CONNECT WITH US  

ಪುತ್ತೂರಿನ ವರನಿಗೆ ಅಮೆರಿಕದ ವಧು!

ವಿಕ್ರಂ ಕಾಮತ್‌- ಮಾರ್ಗರೇಟ್‌ (ವಿಶಾಖಾ) ದಂಪತಿ.

ಪುತ್ತೂರು: ಹಿಂದೂ ಪದ್ಧತಿಯನ್ನು ಮೆಚ್ಚಿ ಅಮೆರಿಕದ ಯುವತಿಯೊಬ್ಬರು ಪುತ್ತೂರಿನ ಯುವಕನನ್ನು ವರಿಸಿದ್ದಾರೆ.
ಅಮೆರಿಕದ ವಧು ಕೆರೊಲಿನ್‌ ಮಾರ್ಗರೇಟ್‌ ರೋವ್ಲಿ (ವಿಶಾಖಾ) ಹಾಗೂ ಪುತ್ತೂರಿನ ವರ ವಿಕ್ರಮ್‌ ಕಾಮತ್‌ ಅವರ ಮದುವೆ ಪುತ್ತೂರಿನ ಕಲ್ಲಾರೆಯ ರಘುವಂಶ ನಿವಾಸದಲ್ಲಿ ರವಿವಾರ ನಡೆಯಿತು. 

ಅಮೆರಿಕದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ವಿಕ್ರಂ ಕಾಮತ್‌ ಹಾಗೂ ಮಾರ್ಗರೆಟ್‌ ನಾಲ್ಕು ವರ್ಷಗಳಿಂದ ಪರಿಚಿತರು. ಸ್ನೇಹ ಪ್ರೀತಿಗೆ ತಿರುಗಿ, ಈಗ ಸತಿ- ಪತಿಗಳಾಗಿದ್ದಾರೆ. ಇವರಿಬ್ಬರ ಹಂಬಲದಂತೆ ಹಿಂದೂ ಸಂಪ್ರದಾಯ ಪ್ರಕಾರ ಪುತ್ತೂರಿನಲ್ಲಿ ವಿವಾಹದ ಧಾರ್ಮಿಕ ಕಾರ್ಯಕ್ರಮವನ್ನು ವೇದಮೂರ್ತಿ ದಿವಾಕರ ಭಟ್‌ ನೆರವೇರಿಸಿಕೊಟ್ಟರು. ಮಾರ್ಗರೇಟ್‌ ಅವರ ಮನೆಯವರು ಅಮೆರಿಕದಲ್ಲೇ ಕುಳಿತು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮದುವೆ ಕಾರ್ಯಕ್ರಮವನ್ನು ವೀಕ್ಷಿಸಿದರು.

ಮಾರ್ಗರೇಟ್‌ ರೋವ್ಲಿಯ ಹೆಸರನ್ನು ವಿಶಾಖಾ ಎಂದು ಮರು ನಾಮಕರಣ ಮಾಡಲಾಗಿದೆ. ಪುತ್ತೂರಿನ ಗೋಪಿಕೃಷ್ಣ ಶೆಣೈ ಹಾಗೂ ರಾಧಿಕಾ ಶೆಣೈ ದಂಪತಿ ಮಾರ್ಗರೇಟ್‌ ಅವರನ್ನು ಮಗಳಾಗಿ ಸ್ವೀಕರಿಸಿದರು. ಧಾರ್ಮಿಕ ವಿಧಿವಿಧಾನದಂತೆ ಹೊಸ ಹೆಸರು ನಾಮಕರಣ ಮಾಡಿ, ಧಾರೆ ಎರೆದು ಕೊಟ್ಟರು. ವಿಕ್ರಂ ಕಾಮತ್‌ ಬಂಧು-ಮಿತ್ರರು ಶುಭ ಹಾರೈಸಿದರು.

Trending videos

Back to Top