CONNECT WITH US  

ಪಂಚರ್‌!

ಹೊಸ 2000 ರೂಪಾಯಿ ನೋಟಲ್ಲಿ ಗಾಂಧಿ ಚಿತ್ರ ನಾಪತ್ತೆ.
* ಇಷ್ಟು ದಿನ ನೋಟೇ ನಾಪತ್ತೆಯಾಗಿತ್ತು, ಈಗ ಬಂದಿಲ್ವಾ? ಹಂಗೇ ಗಾಂಧೀಜೀನೂ ಬರ್ತಾರೆ ಬಿಡಿ!

ಅಮೆರಿಕ ಸೇನೆಯಲ್ಲಿ ರುಮಾಲು, ಗಡ್ಡ,ಹಿಜಾಬ್‌ಗ ಅವಕಾಶ.
* ಮುಂದಿನ ಬೇಡಿಕೆ: ಕಚ್ಚೆ ಪಂಚೆ, ಲುಂಗಿ,ಶಲ್ಯ, ಹನುಮಾನ್‌ ಚಡ್ಡಿ!

ಕಪ್ಪು ಹಣದ ಮೇಲೆ ಕಣ್ಗಾವಲಿಗೆ 400 ವೀಕ್ಷಕರು.
* ಅವರು ಕಪ್ಪು ಕೂಲಿಂಗ್‌ ಗ್ಲಾಸ್‌ ಹಾಕ್ಕೊಳಂಗಿಲ್ಲ!

ಎಮ್ಮೆ, ಹಸುಗಳಿಗೂ ಆಧಾರ್‌ ನಂಬರ್‌.
* ಕೊಟ್ಟಿಗೆಯ ಅಡ್ರೆಸ್‌ ಪ್ರೂಫ್ ಕೊಡೋದು ಹೆಂಗೆ?

ಬಿಸಿಸಿಐ ಭವಿಷ್ಯದ ಬಗ್ಗೆ ಚರ್ಚಿಸಲು ಶ್ರೀನಿವಾಸನ್‌ ಸಭೆ!
* ಬಿಸಿಸಿಐನಧ್ದೋ, ಸಭೆ ಸೇರುವವರಧ್ದೋ?

Trending videos

Back to Top