ಪಾಳು ಬಿದ್ದಿದೆ ಬೆಳ್ಳಾರೆ ಮಾರುಕಟ್ಟೆ ಕಟ್ಟಡ
Team Udayavani, Mar 18, 2019, 6:13 AM IST
ಬೆಳ್ಳಾರೆ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ವತಿಯಿಂದ ನಿರ್ಮಾಣಗೊಂಡ ಬೆಳ್ಳಾರೆಯ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಡ ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಕಾರ್ಯಾಚರಿಸದೆ ಪಾಳು ಬಿದ್ದಿದ್ದು, ಅನ್ಯ ಚಟುವಟಿಕೆಗಳ ತಾಣವಾಗಿದೆ.
2015-16ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್. -21ರ ಯೋಜನೆ ಅನ್ವಯ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿತ್ತು. ಗ್ರಾಮೀಣ ಸಂತೆ ಮಾರುಕಟ್ಟೆಯಾದ ಇಲ್ಲಿ ಇದುವರೆಗೆ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದೆ ಹಳೆಯ ಸಂತೆ ಮಾರುಕಟ್ಟೆಯಲ್ಲೇ ವಾರದ ಸಂತೆ ನಡೆಯುತ್ತಿದೆ. ನೂತನ ಕಟ್ಟಡದ ಹೊರ ಭಾಗದ ರಸ್ತೆ ಬದಿಯಲ್ಲೂ ಪ್ರತಿ ಶನಿವಾರ ಸಂತೆ ಮಾರುಕಟ್ಟೆ ನಡೆಯುತ್ತಿದೆ.
ಹಳೆಯ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಸ್ಥಳಾವಕಾಶದ ಕೊರತೆಯಿದ್ದು, ಶನಿವಾರ ಹೆಚ್ಚಿನ ವ್ಯಾಪಾರ ರಸ್ತೆ ಬದಿಯಲ್ಲೇ ನಡೆಯುತ್ತಿದೆ. ವ್ಯಾಪಾರಸ್ಥರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ವ್ಯಾಪಾರ ನಡೆಸುವುದರಿಂದ ಗ್ರಾಹಕರಿಗೂ ಸುಲಲಿತವಾಗಿ ರಸ್ತೆ ಬದಿ ಓಡಾಡಲು ಕಷ್ಟವಾಗುತ್ತಿದೆ. ಬಸ್ ನಿಲ್ದಾಣದ ಬದಿಯಲ್ಲೇ ಸಂತೆ ಮಾರುಕಟ್ಟೆ ಯಿದ್ದರೂ, ವ್ಯಾಪಾರ ಮಾತ್ರ ರಸ್ತೆಯಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ಸಂಚಾರಕ್ಕೂ ತೊಡಕಾಗಿದೆ. ನೂತನ ಸಂತೆ ಮಾರುಕಟ್ಟೆ ಕಾರ್ಯಾಚರಿಸಲು ಆರಂಭಿಸಿದಲ್ಲಿ ವ್ಯಾಪಾರಸ್ಥರಿಗೆಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ.
ಕುಡುಕರ ಆಶ್ರಯ ತಾಣ
ಸುಸಜ್ಜಿತವಾದ ಕಟ್ಟಡ ಹಲವು ತಿಂಗಳುಗಳಿಂದ ಪಾಳು ಬಿದ್ದಿರುವ ಕಾರಣ ಸಾಮಾನ್ಯವಾಗಿಯೇ ಇಲ್ಲಿ ಅನ್ಯ ಚಟುವಟಿಕೆಗಳು ನಡೆಯುತ್ತಿವೆ. ಮದ್ಯಪಾನ ಮಾಡಿದ ವ್ಯಕ್ತಿಗಳು ಮಲಗುವುದು ಮಾಮೂಲಾಗಿದೆ. ಮುಖ್ಯ ರಸ್ತೆ ಬದಿಯಲ್ಲೇ ಇದ್ದರೂ, ನಿರ್ಲಕ್ಷ್ಯದಿಂದಾಗಿ ಪಾಳು ಬೀಳುವಂತಾಗಿದೆ. ಈ ಗ್ರಾಮೀಣ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಎ.ಪಿ.ಎಂ.ಸಿ. ಆರಂಭಿಸಿದಲ್ಲಿ ಆದಾಯದ ಜತೆಗೆ ಕಟ್ಟಡದ ಸದ್ಬಳಕೆಯೂ ಆಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ