ಉಪ್ಪಿನಂಗಡಿ ಮೆಸ್ಕಾಂ ಸಬ್‌ಸ್ಟೇಷನ್‌ಗೆ ನಿವೇಶನ 


Team Udayavani, Sep 13, 2018, 2:49 PM IST

13-sepctember-22.jpg

ಉಪ್ಪಿನಂಗಡಿ: ಮೆಸ್ಕಾಂ ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ನಿವೇಶನದ ಮಂಜೂರಾತಿ ಕಾರ್ಯ ಕೊನೆಯ ಹಂತದಲ್ಲಿದ್ದು, ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇಲ್ಲಿನ ಮಠ ಹಿರ್ತಡ್ಕ ಬಳಿಯ ರಾ.ಹೆ. 75ಕ್ಕೆ ಹೊಂದಿಕೊಂಡು ಗೋಮಾಳ ಮೀಸಲು ಜಾಗವಿದೆ. ಈ ಜಾಗದ ಬಳಕೆಗಾಗಿ ಸಾರ್ವಜನಿಕ ಸೇವೆಯಡಿ ನಿವೇಶನ ನೀಡುವಂತೆ ಮೆಸ್ಕಾಂ ಕೋರಿಕೆ ಸಲ್ಲಿಸಿತ್ತು. ಈ ಕಡತ ತಾಲೂಕು ಕಚೇರಿಯಲ್ಲೇ ಬಾಕಿಯಾಗಿತ್ತು. ತಹಶೀಲ್ದಾರ್‌ ನಿರ್ದೇಶನದಲ್ಲಿ ನಿವೇಶನದ ಜಂಟಿ ಸರ್ವೇ ನಡೆಸಲಾಗಿದ್ದು, ಇಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ ಎನ್ನುವ ವರದಿಯನ್ನು ತಾಲೂಕು ದಂಡಾಧಿಕಾರಿಗಳು ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಈ ವರದಿ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳನ್ನು ತಲುಪಿದೆ. ಅವರು ಜಾಗ ಮಂಜೂರು ಮಾಡಬೇಕಿದೆ.

ಮೆಸ್ಕಾಂ ಸಬ್‌ಸ್ಟೇಶನ್‌ಗೆ ನಿವೇಶನ ಸಿಕ್ಕಿದಲ್ಲಿ ಉಪ್ಪಿನಂಗಡಿಯ 6 ವಿಭಾಗಗಳಾದ 34 ನೆಕ್ಕಿಲಾಡಿ ಗ್ರಾಮ, ಕೊಯಿಲ, ಹಿರೇಬಂಡಾಡಿ, ಆಲಂಕಾರು, ರಾಮಕುಂಜ ಮೊದಲಾದ ಗ್ರಾಮಗಳ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಸಾಧ್ಯವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಪುತ್ತೂರು ಉಪವಿಭಾಗದ ಸಹಾಯಕ ಎಂಜಿನಿಯರ್‌ ರಾಮಚಂದ್ರ, ಮೆಸ್ಕಾಂನ 33 ಕೆ.ವಿ. ಸಬ್‌ಸ್ಟೇಷನ್‌ ಹಾಗೂ ಲೈನ್‌ ಸಂಪರ್ಕಕ್ಕಾಗಿ ಯೋಜನೆಯೊಂದರಡಿ 8 ಕೋ.ರೂ. ಮಂಜೂರು ಗೊಂಡಿದೆ. ಕಂದಾಯ ಇಲಾಖೆ ನಿವೇಶನ ಒದಗಿಸಿದರೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ದೊರಯಲಿದೆ ಎಂದವರು ತಿಳಿಸಿದರು.

ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ಸುಜಾತಾಕೃಷ್ಣ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ಸದಸ್ಯರಾದ ಚಂದ್ರಶೇಖರ ಮಡಿವಾಳ, ಸುನೀಲ್‌ ದಡ್ಡು, ಯು.ಟಿ. ತೌಸಿಫ್, ಸುರೇಶ ಅತ್ರಮಜಲು, ರಮೇಶ ಭಂಡಾರಿ, ಸ್ಥಳೀಯ ಮುಖಂಡರಾದ ಜಗದೀಶ ಶೆಟ್ಟಿ, ಸದಾನಂದ ಕಾರ್‌ ಕ್ಲಬ್‌ ಉಪಸ್ಥಿತರಿದ್ದರು.

ಶಾಸಕರ ಸ್ಪಂದನೆ
ಶಾಸಕರಾಗಿ ಮಠಂದೂರು ಆಯ್ಕೆಯಾದ ಬೆನ್ನಲ್ಲೇ ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು ಉಪ್ಪಿನಂಗಡಿ ಸಬ್‌ಸ್ಟೇಷನ್‌ ಕಡತ ಪರಿಶೀಲಿಸಿದ್ದಾರೆ. ತತ್‌ ಕ್ಷಣವೇ ವಿಲೇವಾರಿ ನಡೆಸಲು ತಾಲೂಕು ದಂಡಾಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾಗಿ ಮಂಜೂರಾತಿ ಕೆಲಸ ಕೊನೆ ಹಂತಕ್ಕೆ ಬರಲು ಸಾಧ್ಯವಾಯಿತು. ಸಬ್‌ಸ್ಟೇಶನ್‌ ಕುರಿತಾಗಿ ‘ಉದಯವಾಣಿ’ ಸುದಿನ ಮೂರು ಕಂತುಗಳ ವಿಶೇಷ ವರದಿ ಪ್ರಕಟಿಸಿತ್ತು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.