CONNECT WITH US  

ಜಿಲ್ಲೆಗೆ ಮಾದರಿ ಬೇಡರ ಕಾರ್ಲಕುಂಟಿ ಹಸಿರು ಶಾಲೆ

ಮಸ್ಕಿ: ಸರಕಾರಿ ಶಾಲೆಗಳೆಂದರೆ ಹಾಗೂ ಶಿಕ್ಷಕರೆಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ
ಗ್ರಾಮಸ್ಥರು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು, ಮಸಸ್ಸು ಮಾಡಿದ್ದಲ್ಲಿ, ಯಾವುದೇ ಖಾಸಗಿ ಶಾಲೆಗಿಂತ ಮಿಗಿಲಾಗಿ ಸರಕಾರಿ ಶಾಲೆಯನ್ನು ಶಿಕ್ಷಣದಲ್ಲಿ ಹಾಗೂ ಸ್ವತ್ಛತೆ, ಪರಿಸರವನ್ನು ಕಾಪಾಡುವ ಮೂಲಕ ನಿರ್ಮಾಣ ಮಾಡಬಹುದು ಎಂಬುವುದಕ್ಕೆ ಸಾಕ್ಷಿಯಾಗಿದೆ ತಾಲೂಕಿನ ಬೇಡರ ಕಾರಲಕುಂಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.

 ಜಿಲ್ಲೆಯಲ್ಲಿಯೇ ಹಸಿರು ಶಾಲೆ ಎಂದು ಖ್ಯಾತಿಗೊಳಾಗಿರುವ ಈ ಶಾಲೆಯಲ್ಲಿ ಪಾಠ ಪ್ರವಚನದ ಜೊತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು, ಪರಿಸರ ಕಾಳಜಿಯ ಬಗ್ಗೆ ಪಾಠ ಮಾಡಿ ಅಲ್ಲದೇ ವಿದ್ಯಾರ್ಥಿಗಳಿಂದಲೇ ಶಾಲೆಯ ಸಮೀಪ ಕೈ-ತೋಟವನ್ನು ಮಾಡಿದ್ದಾರೆ. ಕೈ-ತೋಟದಲ್ಲಿ ಬೆಳೆದ ತರಕಾರಿಗಳನ್ನು ಶಾಲೆಯ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಕೈ-ತೋಟದಲ್ಲಿ ವಿದ್ಯಾರ್ಥಿಗಳಿಂದಲೇ ವಿವಿಧ ತರನಾದ ತರಕಾರಿಗಳನ್ನು ಬೆಳೆಸಲಾಗುತ್ತದೆ. ಸುಮಾರು 200 ಗಿಡಗಳನ್ನು ಶಾಲಾ ಆವರಣದಲ್ಲಿ ಬೆಳೆಸಲಾಗಿದ್ದು ಜಾಗರೂಕತೆಯಿಂದ ಅವುಗಳನ್ನು ಸಂರಕ್ಷಿಸಲಾಗುತ್ತಿದೆ. ಹಸಿರು ಗಿಡಗಳ ನೆರಳಿನಲ್ಲೇ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡಲಾಗುತ್ತಿದೆ. ಈ
ಕಾರಣದಿಂದಲೇ ಜಿಲ್ಲೆಯಲ್ಲಿ ಇದು ಹಸಿರು ಶಾಲೆ ಎಂದು ಪ್ರಸಿದ್ಧಿ ಪಡೆದಿದೆ. ಈ ಶಾಲೆಗೆ 2014-15
ರಲ್ಲಿ ಉತ್ತಮ ಶಾಲೆ, 2015-16 ರಲ್ಲಿ ಉತ್ತಮ ಶಾಲೆ ಹಾಗೂ ನೈರ್ಮಲ್ಯ ಶಾಲೆ, 2016-17 ರಲ್ಲಿ ಉತ್ತಮ
ಶಾಲೆ ಎಂದು ಜಿಲ್ಲಾ ಸ್ವಾಮಿ ವಿವೇಕಾನಂದ ಯೂತ್‌ ಮುಮೆಂಟ್‌ ಸಂಸ್ಥೆಯಿಂದ ಪ್ರಶಸ್ತಿಗಳು ಲಭಿಸಿವೆ.

ಅಲ್ಲದೇ 2017-18 ರ ಸಾಲಿನಲ್ಲಿ ಉತ್ತಮ-ಹಸಿರು ಶಾಲೆ ಎಂಬ ಪ್ರಶಸ್ತಿಯನ್ನು ಜಿಲ್ಲಾ ಶಿಕ್ಷಣ ಇಲಾಖೆಯಿಂದ
ಪಡೆಯುವುದರೊಂದಿಗೆ ಜಿಲ್ಲೆಯ ಇನ್ನಿತರ ಸರಕಾರಿ ಶಾಲೆಗಳಿಗೆ ಹಾಗೂ ಶಿಕ್ಷಕರಿಗೆ ಮಾದರಿಯಗಿದೆ.
ಶಾಲೆಯಲ್ಲಿ 95 ಜನ ವಿದ್ಯಾರ್ಥಿಗಳಿದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ. 6 ತರಗತಿಯ ಕೊಠಡಿಗಳಿವೆ. ಶಾಲೆಯಲ್ಲಿ
ಕುಡಿಯುವ ನೀರಿನ ಹಾಗೂ ಶೌಚಾಲಯದ ವ್ಯವಸ್ಥೆ ಇದ್ದು ಯಾವುದೇ ಖಾಸಗಿ ಶಾಲೆಯನ್ನೂ ಮೀರಿಸುವಂತಹ ಪರಿಸರವನ್ನು ಹೊಂದಿದೆ. ಗ್ರಾಮಸ್ಥರ ಹಾಗೂ ಶಾಲಾ ಉಸ್ತುವಾರಿ ಸಮಿತಿಯ ಸದಸ್ಯರ ಸಹಕಾರದಿಂದ ಈ ಹಿಂದೆ ಕಡಿಮೆ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 95ಕ್ಕೆ ಏರಿದೆ. ವಿದ್ಯಾರ್ಥಿಗಳಿಗಾಗಿ ಪ್ರತಿ ಗುರುವಾರ
ಇಡ್ಲಿ ಉಪಹಾರದ ವ್ಯವಸ್ಥೆಯನ್ನು ಇಲ್ಲಿನ ತಾಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಸಾಹುಕಾರ ಹಾಗೂ
ಗ್ರಾಮಸ್ಥರ ಸಹಕಾರದಿಂದ ವಿದ್ಯಾರ್ಥಿಗಿಗೆ ನೀಡಲಾಗುತ್ತದೆ ಎಂದು ಶಾಲಾ ಮುಖ್ಯಗುರು ಸೋಮಶೇಖರ
ತಿಳಿಸಿದ್ದಾರೆ.

ಶಾಲೆಯ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್‌ ಮತ್ತು ಗಣಿತ ವಿಷಯದಲ್ಲಿ ಹೆಚ್ಚಿನ ಜ್ಞಾನ ನೀಡುವ ನಿಟ್ಟಿನಲ್ಲಿ ನೂರಿತ ಉಪನ್ಯಾಸಕರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತದೆ. ಈ ಮೂಲಕ ಶಾಲಾ ಶಿಕ್ಷಕರ ಪರಿಶ್ರಮ, ಗ್ರಾಮಸ್ಥರ ಶಿಕ್ಷಣ ಪ್ರೇಮ, ಜನ ಪ್ರತಿನಿಧಿಗಳ ಸಹಕಾರದ ಮೂಲಕ ಸರಿಕಾರಿ ಶಾಲೆಯೊಂದು ಹಸಿರು ಶಾಲೆ ಎಂದು ಹಿರಿಮೆ-ಗರಿಮೆಯನ್ನು ಹೊಂದುವುದರೊಂದಿಗೆ
ಸರಕಾರಿ ಶಾಲೆಗಳು ಕೂಡ ಯಾವುದರಲ್ಲೂ ಕಡಿಮೆ ಇಲ್ಲ ಎಂಬುವುದನ್ನು ಸಾಬೀತು ಪಡಿಸಿ ಸರಕಾರಿ ಶಾಲೆಗಳ ಮೇಲಿರುವ ಕೀಳರಿಮೆಯನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥ

„ಉಮೇಶ್ವರಯ್ಯ ಬಿದನೂರಮಠ

Trending videos

Back to Top