CONNECT WITH US  

ಅನಧಿಕೃತ ಖಾಸಗಿ ಶಾಲೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು: ನಿಯಮಬಾಹಿರವಾಗಿ ನಡೆಸುತ್ತಿರುವ ಖಾಸಗಿ ಶಾಲೆಗಳ ಪರವಾನಗಿ ರದ್ದುಗೊಳಿಸಬೇಕು ಹಾಗೂ ಹೊಸ ಶಾಲೆಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಿ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಅನಧಿಕೃತವಾಗಿ, ನಿಯಮ ಬಾಹಿರವಾಗಿ ಖಾಸಗಿ ಶಾಲೆಗಳನ್ನು ನಡೆಸಲಾಗುತ್ತಿದೆ. ಅಂಥ
ಶಾಲೆಗಳ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಹೊಸ ಶಾಲೆಗಳಿಗೆ ನೋಂದಾವಣಿಗೆ ಸಂಬಂಧಿಸಿ ಹೊಸ ಶಾಲೆಗಳ ಅನುಮತಿ ಪಡೆಯಬೇಕಾದರೆ ಸರ್ಕಾರ
ನಿಯಮ ಪ್ರಕಾರ ನಗರಸಭೆಯಲ್ಲಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದೂವರೆ ಎಕರೆ ಭೂಮಿ ಸ್ವಂತ ಹೆಸರಲ್ಲಿ ಇರಬೇಕು.
ಶಾಲೆಗಳಿಗೆ ಭೇಟಿ ನೀಡಿರುವ ಅಧಿಕಾರಿಗಳು ವರದಿ ಪರಿಶೀಲಿಸಿ ಸರಿ ಅಥವಾ ತಪ್ಪು ಎಂದು ಪರಿಗಣಿಸಿ ಶಾಲೆಗಳಿಗೆ ಅನುಮತಿ ನೀಡಬೇಕು. ಒಂದು ವೇಳೆ ಪರಿಶೀಲಿಸಿದ ಅಧಿಧಿಕಾರಿಗಳು ತಪ್ಪು ಮಾಹಿತಿ ನೀಡಿ ಶಾಲೆಗೆ ಪರವಾನಗಿ ನೀಡಿದ್ದರೆ ಉಪನಿರ್ದೇಶಕರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಖಾಸಗಿ ಶಾಲೆಗಳ ಹೆಸರು ನೋಡಿ ಮರುಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ 
ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಎಸ್‌.ಶಿವಕುಮಾರ ಯಾದವ, ಪದಾಧಿಕಾರಿಗಳಾದ ಜಿಯಾವುಲ್‌ಹಕ್‌ ಸೌದಾಗರ, ಎಂ.ಎ.ಅಬ್ದುಲ್‌ ಮನ್ನಾನ್‌, ಶಕೀಲ್‌ ಅಹ್ಮದ್‌, ಇಸ್ಮಾಯಿಲ್‌ ಖಾಜಿ, ರವಿಕುಮಾರ ಬಿಂದಲಪಾವಿ, ಫ್ರಾಂಕ್ಲಿನ್‌, ಗಯಾಸುದ್ದೀನ್‌ ಇತರರು ಪ್ರತಿಭಟನೆಯಲ್ಲಿದ್ದರು.


Trending videos

Back to Top