ಮೈರ: ಕಾರುಗಳೆರಡು ಮುಖಾಮುಖಿ ಢಿಕ್ಕಿ, ಗಾಯ
Team Udayavani, May 15, 2018, 12:56 PM IST
ಕೇಪು : ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ, ಕೇಪು ಗ್ರಾಮದ ಮೈರದಲ್ಲಿ ಎರಡು ಕಾರುಗಳ ನಡುವೆ
ಮುಖಾಮುಖಿ ಢಿಕ್ಕಿಯಾಗಿ, ಓರ್ವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ವಿಟ್ಲದಿಂದ ಅಡ್ಯನಡ್ಕಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ವಿಟ್ಲಕ್ಕೆ ಆಗಮಿಸುತ್ತಿದ್ದ ರಿಟ್ಜ್ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ. ಅಗಲ ಕಿರಿದಾದ ರಸ್ತೆ ಮತ್ತು ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಇದು ಅಂತಾರಾಜ್ಯ ಹೆದ್ದಾರಿಯಾಗಿದ್ದರೂ ಮೈರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಇಲ್ಲಿ ಈ ಹಿಂದೆ ಬೈಕ್ ಅಪಘಾತ ಸಂಭವಿಸಿ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು ಮತ್ತು ಇದು ಆಗಾಗ ಅಪಘಾತ ಸಂಭವಿಸುವ ಜಾಗವಾಗಿದ್ದು, ಇಲಾಖೆ ಸೂಕ್ತ ಸೂಚನೆ ಫಲಕವನ್ನು ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.