ರೋಗಕ್ಕೂ ಮದ್ದಿಲ್ಲ ; ನಷ್ಟಕ್ಕೂ ಪರಿಹಾರವಿಲ್ಲದೆ ಕೃಷಿಕ ಹೈರಾಣು

Team Udayavani, Dec 11, 2018, 3:05 AM IST

roga-10-12.jpg

ಸುಳ್ಯ: ಅಡಿಕೆ ಕೃಷಿಗೆ ಕಾಣಿಸಿ ಕೊಂಡ ಹಳದಿ ರೋಗ ಹತ್ತಕ್ಕೂ ಅಧಿಕ ಗ್ರಾಮಗಳ ಅಡಿಕೆ ತೋಟವನ್ನು ಸರ್ವನಾಶ ಮಾಡಿದೆ. ರೋಗಕ್ಕೆ ಔಷಧ ಇಲ್ಲದೆ, ಸರಕಾರಗಳಿಂದ ಸೂಕ್ತ ಪರಿಹಾರ ಸಿಗದೆ ಬೆಳೆಗಾರರು ತತ್ತರಿಸಿದ್ದಾರೆ. ಸಂಪಾಜೆ, ಚೆಂಬು, ಪೆರಾಜೆ ಮೊದಲಾದ ಗ್ರಾಮದಲ್ಲಿ ಅಡಿಕೆ ಕೃಷಿ ಶೇ. 90ರಷ್ಟು ನಾಶವಾಗಿದೆ. ವಾಣಿಜ್ಯ ಬೆಳೆ ರಬ್ಬರ್‌ ಕೂಡ ಧಾರಣೆ ಇಲ್ಲದೆ ನೆಲಕಚ್ಚಿದೆ. ಪರ್ಯಾಯ ಬೆಳೆಯಾಗಿ ತಾಳೆ ಕೃಷಿಯತ್ತ ದೃಷ್ಟಿ ಹಾಯಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅಡಿಕೆ, ರಬ್ಬರ್‌ ಬೆಳೆಯನ್ನು ಜೀವನ ನಿರ್ವಹಣೆಗೆ ನಂಬಿದ ಕೃಷಿಕರು ಅವೆರಡೂ ಕೈ ಕೊಟ್ಟ ಕಾರಣ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಶೋಧನೆ ಫೇಲ್‌!
ಈ ಹಳದಿ ರೋಗ ಅಡಿಕೆಗೆ ಬಾಧಿಸಿದ ಅನಂತರ ಅದರ ಲಕ್ಷಣ ಕಾಣಿಸಿಕೊಳ್ಳುವುದು ನಾಶದ ಅಂಚಿನಲ್ಲಿ. ಆರಂಭಿಕ ರೋಗ ಲಕ್ಷಣ ಬಿಟ್ಟುಕೊಡದ ಕಾರಣ, ಇದಕ್ಕೆ ಪರಿಹಾರ ಏನು ಎನ್ನುವ ಬಗ್ಗೆ ಉತ್ತರ ಸಿಕ್ಕಿಲ್ಲ. ರೋಗ ಸಾಂಕ್ರಾಮಿಕವಾಗಿದ್ದು, ಒಂದು ಗಿಡಕ್ಕೆ ತಗಲಿತೆಂದರೆ ಉಳಿದೆಲ್ಲ ಗಿಡಗಳಿಗೂ ವ್ಯಾಪ್ತಿಸುತ್ತದೆ. ಒಟ್ಟು 5 ಸಾವಿರ ಎಕ್ರೆ ತೋಟ ನಾಶವಾಗಿದೆ. ವಿಟ್ಲದ ಸಿ.ಪಿ.ಸಿ.ಆರ್‌.ಐ. ಹಾಗೂ ಮೈಸೂರಿನ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರಿಗೂ ರೋಗ ಅಥವಾ ನಿಯಂತ್ರಣಕ್ಕೆ ಬೇಕಾದ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕಾಂಡದಲ್ಲಿ ಬೇರು ಹುಳ ರೋಗ ಕಾಣಿಸಿಕೊಂಡ ವೇಳೆ ಮೈಸೂರಿನಿಂದ ವಿಜ್ಞಾನಿಗಳು ಬಂದು ಪರಿಶೀಲಿಸಿದ್ದಾರೆ. ಅವರಿಂದಲೂ ಪರಿಹಾರ ಸಿಕ್ಕಿಲ್ಲ.

ಕೈ ಕೊಟ್ಟ ಫಸಲು, ಧಾರಣೆ
ಶೇ. 85 ಅರಣ್ಯ ಭಾಗ ಆವರಿಸಿರುವ ಸುಳ್ಯದಲ್ಲಿ ಪ್ರಧಾನ ಕೃಷಿ ಅಡಿಕೆಗೆ ಹಳದಿ ರೋಗ, ರಬ್ಬರ್‌ಗೆ ಧಾರಣೆ ಇಳಿಕೆ. ಈ ಎರಡು ಸಮಸ್ಯೆಗಳಿಂದ ಇಲ್ಲಿನ ಕೃಷಿಕ ಮುಕ್ತಿ ಪಡೆದಿಲ್ಲ. ಈ ಕ್ಷೇತ್ರದವರಾಗಿರುವ ಹಲವರು ವಿವಿಧ ಪಕ್ಷಗಳ ಮೂಲಕ ಜನಪ್ರತಿನಿಧಿಗಳಾಗಿ ಅಧಿಕಾರ ವ್ಯವಸ್ಥೆ ಉಚ್ಛ ಸ್ಥಾನ ಅಲಂಕರಿಸಿದ್ದರೂ, ತಾಲೂಕಿಗೆ ಅದರಿಂದ ಏನು ಲಾಭವಾಗಿಲ್ಲ. ಎರಡು ನದಿಗಳು ಇದ್ದರೂ, ಶಾಶ್ವತ ನೀರಾವರಿ ವ್ಯವಸ್ಥೆಯಿಲ್ಲ. ಉತ್ಪನ್ನಗಳಿಗೆ ಮಾರುಕಟ್ಟೆ ಕೊರತೆ, ಸಾಗಾಟಕ್ಕೆ ಸಂಚಾರ ಸೌಕರ್ಯ ಅವ್ಯವಸ್ಥೆ ಹೀಗೆ ಸಾಲು ಸಾಲು ಸಮಸ್ಯೆಗಳು ಇಲ್ಲಿ ಜೀವಂತವಾಗಿ ಉಳಿದುಕೊಂಡಿದೆ.

ಸುಳ್ಯದ ರೈತರ ಬೇಡಿಕೆಗಳೇನು?
– ಡಾ| ಎಂ.ಎಸ್‌. ಸ್ವಾಮಿನಾಥನ್‌ ನೇತೃತ್ವದ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಉತ್ಪಾದನ ವೆಚ್ಚ ನಿಗದಿಪಡಿಸುವುದು.
– ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು.
– ಗ್ರಾಮೀಣ ಪ್ರದೇಶದವರ ಎಲ್ಲಾ ಸಾಲ ರದ್ದು ಮಾಡುವುದು.
– ಶೇ.65ಕೇಂದ್ರ, ಶೇ. 35 ರಾಜ್ಯ ಅನುಪಾತದಲ್ಲಿ 2016ರಲ್ಲಿ ಮಂಡಿಸಿದ ಖಾಸಗಿ ಬಿಲ್‌ ಅಂಶ ಪರಿಗಣಿಸುವುದು.
– ಕೊಳೆರೋಗಕ್ಕೆ ತುತ್ತಾದ ರೈತರಿಗೆ ಬೆಳೆ ಪರಿಹಾರ.
– ಕೃಷಿ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವುದು. 
– ಮಂಗಗಳ ಉಪಟಳ ತಡೆಯಲು ಮಂಕಿ ಪಾರ್ಕ್‌ ನಿರ್ಮಾಣ.
– ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಖರೀದಿಗಾಗಿ ಖರೀದಿ ಕೇಂದ್ರ ಸ್ಥಾಪನೆ.
– ಎನ್‌.ಆರ್‌.ಜಿ. ಉದ್ಯೋಗ ಭರವಸೆ ಖಾತ್ರಿ ಯೋಜನೆ ಕೃಷಿ ಕುಟುಂಬಕ್ಕೆ ವಿಸ್ತರಣೆ.
– ಕೃಷಿ ಚಟುವಟಿಕೆಗೆ ಸರಳ ಸಾಲ ನೀತಿ.
– ಹಳದಿ ರೋಗ ನಷ್ಟಕ್ಕೆ ಎಕ್ರೆಗೆ 10 ಲಕ್ಷ ರೂ. ಪರಿಹಾರ ನೀಡುವುದು.
– ಕಾಡಾನೆ ತಡೆಗೆ ಆನೆ ತಡೆಬೇಲಿ,
– ಅಡಿಕೆ, ರಬ್ಬರ್‌ಗೆ ಸ್ಥಿರ ಧಾರಣೆ

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal: ಕೂಜಿಮಲೆ: ಮತ್ತೆ ನಕ್ಸಲ್‌ ಸಂಚಾರ? ಎಎನ್‌ಎಫ್ ಶೋಧ ಚುರುಕು!

Naxal: ಕೂಜಿಮಲೆ: ಮತ್ತೆ ನಕ್ಸಲ್‌ ಸಂಚಾರ? ಎಎನ್‌ಎಫ್ ಶೋಧ ಚುರುಕು!

Puttur; ಮನೆಯೊಳಗೆ ಬೆಂಕಿ ಅವಘಡ

Puttur; ಮನೆಯೊಳಗೆ ಬೆಂಕಿ ಅವಘಡ

Puttur; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲೇ ಚೂರಿ ಇರಿತ

Puttur; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲೇ ಚೂರಿ ಇರಿತ

2-kadaba

Kadaba ತಾಲೂಕು ಪಂಚಾಯತ್ ಕಚೇರಿಗೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ದಾಳಿ

Kadaba ಗೋಳಿತ್ತಡಿಯ ಮನೆಯಿಂದ ಕಳವು ಪ್ರಕರಣ; ಇಬ್ಬರ ಸೆರೆ

Kadaba ಗೋಳಿತ್ತಡಿಯ ಮನೆಯಿಂದ ಕಳವು ಪ್ರಕರಣ; ಇಬ್ಬರ ಸೆರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.