CONNECT WITH US  

ಹನುಮಗಿರಿ ಕ್ಷೇತ್ರ: ಕಾಣಿಯೂರು ಶ್ರೀ ಭೇಟಿ

ಹನುಮಗಿರಿಯ ಕೋದಂಡರಾಮ ಕ್ಷೇತ್ರಕ್ಕೆ ಕಾಣಿಯೂರು. 

ಈಶ್ವರಮಂಗಲ: ಹನುಮಗಿರಿ ಶ್ರಿ ಪಂಚಮುಖೀ ಆಂಜನೇಯ ಹಾಗೂ ಕೋದಂಡರಾಮ ಕ್ಷೇತ್ರಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಂಡೆಯ ಮೇಲೆ ಕೆತ್ತಿರುವ ರಾಮಾಯಾಣ ಮಾನಸೋದ್ಯಾನವನ ಕಲಾಕೃತಿ, ಹನುಮ ಚರಿತ್ರೆ, ಮಾಂಡೋವಿ ಕಲಾ ವಿಹಾರವನ್ನು ವೀಕ್ಷಿಸಿ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಸ್ವಾಗತಿಸಿದರು. ಧರ್ಮದರ್ಶಿ ಶಿವರಾಮ ಪಿ., ನ್ಯಾಯವಾದಿ ಮಹೇಶ್‌ ಕಜೆ, ಪ್ರೀತಂ ಪುತ್ತೂರಾಯ, ಕ್ಷೇತ್ರದ ಪ್ರಧಾನ ಆರ್ಚಕ ನಾರಾಯಣ ಸಭಾಹಿತ್‌, ಪ್ರಸನ್ನ ಹೆಗ್ಡೆ, ಸಿಬಂದಿ ರಾಕೇಶ್‌ ಭಂಡಾರಿ, ಯತೀಶ್‌ ಕುಮಾರ್‌, ಪ್ರಸನ್ನ ಆಚಾರ್ಯ, ಸುನೀಲ್‌ ಗೌಡ ಉಪಸ್ಥಿತರಿದ್ದರು. 


Trending videos

Back to Top