ಬಸ್‌ ಪಾಸ್‌ ರದ್ದು , ಹಣವಿಲ್ಲ , ಕೆಲಸಕ್ಕೂ ಬರ

Team Udayavani, Nov 3, 2018, 9:04 AM IST

jodupala.jpg

ಅರಂತೋಡು: ಜೋಡುಪಾಲ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ತುಂಬುತ್ತಿದ್ದರೂ ನಿರಾಶ್ರಿತರ ಸಂಕಷ್ಟ ದೂರವಾಗಿಲ್ಲ. ಅವರ ಪುನರ್ವಸತಿ ಸಹಿತ ಮೂಲ ಸೌಕರ್ಯ ಗಳಿಗೆ ಸರಕಾರ ಅಧಿಕೃತವಾಗಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಪರಿಹಾರ ಕೇಂದ್ರಗಳಲ್ಲಿ ವಾಸವಿದ್ದ ಕೆಲವರು ಗುಳೆ ಹೊರಟಿದ್ದರೆ ಇನ್ನು ಕೆಲವರು ನೆಮ್ಮದಿಯಿಲ್ಲದ ಬದುಕು ಕಳೆಯುತ್ತಿದ್ದಾರೆ.

ಕೊಡಗು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ 24 ಕುಟುಂಬಗಳು ವಾಸವಿದ್ದು, ಒಟ್ಟು 73 ಮಂದಿ ಇದ್ದಾರೆ. ಇವರಲ್ಲಿ 13 ಮಂದಿ ವಿದ್ಯಾರ್ಥಿಗಳು. ದಕ್ಷಿಣ ಕನ್ನಡದ ಸಂಪಾಜೆ ಪರಿಹಾರ ಕೇಂದ್ರದಲ್ಲಿ 11 ಕುಟುಂಬ ಗಳ 42 ಜನರಿದ್ದಾರೆ. ಇವರಲ್ಲಿ 9 ವಿದ್ಯಾರ್ಥಿಗಳು. 80 ವರ್ಷ ವಯಸ್ಸಿನ ವೃದ್ಧೆಯೊಬ್ಬರಿದ್ದು, ಅನಾರೋಗ್ಯದಿಂದಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಸಚಿವ ಯು.ಟಿ. ಖಾದರ್‌ ಅವರು ಪರಿಹಾರ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂತ್ರಸ್ತರು ತಮಗೆ ಉಚಿತ ಬಸ್‌ಪಾಸ್‌ ನೀಡಬೇಕೆಂದು ಒತ್ತಾಯಿಸಿದ್ದರು. ಸಚಿವರು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಂಚರಿಸಲು ಉಚಿತ ಪಾಸ್‌ ವ್ಯವಸ್ಥೆ ಮಾಡಿದ್ದರು. 1 ತಿಂಗಳು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾ ಣಿಸಿದ್ದು, ಆ ಬಳಿಕ ಪಾಸ್‌ ನವೀಕರಿಸಿಲ್ಲ. ವಿದ್ಯಾರ್ಥಿಗಳಿಗೆ ನೀಡಿದ್ದ ಪಾಸ್‌ ನ.4ಕ್ಕೆ ಕೊನೆಗೊಳ್ಳಲಿದ್ದು, ಅವನ್ನೂ ನವೀಕರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದ ರಿಂದಾಗಿ ಸಂತ್ರಸ್ತರು ತಮ್ಮ ಭೂಮಿ ಇರುವ ಜೋಡುಪಾಲ ಮತ್ತು ಮೊಣ್ಣಂಗೇರಿಗೆ ಹೋಗಿಬರಲು 40 ರೂ. ನೀಡಬೇಕಾಗುತ್ತದೆ. ನ.4ರ ಬಳಿಕ ವಿದ್ಯಾರ್ಥಿಗಳೂ ಇಷ್ಟೇ ಮೊತ್ತ ತೆರಬೇಕಾಗುತ್ತದೆ. 

ಸರಕಾರ ನೀಡಿದ ಹಣ ಎಷ್ಟು ?
ಪ್ರಥಮ ಅವಧಿಯಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ರೂ.3,800 ನೀಡಲಾಗಿದೆ. ಸಂಪೂರ್ಣ ಮನೆ ಕಳಕೊಂಡ ಕುಟುಂಬಕ್ಕೆ ತಲಾ 1,01,900 ರೂ. ನೀಡ ಲಾಗಿದೆ. ಹಾನಿಗೊಳಗಾದ ಮನೆ ಗಳಿಗೆ ಹಾನಿಗೆ ಅನುಸಾರ ಪರಿಹಾರ ನೀಡಲಾಗಿದೆ. ಇದು ಇನ್ನೂ ಕೆಲವರಿಗೆ ದೊರೆತಿಲ್ಲ. ಮನೆ ಮತ್ತು ಜಮೀನಿನ ಬಗ್ಗೆ ದಾಖಲೆ ಇಲ್ಲದವರಿಗೆ ಪರಿಹಾರ ದೊರೆಯುತ್ತದೆಯೇ ಇಲ್ಲವೇ ಎಂಬ ಗೊಂದಲ ಇದೆ.  ನಿರಾಶ್ರಿತರಿಗೆ ಪರಿಹಾರ ಕೇಂದ್ರ ಗಳಲ್ಲಿ ಆಹಾರ ಸಮಸ್ಯೆ ಎದುರಾಗಿಲ್ಲ.

ಜಾಗ ಗುರುತು
ನಿರಾಶ್ರಿತರಿಗೆ ಮನೆ ಕಟ್ಟಲು ಈಗಾಗಲೇ ಕೊಡಗು ಸಂಪಾಜೆ ಶಾಲೆ ಬಳಿ ಒಂದೂವರೆ ಎಕರೆ ಮತ್ತು ಮದೆನಾಡು ಸಮೀಪದ ಗೋಳಿಕಟ್ಟೆ ಎಂಬಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.

ನಮಗೆ ಸಂಪಾಜೆ ಭಾಗದಲ್ಲಿ ಮನೆ ಕಟ್ಟಲು ಜಾಗ ನೀಡಲಿ. ನಾವು ಸಂಪಾಜೆ ಭಾಗವನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ಸರಕಾರ ನಮಗೆ ಯಾವಾಗ, ಎಲ್ಲಿ ಮನೆ ಕಟ್ಟಿ ಜಾಗ ನೀಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ ನಾವು ಮಾನಸಿಕವಾಗಿ ಕೊರಗಬೇಕಾಗು ತ್ತದೆ. ಉಚಿತವಾಗಿ ನೀಡಿದ್ದ ಬಸ್‌ ಪಾಸ್‌ ರದ್ದುಗೊಳಿಸಿದ್ದು, ಇದನ್ನು ನವೀಕರಿಸಬೇಕು.
ರಾಮಕೃಷ್ಣ ಸಂತ್ರಸ್ತ, ಜೋಡುಪಾಲ

ಪ್ರಕೃತಿ ವಿಕೋಪದಿಂದಾಗಿ ನಾವು ಬಹಳ ಸಂಕಷ್ಟಕ್ಕೆ ಒಳಗಾಗಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನಿರಾಶ್ರಿತರಾದ ಪ್ರತೀ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಜೀವನ ನಡೆಸುವುದು ತುಂಬಾ ಕಷ್ಟ ಆಗಬಹುದು.
 ಶಿಲ್ಪಾ  ಜೋಡುಪಾಲ, ಅಂಗವಿಕಲ ಬಿಎಡ್‌ ಪದವೀಧರೆ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.