CONNECT WITH US  

ನರೇಗಾದಡಿ ಕೆರೆ ಅಭಿವೃದ್ಧಿ

ಮುದಗಲ್ಲ: ಸಮೀಪದ ಕನ್ನಾಳ ಗ್ರಾಮ ಪಂಚಾಯ್ತಿಯಿಂದ ಮಹಾತ್ಮ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ
(ನರೇಗಾ) ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡಿದ್ದರಿಂದ ಕಾರ್ಮಿಕರ ಗುಳೆ ತಡೆಯುವಲ್ಲಿ ನೆರವಾಗಿದೆ.

ಕನ್ನಾಳ ಗ್ರಾಪಂದಿಂದ ನರೇಗಾದಡಿ ಗ್ರಾಪಂ ವ್ಯಾಪ್ತಿಯ ವ್ಯಾಸನಂದಿಹಾಳ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ತಿಮ್ಮಾಪುರ ಗ್ರಾಮದ 100 ಜನ ಪುರುಷರು, 120 ಜನ ಮಹಿಳೆಯರು ಸೇರಿ ಒಟ್ಟು 220
ಜನ ಕೂಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 7,14,380 ರೂ. ಕೂಲಿ ಪಾವತಿಸಲಾಗಿದೆ. 

9ಎಕರೆ ವಿಸ್ತೀರ್ಣದ ಕೆರೆಯಲ್ಲಿ ನೀರು ಸಂಗ್ರಹವಾದರೆ, ಅಂತರ್ಜಲಮಟ್ಟ ಹೆಚ್ಚಿ ರೈತರ ಕೊಳವೆಬಾವಿಗಳ
ಜಲ ಮರುಪೂರಣವಾಗುವುದು. ಕೆರೆ ನೀರಿನಿಂದಾಗಿ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಉಪಯೋಗ
ವಾಗಲಿದೆ. 

ಜಾಲಿ ಮುಳ್ಳಿನಿಂದ ಕೆರೆಯ ದಂಡೆಗಳು ಮುಚ್ಚಿದ್ದವು. ಕೆರೆಯ ದಡಕ್ಕೆ ಇಲಿಗಳು, ಹೆಗ್ಗಣಗಳು, ರಂಧ್ರ ಹಾಕಿದ್ದರಿಂದ ಕೆರೆಯಲ್ಲಿ ಸಂಗ್ರಹವಾದ ನೀರು ಸೋರಿ ಹೋಗುತ್ತಿತ್ತು. ಆದರೆ ಈಗ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರಿಂದ ಕೆರೆ ಚಿತ್ರಣ ಬದಲಾಗಿದೆ. 

10 ಅಡಿ ಉದ್ದ, 5 ಅಡಿ ಅಗಲ, ಒಂದೂವರೆ  ಅಡಿ ಆಳದಂತೆ ಒಂದು ಜೋಡಿಗೆ ಕೆಲಸ ಮಾಡಲು ತಿಳಿಸಲಾಗಿದೆ. 14 ದಿನ 220 ಜನ ಕೆಲಸಕ್ಕೆ ಹಾಜರಾಗಿದ್ದಾರೆ. ಕೂಲಿ ಕಾರ್ಮಿಕರಿಗೆ ಬ್ಯಾಂಕ್‌ಖಾತೆ ಮೂಲಕ ಆಧಾರ ಬೇಸಡ್‌ ಕೂಲಿ ಪಾವತಿಸಲಾಗುತ್ತಿದೆ ಎಂದು ಪಿಡಿಒ ಮಂಜುನಾಥ ಜಾವೂರ ತಿಳಿಸಿದ್ದಾರೆ. 

ಕೆರೆ ಹೂಳು ತಗೆಯುವ ಕೆಲಸ ಕೊಟ್ಟಿದ್ದರಿಂದ ಬೇರೆ ಕಡೆ ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿದೆ. ಮಕ್ಕಳ ಪಾಲನೆ-ಪೋಷಣೆಗೆ ಅನೂಕೂಲವಾಗಿದೆ.
 ಗೌರಮ್ಮ ಬುದ್ದಿನ್ನಿ,

ಕೂಲಿ ಕಾರ್ಮಿಕರು ಕೂಲಿ ಪಾವತಿಯಲ್ಲಿ ತಾಂತ್ರಿಕ ತೊಂದರೆ ಬಿಟ್ಟರೆ ನಿಗದಿತ ಸಮಯದಲ್ಲಿ ಕಾರ್ಮಿಕರಿಗೆ ಕೂಲಿ
ಪಾವತಿಯಾಗುತ್ತಿದೆ. 
 ದುರುಗಪ್ಪ ಬಿಂಗಿ ಗ್ರಾಕೂಸ ಸಂಘಟನೆ ಮುಖ್ಯಸ್ಥ.

ನೆಲ-ಜಲ ಸಂರಕ್ಷ ಗೆ ಕೆರೆ ಕಾಮಗಾರಿ ನಡೆಯುತ್ತಿದೆ. ಗ್ರಾಮಕ್ಕೆ ಒಂದು ಆಸ್ತಿಯೂ ನಿರ್ಮಾಣವಾಯಿತು.
 ಪ್ರಕಾಶ ಒಡ್ಡರ ತಾಪಂ ಇಒ, ಲಿಂಗಸುಗೂರು

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top