ಬಿಎಸ್ಸೆನ್ನೆಲ್‌ ಟವರ್‌ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!


Team Udayavani, Mar 20, 2019, 6:22 AM IST

20-march-6.jpg

ಸವಣೂರು : ಅತ್ಯಧಿಕ ಬಳಕೆದಾರರನ್ನು ಹೊಂದಿರುವ ಸವಣೂರು ಬಿಎಸ್ಸೆನ್ನೆಲ್‌ ದೂರವಾಣಿ ಕೇಂದ್ರದ ವ್ಯಾಪ್ತಿಯಲ್ಲಿ ಸೇವಾ ನ್ಯೂನತೆ ಮುಂದುವರಿದಿದ್ದು, ಗ್ರಾಹಕರು ಮೊಬೈಲ್‌ ನೆಟ್‌ವರ್ಕ್‌, ಇಂಟರ್ನೆಟ್‌ ಸಮಸ್ಯೆಯಿಂದ ನಿತ್ಯ ಪರದಾಡುತ್ತಿದ್ದಾರೆ.

ಈ ದೂರವಾಣಿ ಕೇಂದ್ರವು ಸರ್ವೆ ಗ್ರಾಮದ ಭಕ್ತಕೋಡಿ, ಸರ್ವೆ, ರೆಂಜಲಾಡಿ, ನರಿಮೊಗರು ಗ್ರಾಮದ ವೀರಮಂಗಲ, ಗಡಿಪಿಲ, ಶಾಂತಿಗೋಡು, ಸವಣೂರು ಗ್ರಾಮದ ಕನಡಕಮೇರು, ಸವಣೂರು, ಕಾಯರ್ಗ, ಮಾಂತೂರು, ಪೆರಿಯಡ್ಕ, ಪುಣcಪ್ಪಾಡಿ ಗ್ರಾಮದ ದೇವಸ್ಯ, ಸೋಂಪಾಡಿ, ನಡುಮನೆ, ಕುಮಾರಮಂಗಲ, ಪಾಲ್ತಾಡಿ ಗ್ರಾಮದ ಪರಣೆ, ಬಂಬಿಲ, ಪಾದೆಬಂಬಿಲ, ಜಾರಿಗೆತ್ತಡಿ, ಮಂಜುನಾಥನಗರ, ಕುದ್ಮಾರು ಗ್ರಾಮದ ಶಾಂತಿಮೊಗರು, ಡೆಬ್ಬೆಳಿ, ಬರೆಪ್ಪಾಡಿ, ಕೊçಲ ಗ್ರಾಮದ ಕೊಲ್ಯ, ಕಡೆಂಬಿಕಲ್ಲು, ಏಣಿತ್ತಡ್ಕ, ಪರಂಗಾಜೆ, ಸಬಳೂರು, ಆಲಂಕಾರು ಗ್ರಾಮದ ಕಕ್ವೆ ಸಹಿತ ಹಲವು ಭಾಗಗಳ ವ್ಯಾಪ್ತಿಯಲ್ಲಿ ಅತ್ಯಧಿಕ ಬಳಕೆದಾರರನ್ನು ಹೊಂದಿದೆ. ಈ ಭಾಗದ ಜನತೆ ಬಿಎಸ್ಸೆನ್ನೆಲ್‌ ನ ಸೇವಾ ನ್ಯೂನತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಇಂಟರ್ನೆಟ್‌, ದೂರವಾಣಿ ಇಲ್ಲ
ಸವಣೂರು ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ರಾಷ್ಟ್ರೀಕೃತ ಬ್ಯಾಂಕ್‌, ಕೇಂದ್ರ ಸಹಕಾರಿ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಗ್ರಾಮ ಪಂಚಾಯತ್‌, ಆನ್‌ಲೈನ್‌ ಸೇವಾ ಕೇಂದ್ರಗಳು ಸಹಿತ ಹಲವು ಕಚೇರಿಗಳಿವೆ. ಶಾಲಾ ಕಾಲೇಜುಗಳು, ವ್ಯವಹಾರಸ್ಥರು ಇದ್ದು ಹೆಚ್ಚಿನವರು ಇಂಟರ್ನೆಟ್‌ ಬಳಕೆದಾರರು. ಆದರೆ ಇಲ್ಲಿ ಬಿಎಸ್ಸೆನ್ನೆಲ್‌ ಇಂಟರ್ನೆಟ್‌ ಸಮಸ್ಯೆಯಿಂದ ಕೆಲವರು ಖಾಸಗಿ ನೆಟ್‌ವರ್ಕ್‌ಗಳ ಮೊರೆಹೋಗಿದ್ದಾರೆ.

ಹೆಚ್ಚು ದೂರವಾಣಿ ಬಳಕೆದಾರರನ್ನು ಹೊಂದಿದ್ದ ಕೇಂದ್ರದಲ್ಲಿ ಸೇವೆ ಕೊರತೆಯಿಂದಾಗಿ ಸ್ತಬ್ಧವಾಗಿವೆ. ಆಗೊಮ್ಮೆ ಈಗೊಮ್ಮೆ ಬರುವ ಸಿಗ್ನಲ್‌ನಿಂದ ಜನತೆ ಏನೂ ಮಾಡದಂತಾಗಿದೆ.

ಟವರ್‌ ಕೆಳಗೇ ನೆಟ್‌ವರ್ಕ್‌ ಇಲ್ಲ!
ದೂರವಾಣಿ ಕೇಂದ್ರದ ಮೊಬೈಲ್‌ ಟವರ್‌ನಲ್ಲಿ ರೇಂಜ್‌ ಕೊರತೆಯಿದೆ. ಸವಣೂರು ಪೇಟೆಯಲ್ಲೆ ಟವರ್‌ ಇದ್ದರೂ ಸುತ್ತಮುತ್ತ ಅರ್ಧ ಕಿ.ಮೀ. ವ್ಯಾಪ್ತಿಯಲ್ಲೂ ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿಲ್ಲ. ಕರೆ ಮಾಡಿದಾಗೆಲ್ಲ ‘ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎನ್ನುವುದು ಸಾಮಾನ್ಯವಾಗಿದೆ. ಖಾಸಗಿ ಮೊಬೈಲ್‌ ಕಂಪೆನಿಗಳು 4ಜಿ ನೆಟ್‌ವರ್ಕ್‌ ಸೇವೆ ನೀಡುತ್ತಿದ್ದರೂ ಬಿಎಸ್ಸೆನ್ನೆಲ್‌ ಮೊಬೈಲ್‌ 3ಜಿ ನೆಟ್‌ವರ್ಕ್‌ ಸೇವೆ ದೂರವಾಣಿ ಕೇಂದ್ರದ ಗೋಡೆ ಬರಹಕ್ಕೆ ಸೀಮಿತವಾಗಿದೆ.

ಕಂಪೆನಿ ಬದಲಾವಣೆ
ಬಿಎಸ್ಸೆನ್ನೆಲ್‌ ಬಳಕೆದಾರರು ಈಗ ಸೇವಾ ನ್ಯೂನತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದು, ಬೇರೆ ಕಂಪೆನಿಗಳ ತಮ್ಮ ನಂಬರ್‌ಗಳನ್ನು ಬದಲಾಯಿಸುತ್ತಿದ್ದಾರೆ. ಖಾಸಗಿ ದೂರವಾಣಿ ಸಂಸ್ಥೆಗಳು ಹಲವೆಡೆ ಟವರ್‌ ನಿರ್ಮಾಣ ಮಾಡಿ, ಉತ್ತಮ ನೆಟ್‌ವರ್ಕ್‌ ನೀಡಲು ಪ್ರಯತ್ನಿಸುತ್ತಿದ್ದು, ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಏಕೆ ತನ್ನ ಸೇವೆಯನ್ನು ಉತ್ತಮ ಪಡಿಸುತ್ತಿಲ್ಲ ಎಂಬುದು ಗ್ರಾಹಕರ ಪ್ರಶ್ನೆ.

ತೀವ್ರ ಸಮಸ್ಯೆಯಾಗಿದೆ
ಹದಿಮೂರು ವರ್ಷಗಳಿಂದ ಬಿಎಸ್ಸೆನ್ನೆಲ್‌ ಸಿಮ್‌ ಬಳಕೆ ಮಾಡುತ್ತಿದ್ದು, ಸದ್ಯ ಸೇವಾ ನ್ಯೂನತೆಯಿಂದ ಸಮಸ್ಯೆಯಾಗಿದೆ. ಅಧಿಕಾರಿಗಳಲ್ಲಿ ವಿಚಾರಿಸಿದರೆ ಸ್ಪಷ್ಟ ಮಾಹಿತಿಯೇ ನೀಡುತ್ತಿಲ್ಲ. ಎಲ್ಲ ಸೇವೆಗಳು ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ನೆಟ್‌ವರ್ಕ್‌ ಸಮಸ್ಯೆಯಿಂದ ಮೊಬೈಲ್‌ಗೆ ಒಟಿಪಿಯೂ ಬರುತ್ತಿಲ್ಲ. ಎಲ್ಲ ಸಾರ್ವಜನಿಕ ಕೇಂದ್ರಗಳಲ್ಲಿ ಬಿಎಸ್ಸೆನ್ನೆಲ್‌ ಸಂಪರ್ಕವೇ ಇರುವುದರಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ.  ಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕಿದೆ.
– ಸತೀಶ್‌ ಅಂಗಡಿಮೂಲೆ
    ಸವಣೂರು

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.