CONNECT WITH US  

ಮುಸ್ಲಿಂ ಕುಟುಂಬಕ್ಕೆ ಕುಲಾಲ ಜಾತಿ ಪತ್ರ!

ಜಾತಿ, ಆದಾಯ ಪ್ರಮಾಣ ಪತ್ರದ ಪ್ರತಿ.

ಬೆಳ್ತಂಗಡಿ : ವಿದ್ಯಾಸಂಸ್ಥೆಗಳಲ್ಲಿ ಶುಲ್ಕ ವಿನಾಯಿತಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆದಾಯ, ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಮುಸ್ಲಿಂ ಕುಟುಂಬಕ್ಕೆ ತಾಲೂಕು ಕಚೇರಿಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರದಲ್ಲಿ ಕುಲಾಲ ಜಾತಿಗೆ ಸೇರಿದವರೆಂದು ದೃಢೀಕರಣ ನೀಡಲಾಗಿದೆ.

ಲಾೖಲ ಗ್ರಾಮದ ಟಿ.ಬಿ. ಕ್ರಾಸ್‌ ನಿವಾಸಿ ಮುಸ್ಲಿಂ ಕುಟುಂಬಕ್ಕೆ 2017ರಲ್ಲಿ ತಹಶೀಲ್ದಾರ್‌ ಮೊಹಮ್ಮದ್‌ ಇಸಾಕ್‌ ಅವರು ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಗೆ ಈ ಪ್ರಮಾಣ ಪತ್ರ ನೀಡಲಾಗಿದ್ದು, ತಿದ್ದುಪಡಿಗಾಗಿ ಅಲೆದಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಶುಕ್ರವಾರ ಈ ಕುರಿತು ತಾ.ಪಂ. ಸದಸ್ಯ ಸುಧಾಕರ್‌ ಅವರು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಕ್ಕೆ ತಂದರು. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಪ್ರಸ್ತುತ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆ. ಆದರೆ ಅಧಿಕಾರಿಗಳು ಈ ಕುರಿತು ಗಮನಹರಿಸದೇ ಇರುವುದು ವಿಪರ್ಯಾಸವೇ ಸರಿ.


Trending videos

Back to Top