ಸರ್ಕಾರದ ಅಭದ್ರತೆ ಹಿಂದಿನ ಶಕ್ತಿ ಯಾವುದು?  


Team Udayavani, Aug 31, 2018, 1:25 PM IST

kumar.jpg

ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲ, ಇದು ಜೆಡಿಎಸ್‌ ಸರ್ಕಾರ ಎಂಬಂತಾಗಿದೆ. ನಾವು ಹೇಳಿದ ರೀತಿ ನಮಗೆ ಸ್ಪಂದಿಸುವ ಅಧಿಕಾರಿಗಳ ವರ್ಗಾವಣೆಯಾಗುತ್ತಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್‌ ಮುಖಂಡರ ಕೆಲಸಗಳು ಆಗುತ್ತಿವೆ ಎಂಬ ಅಸಮಾಧಾನ ಕಾಂಗ್ರೆಸ್‌ನ ಕೆಲವು ಶಾಸಕರಲ್ಲಿದೆ. ರೈತರ ಸಾಲ ಮನ್ನಾ ಸೇರಿದಂತೆ ಸಮ್ಮಿಶ್ರ ಸರ್ಕಾರದ ಸಾಧನೆಗಳು ಕೇವಲ ಜೆಡಿಎಸ್‌ ಸಾಧನೆಯಂತೆ ಬಿಂಬಿತವಾಗುತ್ತಿವೆ. ಇದರಿಂದ ಮುಂಬರುವ  ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಲಿದೆ ಎನ್ನುವುದು ಹಲವು ನಾಯಕರ ಆತಂಕ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಮನ್ವಯ ಎಂಬುದೇ ದೊಡ್ಡ ಸವಾಲಾಗಿದೆ. ಸಮನ್ವಯ ಎಂದರೆ ಅದು ಕೇವಲ ಸಮನ್ವಯ ಸಮಿತಿ ಸಭೆ ನಿಗದಿ, ಅಲ್ಲಿ ಕೈಗೊಂಡ ತೀರ್ಮಾನಗಳ ಜಾರಿಯಷ್ಟೇ ಅಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಜತೆಗೂಡಿ ಸರ್ಕಾರ ರಚಿಸಿರುವುದರಿಂದ ಪಕ್ಷದ ಹಂತದಿಂದ ಸರ್ಕಾರದ ಮಟ್ಟದ ವರೆಗೂ ಪ್ರತಿ  ಹಂತದಲ್ಲೂ ಸಮನ್ವಯತೆ ಅಗತ್ಯ.

ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪಕ್ಷದ ಮಟ್ಟದಲ್ಲಿ ಎರಡೂ ಪಕ್ಷದ ರಾಜ್ಯಾಧ್ಯಕ್ಷರು  ಹಾಗೂ ಸುಸೂತ್ರ ಆಡಳಿತಕ್ಕೆ ರಚಿಸಿರುವ ಸಮನ್ವಯ ಸಮಿತಿಯ ಅಧ್ಯಕ್ಷರು, ಎರಡೂ ಪಕ್ಷಗಳ ರಾಷ್ಟ್ರೀಯ ಪ್ರತಿನಿಧಿಗಳು ಇವರೆಲ್ಲರಲ್ಲೂ ಸಮನ್ವಯತೆ ಇದ್ದರಷ್ಟೇ ಸರ್ಕಾರ ಎಂಬ ಎರಡು ಹಳಿ ಮೇಲೆ ಎಂಜಿನ್‌ ಸರಾಗವಾಗಿ ಸಾಗಲು ಸಾಧ್ಯ.

ಈ ಏಳು ನಾಯಕರ ಪ್ರತಿ ಹೇಳಿಕೆ, ಚಲನ-ವಲನ ಮುಖ್ಯ. ಅವರ ಹೇಳಿಕೆಗಳ ಆಧಾರದ ಮೇಲೆಯೇ ಉಳಿದವರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಾ ಹೋಗುತ್ತವೆ. ಬ್ಲಾಕ್‌ ಅಥವಾ ತಾಲೂಕು ಮಟ್ಟದಲ್ಲಿ ನಡೆಯುವ ವಿದ್ಯಮಾನಗಳು ರಾಜ್ಯ ಮಟ್ಟದಲ್ಲಿ ಪರಿಣಾಮ ಬೀರಬಹುದು. ಎರಡೂ  ಪಕ್ಷದ ಸಚಿವ-ಶಾಸಕರ ಹೇಳಿಕೆಗಳು ಕೆಲವೊಮ್ಮೆ ಬೇರೆ ಬೇರೆ ರೀತಿಯ ಅರ್ಥೈಸುವಿಕೆಗೆ ಕಾರಣವಾಗಿದ್ದು ಕಳೆದ 100 ದಿನಗಳಲ್ಲಿ ನಡೆದಿದೆ. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವ ಕ್ಷಣದಲ್ಲಾದರೂ ಸರ್ಕಾರ ಬಿದ್ದು ಹೋಗಬಹುದು ಎಂಬ ಮಾತುಗಳ ನಡುವೆಯೂ  ಕೆಲವೊಂದು ಅನುಮಾನ, ಗೊಂದಲಗಳ ನಡುವೆ ಸರ್ಕಾರ 100 ದಿನ ಪೂರೈಸಿದೆ. ಹಾಗೆಂದು ಇದು ಸಾಧನೆಯಲ್ಲ.

ಸರ್ಕಾರದ ಸಾಧನೆ ಅಳೆಯುವುದು ಅಭಿವೃದ್ಧಿ ಹಾಗೂ ಜನಸ್ಪಂದನೆ ಆಧಾರದಲ್ಲಿ. ಆ ವಿಚಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಜನತಾದರ್ಶನ, ಆರೋಗ್ಯ ಕರ್ನಾಟಕ ಜಾರಿ ಸೇರಿದಂತೆ ಹಲವು ಪರಿಣಾಮಕಾರಿ ಕ್ರಮಗಳು ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಿತು. ಆದರೆ, ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಗೊಂದಲದ ಹೇಳಿಕೆ, ವಿವಾದಗಳು ಅಭಿವೃದ್ಧಿ ಹಾಗೂ ಸಾಧನೆಯನ್ನು ಮರೆ ಮಾಚಿಸಿದ್ದು ನಿಜ. ಇದಕ್ಕೆ ಸಮನ್ವಯತೆಯ ಕೊರತೆಯೇ ಕಾರಣ ಎಂಬುದು ಸತ್ಯ. ಹೀಗಾಗಿ, ಸಮನ್ವಯತೆ ಎಂಬುದು ಎಲ್ಲ ಹಂತಗಳಲ್ಲೂ ಇಲ್ಲದೆ ಇದೇ ರೀತಿ ಮುಂದುವರಿದರೆ ಸರ್ಕಾರ ಐದು ವರ್ಷ ಪೂರ್ಣಗೊಳಿಸಿದರೂ ಜನಮಾನಸದಲ್ಲಿ ಉಳಿಯುವುದು ಕಷ್ಟ.
ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಸಮನ್ವಯ ಸಮಿತಿ ರಚಿಸಿ ಪ್ರತಿ ತಿಂಗಳು ಸಭೆ ನಡೆಸಿ ಸರ್ಕಾರದಲ್ಲಿ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಎಂಬ ಒಪ್ಪಂದ ಆಗಿದೆ.
ಪ್ರಾರಂಭದಲ್ಲೇ ಹೊಸ ಬಜೆಟ್‌ ಮಂಡನೆ ಹಾಗೂ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ನಡುವೆ ಸಣ್ಣ ಮಟ್ಟದ ಬಿರುಕು ಉಂಟಾಯಿತು. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರೇ ಬಜೆಟ್‌ ಮಂಡಿಸಲಿ ಎಂದು ಹಸಿರು ನಿಶಾನೆ ನೀಡಿದ್ದರಿಂದ ಹಿಂದಿನ ಸರ್ಕಾರದ ಕಾರ್ಯಕ್ರಮ ಉಳಿಸಿಕೊಂಡು ಮತ್ತಷ್ಟು ಯೋಜನೆ ಪ್ರಕಟಿಸಲು ಬಜೆಟ್‌ ಮಂಡಿಸಲಾಗುತ್ತಿದೆ ಎಂದು ಸಮಾಧಾನಕರ ಹೇಳಿಕೆ ನೀಡಿ ವಿವಾದ ತಣ್ಣಗಾಗಿಸಲಾಯಿತು. ಆದರೆ, ಅಲ್ಲಿಂದ ಆರಂಭವಾದ ಅಪನಂಬಿಕೆ ಇನ್ನೂ ದೂರವಾಗಿಲ್ಲ. ರಾಜಕೀಯವಾಗಿ ಎಚ್‌.ಡಿ. ದೇವೇಗೌಡ ಹಾಗೂ 
ಎಚ್‌.ಡಿ.ಕುಮಾರಸ್ವಾಮಿ ಅವರು ಹೂಡುತ್ತಿರುವ “ಅಸ್ತ್ರ’ಗಳು ಎಲ್ಲಿ ತಾಕುತ್ತಿವೆ ಎಂಬುದು ಬಲ್ಲವರಿಗೇ ಗೊತ್ತು. 
ಸಂಘರ್ಷವಾಗುತ್ತಾ?

ಸಮನ್ವಯ ಸಮಿತಿ ಸಭೆಯೂ ಪ್ರತಿ ತಿಂಗಳು ನಡೆಯುತ್ತಿಲ್ಲ. ಸರ್ಕಾರ ರಚನೆಯಾದ ನಂತರ ಎರಡೇ ಬಾರಿ ಸಭೆ 
ನಡೆದಿದೆ.  ಈ ತಿಂಗಳು ಸಮನ್ವಯ ಸಮಿತಿ ಸಭೆ ನಡೆಸುವುದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಇಷ್ಟವಿರಲಿಲ್ಲ. ಆದರೆ, ಸಿದ್ದರಾಮಯ್ಯ ಪಟ್ಟು ಹಿಡಿದು ಆ.31 (ಶುಕ್ರವಾರ) ಕ್ಕೆ ಸಮಯ ನಿಗದಿಯಾಗುವಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಇವೆ.
ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲ, ಇದು ಜೆಡಿಎಸ್‌ ಸರ್ಕಾರ ಎಂಬಂತಾಗಿದೆ. ನಾವು ಹೇಳಿದ ರೀತಿ ನಮಗೆ ಸ್ಪಂದಿಸುವ ಅಧಿಕಾರಿಗಳ ವರ್ಗಾವಣೆಯಾಗುತ್ತಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸೋತಿರುವ ಜೆಡಿಎಸ್‌ ಅಭ್ಯರ್ಥಿಗಳು ಹೇಳಿದ ಕೆಲಸಗಳು ಸರ್ಕಾರದಲ್ಲಿ ಆಗುತ್ತಿವೆ ಎಂಬ ಅಸಮಾಧಾನ ಕಾಂಗ್ರೆಸ್‌ನ ಕೆಲವು ಶಾಸಕರಲ್ಲಿದೆ.
ರೈತರ ಸಾಲ ಮನ್ನಾ ಸೇರಿದಂತೆ ಸಮ್ಮಿಶ್ರ ಸರ್ಕಾರದ ಸಾಧನೆಗಳು ಕೇವಲ ಜೆಡಿಎಸ್‌ ಸಾಧನೆಯಂತೆ ಬಿಂಬಿತವಾಗುತ್ತಿವೆ. ಇದರಿಂದ ನಗರ ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಲಿದೆ ಎಂಬ ಆತಂಕವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಇದನ್ನು ಹೈಕಮಾಂಡ್‌ ಗಮನಕ್ಕೂ ತರುವಲ್ಲಿಯೂ ಸಿದ್ದರಾಮಯ್ಯ ಹಾಗೂ ಟೀಂ ಯಶಸ್ವಿಯಾಗಿದೆ. ಹೀಗಾಗಿಯೇ ಆ.31 ಕ್ಕೆ ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. 
ಸಮನ್ವಯ ಸಮಿತಿ ಸಭೆಯಲ್ಲಿ  ಕಾಂಗ್ರೆಸ್‌ ಶಾಸಕರ ಅಸಮಾಧಾನ, ಸಿದ್ದರಾಮಯ್ಯ ಸೇರಿದಂತೆ ನಾಯಕರ ಹೇಳಿಕೆ ಸೃಷ್ಟಿಸುತ್ತಿರುವ ಗೊಂದಲ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಆರೋಪ ಚರ್ಚೆಯಾಗುತ್ತಾ? ಆ ವಿಚಾರಗಳು ಚರ್ಚೆಯಾಗಿ ಸಂಘರ್ಷದ ಸ್ವರೂಪ ಪಡೆದುಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಸಮ್ಮಿಶ್ರ ಸರ್ಕಾರ ಎಂಬುದು ಹೊಸ ಪ್ರಯೋಗವೇನಲ್ಲ. ಕರ್ನಾಟಕದಲ್ಲೂ ಹಿಂದೆಯೂ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ದೇಶದಲ್ಲೂ ಬಹುತೇಕ ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ  ಆಡಳಿತ ನಡೆಸಿದೆ. ಆದರೆ, ಐದು ವರ್ಷ ಭರ್ತಿಯಾಗಿ ಯಶಸ್ವಿ ಆಡಳಿತ ನೀಡಿದ ಉದಾಹರಣೆಗಳು ಕಡಿಮೆ.

ಹೀಗಾಗಿ, ಸಮ್ಮಿಶ್ರ ಸರ್ಕಾರ ಎಂದಾಕ್ಷಣ ಒಂದು ರೀತಿಯ ಅನುಮಾನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಇದ್ದೇ ಇರುತ್ತದೆ. ಸಣ್ಣ ಪುಟ್ಟ ಹೇಳಿಕೆಗಳನ್ನೂ ಅನುಮಾನದಿಂದ ನೋಡುವುದು ಸಹಜ, ಹೇಳಿಕೆಗಳಿಗೆ ಬೇರೆ ರೀತಿಯ ಅರ್ಥಕೊಡುವುದು, ಭಿನ್ನಾಭಿಪ್ರಾಯ ಇರುವಂತೆ ಬಿಂಬಿಸುವುದು ಸಾಮಾನ್ಯ. ಸಮ್ಮಿಶ್ರ ಸರ್ಕಾರ ಇರುವ ಕಡೆ ಪ್ರತಿಪಕ್ಷ ಆ್ಯಕ್ಟಿವ್‌ ಆಗಿರುತ್ತದೆ.  ಒಂದು ರೀತಿಯಲ್ಲಿ ಸರ್ಕಾರಕ್ಕೆ ಸಿಂಹಸ್ವಪ್ನವೂ ಆಗಿರುತ್ತದೆ. ಹೀಗಾಗಿ, ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರು ವವರು ಒಂದೆಡೆ ಸರ್ಕಾರ ಮತ್ತೂಂದೆಡೆ ಪಕ್ಷ, ಜತೆಗೆ ಮಿತ್ರ 
ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಇದು ಒಂದು ರೀತಿಯಲ್ಲಿ ಮುಳ್ಳಿನ ನಡಿಗೆಯೂ ಹೌದು. ಇದನ್ನೇ ಸಮನ್ವಯತೆ ಎನ್ನುವುದು. ಈ ಸಮನ್ವಯತೆ ಸಾಧಿಸುವಲ್ಲಿ ಸ್ವಲ್ಪ ಎಡವಿದರೂ ಸರ್ಕಾರಕ್ಕೆ ಯಾವ ಕಡೆಯಿಂದ ಕಂಟಕ ಎದುರಾಗುತ್ತದೆ ಎಂಬುದು ಹೇಳಲಿಕ್ಕಾಗದು. ಆದರೆ, ಎಲ್ಲಿ ಆಪತ್ತು ಬಂದಿದೆ ಎಂದು ಪತ್ತೆ ಹಚ್ಚುವುದರಲ್ಲಿ ಅನಾಹುತ ನಡೆದೇ ಹೋಗಿರುತ್ತದೆ. ಈ ಹಿಂದೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಆ ನಂತರ ಜೆಡಿಎಸ್‌ ಹಾಗೂ ಬಿಜೆಪಿ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗಲೂ ಅಂತಹ ಅನಾಹುತ ನಡೆದು ಅದರ ಹೊಡೆತದಿಂದ ಚೇತರಿಸಿಕೊಳ್ಳಲು ಎರಡು ಚುನಾವಣೆಗಳು ಕಾಯುವಂತಾಗಿದ್ದು ಉದಾಹರಣೆ.

ರಾಜ್ಯದಲ್ಲಿ  ಈಗಿನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಹಿಂದಿನ ಎರಡೂ ಸರ್ಕಾರಗಳಲ್ಲಿ ಆದ ಕಹಿ ಹಾಗೂ ಸಿಹಿ ಘಟನೆ
ಗಳ ಸಂಪೂರ್ಣ ಅರಿವಿದೆ. ಆತುರದಲ್ಲಿ ಕೈಗೊಂಡ ನಿರ್ಧಾರಗಳಿಂದ ಆದ ಅನಾಹುತಗಳ ಬಗ್ಗೆಯೂ ಗೊತ್ತಿದೆ. ಈ ಎಲ್ಲ ಅನುಭವಗಳ ಆಧಾರದ ಮೇಲೆ ತಾಳ್ಮೆಯಿಂದಲೇ ಸಮ್ಮಿಶ್ರ ಸರ್ಕಾರದ ರಥ ಎಳೆಯುತ್ತಿದ್ದಾರೆ. ಇದರ ನಡುವೆಯೂ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು, ಪ್ರಚೋದನೆಗೊಳಗಾಗಿ ನೀಡುವ ಹೇಳಿಕೆಗಳು ವಿವಾದದ ಸ್ವರೂಪ ಪಡೆಯುತ್ತಿವೆ. ಅನಗತ್ಯ ಹೇಳಿಕೆಗಳು ಅನುಮಾನಗಳಿಗೂ ಕಾರಣವಾಗಿವೆ.

ಸಮ್ಮಿಶ್ರ ಸರ್ಕಾರಕ್ಕೆ ಮೇಲ್ಮಟ್ಟದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ  ಎಚ್‌.ಡಿ.ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಮಟ್ಟದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆಧಾರ.
ಸಿದ್ದರಾಮಯ್ಯ ಅವರು ಸಮನ್ವಯತೆ ಸಮಿತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದಾರೆ. ಹಿಂದೆ ಐದು ವರ್ಷ ಭರ್ತಿಯಾಗಿ ಕಾಂಗ್ರೆಸ್‌ ಸರ್ಕಾರ ಸುಸೂತ್ರವಾಗಿ ನಡೆಸಿ ಜನಪ್ರಿಯ ಕಾರ್ಯಗಳನ್ನು ಕೊಟ್ಟಿರುವು ದರಿಂದ ಅವರದೇ ಆದ ಇಮೇಜ್‌ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಮೂಲತಃ ಜನತಾಪರಿವಾರದವಾರಾಗಿ ಸಿಎಂ ಪಟ್ಟ ಸಿಗಲಿಲ್ಲ ಹಾಗೂ ತನಗೆ ಪ್ರಾಮುಖ್ಯತೆ ಸಿಗಲಿಲ್ಲ ಎಂಬ ಕಾರಣದಿಂದ ಎಚ್‌.ಡಿ.ದೇವೇಗೌಡರ ನಂಟು ಕಳೆದುಕೊಂಡು ಕಾಂಗ್ರೆಸ್‌ ಸೇರಿದವರು.
ಐದು ವರ್ಷ ಪ್ರತಿ ಹಂತದಲ್ಲೂ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ ವಿರೋಧಿಸಿಕೊಂಡೇ ರಾಜಕಾರಣ ಮಾಡಿದವರು. ವಿಧಾನಸಭೆ ಚುನಾವಣೆಯಲ್ಲಂತೂ ಸ್ವಲ್ಪ ಎಲ್ಲೆ ಮೀರಿ ವಾಗ್ಧಾಳಿ ಯನ್ನೂ ನಡೆಸಿದರು. ಆದರೆ, ಚುನಾವಣೆ ಫ‌ಲಿತಾಂಶದ ನಂತರದ ಬೆಳವಣಿಗೆಗಳಲ್ಲಿ ಬಿಜೆಪಿ ದೂರ ಇಡಲು ಅನಿವಾರ್ಯವಾಗಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಹೈಕಮಾಂಡ್‌ ಒತ್ತಾಸೆ ಮೇರೆಗೆ ಇಷ್ಟವಿಲ್ಲದಿದ್ದರೂ  ಒಪ್ಪಿಕೊಳ್ಳಲೇಬೇಕಾಯಿತು. ಸಂಪುಟ ವಿಸ್ತರಣೆಯಿಂದ ಒಂದು ಹಂತದಲ್ಲಿ ಅಸಮಾಧಾನ ದೊಡ್ಡ ಮಟ್ಟದಲ್ಲೇ ಎದ್ದಿತಾದರೂ ಆ ಕ್ಷಣಕ್ಕೆ ಥಂಡಾಯ ಮಾಡುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯೂ ಆಯಿತು. ಆದರೆ, ಸಂಪುಟ ವಿಸ್ತರಣೆ ನಂತರ ಏನಾಗಬಹುದು ಎಂಬ ಪ್ರಶ್ನೆಯಂತೂ ಇದ್ದೇ ಇದೆ.

ಒಂದೆಡೆ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಹೇಳುತ್ತಲೇ ಸಮಯ ಸಿಕ್ಕಾಗ ತಮ್ಮ ಆಪ್ತರ ಬಳಿ ಸರ್ಕಾರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕುತ್ತಿರುವುದು. ಮತ್ತೂಂದೆಡೆ ಮುಖ್ಯಮಂತ್ರಿ  ಎಚ್‌.ಡಿ.ಕುಮಾರಸ್ವಾಮಿಯವರು ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.  ನಾವು ಐದು ವರ್ಷ ಸುಭದ್ರ ಎಂದು ಹೇಳುತ್ತಲೇ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಆಪ್ತರಲ್ಲಿ ಬೇಸರ ಹೊರ ಹಾಕುತ್ತಿರುವುದು ಗುಟ್ಟೇನಲ್ಲ. ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎರಡನೇ ಹಂತದ ನಾಯಕರಿಗೂ ಗೊತ್ತಿರುವ ವಿಚಾರ. ಎರಡನೇ ಹಂತದ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗುವುದು ಖಚಿತ.

ಇದನ್ನು ಅರಿತೇ ಬಿಜೆಪಿ ಸದ್ದಿಲ್ಲದೆ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಇಳಿದಿರುವುದು ಅಷ್ಟೇ ಸತ್ಯ. ಆದರೆ, ರಾಜಕಾರಣದಲ್ಲಿ ಯಾವಾಗ ಏನಾಗುತ್ತದೆ ಎಂಬುದು ಹೇಳಲಿಕ್ಕೆ ಆಗದು. ಸಮಯ ಸಂದರ್ಭ ಕೆಲವು ನಾಯಕರ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತ. ಹೀಗಾಗಿ, ಸಚಿವ ಸಂಪುಟ ವಿಸ್ತರಣೆ ಅಥವಾ ಲೋಕಸಭೆ ಚುನಾವಣೆ ನಂತರ ಏನಾಗುತ್ತದೆ, ಅದಕ್ಕೂ ಮುಂಚೆಯೇ ಏನಾದರೂ ಆಗಬಹುದೇ ಎಂಬುದನ್ನು ಕಾದು ನೋಡಬೇಕಷ್ಟೇ.

ಸಿದ್ದು ನಡೆ ಇನ್ನೂ ನಿಗೂಢ
ಸರ್ಕಾರ ರಚನೆಯಾದ ನಂತರ ನಡೆದ ಕೆಲವು ವಿದ್ಯಮಾನಗಳು ಸಿದ್ದರಾಮಯ್ಯ ಅವರನ್ನು ತುಳಿಯಲಾಗುತ್ತಿದೆ ಎಂದು ಬಿಂಬಿತವಾದವು. ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್‌.ವಿಶ್ವನಾಥ್‌ ನೇಮಕ ಮಾಡಿದ ನಂತರವಂತೂ   ಸಿದ್ದರಾಮಯ್ಯ “ನಾಯಕತ್ವ’ಕ್ಕೆ ಕುತ್ತು ತರಲಾಗುತ್ತಿದೆ ಎಂಬ ಅನುಮಾನ ಅವರ ಸಮುದಾಯ ಹಾಗೂ ಬೆಂಬಲಿಗರಲ್ಲಿ  ಕಾಡುತ್ತಿದೆ.  ಕೆಲ ವಿಚಾರದಲ್ಲಿ ಹಿನ್ನ°ಡೆ ಅನುಭವಿಸಿದ ಸಿದ್ದರಾಮಯ್ಯ “ಮೌನ’ಕ್ಕೆ ಶರಣಾಗಿ  ಬಾದಾಮಿ ಪ್ರವಾಸ ಹಾಗೂ ಕೆಲ  ದಿನ ಧರ್ಮಸ್ಥಳದ ನೈಸರ್ಗಿಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾದರು.  ಅಲ್ಲಿಂದ ಪ್ರಾರಂಭವಾದ ಅಂತೆ ಕಂತೆ ಇತ್ತೀಚೆಗೆ ಸಿದ್ದರಾಮಯ್ಯ ಅವರು ಹಾಸನದಲ್ಲಿ ನೀಡಿದ ಹೇಳಿಕೆ, ಇದೀಗ ಸೆ.2 ರಿಂದ ಅವರು ಯೂರೋಪ್‌ ಪ್ರವಾಸದವರೆಗೆ ಮುಂದುವರಿದಿದೆ. ಧರ್ಮಸ್ಥಳಕ್ಕೆ  ಹೋಗಿದ್ದಾಗ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಿದ್ದರಾಮಯ್ಯ ಯೂರೋಪ್‌ಗೆ  ಹೋಗುತ್ತಿದ್ದಂತೆ  ಸಮ್ಮಿಶ್ರ ಸರ್ಕಾರ  ಬಿದ್ದು ಹೋಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.