CONNECT WITH US  

ಪಂಚರ್‌!

ಹಣ ಮುದ್ರಣ ಮಾಡುವ ಸರ್ಕಾರಿ ಪ್ರಿಂಟಿಂಗ್‌ ಪ್ರಸ್‌ನಿಂದಲೇ ಕಾಳಧನಿಕರಿಗೆ ಹಣ ಪೂರೈಕೆ.
*ಪ್ರಸ್‌ ಎಷ್ಟು ಪವರ್‌ಫ‌ುಲ್‌ ಅಂತ ಗೊತ್ತಾಯ್ತಲ್ಲ!

ಜನ ವೇದನಾ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ಧಾಳಿ.
* ರಾಹುಲ್‌ ಗಾಂಧಿ ಭಾಗವಹಿಸುವ ಸಭೆಯನ್ನು ಜನವೇದನಾ ಸಭೆ ಅಂತಾರಾ?

ತಿರುಪತಿ ದೇಗುಲಕ್ಕೆ 11 ದಿನಗಳಲ್ಲಿ 1.7 ಕೋಟಿ ಹಳೆಯ ನೋಟು ಸಲ್ಲಿಕೆ.
* ಹಳೇ ನೋಟು ಇಟ್ಕೊಂಡಿರೋರನ್ನ ಬಂಧಿಸೋ ಹಾಗಿದ್ರೆ ತಿಮ್ಮಪ್ಪಂಗೂ ಸಜೆ ತಪ್ಪಿದ್ದಲ್ಲ!

ಬಿಸ್ಮಿಲ್ಲಾ ಖಾನ್‌ರ 4 ಶೆಹನಾಯ್‌ ಕದ್ದಿದ್ದು ಅವರ ಮೊಮ್ಮಗ.
* ಹಳೇ ಜೋಕು: ಬಿಸ್ಮಿಲ್ಲಾ ಖಾನ್‌ ಶೆಹನಾಯ್‌ ಕೇಳಿದ್ದೀರಾ? ಕೇಳ್ದೆ, ಕೊಡೋಲ್ಲ ಅಂದ್ರು!

ಧೋನಿ ವಿರುದ್ಧ ಮತ್ತೆ ಹರಿಹಾಯ್ದ ಯುವಿ ತಂದೆ ಯೋಗರಾಜ್‌
* ಅಪ್ಪ ಚಿವುಟುತ್ತಾನೆ...ಮಗ ತೊಟ್ಟಿಲು ತೂಗುತ್ತಾನೆ...!


Trending videos

Back to Top