ಬೀಡು ಬಿಟ್ಟಿದೆಯಾ ಕಳರ ಚಡ್ಡಿ ಗ್ಯಾಂಗ್‌?


Team Udayavani, Oct 10, 2018, 3:47 PM IST

ray-1.jpg

ರಾಯಚೂರು: ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಸಾರ್ವಜನಿಕರು ಹಾಗೂ ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ. ಒಂದರ ಮೇಲೊಂದರಂತೆ ನಡೆದ ಕಳವು ಪ್ರಕರಣಗಳಿಂದ ಜನ ಮನೆ
ಬಿಟ್ಟು ಹೋಗಲು ಆತಂಕ ಪಡುವಂತಾಗಿದೆ.

ಗಣೇಶ ಚತುರ್ಥಿ, ಮೊಹರಂ ವೇಳೆ ಸಮೀಪದ ಯರಮರಸ್‌ ಕ್ಯಾಂಪ್‌ನಲ್ಲಿ ಸರಣಿಗಳ್ಳತನಗಳು ನಡೆಯುವ ಮೂಲಕ ಜನರಿಗೆ ರಾತ್ರಿ ನಿದ್ದೆಯೇ ಹಾರಿಹೋಗಿತ್ತು. ಏಳರಿಂದ ಎಂಟು ಕಡೆ ಮೇಲಿಂದ ಮೇಲೆ ಕಳ್ಳತನ ನಡೆಯಿತು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ವಿವರಣೆ ನೀಡಿದರು. ಇದರಿಂದ ಬೇಸತ್ತ ನಿವಾಸಿಗಳು ಬೆತ್ತಗಳನ್ನು ಹಿಡಿದು ಖುದ್ದು ಗಸ್ತು ತಿರುಗುವಂತಾಯಿತು.

ಇದೇ ವೇಳೆ ನಗರದ 10 ಮಿಲ್‌ಗ‌ಳಲ್ಲೂ ಲಕ್ಷಾಂತರ ರೂ. ಕಳುವಾಗಿದೆ. ಏಳು ರೈಸ್‌ ಮಿಲ್‌, ಎರಡು ಜಿನ್ನಿಂಗ್‌ ಮಿಲ್‌ ಹಾಗೂ ಒಂದು ದಾಲ್‌ ಮಿಲ್‌ನಲ್ಲಿ ಲಕ್ಷಾಂತರ ರೂ. ಕಳ್ಳತನವಾಗಿದ್ದು, ಈ ಕುರಿತು ರಾಯಚೂರು ರೈಸ್‌ ಮಿಲ್ಲರ್‌
ಅಸೋಸಿಯೇಶನ್‌ನಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇಲ್ಲಿ ನಡೆದ ಕಳ್ಳತನ ಪ್ರಕರಣಗಳು
ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಚ್ಚರಿ ಎಂದರೆ ರೈಸ್‌ ಮಿಲ್‌ಗ‌ಳು ರಾತ್ರಿ
ಕೂಡ ಕಾರ್ಯ ನಿರತವಾಗಿರುತ್ತವೆ. ಅಂಥ ವೇಳೆ ಕಚೇರಿ ಬೀಗ ಮುರಿದು ಹಣ ಲೂಟಿ ಮಾಡಲಾಗಿದೆ. ಇದರಿಂದ ವರ್ತಕರು ಆತಂಕಗೊಂಡಿದ್ದಾರೆ.

ನೋಟಿಗೆ ಬೆಂಕಿ: ನಗರದಲ್ಲಿ ಇನ್ನೂ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಮುಗಿದಿರಲಿಲ್ಲ. ನಗರದ ಮಾರ್ಕೆಟ್‌ ಯಾರ್ಡ್‌ ಠಾಣೆ ಸಮೀಪ ನಿಷೇಧಿ ತ 500, ಸಾವಿರ ಮುಖ ಬೆಲೆಯ ನೋಟುಗಳ ಜತೆಗೆ ಚಾಲ್ತಿಯಲ್ಲಿರುವ ನೂರು, 10, 20 ರೂ. ನೋಟುಗಳಿಗೆ ಬೆಂಕಿ ಹಾಕಿ ಸುಡಲಾಗಿತ್ತು. ಆದರೆ, ಇದು ಯಾರು, ಏಕೆ ಮಾಡಿರಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿಲ್ಲ.

ಸೊಟದ ಸದ್ದು: ಇದೆಲ್ಲ ಮಾಸುವ ಮುನ್ನವೇ ಸಮೀಪದ ಯರಮರಸ್‌ ಕ್ಯಾಂಪ್‌ ಬಳಿ ಅನುಮಾಸ್ಪದ ವಸ್ತು ಸ್ಫೋಟಗೊಂಡು ಮಹಿಳೆ ಸ್ಥಳದಲ್ಲೇ ಮೃತಪಟ್ಟ ವಿಚಾರ ಜಿಲ್ಲೆಯನ್ನು ತಲ್ಲಣಗೊಳಿಸಿದೆ.  ಸ್ಫೋಟದ ತನಿಖೆ ಕೈಗೊಂಡಿರುವ ಪೊಲೀಸರು ಇದು ಡೆಕಾರೇಟರ್ ಬಳಸುವ ಕೆಮಿಕಲ್‌ನಿಂದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಎರಡೂಮೂರೂ ದಿನ ಕಾವಲು ಕಾದಿದ್ದು, ಸತತವಾಗಿ ಗಸ್ತು ತಿರುಗಿದ್ದಾರೆ. ಆದರೆ, ಇದೇ ವೇಳೆ ಪಕ್ಕದ ಮನೆಯೊಂದರಲ್ಲಿ ಕಳುವಾಗಿದ್ದ, 50 ಸಾವಿರ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಚಡ್ಡಿ ಗ್ಯಾಂಗ್‌ ವಿಡಯೋ ವೈರಲ್‌: ಏತನ್ಮಧ್ಯೆ ಇದಕ್ಕೆಲ್ಲ ಪುಷ್ಟಿ ನೀಡುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ನಗರದ ಯಾವುದೋ ಅಪಾರ್ಟ್ ಮೆಂಟ್‌ನಲ್ಲಿ ಚಡ್ಡಿ ಮತ್ತು ಬನಿಯನ್‌ ಧರಿಸಿದ ಐದು ಜನರ ತಂಡವೊಂದು ಕಳ್ಳ ಹೆಜ್ಜೆ ಹಾಕುತ್ತ ಸಾಗುವ ವಿಡಿಯೋ ಹರಿದಾಡುತ್ತಿದೆ. ಆ ಗ್ಯಾಂಗ್‌ ನಗರದಲ್ಲಿ ಬೀಡು ಬಿಟ್ಟಿದ್ದು ಎಚ್ಚರ ಎಂಬ ಸಂದೇಶ ಹರಿದಾಡುತ್ತಿದೆ. ಆದರೆ, ಆ ತಂಡದ ಬಗ್ಗೆ ಯಾವುದೇ ದೂರು ಬಂದಿಲ್ಲ ಎನ್ನುತ್ತಿದ್ದಾರೆ ಪೊಲೀಸರು. ಈ ಎಲ್ಲ ಕೃತ್ಯಗಳ ಹಿಂದೆ ಚಡ್ಡಿ ಗ್ಯಾಂಗ್‌ ಕೈವಾಡ ಇದೆಯಾ ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಜನರ ನೆಮ್ಮದಿ ಕದಡಿರುವುದಂತೂ ಸತ್ಯ. ಘಟನೆಗಳ ಕಾರಣೀಕರ್ತರ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಜನರಿಗೆ ಮನವರಿಕೆ ಆಗುವವರೆಗೂ ಈ ಆತಂಕ ಮಾತ್ರ ಮುಂದುವರಿಯುತ್ತಲೇ ಇರುತ್ತದೆ.

ಕೆಲವೇ ದಿನಗಳಲ್ಲಿ 10 ಮಿಲ್‌ಗ‌ಳಲ್ಲಿ ಲಕ್ಷಾಂತರ ರೂ. ಕಳ್ಳತನ ನಡೆದಿದೆ. ಹೀಗಾಗಿ ನಮ್ಮ ಅಸೋಸಿಯೇಶನ್‌ನಿಂದ
ದೂರು ಸಲ್ಲಿಸಲಾಗಿದೆ. ಇಲ್ಲಿ ಸಿಕ್ಕಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೀಡಲಾಗಿದೆ. ವರ್ತಕರ ಸಭೆ ನಡೆಸಿದ ಎಸ್‌ಪಿ ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿ ಸಿಕ್ಕ ವಿಡಿಯೋಗಳ ದೃಶ್ಯಗಳನ್ನು ಆಧರಿಸಿ ಕಳ್ಳರನ್ನು ಹಿಡಿಯಲು ಇಲಾಖೆ ಹೆಚ್ಚಿನ ಒತ್ತು ಕೊಡಬೇಕು. ಮರಂ ತಿಪ್ಪಣ್ಣ, ಕಾರ್ಯದರ್ಶಿ ರಾಯಚೂರು ರೈಸ್‌ ಮಿಲ್ಲರ್ ಅಸೋಸಿಯೇಶನ್‌
 
ಜಿಲ್ಲೆಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಈಶಾನ್ಯ, ಪಶ್ಚಿಮ, ಯರಗೇರಾ ಮತ್ತು  ಮಾನ್ವಿ ಠಾಣೆ ಪಿಎಸ್‌ಐಗಳ ನೇತೃತ್ವದಲ್ಲಿ$ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ರೈಸ್‌ ಮಿಲ್‌ಗ‌ಳ ಕಳ್ಳತನ
ಮಾದರಿಯಲ್ಲಿಯೇ ಪಕ್ಕದ ಯಾದಗಿರಿ ಮತ್ತು ಕರ್ನೂಲ್‌ ಜಿಲ್ಲೆಯಲ್ಲೂ ನಡೆದಿವೆ. ಬಹುತೇಕ ಸಾಮ್ಯತೆ ಇರುವ ಕಾರಣ ಆ ಭಾಗದ ಪೊಲೀಸರ ಜತೆ ಸಮಾಲೋಚನೆ ಮಾಡಲಾಗಿದೆ. ಚಡ್ಡಿ ಗ್ಯಾಂಗ್‌ ವಿಡಿಯೋ ಇಲ್ಲಿಯದ್ದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕುರಿತು ವಿವರ ಪಡೆಯಲಾಗಿದೆ. ಗಣೇಶ ಚತುರ್ಥಿ, ಮೊಹರಂ, ಸೊ#ಧೀಟದ ವೇಳೆ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ಪಡೆದ ಕಾರಣ ಸರಣಿಗಳ್ಳತನ ನಡೆದಿರುವ ಸಾಧ್ಯತೆ ಇದೆ. ಶೀಘ್ರದಲ್ಲೇ ನಮ್ಮ ತಂಡಗಳು ಪ್ರಕರಣಗಳನ್ನು ಭೇದಿಸಲಿವೆ.  ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.