ಅಕ್ಕಿಗೂ ಬಿತ್ತು ಜಿಎಸ್‌ಟಿ ಬರೆ


Team Udayavani, Oct 14, 2017, 8:25 AM IST

Rice-13-10.jpg

ಬೆಳ್ತಂಗಡಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಿಎಸ್‌ಟಿ ಜಾರಿಗೆ ಬಂದು ತಿಂಗಳು ಮೂರು ಕಳೆದರೂ ಪೂರ್ಣಪ್ರಮಾಣದ ಗೊಂದಲ ಬಗೆಹರಿದಂತಿಲ್ಲ. ಇಂತಹ ಗೊಂದಲದ ಹೆಜ್ಜೇನಿನ ಗೂಡಿಗೆ ಇನ್ನೊಂದು ಸೇರ್ಪಡೆ ಅಕ್ಕಿ. ಇದರಿಂದಾಗಿ ಅಕ್ಕಿಮಿಲ್ಲುಗಳು ತೊಂದರೆಗೆ ಈಡಾಗಿವೆ. ವ್ಯಾಪಾರಸ್ಥರಿಗೆ, ನೂರಾರು ಕಾರ್ಮಿಕರ ಭವಿಷ್ಯ, ನಿತ್ಯದೂಟಕ್ಕೆ ಬೇಕಾಗುವ ಅಕ್ಕಿ ಉತ್ಪಾದನೆಗೆ ಆತಂಕದ ಕರಿಛಾಯೆ ಬಂದಿದೆ.

ತಿನ್ನುವ ಅಕ್ಕಿಯ ಮೇಲೂ 5 ಶೇ. ತೆರಿಗೆ! 100 ರೂ. ಅಕ್ಕಿಗೆ 5 ರೂ. ತೆರಿಗೆ ಪಾವತಿಸಬೇಕು. ಹೀಗೊಂದು ಪುಕಾರು ಎದ್ದಿದೆ. ಆದರೆ ಅಕ್ಕಿಗೆ ಜಿಎಸ್‌ಟಿ ವಿಧಿಸಲಾಗಿದೆಯೇ ಇಲ್ಲವೇ ಎನ್ನುವುದೇ ಸ್ಪಷ್ಟವಿಲ್ಲ. ಹಾಗಿದ್ದರೂ ಬ್ರಾಂಡೆಡ್‌ ವಸ್ತುಗಳ ಮೇಲೆ ಶೇ. 5 ತೆರಿಗೆ ವಿಧಿಸಲಾಗಿದ್ದು ಇದು ಅಕ್ಕಿಗೆ ಅನ್ವಯಾಗುತ್ತದೆ ಎನ್ನುವ ಕಾರಣದಿಂದ ಅಕ್ಕಿ ಮಿಲ್ಲಿನಲ್ಲಿ ಕೆಲಸ ಕುಂಠಿತಗೊಂಡಿದೆ.

ಏನಿದು ಗೊಂದಲ
ಅಕ್ಕಿ ಮಿಲ್ಲುಗಳು ತಮ್ಮದೇ ಹೆಸರಿನಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಿವೆ. ಈವರೆಗೆ ಇದರ ಮೇಲೆ ತೆರಿಗೆ ಭಯ ಇರಲಿಲ್ಲ. ಆದರೆ ಈಗ ಬ್ರಾಂಡೆಡ್‌ ಐಟಂಗಳ ಮೇಲೆ ಶೇ. 5 ಜಿಎಸ್‌ಟಿ ಎಂದಿದ್ದು 40 ರೂ.ಗಳ 1 ಕೆಜಿ ಅಕ್ಕಿಗೆ 2 ರೂ. ತೆರಿಗೆ ಬೀಳಲಿದೆ. ಕಂಪೆನಿಗಳ ಹೆಸರಿಲ್ಲದ ಅಕ್ಕಿಗೆ ಈ ತೆರಿಗೆ ಇರುವುದಿಲ್ಲ. ಇದರಿಂದಾಗಿ ಅಕ್ಕಿ ಮಿಲ್ಲಿನವರು ಕಂಗಾಲಾಗಿದ್ದು ತೆರಿಗೆ ಹಾಕುವುದಾದರೆ ಎಲ್ಲರಿಗೂ ಹಾಕಬೇಕು, ಇಲ್ಲದಿದ್ದರೆ ಯಾರಿಗೂ ಹಾಕಬಾರದು ಎಂಬ ಬೇಡಿಕೆ ಇಡುತ್ತಿದ್ದಾರೆ. ಪರಿಣಾಮ ಈ ಗೊಂದಲ ನಿವಾರಣೆಯಾಗುವವರೆಗೆ ಉತ್ಪಾದಕರ ಹೆಸರಿನ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೇಡಿಕೆಗೆ ತಕ್ಕಷ್ಟೇ ಪೂರೈಸಲಾಗುತ್ತಿದೆ.

ಅಕ್ಕಿಗೇನು ತೊಂದರೆ
ದೊಡ್ಡ ಕಂಪೆನಿಗಳ ಉತ್ಪನ್ನಗಳಿಗೆ ಬ್ರಾಂಡ್‌ ಆಧಾರದಲ್ಲಿ ತೆರಿಗೆ ಹಾಕಿದರೆ ಅವರು ಅದನ್ನು ಗ್ರಾಹಕನ ತಲೆಗೇ ಕಟ್ಟುತ್ತಾರೆ. ಸೋಪ್‌ ಆದರೆ ಆತನ ಉತ್ಪನ್ನಕ್ಕೆ ಸ್ವಲ್ಪ ದರ ಹೆಚ್ಚಾದರೂ ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಅಥವಾ 75 ಗ್ರಾಂ. ಸೋಪಿನ ಬದಲು 70 ಗ್ರಾಂ. ನೀಡಿ ಬೆಲೆಯನ್ನು ಸರಿದೂಗಿಸುತ್ತಾನೆ. ಆದರೆ ಅಕ್ಕಿಯಲ್ಲಿ ಅಂತಹ ಯಾವುದೇ ಅವಕಾಶ ಮಾರಾಟಗಾರನಿಗೆ ಇಲ್ಲ. ಬ್ರಾಂಡೆಡ್‌ ಅಕ್ಕಿಯೇ ಆಗಬೇಕು ಎಂದು ಬಹುತೇಕ ಗ್ರಾಹಕರು ಬಯಸುವುದಿಲ್ಲ. ಬ್ರಾಂಡ್‌ ಇಲ್ಲದ ಅಕ್ಕಿ ಕೆಜಿಗೆ 2 ರೂ. ಕಡಿಮೆಗೆ ದೊರೆಯುವಾಗ ಆತ ಬ್ರಾಂಡೆಡ್‌ನ‌ ಮೊರೆ ಹೋಗಲಾರ. ಆದ್ದರಿಂದ ಮಿಲ್‌ನವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗಂತ ಬ್ರಾಂಡ್‌ ಇಲ್ಲದ ಮಾರಾಟದಲ್ಲಿ ಪೈಪೋಟಿ ನೀಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬ ಅಸಮಾನತೆಯೇ ಈಗಿನ ಕೂಗಿಗೆ ಕಾರಣ. ತೆರಿಗೆ ವಿಧಿಸುವುದಿದ್ದರೆ ಎಲ್ಲರಿಗೂ, ಇಲ್ಲದಿದ್ದರೆ ಎಲ್ಲರಿಗೂ ರದ್ದು ಮಾಡಲಿ ಎನ್ನುವುದು ಬೇಡಿಕೆ. ಅಕ್ಕಿಗೆ ತೆರಿಗೆ ಇದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಲಿ ಎನ್ನುವುದು ಆಗ್ರಹ.

ಬ್ರಾಂಡ್‌ ರದ್ದು
ಬ್ರಾಂಡೆಡ್‌ ವಸ್ತುಗಳ ಮೇಲೆ ತೆರಿಗೆ ಎಂದಾದಾಗ ಬಹುತೇಕರು ತಮ್ಮ ಬ್ರಾಂಡ್‌ನ‌ ರಿಜಿಸ್ಟ್ರೇಶನ್‌ ರದ್ದು ಮಾಡತೊಡಗಿದರು. ತತ್‌ಕ್ಷಣ ಹೊಸ ಕಾನೂನು ಬಂತು, ಮೇ 15ರ ಒಳಗೆ ನೋಂದಣಿ ಮಾಡಿದ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು. ಹೊಸ ಆದೇಶದಂತೆ ತಮ್ಮ ಹೆಸರಿನ ಉತ್ಪನ್ನಗಳನ್ನು ಯಾರು ಮಾರಾಟ ಮಾಡಿದರೂ ತಗಾದೆ ತೆಗೆಯುವಂತಿಲ್ಲ. ಆಕ್ಷನೇಬಲ್‌ ಬಾಂಡ್‌ ಎಂದು ಅಫಿದವಿತ್‌ ಕೊಟ್ಟರೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಬೇಕಿಲ್ಲ ಎಂದು. ಅಕ್ಕಿ ಮಿಲ್ಲಿನ ಮಾಲಕರು ಈಗ ಒಟ್ಟಾಗಿದ್ದು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ಭತ್ತ ಇಲ್ಲ
ದ.ಕ.ಜಿಲ್ಲೆಯಲ್ಲಿ 9, ಉಡುಪಿಯ ಕುಂದಾಪುರದಲ್ಲಿ 10, ಹೆಬ್ರಿಯಲ್ಲಿ 10 ಎಂದು ಸುಮಾರು 40 ಅಕ್ಕಿ ಮಿಲ್ಲುಗಳಿವೆ. ಪ್ರತಿದಿನ ಅಂದಾಜು 7 ಸಾವಿರ ಕ್ವಿಂ. ಅಕ್ಕಿ ತಯಾರು ಮಾಡುತ್ತವೆ. ಇವುಗಳಿಗೆ ಈ ಬಾರಿ ಮಧ್ಯಪ್ರದೇಶದ ಜಬಲ್‌ಪುರ ಸೇರಿ ಹೊರರಾಜ್ಯದಿಂದ ಹೆಚ್ಚಿನ ಪ್ರಮಾಣದ ಭತ್ತ ಬಂದಿದೆ. ದ.ಕ. ಉಡುಪಿಯಲ್ಲಿ ಮಿಲ್ಲುಗಳಿಗೆ ಬೇಕಾದ ಭತ್ತದ ಕೊರತೆಯಿದೆ. ಇದಕ್ಕೆ ಕಾರಣ ಇಲ್ಲಿ ಭತ್ತಕ್ಕೆ ದರ ಇಲ್ಲದಿರುವುದು. ಇಲ್ಲಿ ತಯಾರಾದ ಅಕ್ಕಿ ದ.ಕ., ಉಡುಪಿ. ಅಲ್ಲದೆ ಹಾಸನ, ಬೆಂಗಳೂರು, ಮೈಸೂರು ಮೊದಲಾದೆಡೆಗೆ ಮಾರಾಟವಾಗುತ್ತದೆ. ಶೇ.50ರಷ್ಟು ಮಾತ್ರ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮಾರಾಟವಾದರೆ ಇನ್ನುಳಿದದ್ದು ಹೊರ ಜಿಲ್ಲೆಗಳ ಪಾಲಿಗೆ. 

ಗೊಂದಲ ನಿವಾರಿಸಿ
ಕರಾವಳಿಯ ಸಾಮಾನ್ಯರು ಊಟ ಮಾಡುವ ಕುಚ್ಚಲಕ್ಕಿಗೆ ಬ್ರಾಂಡ್‌ ಹಾಕಿದರೂ ಪ್ರೀಮಿಯಂನಲ್ಲಿ ಮಾರಾಟ ಮಾಡಲಾಗದು. ಕೇವಲ ಗುರುತಿಗಾಗಿ ಬ್ರಾಂಡ್‌ ಉಪಯೋಗಿಸಲಾಗುತ್ತಿದೆ. ಆದ್ದರಿಂದ ಜನಸಾಮಾನ್ಯರ ಅಕ್ಕಿ ಮೇಲೆ ತೆರಿಗೆ ರಿಯಾಯಿತಿ ಮಾಡಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆಯ ಕಾನೂನು ಮಾಹಿತಿಯನ್ನು ನೀಡಬೇಕು 
– ಚಂದ್ರಕಾಂತ್‌ ಕಾಮತ್‌, ಪಾಲುದಾರರು, ವಿನಾಯಕ ರೈಸ್‌ ಇಂಡಸ್ಟ್ರೀಸ್‌, ಬೆಳ್ತಂಗಡಿ

ಸ್ಪಷ್ಟಪಡಿಸಲಿ
ಅಕ್ಕಿಗೆ ತೆರಿಗೆ ಇದೆಯೇ ಇಲ್ಲವೇ ಎನ್ನುವುದು ಗೊಂದಲದಲ್ಲಿದೆ. ಇದನ್ನು ಮೊದಲು ಸ್ಪಷ್ಟಪಡಿಸ ಬೇಕಿದೆ. ಈಗ ವಿಧಿಸಿರುವ ಶೇ. 5 ತೆರಿಗೆ ಕೂಡ ಜಾಸ್ತಿ ಆಗಿದೆ. ಒಂದೊಮ್ಮೆ ಎಲ್ಲ ಅಕ್ಕಿಯ ಮೇಲೆ ತೆರಿಗೆ ವಿಧಿಸುವುದಾದರೆ ಅದರ ಪ್ರಮಾಣ ತಗ್ಗಿಸಬೇಕಿದೆ 
– ಶಿವಶಂಕರ ನಾಯಕ್‌, ಪಾಲುದಾರರು, ರೈತಬಂಧು ಆಹಾರೋದ್ಯಮ್‌ ಪ್ರೈ.ಲಿ. ಕಣಿಯೂರು

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.