CONNECT WITH US  

ದೇವಾಲಯಗಳಲ್ಲಿ ಬಿಸು ಪರ್ಬ ಆಚರಣೆ

ಚೆನ್ನಕೇಶವ ದೇವಾಲಯದಲ್ಲಿ ರವಿವಾರ ಶ್ರೀ ದೇವರಿಗೆ ವಿಷು ಕಣಿ ಅರ್ಪಿಸಲಾಯಿತು.

ಸುಳ್ಯ : ಸೌರ ಯುಗಾದಿಯ ಬಿಸು ಪರ್ಬದ ಪ್ರಯುಕ್ತ ತಾಲೂಕಿನ ನಾನಾ ದೇವಾಲಯಗಳಲ್ಲಿ ಕಣಿ ಇರಿಸಿ,
ವಿಶೇಷ ಪೂಜೆ ಸಲ್ಲಿಸಲಾಯಿತು.  ಆಯಾ ಮನೆಗಳಲ್ಲಿ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ, ವಿವಿಧ ಬಗೆಯ
ಧಾನ್ಯ, ಪ್ರಕೃತಿದತ್ತವಾಗಿ ದೊರೆಯುವ ಫಲವಸ್ತುಗಳನ್ನು ಇರಿಸಿ ಬಿಸು ಕಣಿ ವೀಕ್ಷಿಸಿ, ಗೌರವ ಸಲ್ಲಿಸಿದರು. ಮನೆಗಳಲ್ಲಿ ಕಿರಿಯರು ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯ ನಡೆಯಿತು. ಬಿಸು ಪರ್ಬದ ಪ್ರಯುಕ್ತ ಭಕ್ತರು ಹೊಸ ದಿರಿಸು ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. 


Trending videos

Back to Top