ಐದು ಮಕ್ಕಳ ಸಂಸಾರಕ್ಕೆ ಟಾರ್ಪಲ್‌ ಜೋಪಡಿಯೇ ಆಸರೆ

Team Udayavani, Sep 13, 2018, 1:50 AM IST

kutumba-12-9.jpg

ಕೊಕ್ಕಡ: ಇಪ್ಪತ್ತು ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಮರದ ತೋಳಿಗೆ ಹೊದೆಸಿದ ಟಾರ್ಪಲ್‌ನ ಅಡಿಯಲ್ಲಿ ಐವರು ಮಕ್ಕಳೊಂದಿಗೆ ನರಕಸದೃಶವಾಗಿ ಜೀವನ ನಡೆಸುತ್ತಿದೆ. ಮನೆ ಕೊಡಿಸುವುದಾಗಿ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆ ನಂಬಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಕೌಕ್ರಾಡಿ ಗ್ರಾಮದ ಬಡ ಕುಟುಂಬವೊಂದರ ಕಣ್ಣೀರ ಕಥೆ ಇದು. ಮೂಡುಬೈಲು ಎಂಬಲ್ಲಿ ಡಾಮರು ರಸ್ತೆಯಿಂದ ಅನತಿ ದೂರದಲ್ಲಿ ಮುದರ ಎಂಬವರು ತಮ್ಮ ಪತ್ನಿ ಗೀತಾ ಹಾಗೂ ಐವರು ಮಕ್ಕಳೊಂದಿಗೆ ಟಾರ್ಪಲ್‌ ಅಳವಡಿಸಿದ ಗುಡಿಸಲಿನಲ್ಲಿ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಆಶ್ರಯ ಪಡೆದಿದ್ದಾರೆ. ಐವರು ಮಕ್ಕಳು ಕ್ರಮವಾಗಿ 6, 4, 2ನೇ ತರಗತಿ ಕಲಿಯುತ್ತಿದ್ದರೆ, ಉಳಿದಿಬ್ಬರು ಅಂಗನವಾಡಿಗೆ ತೆರಳುತ್ತಿದ್ದಾರೆ. ಹೆಸರಿಗೆ ಒಂದಿಷ್ಟು ಜಮೀನಿದ್ದರೂ ಮನೆ ಕಟ್ಟುವ ಶಕ್ತಿ ಇವರಿಗಿಲ್ಲ. ಕೂಲಿ-ನಾಲಿ ಮಾಡಿ ಬರುವ ಹಣ ಸಂಸಾರ ನಿರ್ವಹಣೆಗೂ ಸಾಲುತ್ತಿಲ್ಲ. ವಿದ್ಯಾಭ್ಯಾಸವಿಲ್ಲದ ಕಾರಣಕ್ಕೆ ಸರಕಾರದ ಅನುದಾನಗಳ ಮಾಹಿತಿಯೂ ಇಲ್ಲ. ಗ್ರಾಮ ಪಂಚಾಯತ್‌ಗೆ ಹಲವು ಸಲ ಭೇಟಿ ನೀಡಿದ್ದರೂ ಮನೆ ನಿರ್ಮಾಣದ ಭರವಸೆ ಮಾತ್ರ ಸಿಕ್ಕಿದೆ. ಈ ಬಾರಿ ಕೌಕ್ರಾಡಿ ಚರ್ಚ್‌ ಒಂದರ ಶಿಕ್ಷಕಿ ನೀಡಿರುವ ಟಾರ್ಪಲ್‌, ಅವರನ್ನು ಮಳೆ ಹಾಗೂ ಬಿಸಿಲಿನಿಂದ ರಕ್ಷಿಸುತ್ತಿದೆ.

ಪಕ್ಕದ ಮನೆಯಲ್ಲಿ ಆಶ್ರಯ
ಗಾಳಿ, ಮಳೆ ಬಂದರೆ ನಿಲ್ಲಲೂ ಸಾಧ್ಯವಿಲ್ಲದ ಈ ಬಡಕುಟುಂಬ ಅಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿ ಆಶ್ರಯ ಪಡೆಯುತ್ತಿದೆ. ಸರಕಾರದ ಅನುದಾನಗಳನ್ನು ಕೊಡಿಸುವವರು ನಮಗೆ ಯಾರೂ ಇಲ್ಲ ಎಂದು ಮುದರ ನೊಂದು ನುಡಿಯುತ್ತಾರೆ. ಮೂಡುಬೈಲು ಪರಿಸರದಲ್ಲಿ ಇನ್ನೂ ಕೆಲವು ಕುಟುಂಬಗಳು ಜೋಪಡಿಗಳಲ್ಲೇ ವಾಸಿಸುತ್ತಿವೆ. ತಿಮ್ಮಪ್ಪ, ಪುಷ್ಪಾ ಹಾಗೂ ಮೀಯಾಳ ಸಮೀಪ ಚೀಂಕ್ರ ಎಂಬವರ ಕುಟುಂಬಗಳೂ ಜೋಪಡಿಗಳಲ್ಲೇ ಇದ್ದು, ಕೌಕ್ರಾಡಿ ಗ್ರಾಮ ಪಂಚಾಯತ್‌ ಆಡಳಿತ ಇನ್ನಾದರೂ ಇವರಿಗೆ ಸೌಲಭ್ಯ ತಲುಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ನಾನೇ ನಿಂತು ಮಾಡಿಸುವೆ
ಕಳೆದ ವರ್ಷ ಈ ಬಗ್ಗೆ ಮಾಹಿತಿ ತಿಳಿದು ಪಿಡಿಒ ಅವರೊಂದಿಗೆ ನಾನೇ ಖುದ್ದಾಗಿ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದು, ಈ ಕುಟುಂಬಗಳ ಮುಖ್ಯಸ್ಥರನ್ನು ಗ್ರಾ.ಪಂ.ಗೆ ಬರುವಂತೆ ಹೇಳಿದ್ದೆ. ಆದರೆ ಯಾರೂ ಬಾರದೇ ಇದ್ದ ಕಾರಣ ಸಮಸ್ಯೆ ಹಾಗೆಯೇ ಉಳಿದಿದೆ. ಈ ಬಾರಿ ಗ್ರಾ.ಪಂ. ವತಿಯಿಂದ ಮನೆ ನಿರ್ಮಿಸಿಕೊಡುವ ಕುರಿತು ನಾನೇ ಸ್ವತಃ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳುತ್ತೇನೆ.
– ಎಂ.ಕೆ. ಇಬ್ರಾಹಿಂ, ಅಧ್ಯಕ್ಷರು, ಕೌಕ್ರಾಡಿ ಗ್ರಾ.ಪಂ.

— ಗುರುಮೂರ್ತಿ ಎಸ್‌. ಕೊಕ್ಕಡ

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.