಂಟ್‌ನ ಮೂಲಕ ವಿಸ್ತರಿಸಿಕೊಂಡಿದ್ದಾರೆ. ಅಂದರೆ, ಅಲ್ಲಿನ ರಬ್ಬರ್‌ ಸ್ಟಾಂಪ್‌ ಸಂಸತ್‌ ಜಿನ್‌ಪಿಂಗ್‌ ಹೆಸರಿಗೆ ಇಡೀ ದೇಶವನ್ನೇ ಅನಿರ್ದಿಷ್ಟಾವಧಿಗೆ ಬರೆದುಕೊಟ್ಟಿದೆ. ನಿಮಗೆ ಎಲ್ಲಿಯವರೆಗೆ ಅಧ್ಯಕ್ಷರಾಗಿ ಇರಬೇಕೋ ಅನ್ನಿಸುತ್ತದೆಯೋ ಅಲ್ಲಿಯವರೆಗೆ ಮುಂದುವರಿಯಿರಿ. ಮುಂದೆ ನಿಮಗೆ ಬೇಸರವಾದಾಗ, ಬಿಟ್ಟು ಕೊಡಿ, ಆಗ ನಿಮಗೆ ಉತ್ತರಾಧಿಕಾರಿಯಾಗಿ ಬರುವವರು ಸಿದ್ಧರಾಗಿದ್ದಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿ. ಇಲ್ಲದಿದ್ದರೆ ನೋಡೋಣ ಎಂಬ ರೀತಿಯಲ್ಲಿ ಇಡೀ ದೇಶವನ್ನು ಕಾಣಿಕೆಯಾಗಿ ನೀಡಿದೆ. ಅಲ್ಲಿಗೆ ಸದ್ಯಕ್ಕಂತೂ, ಈ ದಿನಕ್ಕೆ ಜಗತ್ತಿನ ಅತಿ ಪ್ರಭಾವಿ ನಾಯಕ ಎಂದೆನಿಸಿರುವ ಕ್ಸಿ ಜಿನ್‌ಪಿಂಗ್‌ಅವರ ಅಧಿಕಾರಕ್ಕೆ ಯಾವುದೇ ಅಡ್ಡಿಗಳೇನಿಲ್ಲ.

ಚೀನಾದ ನಿಯಮಗಳ ಪ್ರಕಾರ ಅಲ್ಲಿ ಅಧ್ಯಕ್ಷರಾಗುವವರಿಗೆ ಇರುವುದು 5 ವರ್ಷಗಳ ಎರಡು ಅವಧಿ ಮಾತ್ರ. ಇನ್ನೇನು ಅಧಿಕಾರಾವಧಿ ಮುಗಿಯುತ್ತಿದೆ ಎಂದೆನ್ನುವಾಗ ಅವರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಬೇಕು ಅಥವಾ ಹಾಲಿ ಅಧ್ಯಕ್ಷರೇ ಅಧಿಕಾರಕ್ಕೆ ಏರುವಾಗ ಹಿಂದಿನ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿ ಮತ್ತು ನಂತರದ ಉತ್ತರಾಧಿಕಾರಿಯನ್ನೂ ಘೋಷಿಸಬೇಕು. ಚೀನಾದಲ್ಲೂ ಆಗಿದ್ದು ಅದೇ, ಜಿನ್‌ಪಿಂಗ್‌ ಅವರಿಗಿಂತ ಹಿಂದೆ ಇದ್ದ ಅಧ್ಯಕ್ಷ ಹು ಜಿಂಟಾವೋ ಅವರು ಮುಂದಿನ ಎರಡು ಅವಧಿಗೆ ಅಧ್ಯಕ್ಷ ಮತ್ತು ಪ್ರಧಾನಿ ಯಾರಾಗಬೇಕು ಎಂದು ಘೋಷಿಸಿಯೂ ಹೋಗಿದ್ದರು. ವಿಚಿತ್ರವೆಂದರೆ ಹೂಜಿಂಟಾವೋ ಘೋಷಿಸಿದ್ದ ಇಬ್ಬರನ್ನೂ ಕ್ಸಿ ಜಿನ್‌ಪಿಂಗ್‌ ಬದಿಗೆ ಸರಿಸಿದರಷ್ಟೇ ಅಲ್ಲ, ಅಧ್ಯಕ್ಷ ಗಾದಿಗೆ ಹೆಸರೇಳಿದವರನ್ನು ಭ್ರಷಾಚಾರದ ನೆಪವೊಡ್ಡಿ ಪಕ್ಷದಿಂದಲೇ ಹೊರಹಾಕಲಾಯಿತು.

2012ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಜಿನ್‌ಪಿಂಗ್‌ ಅಧಿಕಾರಾವಧಿ ಇನ್ನೊಂದು ತಿಂಗಳಲ್ಲಿ ಅಂತ್ಯವಾಗುತ್ತಿತ್ತು. ಆದರೆ ಇವರ ಎರಡನೇ ಅವಧಿಯ ಅಧಿಕಾರಾವಧಿಯು ಈಗ ಶುರುವಾಗಿ 2023ಕ್ಕೆ ಮುಗಿಯುತ್ತಿತ್ತು. ಸದ್ಯ ಎದುರಾಗಿರುವ ಪ್ರಶ್ನೆ ಎಂದರೆ 2023ರವರೆಗೆ ಅಧಿಕಾರವಿದ್ದಾಗ್ಯೂ ಅವರು ಈಗಲೇ ಅನಿರ್ಧಿಷ್ಠಾವಧಿವರೆಗೆ ಏಕೆ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ನೋಡುತ್ತಿದ್ದಾರೆ ಎಂಬುದು. ಆದರೆ, ಚೀನಾದ ಹಲವಾರು ವಿಶ್ಲೇಷಕರ ಪ್ರಕಾರ, ಜಿನ್‌ಪಿಂಗ್‌ ತಲೆಯಲ್ಲಿ ದೀರ್ಘಾವಧಿ ಅಧಿಕಾರದ ಹಿಂದೆ ಬೇರೆಯೇ ಆದ ಕನಸುಗಳಿವೆ. 2013ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಮಾಡಿದ ಮೊದಲ ಕೆಲಸ ಭ್ರಷ್ಟಾಚಾರ ವಿರೋಧಿ ಆಂದೋಲನ ಶುರು ಮಾಡಿದ್ದು. ವಿಶೇಷವೆಂದರೆ ಚೀನಾ ಜನರ ಪಾಲಿಗೆ ಇದು ತೀರಾ ಮಹತ್ವದ ಬೆಳವಣಿಗೆಯೇ. ಹು ಜಿಂಟಾವೋ ಕಾಲದಲ್ಲೇ ಚೀನಾ ಆಧುನಿಕ ಯುಗಕ್ಕೆ ಕಾಲಿಟ್ಟಿತಾದರೂ, ಇದು ಸಂಪೂರ್ಣವಾಗಿ ಬದಲಾಗಿದ್ದು ಕ್ಸಿ ಜಿನ್‌ಪಿಂಗ್‌ ಕಾಲದಲ್ಲೇ. ಸದ್ಯ ಅಮೆರಿಕವನ್ನು ಮೀರಿಸಿ ದೊಡ್ಡಣ್ಣನಾಗಬೇಕು ಎಂಬ ಮಹದಾಸೆಯಿಂದ ಹೆಜ್ಜೆ ಇಡುತ್ತಿರುವ ಜಿನ್‌ಪಿಂಗ್‌ಅವರು, 2023ರ ಒಳಗೆ ಸಾಧಿಸುವುದು ಏನಾದರೂ ಉಳಿದುಬಿಟ್ಟರೆ ಎಂಬ ಆತಂಕವನ್ನೂ ಇರಿಸಿಕೊಂಡಿದ್ದಾರೆ. ಹೀಗಾಗಿಯೇ ಅವರು ತಮ್ಮ ಪಾರ್ಲಿಮೆಂಟ್‌ ಮುಂದೆ ಆಧುನಿಕ ಚೀನಾದ ಕನಸುಗಳನ್ನು ಬಿತ್ತಿ 2023 ಅಲ್ಲ, ಜೀವಿತಾವಧಿವರೆಗೆ ಅಧಿಕಾರದಲ್ಲೇ ಉಳಿಯುವ ಸೌಲಭ್ಯ ಪಡೆದುಕೊಂಡಿದ್ದಾರೆ.

ಜಿನ್‌ಪಿಂಗ್‌ ಅವರನ್ನು ಚೀನಿಯರು ಬಲವಂತವಾಗಿ ಆದರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಅಲ್ಲಿನ ಆಳ್ವಿಕೆಯೂ ಕಾರಣ. ಆದರೆ, ಇವರನ್ನು ಇಡೀ ಜಗತ್ತು ಹೇಗೆ ಒಪ್ಪಿಕೊಳ್ಳುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಅದರಲ್ಲೂ ಭಾರತದ ಜತೆಗೆ ಚೀನಾದ ಸಂಬಂಧ ಎಣ್ಣೆ ಸೀಗೆಕಾಯಿ ರೀತಿಯಲ್ಲೇ ಇದೆ. ಡೋಕ್ಲಾಂ ಗಡಿ ವಿವಾದ ಎದ್ದಿದ್ದು ಜಿನ್‌ಪಿಂಗ್‌ ಕಾಲದಲ್ಲೇ. ಸದ್ಯಕ್ಕೆ ಅದು ಇತ್ಯರ್ಥವಾದಂತಿದೆ. ಆದರೆ, ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟುವಲ್ಲಿ ಚೀನಾ ಎಂದಿಗೂ ಹಿಂದೆ ಬೀಳುತ್ತಲೇ ಇಲ್ಲ. ಒನ್‌ ಬೆಲ್ಟ್ ಆ್ಯಂಡ್‌ ಒನ್‌ ರೋಡ್‌ ಯೋಜನೆಯಲ್ಲಿ ಪಾಕಿಸ್ತಾನವನ್ನು ಎತ್ತಿಕುಣಿಸಿದ್ದು ಇದೇ ಚೀನಾ.

ಆದರೆ, ಇಲ್ಲಿ ಭಾರತದ ಹಠಗೆದ್ದಿದೆಯಾದರೂ, ಜಾಗತಿಕ ಮಟ್ಟದಲ್ಲಿ ಕ್ಸಿ ಜಿನ್‌ಪಿಂಗ್‌ ಮತ್ತೆ ಮತ್ತೆ ಭಾರತಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆಗಳು ಇಲ್ಲದಿಲ್ಲ.

ಇನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ, ಎನ್‌ಎಸ್‌ಜಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರದಲ್ಲಿ ಚೀನಾದ ತೊಡರು ಗಾಲು ಇದೆ. ಜಿನ್‌ಪಿಂಗ್‌ ಹೋಗಿ, ಇವರಿಗಿಂತ ಬೇರೊಬ್ಬ ಸುಧಾರಣಾವಾದಿ ನಾಯಕ ಬರಬಹುದಿತ್ತು. ಅವರ ಆಳ್ವಿಕೆಯಲ್ಲಾದರೂ ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಸಿಗಬಹುದಿತ್ತು ಎಂಬ ನಿರೀಕ್ಷೆಗಳಾದರೂ ಇದ್ದವು. ವಿಚಿತ್ರವೆಂದರೆ, 2023ರ ನಂತರವೂ ಇವರೇ ಅಧಿಕಾರದಲ್ಲಿ ಮುಂದುವರಿಯುವುದರಿಂದ ವಿಶ್ವ ಸಂಸ್ಥೆಯ ಸುಧಾರಣೆಯೂ ದೂರದ ಮಾತಾಗಿ ಉಳಿಯುತ್ತದೆ.

ಇದರ ಜತೆಗೆ ನ್ಯೂಕ್ಲಿ ಯರ್‌ ಸಪ್ಲೆ„ಯರ್‌ ಗ್ರೂಪ್‌ನಲ್ಲಿ ಸೇರುವ ಭಾರತದ ಅವಕಾಶಕ್ಕೂ ಚೀನಾದ ಈ ಜೀವಿತಾವಧಿ ಅಧ್ಯಕ್ಷರು ತಡೆಯಾಗಬಹುದು. ಇದುವರೆಗಂತೂ ಭಾರತಕ್ಕೆ ಕೊಡುವುದಾದರೆ ಪಾಕಿಸ್ತಾನಕ್ಕೂ ಕೊಡಿ ಎಂಬ ಅವರ ಮಾತು ಜಾಗತಿಕ ಮಟ್ಟದಲ್ಲಿ ಆಗಾಗ ಕಿರಿಕ್‌ ಮಾಡುತ್ತಲೇ ಇದೆ. ಇಡೀ ಜಗತ್ತು ಭಾರತವನ್ನು ನಂಬುವಷ್ಟು ಅಥವಾ ಭಾರತದಂಥ ಪ್ರಜಾಪ್ರಭುತ್ವವುಳ್ಳ ದೇಶಕ್ಕೂ ಪಾಕಿಸ್ತಾನಕ್ಕೂ ಇರುವ ಅಂತರವನ್ನು ಅರಿತುಕೊಂಡಿದೆ. ಆದರೆ, ಈ ಅರಿವು ಚೀನಾ ಅಧ್ಯಕ್ಷರಿಗೆ ಇಲ್ಲ. ಹೀಗಾಗಿಯೇ ಪ್ರತಿಯೊಂದು ವಿಚಾರದಲ್ಲಿ ಭಾರತಕ್ಕೆ ಪ್ರತಿಯಾಗಿ ಪಾಕಿಸ್ಥಾನವನ್ನು ಅದು ಬೆಳೆಸಿಕೊಂಡು ಬರುತ್ತಲೇ ಇದೆ ಎಂಬುದು ನಿರ್ವಿವಾದ.

ಇದೆಲ್ಲವನ್ನೂ ಹೊರತು ಮಾಡಿ ನೋಡುವುದಾದರೆ, ಕ್ಸಿ ಜಿನ್‌ಪಿಂಗ್‌ ಎಲ್ಲೋ ಒಂದು ಕಡೆ ಒಂದಷ್ಟು ಸುಧಾರಣಾವಾದಿ ಹಾಗೆಯೂ ಕಾಣಿಸುತ್ತಾರೆ. ಇತರೆ ದೇಶಗಳ ಜತೆಗಿನ ವೈರತ್ವಕ್ಕಿಂತ, ಸ್ನೇಹದ ಮೂಲಕವೇ ಇಡೀ ವಿಶ್ವದ ದೊಡ್ಡಣ್ಣನಾಗ ಬೇಕು ಎಂಬುದು ಅವರ ಆಸೆಯೂ ಆಗಿದೆ. ಅಲ್ಲದೆ ಸದ್ಯ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದೋಸ್ತಿಯೂ ಚೆನ್ನಾಗಿದ್ದು, ವ್ಯಾಪಾರದ ಲೆಕ್ಕಾಚಾರದಲ್ಲಿ ಭಾರತವನ್ನು ಬಿಟ್ಟು ಮುಂದಕ್ಕೆ ಹೋಗುವ ಆಸಕ್ತಿಯೂ ಚೀನಾ ಅಧ್ಯಕ್ಷರಲ್ಲಿ ಇಲ್ಲ. ಹೀಗಾಗಿ ಭಾರತದ ಜತೆಗೆ ಉತ್ತಮ ಸಂಬಂಧವನ್ನಿಟ್ಟುಕೊಂಡೇ ಪಾಶ್ಚಿಮಾತ್ಯ ದೇಶಗಳನ್ನು ಮೀರಿಸಿ ನಡೆಯಬಹುದು ಎಂಬ ವಿಚಾರವೂ ಕ್ಸಿ ಜಿನ್‌ಪಿಂಗ್‌ ಅವರಲ್ಲಿದೆ.

ಹೀಗಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಲವೊಂದು ವಿಚಾರಗಳಲ್ಲಿ ಚೀನಾ ಅಡ್ಡಿಯಾದರೂ, ವ್ಯಾಪಾರ ವಹಿವಾಟಿನ ಲೆಕ್ಕಾಚಾರದಲ್ಲಿ ಸಂಬಂಧ ಸುಧಾರಿಸಿದರೂ ಸುಧಾರಿಸಬಹುದು. ಸದ್ಯಕ್ಕೆ ಕ್ಸಿ ಜಿನ್‌ಪಿಂಗ್‌ ಅವರ ಜೀವಿತಾವಧಿ ಅಧಿಕಾರದಿಂದ ಹೆಚ್ಚೇನು ನಷ್ಟವಿಲ್ಲ ಎಂದೇ ಹೇಳಬಹುದು. ಇದರ ಜತೆಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಇನ್ನೊಂದು ಸ್ಪರ್ಧೆಯೂ ಇದೆ. 2030ರ ವೇಳೆಗೆ ಚೀನಾ ದೊಡ್ಡ ಆರ್ಥಿಕ ಶಕ್ತಿಯಾದರೆ, ಅಮೆರಿಕ ಎರಡನೇ ಸ್ಥಾನಕ್ಕೆ, ಭಾರತ ಮೂರನೇ ಸ್ಥಾನಕ್ಕೆ ಬರಲಿದೆ. ಹಾಗೆಯೇ 2050ರ ವೇಳೆಗೆ ಚೀನಾ ಮತ್ತು ಭಾರತ ಮೊದಲ ಎರಡು ಸ್ಥಾನ ಹಂಚಿಕೊಳ್ಳಲಿವೆ. ಆದರೆ, ಸದ್ಯದ ಆರ್ಥಿಕ ಬೆಳವಣಿಗೆ ನೋಡಿದರೆ, ಚೀನಾಗಿಂತ ಭಾರತದ ಜಿಡಿಪಿ ದರವೇ ಹೆಚ್ಚಿದೆ. ಅಲ್ಲದೆ ಇಡೀ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೂ ಭಾರತದ್ದೇ. ಹೀಗಾಗಿ ಭಾರತವನ್ನು ಹಿಮ್ಮೆಟ್ಟಿಸಬೇಕಾದರೆ ಕ್ಸಿ ಜಿನ್‌ಪಿಂಗ್‌ ಅವರಿಂದಲೇ ಸಾಧ್ಯ ಎಂಬುದನ್ನೂ ಬಿಂಬಿಸಲಾಗುತ್ತಿದೆ.
ಇದೆಲ್ಲದರ ನಡುವೆ ಅವರ ಈ ಜೀವಿತಾವಧಿ ಅಧಿಕಾರ ಅಮೆರಿಕಕ್ಕೆ ಹೆಚ್ಚು ತಲೆನೋವು ನೀಡಿದೆ ಎಂದು ಮುಲಾಜಿಲ್ಲದೇ ಹೇಳಬಹುದು. 2010ರಿಂದ ಈಚೆಗೆ ಅಮೆರಿಕದ ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದರೆ, ಚೀನಾದ ಆರ್ಥಿಕತೆ ಏರುಮುಖದಲ್ಲಿದೆ. ಅಲ್ಲದೆ ಸದ್ಯ ಜಾಗತಿಕ ಮಟ್ಟದಲ್ಲಿ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಚೀನಾ, ಸದ್ಯದಲ್ಲೇ ಅಮೆರಿಕವನ್ನೂ ಮೀರಿಸಿ ನಂ.1 ಸ್ಥಾನಕ್ಕೇರಲಿದೆ. ಚೀನಾದ ಈ ಶಕ್ತಿಗೆ ಕ್ಸಿ ಜಿನ್‌ಪಿಂಗ್‌ ಅವರೇ ಬಹುತೇಕ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ, ಚೀನಾ ಬಹುದೊಡ್ಡ ಆರ್ಥಿಕತೆಯುಳ್ಳ ದೇಶ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗ ಬೇಕಾದರೆ ತಾವೇ ಅಧಿಕಾರದಲ್ಲಿ ಇರಬೇಕು ಎಂಬುದೂ ಅವರ ಆಲೋಚನೆ. ಇದನ್ನೇ ಅಲ್ಲಿನ ಜನರ ಮುಂದೆಯೂ ಇಟ್ಟಿದ್ದಾರೆ.  

ಹೀಗಾಗಿಯೇ ಸದ್ಯ ಮಾವೋ ಮತ್ತು ಡೆಂಗ್‌ ಅವರ ನಂತರದ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವುದು ಕ್ಸಿ ಜಿನ್‌ಪಿಂಗ್‌ ಅವರೇ. ಮಾವೋ ಚೀನಾಗೆ ಒಂದು ಸ್ವರೂಪ ಕೊಟ್ಟಿದ್ದರೆ, ದೇಶವನ್ನು ಶಕ್ತಿಶಾಲಿಯಾಗಿ ಬೆಳೆಯಲು ಅನುವು ಮಾಡಿಕೊಟ್ಟವರು ಡೆಂಗ್‌. ಆದರೀಗ ಕ್ಸಿ ಜಿನ್‌ಪಿಂಗ್‌ ಅವರು ಆಧುನಿಕ ಚೀನಾವನ್ನು ನಿರ್ಮಿಸಿದ ಗರಿ ತೊಟ್ಟಿದ್ದಾರೆ ಅನ್ನೋದು ಅಲ್ಲಿನ ಪಾಲಿಗೆ ಸತ್ಯದ ವಿಚಾರವೇ…  

– ಸಿ.ಜೆ. ಸೋಮಶೇಖರ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.