CONNECT WITH US  

ಎರಡು ವಾರಗಳಿಂದ ನೀರಿಲ್ಲ: ಆಕ್ರೋಶ 

ಐತ್ತೂರಿನ ಶಿವಾಜಿನಗರದಲ್ಲಿ ಸಮಸ್ಯೆ ಉಲ್ಬಣ

ಪಂಚಾಯತ್‌ ಮುಂದೆ ಜಮಾಯಿಸಿರುವ ಶಿವಾಜಿ ನಗರದ ನಿವಾಸಿಗಳು.

ಕಡಬ : ಕುಡಿಯುವ ನೀರು ಪೂರೈಕೆಯ ಕೊಳವೆಬಾವಿಗೆ ಅಳವಡಿಸಿದ ಪಂಪ್‌ ಕೆಟ್ಟು ಹೋಗಿ ಎರಡು ವಾರಗಳಿಂದ ಕುಡಿಯಲೂ ನೀರಿಲ್ಲದೆ ಕಂಗಾಲಾಗಿರುವ ಐತ್ತೂರು ಗ್ರಾಮದ ಶಿವಾಜಿ ನಗರದ ನಿವಾಸಿಗಳು ಪಂಚಾಯತ್‌ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಸಂಭವಿಸಿದೆ.

ಪಂಚಾಯತ್‌ ಕೊಳವೆ ಬಾಯಿಯ ಪಂಪ್‌ ಕೆಟ್ಟು ಹೋಗಿದ್ದು, ಬದಲಿ ಪಂಪ್‌ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆಗೊಳಿಸುವಂತೆ ಮನವಿ ಮಾಡಿದರೂ ಪಿಡಿಒ ಕ್ರಮ ಕೈಗೊಂಡಿಲ್ಲ. ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ವಾರ್ಡ್‌ ಸದಸ್ಯ

ಪಂಪ್‌ ದುರಸ್ತಿ
ಬದಲಿ ಪಂಪ್‌ ಲಭ್ಯವಿಲ್ಲದ ಕಾರಣ ಮತ್ತು ಕೆಟ್ಟುಹೋದ ಪಂಪ್‌ ದುರಸ್ತಿಯಾಗುವುದು ತಡವಾದುದರಿಂದ ಸಮಸ್ಯೆ ಎದುರಾಗಿತ್ತು. ಇದೀಗ ಪಂಪ್‌ ದುರಸ್ತಿಯಾಗಿ ಬಂದಿದ್ದು, ಕೊಳವೆಬಾವಿಗೆ ಇಳಿಸಲಾಗಿದೆ. ಸಮಸ್ಯೆ ಬಗೆಹರಿದಿದೆ ಎಂದು ಪಿಡಿಒ ವಿಲ್ಫ್ರೆಡ್  ಲಾರೆನ್ಸ್‌ ರೋಡ್ರಿಗಸ್‌ ತಿಳಿಸಿದ್ದಾರೆ.


Trending videos

Back to Top