CONNECT WITH US  

ಧರ್ಮಸ್ಥಳ: ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯ ಭಗವಾನ್‌ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿ
ಯಲ್ಲಿ ಚತುರ್ಥ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಪೂರ್ವ ಸಿದ್ಧತೆಗಳ ಕುರಿತ ಸಮಾಲೋಚನೆ ಸಭೆ ಸೋಮವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆಯಿತು.

ಡಾ| ಹೆಗ್ಗಡೆ ಅವರು ಮಾತನಾಡಿ, ಪ್ರಸ್ತುತ ಶ್ರವಣಬೆಳಗೊಳದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ
ರುವ ವರ್ಧಮಾನ ಸಾಗರ್‌ಜೀ ಮುನಿ ಮಹಾರಾಜರು ಹಾಗೂ ಪುಷ್ಪದಂತ ಸಾಗರ ಮುನಿಮಹಾರಾಜರ ಉಪಸ್ಥಿತಿ
ಯಲ್ಲಿ ರಾಜ್ಯ ಮಟ್ಟದಲ್ಲಿ ಸರಳವಾಗಿ ಮಸ್ತಕಾಭಿಷೇಕ ನಡೆಸಲು ಉದ್ದೇಶಿಸಿದ್ದು, ಉತ್ತರ ಭಾರತದವ
ರನ್ನೂ ಆಮಂತ್ರಿಸಲಾಗುವುದು. ರಾಜ್ಯದ ಎಲ್ಲ ಜೈನಮಠಗಳ ಭಟ್ಟಾರಕರನ್ನೂ ಆಹ್ವಾನಿಸಲಾಗುತ್ತದೆ. ಪಂಚ
ಕಲ್ಯಾಣದ ಬಳಿಕ ಮೂರು ದಿನ ನಿರಂತರ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಮುಂದೆ ಪ್ರತಿ ವಾರ ಶನಿ
ವಾರ ಮತ್ತು ರವಿವಾರ ಮಸ್ತಕಾಭಿಷೇಕ ನಡೆಯುತ್ತದೆ ಎಂದರು.

ಕಾರ್ಕಳದ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರು ಭಾರತೀಯ ಜೈನ್‌ ಮಿಲನ್‌ ಉಪಾಧ್ಯಕ್ಷ ಎಂ.ಎಸ್‌. ಮೃತ್ಯುಂಜಯ, ಹುಬ್ಬಳ್ಳಿಯ ದತ್ತಾ ದೋರ್ಲೆ, ಬೆಳಗಾವಿಯ ರಾಜು ದೊಡ್ಡಣ್ಣವರ್‌, ಪ್ರೇಮ್‌ಕುಮಾರ್‌ ಜೈನ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಡಾ| ಸಿ.ಕೆ. ಬಲ್ಲಾಳ್‌, ಕರ್ನಾಟಕ ಜೈನ ಅಸೋಸಿಯೇಶನ್‌ ಉಪಾಧ್ಯಕ್ಷ ರಾಜೇಂದ್ರಕುಮಾರ್‌, ದ.ಕ. ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್‌. ಹೆಗ್ಡೆ ಅಭಿಪ್ರಾಯ ತಿಳಿಸಿ, ಪೂರ್ಣ ಸಹಕಾರದ ಭರವಸೆ ನೀಡಿದರು.

ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕರಾಗಿ ಡಿ. ಸುರೇಂದ್ರ ಕುಮಾರ್‌, ಸಂಚಾಲಕರಾಗಿ ಡಿ. ಹಷೇìಂದ್ರ ಕುಮಾರ್‌ ಹಾಗೂ ಕೆ. ಮಹಾವೀರ ಅಜ್ರಿ ಮತ್ತು ಎ.ವಿ. ಶೆಟ್ಟಿ ಅವರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರಕುಮಾರ್‌, ಡಿ. ರಾಜೇಂದ್ರ ಕುಮಾರ್‌, ಡಾ| ಬಿ. ಯಶೋವರ್ಮ, ಡಾ| ಟಿ. ನಾಗಕುಮಾರ ಶೆಟ್ಟಿ, ಶ್ರೇಯಸ್‌ ಡಿ., ಆನಡ್ಕ ದಿನೇಶ್‌ ಕುಮಾರ್‌, ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಉಪಸ್ಥಿತರಿದ್ದರು.
ಪ್ರೊ| ಎಸ್‌. ಪ್ರಭಾಕರ್‌ ಸ್ವಾಗತಿಸಿದರು. ಕೆ. ಮಹಾವೀರ ಅಜ್ರಿ ವಂದಿಸಿದರು. ಸುಭಾಶ್ಚಂದ್ರ ಜೈನ್‌ ಕಾರ್ಯಕ್ರಮ ನಿರ್ವಹಿಸಿದರು.


Trending videos

Back to Top