ರಜನಿ ರಾಜಕೀಯ: ಸಾಧನೆಯಿಲ್ಲದೆ ದೊರಕೀತೇ ಸಿದ್ಧಿ?


Team Udayavani, Jan 3, 2018, 1:05 PM IST

03-32.jpg

ರಾಜಕೀಯ ಪ್ರವೇಶದ ಆಮಿಷಕ್ಕೆ ಒಳಗಾಗದ ದಕ್ಷಿಣ ಭಾರತದ ಚಿತ್ರರಂಗದ ಮೇರುವ್ಯಕ್ತಿ ಒಬ್ಬರಿದ್ದರೆ ಅದು ನಮ್ಮ ರಾಜಕುಮಾರ್‌. 1978ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಇಂದಿರಾಗಾಂಧಿಯವರ ವಿರುದ್ಧ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅವರ ಮೇಲೆ ಭಾರೀ ಒತ್ತಡ ಬಿದ್ದಿತು. ಆದರೆ ಅವರು ಈ ಪ್ರಸ್ತಾವಕ್ಕೆ ಒಪ್ಪಲಿಲ್ಲ. ತನ್ನ ಹೆಸರನ್ನು ಸೂಚಿಸಿದವರಿಗೆ, “ಇದೆಲ್ಲ ಬೇಡ, ನಿಮಗೆ ಧನ್ಯವಾದಗಳು’ ಎಂದು ಸುಮ್ಮನಾದರು.

ಭಾರತೀಯ ಸಂವಿಧಾನದ 19ನೆಯ ವಿಧಿಯನ್ವಯ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸದಂತೆ ಯಾರನ್ನೂ ತಡೆಯುವಂತಿಲ್ಲ. ಹಾಗೆಂದೇ ನಮ್ಮಲ್ಲಿ ನೂರಾರು ರಾಜಕೀಯ ಪಕ್ಷಗಳಿವೆ, ರಾಜಕೀಯ ಪಕ್ಷವೆಂಬ ಹೆಸರಿನ ಪಂಗಡಗಳಿವೆ. ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನೂರಾರು “ಸೇನೆ’ಗಳು ಹಾಗೂ “ವೇದಿಕೆ’ಗಳು ಆಸ್ತಿತ್ವಕ್ಕೆ ಬಂದಿವೆ. ಇದು ಇನ್ನೊಂದು ಪ್ರತ್ಯೇಕ ಕತೆ.
ರಾಜಕೀಯ ಪಕ್ಷಗಳ ಸಾಲಿಗೆ ಈಗ ಇನ್ನೊಂದು ಸೇರ್ಪಡೆ ಯಾಗಿದೆ. ಕರ್ನಾಟಕ ಮೂಲದ, ತಮಿಳಿನ ಸೂಪರ್‌ಸ್ಟಾರ್‌ ರಜನೀಕಾಂತ್‌ ತಾನು ರಾಜಕೀಯ ಪ್ರವೇಶಿಸುವುದಾಗಿ, ತನ್ನದೇ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ತಮಿಳುನಾಡಿನ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ತಮ್ಮದೇ ಬಲದಿಂದ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಲಿದ್ದಾರೆ. ಬಹುಶಃ ಯಾವ ಪಕ್ಷದೊಂದಿಗೂ ಮೈತ್ರಿ ಏರ್ಪಡಿಸಿಕೊಳ್ಳುವ ಗೋಜಿಗೆ ಅವರು ಹೋಗಲಾರರು. ತಮಿಳು ನಾಡಿನಲ್ಲಿಂದು ರಾಜಕೀಯವೆಂಬುದು ಸ್ಥಿತ್ಯಂತರದ ಹಂತದಲ್ಲಿದೆ. ಆಡಳಿತಾರೂಢ ಎಐಎಡಿಎಂಕೆ ತನ್ನ ಶಾಸಕರ ಗಣವನ್ನು ಹೇಗೆ ರಕ್ಷಿಸಿಕೊಳ್ಳು ವುದೆಂಬುದನ್ನು, ಡಿಎಂಕೆಯ ಹಾಗೂ ಎಐಎಡಿಎಂಕೆಯ ಶಶಿಕಲಾ ಬಣದ ಜಂಟಿ ಸವಾಲನ್ನು ಹೇಗೆ ಎದುರಿಸುತ್ತದೆಂಬುದನ್ನು ಕಾದು ನೋಡಬೇಕಾಗಿದೆ. ಆ ರಾಜ್ಯದ ವಿಧಾನಸಭೆಯ ಅವಧಿ 2021ರ ವರೆಗಿದೆ. ಆದರೆ ಅಲ್ಲಿನ ಚುನಾವಣೆ ಅವಧಿಗಿಂತ ಮುನ್ನವೇ ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.

ರಜನೀಕಾಂತ್‌ ಮಾತ್ರವಲ್ಲ ಇನ್ನೊಬ್ಬ ತಮಿಳು ನಟ ಕಮಲಹಾಸನ್‌ ಕೂಡ ರಾಜಕೀಯ ಪ್ರವೇಶಿಸುವುದಾಗಿ, ತಮ್ಮದೇ ಪಕ್ಷವೊಂದನ್ನು ಆರಂಭಿಸಲಿರುವುದಾಗಿ ಹೆದರಿಸಿದ್ದಾರೆ! ಇತ್ತ ನಮ್ಮ ಕರ್ನಾಟಕದಲ್ಲಿ ನಟ ಉಪೇಂದ್ರ ಅವರು ಈಗಾಗಲೇ ತಮ್ಮ ಪಕ್ಷವನ್ನು ಆರಂಭಿಸಿಯಾಗಿದೆ. ರಾಜಕೀಯದಲ್ಲಿ ಚಿತ್ರನಟರ ಹಾಗೂ ಚಿತ್ರರಂಗದ ಗಣ್ಯರು ಸಾಧಿಸಿರುವ ಪಾರಮ್ಯದ ಕುರಿತು ಹೇಳುವುದಾದರೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣಕ್ಕಿಂತಲೂ, ತಮಿಳುನಾಡಿನಲ್ಲಿ ಈ ಪ್ರವೃತ್ತಿ ಹೆಚ್ಚು ತೀವ್ರವಾಗಿದೆ. ಆಂಧ್ರಪ್ರದೇಶದಲ್ಲಿ ಎನ್‌.ಟಿ. ರಾಮರಾವ್‌ ಅವರು ತೆಲುಗಿನ ಅಭಿಮಾನವನ್ನು ಎತ್ತಿ ಹಿಡಿ ಯುವಲ್ಲಿ ತೆಲುಗು ದೇಶಂ ಪಾರ್ಟಿಯನ್ನು ಬಹು ಅದ್ದೂರಿಯಿಂದ ಅಸ್ತಿತ್ವಕ್ಕೆ ತಂದರಾದರೂ, ಮುಖ್ಯಮಂತ್ರಿಯಾಗಿ ಹಾಗೂ ಪಕ್ಷದ ಅಧಿನಾಯಕರಾಗಿ ಹೆಚ್ಚು ಕಾಲ ಇರಲಿಲ್ಲ. ಅವರ ಅಳಿಯ ನಾರಾ ಚಂದ್ರಬಾಬು ನಾಯ್ಡು ಅವರು “ಮೊಘಲರ ಶೈಲಿ’ಯಲ್ಲಿ ಮಾವನನ್ನು ಪದಚ್ಯುತಿಗೊಳಿಸಿದರು. ಎನ್‌ಟಿಆರ್‌ ಅವರು ಒಬ್ಬ ರಾಜಕಾರಣಿ ಹಾಗೂ ಆಡಳಿತಗಾರನಾಗಿ ಕಳಪೆ ನಿರ್ವಹಣೆ ತೋರಿದ್ದು ಈಗ ಇತಿಹಾಸ. ಸಬ್ಸಿಡಿ ದರದಲ್ಲಿ ಅಕ್ಕಿ ಒದಗಿಸುವಂಥ ಜನ ಮರುಳು ಕ್ರಮಗಳನ್ನು ಜಾರಿಗೆ ತಂದರಾದರೂ ಎನ್‌.ಟಿ. ಆರ್‌. ಅವರ ಆಡಳಿತ ನಿಜಕ್ಕೂ ಒಂದು ವೈಫ‌ಲ್ಯದ ಕತೆಯೇ. ಇನ್ನೋರ್ವ ತೆಲುಗು ನಟ ಚಿರಂಜೀವಿಯವರು ಅಸ್ತಿತ್ವಕ್ಕೆ ತಂದ ಪ್ರಜಾರಾಜ್ಯಂ ಪಕ್ಷ ಈಗಾಗಲೇ ಜನರ ನೆನಪಿನಿಂದ ಮರೆಯಾಗಿ ಹೋಗಿದೆ. ವಿಧಾನಸಭಾ ಚುನಾವಣೆಯಲ್ಲಿ ಅದರ ನಡವಳಿಕೆ ಬಹುತೇಕ “ಪೀಡೆ’ಯೇ ಆಗಿ ಪರಿಣಮಿಸಿತು. ಚಿರಂಜೀವಿಯ ವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದ ಹೊರತಾಗಿಯೂ ಅವರು 2011ರ ಹೊತ್ತಿಗೆ ತಮ್ಮ ಅಂಗಡಿಯನ್ನು ಮುಚ್ಚಬೇಕಾ ಯಿತು. ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಪಕ್ಷವನ್ನು ಅವರು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿ ಕೈತೊಳೆದುಕೊಂಡರು. ಆಂಧ್ರಪ್ರದೇಶದಲ್ಲಿ ಜನಪ್ರಿಯ ಚಿತ್ರನಟರು ರಾಜಕೀಯ ಪ್ರವೇ ಶಿಸಿ ಚುನಾವಣೆಯಲ್ಲಿ ಜಯಭೇರಿ ಬಾರಿಸಲೇ ಇಲ್ಲ ಎನ್ನುವಂತಿಲ್ಲ. ಆದರೆ ಅವರು ತಮ್ಮದೇ ಪ್ರತ್ಯೇಕ ಪಕ್ಷವೊಂದನ್ನು ರಚಿಸಲಿಲ್ಲ. ಈ ಹಿಂದೆ ಸುಪ್ರಸಿದ್ಧ ನಟರಾದ ಜಗ್ಗಯ್ಯ ಹಾಗೂ ಜಮುನಾ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದದ್ದಿದೆ. ಜಮುನಾ 1950ರ ದಶಕದಲ್ಲಿ “ರತ್ನಗಿರಿ ರಹಸ್ಯ’ದಂಥ ಕೆಲ ಕನ್ನಡ ಚಿತ್ರಗಳಲ್ಲೂ ನಟಿಸಿದ್ದುಂಟು.

ರಜನೀಕಾಂತ್‌ ಅವರು ತನ್ನ ಜನಪ್ರಿಯತೆಯನ್ನು ನಗದೀಕರಿ ಸಿಕೊಳ್ಳಲು ಹೊರಟಿರುವುದು ಮೇಲ್ನೋಟಕ್ಕೇ ಸ್ಪಷ್ಟ. ಆದರೆ, ನಟನಾ ಕೌಶಲ ಅಥವಾ ಅಭಿನಯ ಪ್ರತಿಭೆಗಳಿಂದಷ್ಟೇ ಚುನಾ ವಣೆಗಳಲ್ಲಿ ಗೆಲವು ಸಾಧಿಸುತ್ತೇವೆನ್ನುವುದು ಸಾಧ್ಯವಿಲ್ಲದ ಮಾತು. ಅವರು ಗೆದ್ದು, ಅಧಿಕಾರ ಹಿಡಿದರೆನ್ನೋಣ; ಅಂದಮಾತ್ರಕ್ಕೆ ಎಲ್ಲವೂ ಮುಗಿಯಲಿಲ್ಲ. ಅವರು ಆಡಳಿತ ನಡೆಸಬೇಕಾಗುತ್ತದೆ. ರಾಜಕೀಯ ಪ್ರವೇಶಿಸುವ ಚಿತ್ರ ತಾರೆಯರ ಅತ್ಯಂತ ದುರ್ಬಲ ಹಂತವೆಂದರೆ ಸರಕಾರವನ್ನು ನಡೆಸುವುದು . ರಾಜಕೀಯ ಪಕ್ಷವೊಂದನ್ನು ಆರಂಭಿಸುವ ಎಲ್ಲ ವ್ಯಕ್ತಿಗಳಂತೆ ರಜನೀಕಾಂತ್‌ ಕೂಡ ಸಾಕಷ್ಟು ಭರವಸೆಗಳನ್ನು ತಮ್ಮ ಅಭಿಮಾನಿಗಳೆದುರು ಘೋಷಿಸಿದ್ದಾರೆ. ಇತರರಿಗಿಂತ ಭಿನ್ನವೆಂಬಂತೆ ತೋರುವ ಒಂದೆ ರಡು ಭರವಸೆಗಳೆಂದರೆ ರಾಜಕೀಯದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳುವುದು ಹಾಗೂ ರಾಜಕೀಯದಿಂದ ಜಾತಿ ಪ್ರತಿ ಪಾದನೆಯನ್ನು ಪ್ರತ್ಯೇಕಿಸುವುದು. ಅವರು ಮಹಾತ್ಮಾಗಾಂಧಿಯ ಧ್ವನಿಯಲ್ಲಿ ಮಾತನಾಡಿದ್ದಾರೆ. ಆದರೆ ಎಲ್ಲರಿಗೂ ತಿಳಿದಿರುವಂತೆ, ಅವರು ಮಹಾತ್ಮಾಗಾಂಧಿ ಅಲ್ಲ. ತಮಿಳುನಾಡಿನಲ್ಲಿ ರಾಜಕೀಯ ವೆನ್ನುವುದು ಅತ್ಯಂತ ದಯನೀಯ ರೀತಿಯಲ್ಲಿ ಕುಸಿಯುತ್ತ ಬಂದಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ . ರಾಜ್ಯದಲ್ಲಿ ಆಡಳಿತ ನಡೆಸಿರುವ ಡಿಎಂಕೆ ಹಾಗೂ ಎಐಎಡಿಎಂಕೆಗಳೆರಡೂ ಭ್ರಷ್ಟಾಚಾರದ ವಿಷಯದಲ್ಲಿ ಹಾಗೂ ಉತ್ತಮ ಆಡಳಿತ ನೀಡದೆ ಇರುವಲ್ಲಿ ತೀವ್ರ ಪೈಪೋಟಿ ನಡೆಸುತ್ತ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಹಿಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಜೈಲಿಗೆ ಹೋಗಬೇಕಿತ್ತು. ಸಾವು ಅವರನ್ನು ರಕ್ಷಿಸಿತು. ಈ ನಡುವೆ, “ನಮಗಿಂದು ಸತ್ಯಸಂಧ, ನೇರ ನಡವಳಿ ಕೆಯ ಹಾಗೂ ಸ್ವತ್ಛ ಶುದ್ಧ ರಾಜಕೀಯ ಬೇಕಾಗಿದೆ’ ಎಂದಿದ್ದಾರೆ ರಜನೀಕಾಂತ್‌. ಅವರ ಈ ಮಾತನ್ನು ಒಪ್ಪದಿರಲಾಗುವುದಿಲ್ಲ.

ಚಿರಂಜೀವಿ ಕೂಡ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವು ದಾಗಿ ಘೋಷಿಸಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವೆ ಎಂದಿದ್ದರು. ಬಹುಶಃ ತೆಲಂಗಾಣ ರಚನೆಗೆ ಸಂಬಂಧಿಸಿದಂತೆ ಅವರು ತೋರಿದ್ದ ವಿರೋಧಿ ನಿಲುವೇ ಅವರಿಗೆ ಮುಳುವಾಯಿತು. ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾಯಿತು. ಅವರ ಪಕ್ಷ ಹೇಳ ಹೆಸರಿಲ್ಲದೇ ಅಳಿದು ಹೋಯಿತು. ಸ್ಥಾಪನೆಯಾದ ಬಳಿಕ ಕೆಲವೇ ವರ್ಷಗಳಲ್ಲಿ ಮೌಲ್ಯ ಕುಸಿತ ಶಾಪಕ್ಕೊಳಗಾದ ಇನ್ನೊಂದು ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಇಂದು ಅದು ಹತ್ತರೊಡನೆ ಹನ್ನೊಂದನೆಯದು ಎಂಬಂತಾಗಿದೆ.

ರಜನೀಕಾಂತ್‌ ಅವರ ರಾಜಕೀಯ ಪ್ರವೇಶದಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿರುವವರು ಈ ಹಿಂದೆ ಇನ್ನೊಬ್ಬ ತಮಿಳು ಚಿತ್ರತಾರೆ ವಿಜಯಕಾಂತ್‌ ಅವರಿಗೆ ಯಾವ ಗತಿ ಬಂತೆಂಬುದನ್ನು ನೆನಪಿಸಿಕೊಳ್ಳಬೇಕು. ವಿಜಯಕಾಂತ್‌ ಕೂಡ (“ದೇಸೀಯ ಮುರುಕೊಪ್ಪು ದ್ರಾವಿಡ ಕಳಗಂ’ ಎಂಬ) ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದರು. ಈ ಪಕ್ಷ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜತೆಗೆ ಮೈತ್ರಿ ಏರ್ಪಡಿಸಿಕೊಂಡು ತಮಿಳುನಾಡು ವಿಧಾನಸಭೆಯ 29 ಸ್ಥಾನ ಗಳನ್ನು ಬಗಲಿಗೆ ಹಾಕಿಕೊಂಡಿತ್ತು. ಮುಂದೆ ವಿಜಯಕಾಂತ್‌ ಅವರು ಜಯಲಲಿತಾರ ಜತೆಗಿನ ಮೈತ್ರಿಗೆ ಎಳ್ಳುನೀರು ಬಿಟ್ಟು ಸದನದಲ್ಲಿ ವಿರೋಧ ಪಕ್ಷದ ನಾಯಕರಾದರು. ಇವರ ಪಕ್ಷ ಮುಂದೆ 2016ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ. ಜನ ಸಾಮಾನ್ಯರು ಚಿತ್ರ ತಾರೆಯರ ವರ್ಚಸ್ಸಿನಿಂದ ಹೆಚ್ಚು ಕಾಲ ಹುಚ್ಚು ಹಿಡಿಸಿಕೊಳ್ಳಲಾರರು ಎಂಬುದಕ್ಕೆ ಇದೇ ಉದಾಹರಣೆ.

ಇಂದು ರಾಜಕೀಯ ಪಕ್ಷಗಳ ಸಂಖ್ಯೆ ಮಿತಿ ಮೀರಿದೆ. ಇಂಥ ಸನ್ನಿವೇಶದಲ್ಲಿ ಜನ ಮರುಳು (ಪಾಪ್ಯುಲಿಸ್ಟ್‌) ಕಾರ್ಯಕ್ರಮಗಳ ರಾಜಕೀಯಕ್ಕೆ ಹೆಚ್ಚಿನ ಪ್ರೋತ್ಸಾಹ. ಹೊಸದಾಗಿ ಅವತರಿಸುವ ಪಕ್ಷಗಳು ಆ ಚಂದ್ರನನ್ನೇ ತಂದು ನಿಮ್ಮ ಅಂಗೈಯಲ್ಲಿಡುತ್ತೇವೆ ಎಂಬಂಥ ಭರವಸೆ ನೀಡಿ ಮೇಲೆ ಬರುತ್ತವೆ. ಹೇಳಲೇಬೇಕಾದ ಮಾತೆಂದರೆ ತಮಿಳುನಾಡಿನ ಮತದಾರರು ಉಚಿತ ಕೊಡುಗೆಗಳ ರಾಜಕೀಯದಿಂದ ಭ್ರಷ್ಟಗೊಂಡಿದ್ದಾರೆ. ತಮಿಳು ನಾಡಿನ ಆರ್‌.ಕೆ. ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಂದೂಡಲ್ಪಟ್ಟದ್ದು, ಮತದಾರರಿಗೆ ಹಣ ಹಂಚಲಾಯಿತೆಂಬ ಕಾರಣಕ್ಕಾಗಿ. ಈ ಬಾರಿ ಎಐಎಡಿಎಂಕೆಯ ಬಂಡಾಯ ಅಭ್ಯರ್ಥಿ ದಿವಾಕರನ್‌ ಅವರು ಗೆದ್ದಿದ್ದಾರಾದರೂ, ಅವರ ಆಯ್ಕೆಯೂ ಮತದಾರರಿಗೆ ಹಣ ತಿನ್ನಿಸಿದ್ದರಿಂದಲೇ ಆಗಿದೆ ಎಂಬಂಥ ಆರೋಪಗಳು ಕೇಳಿ ಬಂದಿವೆ.

ರಜನೀಕಾಂತ್‌ ಅವರ ಈ ಹೊಸ ಸಾಹಸಕ್ಕಾಗಿ ನಾವು ಅವರನ್ನು ಖಂಡಿತ ಅಭಿನಂದಿಸೋಣ. ಆದರೆ ಇದೇ ವೇಳೆ ಜನಸೇವೆಯ ಮೂಲಕ, ಆಂದೋಲನ, ಹೋರಾಟ ಹಾಗೂ ಪಕ್ಷದ ಕಾರ್ಯಕರ್ತರ , ನಾಯಕರ ಪ್ರಾಂಜಲ ತ್ಯಾಗದ ಮೂಲಕ, ಅಂತೆಯೇ ಸುಸ್ಪಷ್ಟ ಸಿದ್ಧಾಂತದ ಫ‌ಲವಾಗಿ ಅಸ್ತಿತ್ವಕ್ಕೆ ಬರುವ ಪಕ್ಷಗಳು ದೇಶಕ್ಕೆ ಅತ್ಯಗತ್ಯ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ರಜನೀಕಾಂತ್‌ ತಮ್ಮಲ್ಲಿರುವ ಹಣಬಲದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಬಹುಶಃ ಕೋಟಿಗಟ್ಟಲೆ ಹಣ ಹಾಗೂ ಬೆಳ್ಳಿತೆರೆಯ ಮೇಲಿನ ತಮ್ಮ ಅತಿರೇಕದ ಅಭಿನಯ ಇವು ತಮಗೆ ಮತಗಳನ್ನು ತಂದುಕೊಡಲಿವೆ ಎಂದವರು ನಂಬಿದಂತಿದೆ. ಅಂದ ಹಾಗೆ ಅವರಿನ್ನೂ ತಮ್ಮ ಪಕ್ಷದ ಧ್ಯೇಯ, ಧೋರಣೆಗಳೇನೆಂಬುದನ್ನು ಪ್ರಕಟಿಸಿಲ್ಲ. ಜಯಲಲಿತಾ ರಂತೆಯೇ ಅವರು ಕೂಡ ತಮ್ಮ “ಕನ್ನಡ ಮೂಲ’ವನ್ನು ನಿರಾಕರಿಸಿ ತಮಿಳರಾಗಿಬಿಟ್ಟಿದ್ದಾರೆ. ಕೆಲವು ದಶಕಗಳಿಂದ ತಮಿಳು ನಾಡಿನಲ್ಲಿ ಪ್ರಾಂತೀಯ ಪಕ್ಷಪಾತ ಹಾಗೂ ಜಾತೀಯತೆಯ ಧೋರಣೆಗಳೇ ಮೇಲುಗೈ ಸಾಧಿಸಿರುವುದರಿಂದ, ಅಲ್ಲಿನವರೆಗೆ ಇವರ “ಕನ್ನಡಿಗ’ ವ್ಯಕ್ತಿತ್ವ ರುಚಿಸಲಾರದೆನ್ನುವುದು ನಿಜ. 

ರಾಜಕೀಯ ಪ್ರವೇಶದ ಆಮಿಷಕ್ಕೆ ಒಳಗಾಗದ ದಕ್ಷಿಣ ಭಾರತದ ಚಿತ್ರರಂಗದ ಮೇರುವ್ಯಕ್ತಿ ಒಬ್ಬರಿದ್ದರೆ ಅದು ನಮ್ಮ ರಾಜಕುಮಾರ್‌. 1978ರಲ್ಲಿ ನಡೆದ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಇಂದಿರಾಗಾಂಧಿಯವರ ವಿರುದ್ಧ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅವರ ಮೇಲೆ ಭಾರೀ ಒತ್ತಡ ಬಿದ್ದಿತು. ಆದರೆ ಅವರು ಈ ಪ್ರಸ್ತಾವಕ್ಕೆ ಒಪ್ಪಲಿಲ್ಲ. ತನ್ನ ಹೆಸರನ್ನು ಸೂಚಿಸಿದವರಿಗೆ, “ಇದೆಲ್ಲ ಬೇಡ, ನಿಮಗೆ ಧನ್ಯವಾದಗಳು’ ಎಂದು ಸುಮ್ಮನಾದರು.

ಹಿಂದಿ ಚಿತ್ರರಂಗದ ಅಮಿತಾಭ್‌ ಬಚ್ಚನ್‌, ಶತ್ರುಘ್ನ ಸಿನ್ಹಾ , ಜಯಾ ಬಾಧುರಿ ಹಾಗೂ ಜಯಪ್ರದಾ ಮುಂತಾದ ತಾರೆಯರು ರಾಜಕೀಯ ಪ್ರವೇಶ ಮಾಡಿ ಅದರಿಂದ ಹೊರ ಬಂದದ್ದಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಂಥ ಬಲಿಷ್ಠ ಪಕ್ಷಗಳನ್ನು ಇವರು ಸೇರಿಕೊಂಡಿದ್ದರು. ಇವರ ಪೈಕಿ ಯಾರೂ ರಜನೀಕಾಂತರಂತೆ ಸ್ವಂತ ಪಕ್ಷ ಕಟ್ಟಲಿಲ್ಲ. 

ರಜನೀಕಾಂತರಲ್ಲದೆ, ಎಂ.ಜಿ. ರಾಮಚಂದ್ರನ್‌ ಅವರು ದ್ರಾವಿಡ ರಾಜಕೀಯ ಆಂದೋಲನದಲ್ಲಿ ದೊಡ್ಡ ರೀತಿಯಲ್ಲಿ ಭಾಗಿಯಾದರು. ಅನೇಕ ವರ್ಷಗಳ ಕಾಲ ರಾಜಕೀಯ ಸೇವೆ ಸಲ್ಲಿಸಿದ ಬಳಿಕ ಅಧಿಕಾರಕ್ಕೆ ಬಂದರು. ಅವರು ದಿನ ಬೆಳಗಾಗುವುದರೊಳಗೆ ಮುಖ್ಯಮಂತ್ರಿಯಾದವರಲ್ಲ. ಆದರೆ ಜಯಲಲಿತಾ, ಎಂಜಿಆರ್‌ ಅವರ ಪ್ರೋತ್ಸಾಹದಿಂದಲೇ ರಾಜಕೀ ಯಕ್ಕೆ ಬಂದರು. ರಾಜಕೀಯ ರಂಗದಲ್ಲಿ ತಾರಾಪಟ್ಟವನ್ನೂ ಗಳಿಸಿದರು. ಸಿ.ಎನ್‌. ಅಣ್ಣಾದೊರೆ ಅವರಾಗಲಿ, ಎಂ. ಕರುಣಾನಿಧಿಯವರಾಗಲಿ ದ್ರಾವಿಡಪರ ಆಂದೋಲನದಲ್ಲಿ ಸಾಕಷ್ಟು ಬೆವರು ಹರಿಸಿಯೇ ಆಧಿಕಾರಕ್ಕೆ ಬಂದವರು.

ನಾವೀಗ ರಜನಿಕಾಂತ್‌ ನಡೆಯನ್ನು ಅನುಮಾನದ ಕಣ್ಣುಗ ಳಿಂದಲೇ ನೋಡಬೇಕಾಗಿದೆ. ತನ್ನ ಹೆಚ್ಚಿನ ಸಿನಿಮಾಗಳು ಭರ್ಜರಿ ವಿಜಯ ಸಾಧಿಸಿದಂತೆ ರಾಜಕೀಯ ಪ್ರವೇಶದಿಂದಲೂ ಅದೃಷ್ಟ ಖುಲಾಯಿಸೀತು ಎಂದು ಅವರು ಅಂದುಕೊಂಡಿದ್ದರೆ, ಅವರದು ಖಂಡಿತಾ ತಪ್ಪು ಲೆಕ್ಕಾಚಾರ. ಸಿನಿಪ್ರಿಯರ ಪೈಕಿ ಹೆಚ್ಚಿನವರು ಅವರ ಚಿತ್ರಗಳನ್ನು ನೆನಪಿಟ್ಟುಕೊಂಡಿರುವುದು, ಅವುಗಳಲ್ಲಿ ಅವರ ಪ್ರದರ್ಶಿಸುವ ಸ್ಟಂಟ್‌ಗಳಿಗಾಗಿ ಹೊರತು ಅದ್ಭುತ ಅಭಿನಯ ಕ್ಕಾಗಲಿ ನಿರ್ದೇಶನದ ಕೌಶಲಕ್ಕಾಗಲಿ ಅಲ್ಲ.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.