CONNECT WITH US  

ವರ್ಷದಲ್ಲೇ ಹಾಳಾಯ್ತು ಡಾಂಬರ್‌ ರಸ್ತೆ

ದೇವದುರ್ಗ: ಸಮೀಪದ ಕುಂಬಾರದೊಡ್ಡಿ, ಯಲ್ಲಮ್ಮನದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಮಾಡಿದ ವರ್ಷದಲ್ಲೇ ಸಂಪೂರ್ಣ ಹಾಳಾಗಿದ್ದು, ಇದು ಗುತ್ತಿಗೆದಾರರು, ಅಧಿಕಾರಿಗಳು ಮಾಡಿದ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಂಬಾರದೊಡ್ಡಿ-ಯಲ್ಲಮ್ಮನದೊಡ್ಡಿ ಸಂಪರ್ಕ ಕಲ್ಪಿಸಲು ಗದ್ದೆಗಳ ಮಧ್ಯೆ ಇದ್ದ ಕಚ್ಚಾ ರಸ್ತೆಯನ್ನು ಸುಮಾರು ವರ್ಷದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ವರ್ಷದಲ್ಲೇ ಡಾಂಬರ್‌ ಸಂಪೂರ್ಣ ಕಿತ್ತು ಹೋಗಿ, ಕಲ್ಲುಗಳು ಎದ್ದಿದ್ದು, ವಾಹನಗಳಿರಲಿ, ಪಾದಚಾರಿಗಳು, ಎತ್ತಿನ ಬಂಡಿಗಳು ಸಂಚರಿಸಲು ಪರದಾಡುವಂತಾಗಿದೆ.

ಮಳೆ ಬಂದರಂತೂ ಈ ರಸ್ತೆ ಕೆಸರುಗದ್ದೆಯಂತಾಗಿ ಸಂಚಾರ ದುಸ್ತರವಾಗುತ್ತದೆ. ಕಂಬಾರದೊಡ್ಡಿ ಗ್ರಾಮದ
ಮಕ್ಕಳು ಶಾಲೆಗೆ ಯಲ್ಲಮ್ಮನದೊಡ್ಡಿ ಗ್ರಾಮಕ್ಕೆ ಹೋಗುತ್ತಾರೆ. ಹದಗೆಟ್ಟ ರಸ್ತೆಯಲ್ಲೇ ನಡೆದುಕೊಂಡು ಹೋಗುತ್ತಾರೆ. ಮಳೆ ಬಂದು ರಸ್ತೆ ಕೆಸರುಗದ್ದೆಯಂತಾದರೆ ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಗ್ರಾಮದತ್ತ ಸುಳಿಯುವ ನಾಯಕರು, ಜನಪ್ರತಿನಿಧಿಗಳು ಈ ಗ್ರಾಮಗಳ ಸಮಸ್ಯೆಗಳತ್ತ ಹೊರಳಿ ನೋಡುವುದಿಲ್ಲ.  ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂಬುದಕ್ಕೆ ರಸ್ತೆಯೇ ಸಾಕ್ಷಿಯಾಗಿದೆ.

ಸೌಲಭ್ಯ ಮರೀಚಿಕೆ: ಶುದ್ಧ, ನೀರು ಶೌಚಾಲಯ, ರಸ್ತೆ, ಸಾರಿಗೆ ಸೇರಿ ಅಗತ್ಯ ಮೂಲ ಸೌಕರ್ಯಗಳು ಈ ಎರಡೂ ಗ್ರಾಮಗಳಿಗೆ ಮರೀಚಿಕೆಯಾಗಿವೆ. ಗ್ರಾಮದ ಜನರು ಅರಕೇರಾ, ಗಲಗ ಪಟ್ಟಣಕ್ಕೆ ಬರಲು ಬಸ್‌ ಸೌಲಭ್ಯವಿಲ್ಲದ ಕಾರಣ ಮೂರು ಕಿ.ಮೀ. ನಡೆದುಕೊಂಡು ಮುಖ್ಯ ರಸ್ತೆಗೆ ಅಲ್ಲಿಂದ ವಾಹನ ಹಿಡಿಯುತ್ತಾರೆ. ಗದ್ದೆಗಳ ಆಸುಪಾಸಿನ ಹಾಳಾದ ರಸ್ತೆಯಿಂದಾಗಿ ಟಂಟಂ ವಾಹನಗಳು ಸಹ ಗ್ರಾ ಮಕ್ಕೆ ಬರುತ್ತಿಲ್ಲ. ಹೀಗಾಗಿ ನಡೆದುಕೊಂಡೇ ಹೋಗುತ್ತೇವೆ
ಎನ್ನುತ್ತಾರೆ ಗ್ರಾಮಸ್ಥರು.

ಶಾಲೆ ಅಂಗನವಾಡಿ: ಯಲ್ಲಮ್ಮನದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಸೌಲಭ್ಯವಿದ್ದು, 50 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ವಿಷಯವಾರು ಶಿಕ್ಷಕರಿಲ್ಲದ್ದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಇನ್ನೊಬ್ಬ ಶಿಕ್ಷಕರ ಅಗತ್ಯವಿದೆ. ತಾಲೂಕು, ಜಿಲ್ಲಾ ಪಂಚಾಯತಿ ಸದಸ್ಯರು ಮತ್ತು ಶಾಸಕರು ಈ ಗ್ರಾಮಗಳಿಗೆ ಸುಸಜ್ಜಿತ ರಸ್ತೆ ನಿರ್ಮಿಸುವ ಜೊತೆಗೆ ಬಸ್‌ ಸೌಲಭ್ಯ ಕಲ್ಪಿಸಬೇಕು. ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಶಾಲೆಯಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಬೇಕು ಎಂದು ಪಾಲಕ ಹನುಮಂತಪ್ಪ, ರಂಗಪ್ಪ ಆಗ್ರಹಿಸಿದ್ದಾರೆ.

ಸರಕಾರ ಗ್ರಾಮೀಣ ಪ್ರದೇಶಗಳ ಗ್ರಾಮಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂ. ಅನುದಾನ ವ್ಯಯ ಮಾಡುತ್ತಿದೆ. ಅಧಿ ಕಾರಿಗಳು ಗುತ್ತೆದಾರರ ಹೊಂದಾಣಿಕೆಯಿಂದಾಗಿ ಅರೆಬರೆ ಮತ್ತು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಗ್ರಾಮೀಣ
ಜನರು ಸಂಕಷ್ಟ ಎದುರಿಸುವಂತಾಗಿದೆ.
ಭೀಮರಾಯ ಜರದಬಂಡಿ, ಆಮ್‌ ಆದ್ಮಿ ಪಕ್ಷದ ಮುಖಂಡ

ಯಲ್ಲಮ್ಮನದೊಡ್ಡಿ ಮತ್ತು ಕುಂಬಾರದೊಡ್ಡಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವ ಕುರಿತು ಪಿಡಿಒ ಜೊತೆ ಚರ್ಚಿಸುವೆ. ಇಲಾಖೆಯಿಂದ ಸೌಲಭ್ಯಗಳು ಒದಗಿಸಲು ಶ್ರಮಿಸುತ್ತೇನೆ.
ಮಡಿಡಚಳಪ್ಪ ಪಿ.ಎಸ್‌ ಪಿ.ಎಸ್‌. ತಾಪಂ ಇಒ ದೇವದುರ್ಗ


Trending videos

Back to Top