ಕುಮಾರಮಂಗಲ ನಿವೇಶನ ಸಮಸ್ಯೆ ನಿವಾರಣೆ


Team Udayavani, Jan 18, 2019, 4:50 AM IST

18j-anuary-4.jpg

ಸವಣೂರು : ಮನೆ ನಿವೇಶನದ ಹಕ್ಕು ಪತ್ರದೊರಕಿದರೂ ನಿವೇಶನ ಗುರುತು ಮಾಡಿ ಹಂಚಿಕೆಯಾಗದೇ ಸಮಸ್ಯೆ ಎದುರಿಸುತ್ತಿದ್ದ ಸವಣೂರು ಗ್ರಾ.ಪಂ.ವ್ಯಾಪ್ತಿಯ 24 ಕುಟುಂಬಗಳಿಗೆ ಕೊನೆಗೂ ನಿವೇಶನ ದೊರಕುವಂತಾಗಿದೆ.

ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಕುಮಾರ ಮಂಗಲದಲ್ಲಿ ನಿವೇಶನ ರಹಿತರಿಗೆ ಗ್ರಾ.ಪಂ. ಕಾಯ್ದಿರಿಸಿದ ಜಾಗವನ್ನು ಅರ್ಹರನ್ನು ಗುರುತಿಸಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಸರ್ವೆ ಇಲಾಖೆಯವರು ಗಡಿಗುರುತು ಮಾಡದೇ ಯಾರಿಗೆ ಯಾವ ನಿವೇಶನ ಎಂಬುದೇ ತಿಳಿಯದಾಗಿತ್ತು. ಜಾಗದ ಮೂಲ ನಕಾಶೆ ಇಲ್ಲದ ಕಾರಣ ನಿವೇಶನ ಪಡೆಯಲು ತೊಡಕಾಗಿತ್ತು. ಇದಕ್ಕೆ ಪೂರಕವೆಂಬಂತೆ ಕಂದಾಯ ಹಾಗೂ ಸರ್ವೇ ಇಲಾಖೆಗಳ ಅಧಿಕಾರಿಗಳ ವಿಳಂಬ ಧೋರಣೆ ಯಿಂದ ನಿವೇಶನವು ಫ‌ಲಾನುಭವಿಗಳ ಕನವರಿಕೆಯಲ್ಲೇ ಉಳಿದಿತ್ತು.

2010-11ನೇ ಸಾಲಿನಲ್ಲಿ ಫಲಾನುಭವಿ ಗಳನ್ನು ಆಯ್ಕೆ ಮಾಡಿದ್ದರೂ ಅವರಿಗೆ ಹಕ್ಕುಪತ್ರ ದೊರಕಿದ್ದು 2017ರ ಸೆಪ್ಟಂಬರ್‌ನಲ್ಲಿ. ಪ್ರತಿಯೊಬ್ಬ ಫಲಾನುಭವಿಗೂ 3 ಸೆಂಟ್ಸ್‌ಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ, ನಿವೇಶನದ ಸರ್ವೇ ಕಾರ್ಯ ನಡೆಸದ ಪರಿಣಾಮ ಹಕ್ಕಪತ್ರ ಪಡೆದವರಿಗೆ ತಾವೆಲ್ಲಿ ಮನೆ ಕಟ್ಟಬೇಕೆಂದೇ ತೋಚದಂತಾಗಿತ್ತು.

24 ಮಂದಿಗೆ ಹಕ್ಕುಪತ್ರ
ಜಯಂತಿ ರಮೇಶ್‌ ಆಚಾರ್ಯ, ಯಮುನಾ ರಮೇಶ, ರಾಮಕ್ಕ, ಕುಸುಮಾ ದಯಾನಂದ, ದೇವಕಿ ಗಂಗಾಧರ, ವಿಜಯಾ ರವಿ, ಲಕ್ಷ್ಮೀ ವಿಶ್ವನಾಥ, ಲಕ್ಷ್ಮೀ ವಿಜಯ, ಸುಂದರಿ ಕುಂಞ, ಅಮಿತಾ ಉಮೇಶ್‌, ನಿರ್ಮಲಾ ಕೃಷ್ಣಪ್ಪ, ಹೊನ್ನಮ್ಮ ಕುಶಾಲಪ್ಪ, ಜಯಾ ಶೇಖರ ಗೌಡ, ಕಮಲಾ ಬಾಲಣ್ಣ ಗೌಡ, ಸೇಸಮ್ಮ ತ್ಯಾಂಪಣ್ಣ ಗೌಡ, ಸೇಸಮ್ಮ ಬೆಳಿಯಪ್ಪ ಗೌಡ, ಗಾಯತ್ರಿ ಜನಾರ್ದನ ಗೌಡ, ಕಮಲಾ ಸೌಂದರ್ಯರಾಜನ್‌, ತಾರಾ ಕುಮಾರಿ ರೋಹಿತ್‌, ಕಮಲಾ ತಿಮ್ಮಪ್ಪ ಗೌಡ, ಶ್ಯಾಮಲಾ ರವಿ ಆಚಾರ್ಯ, ಶೋಭಾ ಕೃಷ್ಣಪ್ಪ ಹಕ್ಕುಪತ್ರ ಪಡೆದವರು.

ಗ್ರಾ.ಪಂ. ಪ್ರಯತ್ನ
ನಿವೇಶನ ಹಂಚಿಕೆ ಕುರಿತಂತೆ ಸವಣೂರು ಗ್ರಾ.ಪಂ., ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ಭೂ ಮಾಪನ ಇಲಾಖೆ, ಸರ್ವೇಯರ್‌ ಹೀಗೆ ಎಲ್ಲರನ್ನು ಸಂಪರ್ಕಿಸಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಹಳೆ ನಕಾಶೆ ಸಿಗದಿರುವ ಕಾರಣ ಹೊಸದಾಗಿ ನಕಾಶೆ ರಚಿಸುವ ಸಲುವಾಗಿ ತಾ.ಪಂ.ಗೆ ಮನವಿ ನೀಡಿ, ನಕಾಶೆ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನಿವೇಶನ ವಿಂಗಡಣೆಯಾಗಿ ತಿಂಗಳೊಳಗೆ ಫಲಾನುಭವಿಗಳು ತಮಗೆ ಗುರುತಿಸಿದ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ.

ಉದಯವಾಣಿ ಸುದಿನ ವರದಿ
ಗ್ರಾ.ಪಂ.ನ ಈ ಹಿಂದಿನ ಮತ್ತು ಪ್ರಸ್ತುತ ಆಡಳಿತದ ಅವಧಿಯಲ್ಲಿ ಸಾಮಾನ್ಯ ಸಭೆ, ಗ್ರಾಮಸಭೆ, ಕಂದಾಯ ಅದಾಲತ್‌ ಹೀಗೆ ಎಲ್ಲ ಸಭೆಗಳಲ್ಲೂ ನಿವೇಶನದ ಸಮಸ್ಯೆ ಕುರಿತಂತೆ ಸಾಕಷ್ಟು ಬಾರಿ ಪ್ರಸ್ತಾವವಾಗಿತ್ತು. ಫಲಾನುಭವಿಗಳು ನಿವೇಶನ ಪಡೆಯಲು ನಡೆಸಿದ ಅಲೆದಾಟದ ಕುರಿತಂತೆ ಮೊದಲ ಬಾರಿಗೆ ಉದಯವಾಣಿ ಸುದಿನ ಜೂ. 25ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದ ರಿಂದ ಎಚ್ಚೆತ್ತ ಸರ್ವೇಯರ್‌ ನಿವೇ ಶನದ ಸೂಕ್ತ ದಾಖಲೆ ರಚನೆ ಮಾಡಿ ಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯು ತ್ತಿವೆ. ದಾಖಲೆ ತಯಾರಿಯಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆ ಯಾದ ನಿವೇಶನದ ಗಡಿಗುರುತು ಮಾಡಲಾಗು ವುದು ಎಂದು ತಿಳಿಸಿದ್ದರು.

ಹಲವರ ಪ್ರಯತ್ನ
ಅನೇಕ ಅಡೆತಡೆಗಳನ್ನು ನಿವಾರಿಸಿ ಕೊನೆಗೂ 24 ಕುಟುಂಬಗಳಿಗೆ ನಿವೇಶನದ ಗುರುತು ಮಾಡಲಾಗಿದೆ.. ಫ‌ಲಾನುಭವಿಗಳಿಗೆ ನಿವೇಶನ ಒದಗಿಸಿಕೊಡುವಲ್ಲಿ ಹಲವರ ಪ್ರಯತ್ನ ಇದೆ. ಎಲ್ಲರಿಗೂ ಗ್ರಾ.ಪಂ. ವತಿಯಿಂದ ಕೃತಜ್ಞತೆಗಳು.
 – ಇಂದಿರಾ ಬಿ.ಕೆ.,
ಅಧ್ಯಕ್ಷೆ, ಸವಣೂರು ಗ್ರಾ.ಪಂ
.

ಸಂತಸ
ಕುಮಾರಮಂಗಲ ನಿವೇಶನಕ್ಕಾಗಿ ಕಾದಿರಿಸಿದ ಸ್ಥಳದ ಗಡಿಗುರುತು ಕಾರ್ಯ ಪೂರ್ಣ ಗೊಂಡಿರುವುದು ಸಂತಸ. ನಿವೇಶ ನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಲ್ಲಿ ನಗು ಮೂಡು ವಂತಾಗಿದ್ದು, ವರ್ಷಗಳ ಬೇಡಿಕೆ ಈಡೇರಿದೆ.
 – ರಾಜೇಶ್ವರಿ ಕನ್ಯಾಮಂಗಲ
   ಉಪಾಧ್ಯಕ್ಷರು, ತಾ.ಪಂ ಪುತ್ತೂರು

ಸತತ ಪ್ರಯತ್ನದಿಂದ ಹಕ್ಕುಪತ್ರ
ಕುಮಾರಮಂಗಲದಲ್ಲಿ ಗ್ರಾ.ಪಂ.ನಿಂದ ಕಾಯ್ದಿರಿಸಿದ ನಿವೇಶನಕ್ಕೆ 2010-11 ಸಾಲಿನಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಹಕ್ಕು ಪತ್ರ ದೊರಕಿದ್ದು 2017-18ನೇ ಸಾಲಿನಲ್ಲಿ. ಆದರೆ ನಿವೇಶನದ ಗಡಿಗುರುತು ಮಾಡದೇ ಫಲಾನುಭವಿಗಳಿಗೆ ನಿವೇಶನ ದೊರಕಿರಲಿಲ್ಲ .ಈ ಹಿಂದಿನ ಅವಧಿ ಮತ್ತು ಈಗಿನ ಅವಧಿಯಲ್ಲಿ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ,ಕಂದಾಯ ಅದಾಲತ್‌ನಲ್ಲಿ ಪ್ರಸ್ತಾವಿಸಲಾಗಿತ್ತು. ಈಗ ಎಲ್ಲರ ಸತತ ಪ್ರಯತ್ನದಿಂದ ದೊಡ್ಡ ಸಮಸ್ಯೆಯೊಂದು ಬಗೆಹರಿದಿದೆ.
-ಗಿರಿಶಂಕರ ಸುಲಾಯ,
ಗ್ರಾ.ಪಂ. ಸದಸ್ಯ, ಸವಣೂರು

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.