CONNECT WITH US  

ಸಂಭ್ರಮಕ್ಕೆ ಕಳೆ ತುಂಬಿದ ಬಿರುಸಿನ ಖರೀದಿ

ಪುತ್ತೂರು-ಸುಳ್ಯ ನಗರಗಳ‌ ಅಂಗಡಿಗಳಲ್ಲಿ ಗ್ರಾಹರನ್ನು ಆಕರ್ಷಿಸುತ್ತಿರುವ ಕಬ್ಬು ಆದಿಯಾಗಿ ಹಣ್ಣು-ಹಂಪಲು.

ಸುಳ್ಯ: ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ-ಮಾರಾಟ ಪ್ರಕ್ರಿಯೆ ಬಿರುಸಾಗಿತ್ತು. ಬಗೆ- ಬಗೆಯ ಹೂವು, ಹಣ್ಣು ಹಂಪಲು, ಕಬ್ಬು ಇತ್ಯಾದಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಸಾರ್ವಜನಿಕ ನೆಲೆಯಲ್ಲಿ ಗಣೇಶ ಚತುರ್ಥಿ ಹೆಚ್ಚಾಗಿ ಆಚರಣೆಗೊಳ್ಳುತ್ತದೆ. ತಾ| ನಲ್ಲಿ 100 ಕ್ಕೂ ಅಧಿಕ ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿಸಲಾಗುತ್ತದೆ. ಹೀಗಾಗಿ ಹೂ, ಹಣ್ಣಿಗೆ ಡಿಮ್ಯಾಂಡ್‌ ಹೆಚ್ಚಿದೆ. ತುಳಸಿ, ಅರಗಿಲೆ ಮಾರು ಒಂದಕ್ಕೆ 80 ರೂ. ಧಾರಣೆ ಇತ್ತು. ಸೇವಂತಿಗೆ, ಮಲ್ಲಿಗೆಗೆ 100 ರೂ. ಧಾರಣೆ ಇತ್ತು. ಹಣ್ಣಿನ ಧಾರಣೆ ಏರಿಕೆ ಕಂಡಿದ್ದು ಸೇಬು ದರ 180 ರೂ. ದಾಟಿದೆ. ಸಾರ್ವ ಜನಿಕ ಗಣೇಶ ಆಚರಣೆ ಹೆಚ್ಚಿರುವ ಕಾರಣ ಮನೆ- ಮನೆಗಳಲ್ಲಿ ಮೂರ್ತಿ ಪ್ರತಿಷ್ಠೆ, ವಿಸರ್ಜನೆ ಈ ಭಾಗದಲ್ಲಿ ಕಡಿಮೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. 

ಅಲ್ಲಲ್ಲಿ ಆಚರಣೆ
ಸೆ. 13ರಂದು ಸುಳ್ಯದಲ್ಲಿ 50 ವರ್ಷದ ಸುವರ್ಣ ಗಣೇಶೋತ್ಸವಕ್ಕೆ ಚಾಲನೆ ಸಿಗಲಿದೆ. ಏಳು ದಿನಗಳ ಕಾಲ ಧಾರ್ಮಿಕ, ಸಭಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಟ್ಟಿಪಳ್ಳದಲ್ಲಿ 25ನೇ ವರ್ಷದ ಗಣೇಶೋತ್ಸವ, ಬೆಳ್ಳಿ ಕಿರೀಟ ಸಮರ್ಪಣೆ ನಡೆಯಲಿದೆ. ಹಳೆಗೇಟಿನಲ್ಲಿ 35 ವರ್ಷದ ಗಣೇಶೋತ್ಸವ 5 ದಿನಗಳ ಕಾಲ ನಡೆಯಲಿದೆ.
ಅಲೆಕ್ಕಾಡಿಯಲ್ಲಿ 18ನೇ ವರ್ಷದ, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ 8ನೇ ವರ್ಷದ, ದುಗಲಡ್ಕದಲ್ಲಿ 18ನೇ ವರ್ಷದ, ವಳಲಂಬೆಯಲ್ಲಿ 16ನೇ ವರ್ಷದ, ಪಾದೆಯಲ್ಲಿ 17ನೇ ವರ್ಷದ, ಬಳಕ್ಕದಲ್ಲಿ 31ನೇ ವರ್ಷದ, ಜಾಲೂÕರು 33ನೇ ವರ್ಷ, ಕೋಟೆಮುಂಡುಗಾರು 27ನೇ ವರ್ಷ, ಕೋಲ್ಚಾರು 22ನೇ ವರ್ಷ, ರೆಂಜಾಳ ಶಾಸ್ತಾವ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಚೌತಿ ಪೂಜೆ ನಡೆಯಲಿದೆ.

Trending videos

Back to Top