CONNECT WITH US  

ಗೋಮಯ, ಗೋಮೂತ್ರದಲ್ಲಿ ಲಕ್ಷ್ಮೀ ವಾಸ: ದೇವಬಾಬಾ

ದೇವಬಾಬಾ, ಉಪೇಂದ್ರ ಕಾಮತ್‌ ಉದ್ಘಾಟಿಸಿದರು.

ಸುಳ್ಯ : ಗೋವು ರಾಷ್ಟ್ರದ ಸಂಪತ್ತು. ಆಕೆ ವಿಶ್ವಕ್ಕೆ ಮಾತೆ. ಗೋವಿನ ಗೋಮಯ, ಗೋಮೂತ್ರದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎಂದು ಕಿನ್ನಿಗೋಳಿಯ ಶ್ರೀಶಕ್ತಿದರ್ಶನ ಯೋಗಾ ಶ್ರಮದ ಯೋಗಾಚಾರ್ಯ ದೇವಬಾಬಾ ಅವರು ತಿಳಿಸಿದರು.

ಅಡಾRರಿನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಶ್ವ ಮಾತಾ ಗೋಮಾತಾ ರಂಗಯಾತ್ರಾ ಸಪ್ತಾಹವನ್ನು ಉದ್ಘಾಟಿಸಿ ಅವರು  ಮಾತನಾಡಿದರು. ಗೋವಿನಲ್ಲಿ ದೇವ ರನ್ನು ಕಾಣುವ ಪೂಜ್ಯ ಭಾವನೆ ಪುರಾಣ ಕಾಲದಿಂದಲೂ  ನಮ್ಮಲ್ಲಿ  ಹಾಸುಹೊಕ್ಕಾಗಿ ಬಂದಿದೆ. ಕೃಷಿ ಸಂಸ್ಕೃತಿಗೆ ಗೋವು ಪೂರಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಉಪೇಂದ್ರ ಕಾಮತ್‌, ಕಾಸರಗೋಡು ಹಿಂದೂ ಐಕ್ಯವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಉಡುಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಗುರುಪ್ರಸಾದ್‌ ಭಟ್‌, ಕಲಾವಿದ ಕೆ.ವಿ. ರಮಣ್‌ ಮಾತನಾಡಿದರು.

ಡಾ| ಶಶಿಧರ ಹಾಸನಡ್ಕ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಸುಧಾಕರ ಕಾಮತ್‌ ವಂದಿಸಿದರು. ದೇಶೀಯ ಗೋವುಗಳನ್ನು ಆಸಕ್ತಿಯಿಂದ ಸಾಕುತ್ತಿರುವವರನ್ನು ಗೌರವಿಸಲಾಯಿತು. ಅನಂತರ ಕೆ.ವಿ.ರಮಣ್‌ ಮತ್ತು ಡಾ| ಎಂ. ಪ್ರಭಾಕರ ಜೋಷಿ ರಚಿಸಿದ ಬಹುಮಾಧ್ಯಮ ಬಳಕೆಯ ಅದ್ದೂರಿಯ ದ್ವಿಭಾಷಾ ನೃತ್ಯ ನಾಟಕ (ಸಂಗೀತ- ರಂಗರೂಪ, ಸಮಗ್ರ ನಿರ್ದೇಶನ -ಕೆ.ವಿ. ರಮಣ್‌) ವಿಶ್ವಮಾತಾ ಗೋಮಾತಾ ಪ್ರದರ್ಶನಗೊಂಡಿತು. 

Trending videos

Back to Top