ಸವಣೂರು: ಈಡೇರದ ಹೋಬಳಿ ಕೇಂದ್ರ ಬೇಡಿಕೆ 

Team Udayavani, Sep 9, 2018, 10:24 AM IST

9-sepctember-3.jpg

ಸವಣೂರು: ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇಲ್ಲಿನ ವಿಶೇಷತೆ ಎಂದರೆ ತಾಲೂಕು ಪುತ್ತೂರು, ವಿಧಾನಸಭೆ ಕ್ಷೇತ್ರ ಸುಳ್ಯ, ಕಂದಾಯ ಹೋಬಳಿ ಕಡಬ ಹಾಗೂ ಪೊಲೀಸ್‌ ಠಾಣೆ ಬೆಳ್ಳಾರೆ – ಹೀಗೆ ಸವಣೂರಿಗೆ ವಿವಿಧ ರೀತಿಗಳ ಸಂಪರ್ಕಗಳಿವೆ.

ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟಹಳ್ಳಿ ವೇಗವಾಗಿ ಬೆಳೆಯುತ್ತಿದೆ. ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಂದಾಯ ಇಲಾಖೆ ಕಚೇರಿ, ಗ್ರಾ.ಪಂ., ವಸತಿ ಸಮುಚ್ಚಯ, ಗ್ರಾ.ಪಂ., ಪೆಟ್ರೋಲ್‌ ಪಂಪ್‌, ವಾಣಿಜ್ಯ ಸಂಕೀರ್ಣ, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಸಂಘಗಳು, ಸಭಾಭವನ, ವಿದ್ಯುತ್‌ ಸಬ್‌ ಸ್ಟೇಶನ್‌ ಮೊದಲಾದವು ಬೆಳವಣಿಗೆಗೆ ಪೂರಕವಾಗಿ ಇಲ್ಲಿವೆ.

ಕಡಬ ದೂರ
ಪ್ರಸ್ತುತ ಈ ಭಾಗದ ಜನರಿಗೆ ಕಂದಾಯ ಹೋಬಳಿ ಕಡಬ. ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ. ಕಂದಾಯ ಇಲಾಖೆಯ ಕೆಲಸಗಳು ನಿಧಾನಗತಿಯಲ್ಲೇ ನಡೆಯುತ್ತಿರುವುದರಿಂದ ಒಂದೇ ಕೆಲಸಕ್ಕೆ ಹಲವು ಬಾರಿ ಅಡ್ಡಾಡಬೇಕಾದ ಅನಿವಾರ್ಯತೆ. ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ (ನಾಡ ಕಚೇರಿ) ತೆರೆಯುವುದು ಆವಶ್ಯಕ. ಸಂಬಂಧಿಸಿದವರು ಈ ಕುರಿತು ಗಮನಹರಿಸಬೇಕಿದೆ.

ಗ್ರಾ.ಪಂ.ಗಳಲ್ಲಿ ಪಹಣಿ ಸಿಗುತ್ತಿಲ್ಲ
ಸಾರ್ವಜನಿಕರಿಗೆ ಎಲ್ಲ ಸೇವೆಗಳನ್ನು ಒಂದೇ ಕಡೆ ನೀಡಬೇಕೆಂಬ ಸರಕಾರದ ಉದ್ದೇಶದಿಂದ ಪಹಣಿ ಪತ್ರ, ಸಂಧ್ಯಾ ಸುರಕ್ಷಾ, ಸರಕಾರದ ವಿವಿಧ ಪಿಂಚಣಿ ಮೊದಲಾದ ಯೋಜನೆಗಳಿಗೆ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಆರಂಭಿಸುವಂತೆ ಸೂಚಿಸಲಾಗಿತ್ತು. ಆದರೆ ಈಗ ಗ್ರಾ.ಪಂ.ಗಳಲ್ಲಿ ಪಹಣಿ ಪತ್ರವೇ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಪುತ್ತೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಕಡಬ ತಾಲೂಕಿಗೆ ಸೇರ್ಪಡೆ: ವಿರೋಧ
ಸರಕಾರ ಘೋಷಣೆ ಮಾಡಿರುವ ಹೊಸ ತಾಲೂಕು ಕಡಬಕ್ಕೆ ಈ ಭಾಗದ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾಯಿಮಣ, ಪಾಲ್ತಾಡಿ, ಸವಣೂರು, ಪುಣ್ಚಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಸೇರ್ಪಡೆ ವಿಚಾರ ಜನರಲ್ಲಿ ಆತಂಕಕ್ಕೆಡೆ ಮಾಡಿದೆ. ಈ ಕುರಿತು ಈ ಮೂರು ಗ್ರಾ.ಪಂ.ಗಳಿಂದ ಆಕ್ಷೇಪಣೆ ಸಲ್ಲಿಸಲಾಗಿದ್ದರೂ ಈವರೆಗೂ ಯಾವುದೇ ಪ್ರತಿಕ್ರಿಯೆ ಸರಕಾರ ಹಾಗೂ ಕಂದಾಯ ಇಲಾಖೆಯಿಂದ ಬಂದಿಲ್ಲ. ಅತ್ತ ಕಡಬ ತಾಲೂಕು ಕೇಂದ್ರ ಉದ್ಘಾಟನೆಯೂ ಮುಂದಕ್ಕೆ ಹೋಗುತ್ತಿದೆ. ಒಟ್ಟಿನಲ್ಲಿ ಈ ಭಾಗದ ಜನತೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಈಗಿರುವಂತೆಯೇ ಈ ಮೂರು ಗ್ರಾ.ಪಂ.ಗಳ ವ್ಯಾಪ್ತಿಯ ಗ್ರಾಮಗಳನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿ, ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬುದು ಈ ಭಾಗದ ಜನರ ಆಶಯ. ಹೋಬಳಿ ಕೇಂದ್ರ ರಚನೆಗೆ ಅವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ.ಪಂ.ನ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಲಾಗಿತ್ತು. ಈ ಭಾಗದ ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಯಾದರೆ ಸವಣೂರು ಅಥವಾ ಕಾಣಿಯೂರಿನಲ್ಲಿ ಹೋಬಳಿ ಕೇಂದ್ರ ತೆರೆಯುವ ಆವಶ್ಯಕತೆ ಇದೆ.

ಆಲಂಕಾರು ಹೋಬಳಿ ಕೇಂದ್ರ?
ಈಗಿನ ಮಾಹಿತಿಯಂತೆ ಕಾಣಿಯೂರು, ಸವಣೂರು, ಬೆಳಂದೂರು ಗ್ರಾ.ಪಂ.ಗಳ ವ್ಯಾಪ್ತಿಯ ಕಂದಾಯ ಗ್ರಾಮಗಳನ್ನೂ ಸೇರಿಸಿಕೊಂಡು ಆಲಂಕಾರಿನಲ್ಲಿ ಹೋಬಳಿ ಕೇಂದ್ರ ಆಗಲಿದೆ ಎಂಬ ಮಾಹಿತಿ ಇದ್ದು, ಆದರೆ ಯಾವುದೇ ಅಧಿಕೃತ ಮಾಹಿತಿ ಇಲ್ಲ

ಸವಣೂರು ಹೋಬಳಿ ಏಕೆ ಬೇಕು?
ಸವಣೂರು ಹೋಬಳಿ ಕೇಂದ್ರವಾದರೆ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾಯಿಮಣ, ಪಾಲ್ತಾಡಿ, ಸವಣೂರು,ಪುಣ್ಚಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಸವಣೂರಿನಲ್ಲಿ ಹೋಬಳಿ ಕೇಂದ್ರವಾದರೆ ಇದಕ್ಕೆ ಹೊಂದಿಕೊಂಡ 9 ಗ್ರಾಮಗಳಿಗೆ ಮತ್ತು ಇತರ 4 ಗ್ರಾಮಗಳಿಗೆ ಪರೋಕ್ಷವಾಗಿ ಕೇಂದ್ರವಾಗುತ್ತದೆ.

ಪ್ರಸ್ತಾವನೆ ಇಲ್ಲ
ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿಗೆ ಸೇರ್ಪಡೆಯಾಗಿದ್ದು, ಕಡಬ ಹೋಬಳಿ ಕೇಂದ್ರಕ್ಕೆ ಒಳಪಟ್ಟ ಎಲ್ಲ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿನಲ್ಲೇ ಇರಲಿವೆ. ಹೊಸ ಹೋಬಳಿ ರಚನೆ ಕುರಿತಂತೆ ಈ ವರೆಗೆ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ.
– ಜಾನ್‌ ಪ್ರಕಾಶ್‌ ರೋಡ್ರಿಗಸ್‌
ವಿಶೇಷ ತಹಶೀಲ್ದಾರರು, ಕಡಬ

 ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.