CONNECT WITH US  

ಶ್ರದ್ಧಾ ಭಕ್ತಿಯ ಸಮರ್ಪಣೆಯಿಂದ ದೇವರ ಸಾಕ್ಷಾತ್ಕಾರ: ಕಣಿಯೂರು ಶ್ರೀ

ವಿಟ್ಲ: ಭಯ, ಭಕ್ತಿ, ನಂಬಿಕೆ, ಶ್ರದ್ಧೆ ಹಾಗೂ ಸಮರ್ಪಣಾಭಾವದಿಂದ ಆರಾಧಿಸಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಹಣ, ಅಂತಸ್ತು, ಅಧಿಕಾರಗಳಿಗಲ್ಲ ಎಂದು ಕನ್ಯಾನ ಗ್ರಾಮದ ಕಣಿಯೂರು ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ನುಡಿದರು.

ಅವರು ಮಂಗಳವಾರ ಬಾಕ್ರಬೈಲು ಸಮೀಪದ ಪಾತೂರು ಶ್ರೀ ಸೂಯೇìಶ್ವರ ದೇವಸ್ಥಾನದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಗಣಪತಿ ಸಹಿತ ಶ್ರೀ ಸೂಯೇìಶ್ವರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಹಾಗೂ ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಜಾತ್ರೋತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪ್ರಥಮಗಳ ದಾಖಲೆ: ವಿದ್ವಾನ್‌ ಹಿರಣ್ಯ ವೆಂಕಟೇಶ್ವರ ಭಟ್‌ ಉಪನ್ಯಾಸ ನೀಡಿ, ಸೂಯೇಶ್ವರ ದೇವಸ್ಥಾನದಲ್ಲಿ ಹಲವು ಪ್ರಥಮಗಳ ದಾಖಲೆಯಾಗಿದೆ. ಸೂಯೇìಶ್ವರನ ದೇವಸ್ಥಾನ ಪ್ರಥಮ ಎಂದೆನಿಸಿದರೆ, ಹಿಂದೂ ಕ್ರೈಸ್ತ ಮುಸಲ್ಮಾನರು ಪ್ರಥಮ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ, ಏಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ  ಎಂದರು.

ಮುಡಿಪು ಇಗರ್ಜಿ ಧರ್ಮಗುರು ವಂ| ಬೆಂಜ ಮಿನ್‌ ಪಿಂಟೋ, ನಿರ್ಮಲ, ಶುಭ್ರ ಮನಸ್ಸು ಇದ್ದ ವರಿಗೆ ಭಗವಂತನ ದರ್ಶನವಾಗುತ್ತದೆ  ಎಂದರು.

ಪರಸ್ಪರ ಸಹಕಾರ: ಪಾತೂರು ಜುಮಾ ಮಸೀದಿಯ ಖತೀಬ ಅಲ್‌ಹಾಜಿ ಅಹಮದ್‌ ಮುಸ್ಲಿಯಾರ್‌ ಮಾತನಾಡಿ, ಇಸ್ಲಾಂ ಮತದಲ್ಲಿ ಸೌಹಾರ್ದ, ಸಹಕಾರ ಹೇಳಲಾಗಿದೆ. ದೇವಾಲಯ ನಿರ್ಮಾಣಕ್ಕೆ ಮುಸಲ್ಮಾನರು ಸಹಕರಿಸಬೇಕು ಮತ್ತು ಹಿಂದೂಗಳು ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದರು.

ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಕೈರಂಗಳ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರ ಟಿ. ಮಹಾಬಲೇಶ್ವರ ಭಟ್‌, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಪ್ರಾದೇಶಿಕ ನಿರ್ದೇ ಶಕ ಮಹಾವೀರ ಅಜ್ರಿ, ಕೇರಳ ತುಳು ಸಾಹಿತ್ಯ ಅಕಾ
ಡೆಮಿ ಅಧ್ಯಕ್ಷ ಸುಬ್ಬಯ್ಯ ರೈ, ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಬಿ.ಎ. ಮಜೀದ್‌, ಮಂಗಳೂರು ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲು ಇಬ್ರಾಹಿಂ, ಕೊಡ್ಲಮೊಗರು-ಪಾತೂರು ವಿಶೇಷ ಗ್ರಾಮಾಧಿಕಾರಿ ಶಂಕರ್‌ ಕುಂಜತ್ತೂರು, ವರ್ಕಾಡಿ ಕೆ.ಎಸ್‌.
ಇ.ಬಿ. ಸಹಾಯಕ ಅಭಿಯಂತ ನಂದ ಕುಮಾರ್‌, ಕೊಡ್ಲಮೊಗರು ಕೇರಳ ಗ್ರಾಮೀಣ ಬ್ಯಾಂಕ್‌ ಮ್ಯಾನೇಜರ್‌ ದೇವದಾಸ ಬೆಳ್ಚಾಡ, ಡಾ| ಜಯ ಪ್ರಕಾಶ ತೊಟ್ಟೆತ್ತೋಡಿ, ಬಂಟ್ವಾಳ ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಉದ್ಯಾ ವರ ಮಾಡ ರಾಜ ಬೆಳ್ಚಾಡ, ವೇ| ಮೂ| ಪೊಳ್ಳಕಜೆ ಗೋವಿಂದ ಭಟ್‌, ಕುಂಜತ್ತೂರು ಶಿವಕೃಪಾ ಕೃಷ್ಣ, ದೇಗುಲದ ಮ್ಯಾನೇಜಿಂಗ್‌ ಟ್ರಸ್ಟಿ ಬಾಕ್ರಬೈಲು ರಮಾನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲಾರಬೀಡು ರವೀಂದ್ರನಾಥ ಆಳ್ವ, ಕಾರ್ಯದರ್ಶಿ ವಿದ್ಯಾನಂದ ಸಾಮಾನಿ, ಕೋಶಾಧಿ ಕಾರಿ ದಿನೇಶ್‌ ಶೆಟ್ಟಿ ಮಲಾರಬೀಡು, ಉಪಕೋಶಾ ಧಿಕಾರಿ ಚಂದ್ರಶೇಖರ ಪಾತೂರು, ಪಂಚಾಯತ್‌ ಜಿ ಅಧ್ಯಕ್ಷ ಪಿ.ಬಿ. ಅಬೂಬಕ್ಕರ್‌ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ದೇವಿದಾಸ ಶೆಟ್ಟಿ ಪಾಲ್ತಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರ್ಪಿಕಾರು ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಪುಷ್ಪಾವತಿ ಪಿ. ಶೆಟ್ಟಿ ಪೆದಮಲೆ ವಂದಿಸಿದರು.


Trending videos

Back to Top