CONNECT WITH US  

ಬದುಕೆಂಬ ಕಲ್ಲು ಸಕ್ಕರೆಯನ್ನು ಸವಿದು ಸಂಭ್ರಮಿಸೋಣ

ಸಕ್ಕರೆ ಕಾಳನ್ನು ನೋಡಿದ್ದೇವಲ್ಲ. ಅದು ಎಷ್ಟು ಪುಟ್ಟದು! ಎಲ್ಲೂ ಸಕ್ಕರೆಯೆಂದರೆ ಬೆಟ್ಟದಷ್ಟು ದೊಡ್ಡದನ್ನು ಕಂಡಿಲ್ಲ. ಕಲ್ಲುಸಕ್ಕರೆ ಎಂದರೆ ಅಂಥ ಲಕ್ಷಾಂತರ ಸಕ್ಕರೆ ಕಾಳಿನ ಒಂದು ಮುದ್ದೆಯಷ್ಟೇ. ಒಂದು ಕಾಳು ಸಕ್ಕರೆಯ ಸಿಹಿ ಎಷ್ಟು ಮಧುರ. ಬದುಕು ಇರುವುದೂ ಸಣ್ಣ ಸಣ್ಣ ಸಂಗತಿಗಳಲ್ಲೇ. ಅವೆಲ್ಲವನ್ನೂ ಸೇರಿಸಿಕೊಂಡರೆ ಜೀವನ. ಧನಾತ್ಮಕ ಚಿಂತನೆ ಮೂಲಕ ನಮ್ಮ ಬದುಕನ್ನು ಮತ್ತಷ್ಟು ಬೆಳಗಿಸಿಕೊಳ್ಳೋಣ.

ಮಣಿಪಾಲ: ನ್ಯೂಟನ್‌ಗಿಂತಲೂ ಮೊದಲು ಎಷ್ಟೋ ವರ್ಷಗಳಿಂದ ಜನರು ಸೇಬು ನೆಲಕ್ಕೆ ಬೀಳುವುದನ್ನು ನೋಡಿದ್ದರು. ಆದರೆ ಅವರಿಗಾರಿಗೂ ಆ ಬಗ್ಗೆ ಆಲೋಚನೆಯೇ ಮೂಡಿರಲಿಲ್ಲ, ವಿಶೇಷ ಎನಿಸಿರಲಿಲ್ಲ. ಆದರೆ ನ್ಯೂಟನ್‌ನ ಬದಲಾದ ನೋಟ, ಇಡೀ ಜಗತ್ತಿಗೆ ಅತಿ ಮಹತ್ವದ ಸಂಗತಿಯನ್ನು ತಿಳಿಸಿತು. ಸಂಶೋಧನೆಯಾಗಿ ಪರಿಗಣಿತವಾಯಿತು.

ನಾವೂ ಹಲವು ಬಾರಿ ಬದುಕಿನ ಸಣ್ಣ ಸಂಗತಿಗಳನ್ನು, ಸಾಮಾನ್ಯ ಸಂಗತಿಗಳನ್ನು ವಿಶೇಷ ದೃಷ್ಟಿಯಿಂದ ನೋಡುವುದಿಲ್ಲ. ಹಾಗಾಗಿ ವಿಶೇಷವೆನಿಸದು. ನಮ್ಮೊಳಗೆ ಧನಾ ತ್ಮಕ ದೃಷ್ಟಿಯ, ಆಲೋಚನೆಯ ಬೀಜವನ್ನು ಬಿತ್ತಿಕೊಂಡರೆ ನಮಗೆ ಸಿಗುವುದು ಧನಾತ್ಮಕ ಫ‌ಲವೇ ಎನ್ನುವುದಕ್ಕೆ ಎಷ್ಟೊಂದು ನಿದರ್ಶ ನಗಳು ನಮ್ಮ ಕಣ್ಣ ಮುಂದೆ ಇವೆ. 

ಬದುಕನ್ನು ಸಂಶೋಧಿಸುವ, ಇನ್ನಷ್ಟು ತೆರೆದುಕೊಳ್ಳುವ ಮೂಲಕ ಅನುಭವವನ್ನು ಸಂಗ್ರಹಿಸುವ ಗುಣ ಬೆಳೆಯಲು ಬಹಳ ಮುಖ್ಯವಾಗಿ ಬೇಕಾದದ್ದು ಧನಾತ್ಮಕ ಆಲೋಚನೆ (ಪಾಸಿಟಿವ್‌ ಥಿಂಕಿಂಗ್‌). ಹಲವು ಹೂವುಗಳಿಂದ ಸಂಗ್ರಹಿಸುವ ಪ್ರತಿ ಹನಿ ಮಕರಂದದಲ್ಲೂ ಸಿಹಿ ಹರಡಿಕೊಂಡಿದೆ. ಪ್ರತಿ ಹನಿಯೂ ಸಣ್ಣದೇ, ಆದರೂ ಪ್ರಮುಖ. ಅದರೊಳಗಿನ ಸಿಹಿಯೂ ಸಣ್ಣದಲ್ಲ. ನಮ್ಮ ಬದುಕೂ ಹಾಗೆಯೇ. ಪ್ರತಿಯೊಂದು ಘಟನೆಯೂ ಪ್ರಮುಖ. ಯಾವುದೂ ಅಮುಖ್ಯವಲ್ಲ. ಹಾಗೆಂದು ಪ್ರತಿಯೊಂದನ್ನೂ ಅನಿವಾರ್ಯದ ನೆಲೆಯಲ್ಲಿ ನೋಡುವುದನ್ನು ಬಿಡಬೇಕು. ಆಗ ನಮ್ಮ ಒತ್ತಡ ಕೊಂಚ ಕಡಿಮೆಯಾದೀತು.

ಹೊಸತು ಹೊಸತು
ಜೀವನವೆಂಬುದು ಯಾವಾಗಲೂ ನವಗಾನ. ಅದೇ ಸೂರ್ಯ, ಅದೇ ಭೂಮಿ ಎನಿಸಬಹುದು. ಆದರೆ ಪ್ರಕೃತಿಯಲ್ಲಿ ದಿನವೂ ಅರಳುವ ಪ್ರತಿ ಹೂವೂ ಹೊಸದೇ. ಅದೇ ಭಾವನೆ ನಾವೂ ಹೊಂದಬೇಕು. ಆಗ ನಿತ್ಯವೂ ನಮ್ಮ ಬದುಕು ಹೊಸತು. ಧನಾತ್ಮಕ ದೃಷ್ಟಿಯೆಂದರೆ ಅದೇ. ಹೊಸ ಸಂಗತಿ, ಹೊಸ ಆಲೋಚ ನೆಗಳನ್ನು ಸೃಜಿಸುವುದೇ ಯಶಸ್ಸಿನ ಜೀವನಕ್ಕೆ ರಹದಾರಿ. ನಮ್ಮ ಮನೆಗಳ ಕಪಾಟಿನಲ್ಲಿ ಯಾವತ್ತಿಗೂ ಹೊಸ ಬಟೆೆrಗಳಿಗೆ ಅವಕಾಶ. ಹೀಗೆಯೇ ಧನಾತ್ಮಕ ಚಿಂತನೆಗಳಿಗೂ ನಮ್ಮಲ್ಲಿ ಹೆಚ್ಚಿನ ಅವಕಾಶವಿರಬೇಕು. ಈ ಉದ್ದೇಶದಿಂದಲೇ ಯಾವತ್ತೂ ಓದುಗರಿಗೆ ಹೊಸತನ್ನೇ ಉಣ ಬಡಿಸುವ ಉದಯವಾಣಿ "ಬದುಕು ಬದಲಿಸೋಣ' ಎಂಬ ನವೀನ ಮಾದರಿಯ ಅಂಕಣವನ್ನು ಪರಿಚಯಿಸಿತು. ಇದಕ್ಕೆ ಓದುಗರು ಪ್ರತಿಕ್ರಿಯಿಸಿದ ಪರಿಯಂತೂ ಅದ್ಭುತ. ತೀವ್ರ ಉತ್ಸಾಹದಿಂದಲೇ ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ಅಂಕಣ ಕುರಿತು ನಿತ್ಯವೂ ಬರುತ್ತಿದ್ದ ಪ್ರತಿಕ್ರಿಯೆಗಳು ಹಲವಾರು. 

ಸಮಸೆಗಳು, ಹೊಸ ಆಲೋಚನೆಗಳ ತುಡಿತ, ಧನಾತ್ಮಕ ಚಿಂತನೆಗಳೇ ಜೀವನದ ಮೆಟ್ಟಿಲು ಎಂಬುದರ ಕುರಿತು ಸಹಮತ, ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ. ಓದುಗರ ಈ ಮನದುಂಬಿದ ಪ್ರತಿಕ್ರಿಯೆಗೆ ಉದಯವಾಣಿ ಆಭಾರಿ. ಅಡುಗೆ ಮನೆಯಲ್ಲಿ ಗ್ಯಾಸ್‌ಸ್ಟವ್‌ ಉರಿಸಲು ಸಣ್ಣ ಕಿಡಿಯೊಂದು ಹೊತ್ತಿಕೊಂಡರೆ ಸಾಕು. ಅದರ ಶಾಖವೇ ರುಚಿಯಾದ ಅಡುಗೆ ತಯಾರಿಸಬಲ್ಲದು. ಹೀಗೆಯೇ ಒಳಿತಿನ ಸದಾಶಯ, ಧನಾತ್ಮಕ ಚಿಂತನೆಗಳೂ ಒಳಿತನ್ನೇ ಉಂಟುಮಾಡುತ್ತವೆ. ಈ ಕುರಿತು ನಾವು ಎಷ್ಟರ ಮಟ್ಟಿಗೆ ಚಿಂತಿಸುತ್ತೇವೆ ಎಂಬುದರಲ್ಲೇ ಇದು ನಿಂತಿದೆ. 

ಈ ದೃಷ್ಟಿಯಿಂದ ಹೊಸ ದೃಷ್ಟಿಕೋನ ಹೊಂದಿದ, ಹೊಸ ಸಾಧ್ಯತೆಯ, ನವೀನ ಪರಿಕಲ್ಪನೆಯ ಪ್ರಯತ್ನಗಳನ್ನು ಉದಯವಾಣಿ ಇನ್ನಷ್ಟು ಹೊಸೆ ಯಲಿದೆ. ಓದುಗ-ಪತ್ರಿಕೆಯ ನಡುವಿನ ಬಂಧವನ್ನು ಇಂತಹ ಪರಿಕಲ್ಪನೆಗಳು ಇನ್ನಷ್ಟು ಬೆಸೆಯಲಿದ್ದು, ಹೊಸ ಮಾರ್ಗವೊಂದನ್ನು ರೂಪಿಸಲಿದೆ. ಧನಾತ್ಮಕ ಜಗತ್ತಿನ ನಿರ್ಮಾಣಕ್ಕೆ ಪ್ರತಿ ಹಂತದಲ್ಲೂ ಉದಯವಾಣಿ ಪ್ರಯತ್ನಿಸಲಿದೆ.

ಇನ್ನು ಮುಂದೆ ವಾರಕ್ಕೊಮ್ಮೆ
ಸುಮಾರು ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ಬದುಕು ಬದಲಿಸೋಣ ಎಂಬ ಅಂಕಣ ಹಲವರಲ್ಲಿ ಧನಾತ್ಮಕ ವಿಚಾರಧಾರೆಯನ್ನು ಬಿತ್ತಿದೆ. ಹಲವರು ಇದನ್ನು ನಿತ್ಯವೂ ಓದಿ ಅಭಿಪ್ರಾಯ ತಿಳಿಸುತ್ತಿದ್ದರು. ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತ ಬರಹಗಳು, ಪ್ರಕರಣ ಅಧ್ಯಯನಗಳಿಂದ ನಾನಾ ಓದುಗರು ತಮ್ಮ ದುಗುಡವನ್ನೂ ಹೇಳಿಕೊಂಡಿದ್ದರು. ಈ ಧನಾತ್ಮಕ ಚಿಂತನೆಯ ಬೀಜವನ್ನು ಬಿತ್ತುವ ಕೆಲಸವನ್ನು ಪತ್ರಿಕೆಯು ನಿಲ್ಲಿಸುವುದಿಲ್ಲ. ಎರಡನೇ ಹಂತವಾಗಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ನಿಮ್ಮ ಪ್ರಶ್ನೆಗಳನ್ನು ಕಳುಹಿಸಿ
ಈ ಅಂಕಣದಲ್ಲಿ ಪ್ರಶ್ನೋತ್ತರವನ್ನೂ ಆರಂಭವಾಗಲಿದೆ. ನಿಮ್ಮ ಪ್ರಶ್ನೆಗಳಿಗೆ ಪರಿಣಿತರು ಉತ್ತರಿಸಲಿದ್ದು, ವಿದ್ಯಾರ್ಥಿಗಳು, ಪೋಷಕರು ಇತರರು ತಮ್ಮ ಒತ್ತಡ ಇತ್ಯಾದಿ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೇಳಬಹುದು. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ವಾಟ್ಸಾಪ್‌ ಸಂಖ್ಯೆ 9964169554


Trending videos

Back to Top