ಈ ಬಾರಿ ಮಿಜೋರಾಂ ಚುನಾವಣೆಗಿದೆ ಮಹತ್ವ


Team Udayavani, Nov 24, 2018, 6:00 AM IST

z-9.jpg

ಮಧ್ಯಪ್ರದೇಶದಂತೆಯೇ ಈಶಾನ್ಯ ರಾಜ್ಯ ಮಿಜೋರಾಂನಲ್ಲೂ ನ.28ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆ ಹಿಂದಿನ ವರ್ಷಗಳಿಗಿಂತ ಭಾರೀ ಭಿನ್ನವಾಗಿದೆ. 2016ರಲ್ಲಿ ಸರ್ವಾನಂದ ಸೊನೊವಾಲ್‌ ನೇತೃತ್ವದಲ್ಲಿ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ನಿಧಾನಕ್ಕೆ ತನ್ನ ಅಸ್ತಿತ್ವ ಚಾಚಿಕೊಳ್ಳುತ್ತಾ ಬಂದಿದೆ. ಅದರ ನೇತೃತ್ವವನ್ನು ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾಗೆ ನೀಡಲಾಗಿದೆ. ಅವರು ಅದನ್ನು ಯಶಸ್ವಿಯಾಗಿಯೇ ನೆರವೇರಿಸಿದ್ದಾರೆ. ಈ ಪಕ್ಷ ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮೇಘಾಲಯ, ತ್ರಿಪುರಾ, ಸಿಕ್ಕಿಂಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಧಿಕಾರದಲ್ಲಿದೆ. ಅದಕ್ಕೆಲ್ಲ ಕಾರಣ ಹಿಮಾಂತ ಬಿಸ್ವ ಶರ್ಮಾ ಎಂದರೆ ಅತಿಶಯೋಕ್ತಿಯಲ್ಲ. 

ಹಿಂದಿನ ವರ್ಷಗಳವರೆಗೆ ಈಶಾನ್ಯವೆನ್ನುವುದು ಕಾಂಗ್ರೆಸ್‌ನ ಗಟ್ಟಿ ನೆಲ ಎಂಬುದು ನಂಬಿಕೆಯಾಗಿತ್ತು. 2016ರಲ್ಲಿ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈಶಾನ್ಯ ರಾಜ್ಯಗಳಲ್ಲಿನ ರಾಜಕೀಯ ವಾತಾವರಣವೇ ಬದಲಾಯಿತು. ಈಶಾನ್ಯ ರಾಜ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್ನುವುದನ್ನು ರಚಿಸಲಾಗಿದ್ದು, ಅದಕ್ಕೆ ಶರ್ಮಾ ಸಂಚಾಲಕರೂ ಹೌದು. ಹೀಗಾಗಿ ಸದ್ಯ ಈಶಾನ್ಯ ರಾಜ್ಯಗಳ ಪೈಕಿ ಮಿಜೋರಾಂನಲ್ಲಿ ಮಾತ್ರ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದೆ. ಹಾಲಿ ಮುಖ್ಯಮಂತ್ರಿ ಲಾಲ್ತನ್‌ ಹಾವ್ಲಾ 2008ರಿಂದ ಅಧಿಕಾರದಲ್ಲಿದ್ದಾರೆ. 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುನ್ನಡೆಸಿದ್ದ ಅವರು ಸತತ 2ನೇ ಬಾರಿಗೆ ಪಕ್ಷವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಅಲ್ಲಿ 1 ಲೋಕಸಭೆ ಮತ್ತು 1 ರಾಜ್ಯಸಭೆ ಸ್ಥಾನಗಳು ಇದ್ದು, ಅವೆರಡನ್ನೂ ಕಾಂಗ್ರೆಸ್‌ ನಾಯಕರೇ ಗೆದ್ದುಕೊಂಡಿದ್ದಾರೆ. 

ಇದುವರೆಗಿನದ್ದು ಇತಿಹಾಸ. ಬಿಜೆಪಿ ಈ ರಾಜ್ಯದಲ್ಲಿ ಚುನಾವಣೆ ಗೆದ್ದುಕೊಂಡೇ ಇಲ್ಲ. ಕುತೂಹಲಕಾರಿ ವಿಚಾರವೆಂದರೆ ಅದುವೇ ಈಗ ಚುನಾವಣೆಯ ವಿಷಯವಾಗಿ ಮಾರ್ಪಟ್ಟಿದೆ. ಇದುವರೆಗಿನ ಚುನಾವಣೆಯಲ್ಲಿ ಒಂದೋ ಕಾಂಗ್ರೆಸ್‌, ಇಲ್ಲವೇ ಮಿಜೋ ನ್ಯಾಷನಲ್‌ ಫ್ರಂಟ್‌ ಗೆಲ್ಲುತ್ತಿತ್ತು. 

ಈ ಪುಟ್ಟ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.87ರಷ್ಟು ಜನ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರು. ಹೀಗಾಗಿ, ದೇಶದ ಉಳಿದ ಭಾಗದಲ್ಲಿ ಪ್ರಖರವಾಗಿ ಕೇಳಿ ಬರುತ್ತಿರುವ ಹಿಂದುತ್ವದ ಸಿದ್ಧಾಂತ, ಮಾತುಗಳನ್ನು ಇಲ್ಲಿ ಆಡುವವರೂ ಇಲ್ಲ; ಕೇಳುವವರೂ ಇಲ್ಲ. ಐದು ವರ್ಷಗಳ ಹಿಂದೆ ಅಂದರೆ 2008ರಲ್ಲಿ ನಡೆದಿದ್ದ ಚುನಾವಣೆ ವೇಳೆ ಬಿಜೆಪಿ ಇಲ್ಲಿ 40 ಸ್ಥಾನಗಳ ಪೈಕಿ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆಗ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.0.37ರಷ್ಟು ಮತಗಳನ್ನು ಮಾತ್ರ ಪಡೆಯಲು ಬಿಜೆಪಿ ಶಕ್ತವಾಗಿತ್ತು. ಈ  ಬಾರಿ ಅದು 39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕ್ರಿಶ್ಚಿಯನ್‌ ಸಮುದಾಯ ಹೆಚ್ಚಾಗಿರುವ ನಾಗಾಲ್ಯಾಂಡ್‌ನ‌ಲ್ಲಿ 12, ಮೇಘಾಲಯದಲ್ಲಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ ಬಿಜೆಪಿ. ಆ ಚುನಾವಣೆಯಲ್ಲಿ ಬಹುಮತವಲ್ಲದಿದ್ದರೂ, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳಬೇಕು ಎಂಬ ಇರಾದೆ ಬಿಜೆಪಿಯದ್ದು. 

ಮಿಜೋರಾಂ ಬಿಜೆಪಿ ಘಟಕದ ಅಧ್ಯಕ್ಷ ಜೆ.ವಿ.ಹುಲಾ°, “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಿಂದ ಜಾರಿಯಾಗುವ ಎಲ್ಲಾ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡುತ್ತೇವೆ. ಕಾಂಗ್ರೆಸ್‌ ಮಾಡದೇ ಇರುವುದನ್ನು ನಾವು ಮಾಡುತ್ತೇವೆ’ ಎನ್ನುತ್ತಾರೆ.  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಮಿಜೋ ನ್ಯಾಷನಲ್‌ ಫ್ರಂಟ್‌ ನಡುವೆ ನೇರ ಹೋರಾಟವಿದೆ. 

ಮಿಜೋ ನ್ಯಾಷನಲ್‌ ಫ್ರಂಟ್‌ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಝೊರಾಮ್‌ತಾಂಗ ಪ್ರಕಾರ ಅವರ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಜತೆಗೆ ಮೈತ್ರಿ ಇದ್ದರೂ, ಅದು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲಿದೆಯಂತೆ. ತಮಾಷೆಯ ವಿಷಯವೆಂದರೆ ಈ ರಾಜ್ಯದಲ್ಲಿ ಕಾಂಗ್ರೆಸ್‌ ಹೊರತಾಗಿರುವ ಪಕ್ಷಗಳು ಅಂದರೆ ಮಿಜೋ ನ್ಯಾಷನಲ್‌ ಫ್ರಂಟ್‌ ಬಿಜೆಪಿಯನ್ನು “ಕ್ರಿಶ್ಚಿಯನ್‌ ವಿರೋಧಿ ಪಕ್ಷ’ ಎಂದು ಟೀಕಿಸುತ್ತವೆ. ಅದರ ಜತೆ ಜತೆಯಾಗಿಯೇ ಮೈತ್ರಿಯನ್ನೂ ಮಾಡಿಕೊಂಡಿವೆ. ದೇಶದ ಉಳಿದ ಭಾಗದಲ್ಲಿ ಕಾಂಗ್ರೆಸ್‌-ಬಿಜೆಪಿ ವಿರುದ್ಧ ದಿಕ್ಕಿನಲ್ಲಿದ್ದರೆ, ಈ ರಾಜ್ಯದ ಒಂದು ಭಾಗದಲ್ಲಿ ಕಾಂಗ್ರೆಸ್‌-ಬಿಜೆಪಿ ಒಪ್ಪಂದ ಮಾಡಿಕೊಂಡಿವೆ. ಚಕಾ¾ ಸ್ವಾಯತ್ತ ಜಿಲ್ಲಾ ಮಂಡಳಿ (ಸಿಎಡಿಸಿ)ಗೆ ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶ ಬಂದ ಬಳಿಕ ಅವೆರಡೂ ಪಕ್ಷಗಳೂ ಹೊಂದಾಣಿಕೆ ಮಾಡಿಕೊಂಡಿವೆ. 

ಮಿಜೋರಾಂನಲ್ಲಿ ಕೇರಳದ ಬಳಿಕ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರತೆ ಇದೆ. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿದ್ದರೂ, ಈ ರಾಜ್ಯಕ್ಕೆ ಭಾರತದ ಇತರ ರಾಜ್ಯಗಳ ನಾಗರಿಕರು ಪ್ರವೇಶಿಸಬೇಕಾದರೆ ಮಿಜೋರಾಂ ಸರ್ಕಾರ ನೀಡುವ ಇನ್ನರ್‌ ಲೈನ್‌ ಪರ್ಮಿಟ್‌ (ಒಂದು ಮಾದರಿಯ ವೀಸಾ ವ್ಯವಸ್ಥೆ ಎನ್ನಬಹುದು) ಬೇಕೇ ಬೇಕು. 

ರಾಜಕೀಯವಾಗಿ ಕೂಡ ಇತಿಹಾಸವೇನೆಂದರೆ ಕಾಂಗ್ರೆಸ್‌ ಅಥವಾ ಮಿಜೋ ನ್ಯಾಷನಲ್‌ ಫ್ರಂಟ್‌ ಸತತ ಎರಡು ಅವಧಿಗೆ ಅಧಿಕಾರ ನಡೆಸಿದರೆ, ಮೂರನೇ ಅವಧಿಗೆ ಅಧಿಕಾರ ಮುಂದುವರಿಸಿದ ಇತಿಹಾಸ ಇದುವರೆಗೆ ಇಲ್ಲ. ಹೀಗಾಗಿ, 2008 ಮತ್ತು 2013ರ ಚುನಾವಣೆ ಗೆದ್ದ ಲಾಲ್ತನ್‌ ಹಾವ್ಲಾ ನೇತೃತ್ವದ ಕಾಂಗ್ರೆಸ್‌ಗೆ ಈ ಚುನಾವಣೆ ಸವಾಲಾಗಿ ಪರಿಣಮಿಸಬಹುದು. 2016ರ ಬಳಿಕ ಹೆಚ್ಚಿನ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. “ಈ ರಾಜ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಪ್ರಬಲ ನಾಯಕತ್ವವೂ ಇಲ್ಲ. ನಿಷ್ಠಾವಂತ ಕಾರ್ಯಕರ್ತರ ಪಡೆಯೂ ಇಲ್ಲ. ಹೀಗಾಗಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕಾಗಿದೆ. ಎಲ್ಲರಿಗೂ ಸಮಾನವಾಗಿ ಅವಕಾಶ ಕೊಡುವ ಪಕ್ಷ ನಮ್ಮದು. ಮೇಘಾಲಯ ಮತ್ತು ಗೋವಾದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರೂ ಕೂಡ ಸಚಿವರಾಗಿದ್ದಾರೆ’ ಎನ್ನುತ್ತಾರೆ ಪಕ್ಷದ ಸಾಮಾಜಿಕ ಜಾಲತಾಣದ ಸದಸ್ಯರೊಬ್ಬರು. 

ಹಾಲಿ ಸಾಲಿನಲ್ಲಿ ಚುನಾವಣೆ ಇದ್ದರೂ ಪ್ರಚಾರ ನಡೆಯುತ್ತಿದೆಯೋ ಇಲ್ಲವೋ ಎಂಬ ವಿಚಾರವೇ ಗೊತ್ತಾಗುತ್ತಿಲ್ಲ. ಸರ್ಕಾರ ಜಾರಿ ಮಾಡಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪೋಸ್ಟರ್‌ಗಳಾಗಲೀ, ದೊಡ್ಡ, ದೊಡ್ಡ ರ್ಯಾಲಿಗಳಾಗಲಿ ಕಂಡು ಬರುತ್ತಿಲ್ಲ. ದೇಶದ ಮಾಧ್ಯಮಗಳಲ್ಲಿಯೂ ಮಿಜೋರಾಂ ವಿಧಾನಸಭೆ ಚುನಾವಣೆ ಪ್ರಮುಖವಾದದ್ದು ಎಂಬ ವರದಿ ಪ್ರಕಟವಾಗಿಲ್ಲ. ಮುಖ್ಯ ಚುನಾವಣಾಧಿಕಾರಿ ಎಸ್‌.ಬಿ.ಶಶಾಂಕ್‌ ಅವರು “ಬ್ರೂ’ ನಿರಾಶ್ರಿತರಿಗೆ ಮತ ಹಾಕಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಅವರನ್ನು ಬದಲಾಯಿಸಲೇಬೇಕೆಂದು ಸಾರ್ವಜನಿಕರು ಆಕ್ರೋಶಗೊಂಡು ಪ್ರತಿಭಟಿಸಿದ್ದರು. ಮುಖ್ಯಮಂತ್ರಿ ಲಾಲ್ತನ್‌ ಹಾವ್ಲಾ ಕೂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ವಿಚಾರ ಮಾತ್ರ ಮಾಧ್ಯಮಗಳಲ್ಲಿ ಪ್ರಮುಖವಾಗಿ ಸುದ್ದಿಯಾಯಿತು. ಉಳಿದಂತೆ ಅಲ್ಲಿ ತಣ್ಣಗಿನ ವಾತಾವರಣವಿದೆ. 

ಕ್ರಿಶ್ಚಿಯನ್‌ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿ ಚರ್ಚ್‌ ಹೇಳುವ ಮಾತೇ ಅಂತಿಮ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಚರ್ಚ್‌ ನಾಯಕತ್ವ ಸೂಚಿಸುವ ನಿರ್ಣಯಗಳೇ ಆಡಳಿತಾತ್ಮಕ ರಂಗದ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ರಾಜಕೀಯವಾಗಿ ಯಾರು ಪ್ರವರ್ಧಮಾನಕ್ಕೆ ಬರಬೇಕು ಎಂಬ ವಿಚಾರದಲ್ಲಿ ಧಾರ್ಮಿಕ ನಾಯಕರ ನಿರ್ಣಯವೇ ಮುಖ್ಯವಾಗುವುದರಿಂದ ನವ ನಾಯಕರು ಪ್ರವರ್ಧಮಾನಕ್ಕೆ ಬರುವುದು ವಿಳಂಬವೇ ಆಗುತ್ತದೆ. ಹಾಲಿ ಮುಖ್ಯಮಂತ್ರಿ ಲಾಲ್ತನ್‌ ಹಾವ್ಲಾ (79), ಮಿಜೋ ನ್ಯಾಷನಲ್‌ ಫ್ರಂಟ್‌ ನಾಯಕ, ಮಾಜಿ ತೀವ್ರವಾದಿ ಝೊರಾಮ್‌ತಾಂಗಾ (84), ಹಾಲಿ ವಿಧಾನಸಭೆಯ ಸ್ಪೀಕರ್‌ ಹೈಫಿ (81) ಹೀಗೆ ಇಳಿವಯಸ್ಸಿನವರೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

ಮತ್ತೂಂದು ಪ್ರಮುಖವಾದ ಅಂಶವೆಂದರೆ ಈ ರಾಜ್ಯದಲ್ಲಿ ದೇಶದ ಉಳಿದ ಭಾಗಗಳಿಗಿಂತ ಅತಿ ಹೆಚ್ಚು, ಅಂದರೆ ಶೇ.95ರಷ್ಟು ಮಂದಿ ಬುಡಕಟ್ಟು ಜನಾಂಗದವರು ಇದ್ದಾರೆ. ಒಂದು ಸ್ಥಾನ ಹೊರತುಪಡಿಸಿ ಉಳಿದ 39 ಸ್ಥಾನಗಳು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಮೀಸಲಾಗಿ ಇರಿಸಲಾಗಿದೆ. ಈ ರಾಜ್ಯದಲ್ಲಿ ಇನ್ನೂ ವಿಶೇಷವಾದ ಅಂಶವಿದೆ. ಪುರುಷರಷ್ಟೇ ಮಹಿಳೆಯರೂ ಪ್ರಧಾನವಾಗಿ ರಾಜಕೀಯ ವ್ಯವಸ್ಥೆಯಲ್ಲಿ ಭಾಗವಹಿಸುತ್ತಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಒಟ್ಟು ಮತದಾರರು 7.7 ಲಕ್ಷ (3.93 ಮಹಿಳಾ ಮತದಾರರು, 3.74 ಲಕ್ಷ ಪುರುಷ ಮತದಾರರು). ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 19 ಸಾವಿರ ಮಂದಿ ಮತದಾರರು ಇದ್ದಾರೆ. ಈ ಪೈಕಿ 11 ಸಾವಿರ ಮಂದಿ ಬ್ರೂ ನಿರಾಶ್ರಿತರು. ಅವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹಕ್ಕು ಚಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಹೀಗಾಗಿ, ಪ್ರಸಕ್ತ ಸಾಲಿನ ಮಿಜೋರಾಂ ಚುನಾವಣೆಯಲ್ಲಿ ಬಿಜೆಪಿಗೆ ಅದೃಷ್ಟ ಖುಲಾಯಿಸಲಿದೆಯೋ ಇಲ್ಲವೋ ಡಿ.11ರ ಫ‌ಲಿತಾಂಶವೇ ಹೇಳಬೇಕು. 40 ಸ್ಥಾನಗಳ ಪೈಕಿ 5ರಲ್ಲಿ ಗೆದ್ದರೂ, ಆ ರಾಜ್ಯದ ಮಟ್ಟಿಗೆ ಕಿಂಗ್‌ಮೇಕರ್‌ ಆಗಲಿದೆ ಬಿಜೆಪಿ ಎನ್ನುವುದು ಸದ್ಯದ ಲೆಕ್ಕಾಚಾರ.

ಸದಾಶಿವ ಕೆ.

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.