ಐದು ಮಕ್ಕಳ ಸಂಸಾರಕ್ಕೆ ಟಾರ್ಪಲ್‌ ಜೋಪಡಿಯೇ ಆಸರೆ 


Team Udayavani, Sep 12, 2018, 11:13 AM IST

12-sepctember-6.jpg

ನೆಲ್ಯಾಡಿ: ಇಪ್ಪತ್ತು ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಮರದ ತೋಳಿಗೆ ಹೊದೆಸಿದ ಟಾರ್ಪಲ್‌ ನ ಅಡಿಯಲ್ಲಿ ಐವರು ಮಕ್ಕಳೊಂದಿಗೆ ನರಕಸದೃಶವಾಗಿ ಜೀವನ ನಡೆಸುತ್ತಿದೆ. ಮನೆ ಕೊಡಿಸುವುದಾಗಿ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆ ನಂಬಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.

ಕೊಕ್ರಾಡಿ ಗ್ರಾಮದ ಬಡ ಕುಟುಂಬವೊಂದರ ಕಣ್ಣೀರ ಕಥೆ ಇದು. ಮೂಡುಬೈಲು ಎಂಬಲ್ಲಿ ಡಾಮರು ರಸ್ತೆಯಿಂದ ಅನತಿ ದೂರದಲ್ಲಿ ಮುದರ ಎಂಬವರು ತಮ್ಮ ಪತ್ನಿ ಗೀತಾ ಹಾಗೂ ಐವರು ಮಕ್ಕಳೊಂದಿಗೆ ಟಾರ್ಪಲ್‌ ಅಳವಡಿಸಿದ ಗುಡಿಸಲಿನಲ್ಲಿ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಆಶ್ರಯ ಪಡೆದಿದ್ದಾರೆ. ಐವರು ಮಕ್ಕಳು ಕ್ರಮವಾಗಿ 6, 4, 2ನೇ ತರಗತಿ ಕಲಿಯುತ್ತಿದ್ದರೆ, ಉಳಿದಿಬ್ಬರು ಅಂಗನವಾಡಿಗೆ ತೆರಳುತ್ತಿದ್ದಾರೆ. ಹೆಸರಿಗೆ ಒಂದಿಷ್ಟು ಜಮೀನಿದ್ದರೂ ಮನೆ ಕಟ್ಟುವ ಶಕ್ತಿ ಇವರಿಗಿಲ್ಲ. ಕೂಲಿ-ನಾಲಿ ಮಾಡಿ ಬರುವ ಹಣ ಸಂಸಾರ ನಿರ್ವಹಣೆಗೂ ಸಾಲುತ್ತಿಲ್ಲ. ವಿದ್ಯಾಭ್ಯಾಸವಿಲ್ಲದ ಕಾರಣಕ್ಕೆ ಸರಕಾರದ ಅನುದಾನಗಳ ಮಾಹಿತಿಯೂ ಇಲ್ಲ. ಗ್ರಾ.ಪಂ.ಗೆ ಹಲವು ಸಲ ಭೇಟಿ ನೀಡಿದ್ದರೂ ಮನೆ ನಿರ್ಮಾಣದ ಭರವಸೆ ಮಾತ್ರ ಸಿಕ್ಕಿದೆ. ಈ ಬಾರಿ ಕೌಕ್ರಾಡಿ ಚರ್ಚ್‌ ಒಂದರ ಶಿಕ್ಷಕಿ ನೀಡಿರುವ ಟಾರ್ಪಲ್‌, ಅವರನ್ನು ಮಳೆ ಹಾಗೂ ಬಿಸಿಲಿನಿಂದ ರಕ್ಷಿಸುತ್ತಿದೆ.

ಪಕ್ಕದ ಮನೆಯಲ್ಲಿ ಆಶ್ರಯ
ಗಾಳಿ, ಮಳೆ ಬಂದರೆ ನಿಲ್ಲಲೂ ಸಾಧ್ಯವಿಲ್ಲದ ಈ ಬಡ ಕುಟುಂಬ ಅಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿ ಆಶ್ರಯ ಪಡೆಯುತ್ತಿದೆ. ಸರಕಾರದ ಅನುದಾನಗಳನ್ನು ಕೊಡಿಸುವವರು ನಮಗೆ ಯಾರೂ ಇಲ್ಲ ಎಂದು ಮುದರ ನೊಂದು ನುಡಿಯುತ್ತಾರೆ. ಮೂಡುಬೈಲು ಪರಿಸರದಲ್ಲಿ ಇನ್ನೂ ಕೆಲವು ಕುಟುಂಬಗಳು ಜೋಪಡಿಗಳಲ್ಲೇ ವಾಸಿಸುತ್ತಿವೆ. ತಿಮ್ಮಪ್ಪ, ಪುಷ್ಪಾ ಹಾಗೂ ಮೀಯಾಳ ಸಮೀಪ ಚೀಂಕ್ರ ಎಂಬವರ ಕುಟುಂಬಗಳೂ ಜೋಪಡಿಗಳಲ್ಲೇ ಇದ್ದು, ಕೌಕ್ರಾಡಿ ಗ್ರಾ.ಪಂ. ಆಡಳಿತ ಇನ್ನಾದರೂ ಇವರಿಗೆ ಸೌಲಭ್ಯ ತಲುಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ನಾನೇ ನಿಂತು ಮಾಡಿಸುವೆ
ಕಳೆದ ವರ್ಷ ಈ ಬಗ್ಗೆ ಮಾಹಿತಿ ತಿಳಿದು ಪಿಡಿಒ ಅವರೊಂದಿಗೆ ನಾನೇ ಖುದ್ದಾಗಿ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದು, ಈ ಕುಟುಂಬಗಳ ಮುಖ್ಯಸ್ಥರನ್ನು ಗ್ರಾ.ಪಂ.ಗೆ ಬರುವಂತೆ ಹೇಳಿದ್ದೆ. ಆದರೆ ಯಾರೂ ಬಾರದೇ ಇದ್ದ ಕಾರಣ ಸಮಸ್ಯೆ ಹಾಗೆಯೇ ಉಳಿದಿದೆ. ಈ ಬಾರಿ ಗ್ರಾ.ಪಂ. ವತಿಯಿಂದ ಮನೆ ನಿರ್ಮಿಸಿಕೊಡುವ ಕುರಿತು ನಾನೇ ಸ್ವತಃ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳುತ್ತೇನೆ.
 - ಎಂ.ಕೆ. ಇಬ್ರಾಹಿಂ, ಅಧ್ಯಕ್ಷರು, ಕೌಕ್ರಾಡಿ ಗ್ರಾ.ಪಂ.

ಗುರುಮೂರ್ತಿ ಎಸ್‌. ಕೊಕ್ಕಡ

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.