ಕೊಡಗಿನ ನಿರಾಶ್ರಿತರಿಗೆ ನೆರವು


Team Udayavani, Aug 19, 2018, 10:41 AM IST

19-agust-4.jpg

ಪುತ್ತೂರು : ಪ್ರವಾಹದ ಕಾರಣದಿಂದ ನೆಲೆ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ನೆರವಾಗಲು ಪುತ್ತೂರಿನ ವಿವಿಧ ಸಂಘಟನೆಗಳು ಕೈಜೋಡಿಸಿದೆ. ಅಗತ್ಯ ಸಾಮಗ್ರಿ, ಆರ್ಥಿಕ ನೆರವನ್ನು ಶನಿವಾರ ಏಕಕಾಲದಲ್ಲಿ ಸಂಗ್ರಹಿಸಲು ಆರಂಭಿಸಿದೆ. ಸಾರ್ವಜನಿಕ ವಲಯದಿಂದಲೂ ನೆರವಿನ ಮಹಾಪೂರವೇ ಹರಿದುಬಂದಿವೆ. ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷದ್‌, ಬಜರಂಗದಳವು ಆಹಾರ ವಸ್ತು, ಬಟ್ಟೆ ಬರೆಗಳನ್ನು ಸಂಗ್ರಹಿಸಿ ರವಾನಿಸಲಿದೆ. ಅಕ್ಕಿ, ದಿನಸಿ ಸಾಮಗ್ರಿ, ಬಟ್ಟೆಬರೆಗಳನ್ನು ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾ ಲಯದಲ್ಲಿ ಸಂಗ್ರಹಿಸಿಡಲಾಗಿದೆ. ಪುತ್ತೂರು ನಗರವೂ ಸೇರಿದಂತೆ ವಿವಿಧ ಭಾಗಗಳಿಂದ ಸಂತ್ರಸ್ತರಿಗೆ ವಿತರಿಸಲು ಅಕ್ಕಿ, ದವಸಧಾನ್ಯ ಮತ್ತು ಬಟ್ಟೆಬರೆಗಳನ್ನು ಹಿಂದೂ ಬಾಂಧವರು ವಿಹಿಂಪ ಕಾರ್ಯಾಲಯಕ್ಕೆ ತಲುಪಿಸುತ್ತಿದ್ದಾರೆ. ಶುಕ್ರವಾರ ಸಂಜೆಯಿಂದ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಎಬಿವಿಪಿ ಪುತ್ತೂರು ಘಟಕದ ವತಿಯಿಂದ ನೆಹರೂನಗರ ವಿವೇಕಾನಂದ ಮಹಾವಿದ್ಯಾಲಯದ ಕೇಶವ ಸಂಕಲ್ಪ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪ್ರವಾಹ ಸಂತ್ರಸ್ತರಿಗೆ ನೀಡುವ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಎಬಿವಿಪಿ ಕಾರ್ಯಕರ್ತರು ನಿರತವಾಗಿದ್ದಾರೆ. ವಿದ್ಯಾರ್ಥಿ ಯುವ ಸಮೂಹ ಬಟ್ಟೆಬರೆಗಳನ್ನು ಸಂಗ್ರಹಿಸುವ ಮೂಲಕ ಮಾನವೀಯ ಸ್ಪಂದನ ವ್ಯಕ್ತಪಡಿಸಿದ್ದಾರೆ. 

ಪ್ರಥಮ ಕಂತು ರವಾನೆ
ಕೊಡಗು ಜಿಲ್ಲಾ ಪ್ರವಾಹ ಸಂತ್ರಸ್ತರಿಗೆ ಶನಿವಾರ ಬೆಳಗ್ಗೆ ಬಿಸ್ಕತ್‌, ಬ್ರೆಡ್‌ ಸಹಿತ ಅಗತ್ಯ ವಸ್ತುಗಳ ಪ್ರಥಮ ಕಂತನ್ನು ಪುತ್ತೂರು ಜಿಲ್ಲಾ ವಿಹಿಂಪ ಕಾರ್ಯಾಲಯದಿಂದ ರವಾನಿಸಲಾಯಿತು. ವಿಹಿಂಪ ಮತ್ತು ಬಜರಂಗದಳದ ತಂಡ ಕೊಡಗು ಪ್ರದೇಶಕ್ಕೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಅಗತ್ಯವಿರುವ ವಸ್ತುಗಳ ಕುರಿತು ಮಾಹಿತಿ ಸಂಗ್ರಹಿಸಿ ಶನಿವಾರ ಸಂಜೆ ಪುತ್ತೂರಿಗೆ ಮರಳಲಿದೆ. ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನಷ್ಟೇ ಇಲ್ಲಿಂದ ರವಾನಿಸಲಾಗುತ್ತದೆ. ಸಂಗ್ರಹಿತ ಇತರ ಸಾಮಗ್ರಿಗಳನ್ನು ಶನಿವಾರ ಸಂಜೆ ಲಾರಿಗಳಲ್ಲಿ ಕೊಡಗು ಜಿಲ್ಲೆಗೆ ಕಳುಹಿಸಲಾಗುತ್ತದೆ ಎಂದು ಮುಖಂಡರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ: ಕೊಡಗು ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದ ಆಸ್ತಿಪಾಸ್ತಿ ಹಾಗೂ ಮನೆಗಳನ್ನು ಕಳಕೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸುಬ್ರಹ್ಮಣ್ಯ ನಾಗರಿಕರು, ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ಸುಮಾರು ಮೂರು ಸಾವರದಷ್ಟು ಚಪಾತಿ ಸಿದ್ಧಪಡಿಸಿ ಶನಿವಾರ ಪರಿಹಾರ ಕೇಂದ್ರಕ್ಕೆ ರವಾನಿಸಲಾಯಿತು. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅರ್ಚಕರು, ರೋಟರಿಕ್ಲಬ್‌ ಸುಬ್ರಹ್ಮಣ್ಯ, ಇನ್ನರ್‌ ವೀಲ್‌ ಕ್ಲಬ್‌ ಸುಬ್ರಹ್ಮಣ್ಯ ಇದರ ಸದಸ್ಯರು, ಹಾಗೂ ಸ್ಥಳೀಯರು ನಾಗರಿಕರು ಸೇರಿ ಸುಮಾರು ಮೂರು ಸಾವಿರದಷ್ಟು ಚಪಾತಿಯನ್ನು ಎಸ್‌ಎಲ್‌ಆರ್‌ ವಸತಿಗ್ರಹದ ಬಳಿ ಸಿದ್ಧಪಡಿಸಿದರು. ಅರ್ಚಕ ಕೈಲಾಸ ಭಟ್‌ ಹಾಗೂ ಅಕ್ಷಯಧಾರ ವಸತಿಗೃಹದವರು ತಲಾ ಒಂದು ಕ್ವಿಂಟ್ವಾಲ್‌ನಷ್ಟು ಗೋಧಿ ಹಿಟ್ಟು ನೀಡಿದರು. ಉಳಿದಂತೆ ಸಂಘ ಸಂಸ್ಥೆಗಳು, ಸ್ಥಳೀಯರು ನೆರವು ನೀಡಿ ತಯಾರಿಕೆಯಲ್ಲಿ ಭಾಗವಹಿಸಿ ಸುಮಾರು ಮೂರು ಸಾವಿರದಷ್ಟು ಚಪಾತಿ ತಯಾರಿಸಿದರು. ಅವುಗಳನ್ನು ನೆರೆ ಸಂತ್ರಸ್ತ ಕೇಂದ್ರಕ್ಕೆ ತಲುಪಿಸಲಾಯಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.