CONNECT WITH US  

ಕೋರೆಗಾಂವ್‌ ಸಮರ ಸಂಭ್ರಮಾಚರಣೆ ಯಾರ ಮೇಲೆ ಯಾರ ವಿಜಯ?

ಕೋರೆಗಾಂವ್‌ನ ಸ್ತಂಭದಂಥದೇ ನೆನಪಿನ ಸ್ತಂಭವೊಂದು ಬೆಂಗಳೂರಿನ ನರಸಿಂಹರಾಜ ಚೌಕದಲ್ಲಿತ್ತು.  ಮೂವತ್ತೈದು ಅಡಿಗಳಷ್ಟು ಎತ್ತರವಾಗಿದ್ದ ಈ ಸ್ಮಾರಕ ಸಮಾಧಿ ಸ್ತಂಭ ಕಾಲ ಕಳೆದಂತೆ, ಅವಮಾನದ ಸ್ತಂಭವೆಂದು ಪರಿಗಣಿಸಲ್ಪಟ್ಟಿತು. ಈ ಸಮರದಲ್ಲಿ ಟಿಪ್ಪುವಿನ ಸೇನಾಪಡೆ ಪಡೆದ ಸೋಲನ್ನು ಈ ಕಂಬ ನೆನಪಿಸುತ್ತಿತ್ತು. 

ನಮ್ಮದು ಬಹಳ ವಿಚಿತ್ರ ದೇಶ. ನಮ್ಮ ಮೇಲೆ ದಾಳಿ ನಡೆಸಿದ ಬ್ರಿಟಿಷರ, ಮುಸ್ಲಿಂ ದೊರೆಗಳ ಹಾಗೂ ನಮ್ಮನ್ನು ದಾಸ್ಯಕ್ಕೆ ತಳ್ಳ ಹೊರಟವರ ವಿರುದ್ಧ ನಡೆದ ಹೋರಾಟಗಳ ಬಗ್ಗೆ ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇತ್ತೀಚೆಗಷ್ಟೇ ಮಹಾ ರಾಷ್ಟ್ರದಲ್ಲಿ ಅಷ್ಟೇನೂ ಸುಪರಿಚಿತವಲ್ಲದ ಕೋರೆಗಾಂವ್‌ ಕದನದ ನೆನಪಿನ ದ್ವಿಶತಮಾನೋತ್ಸವ ಜರುಗಿದೆ. ಈ ಸಮರದ ಫ‌ಲವೆಂಬಂತೆ ಅಂದು ಮಹಾರರು (ದಲಿತರು) ಹಾಗೂ ಮರಾಠರು ಮತ್ತು ಹಿಂದೂಗಳ ಇತರ ವರ್ಗಗಳ ನಡುವೆ ಘರ್ಷಣೆ ಏರ್ಪಟ್ಟದ್ದನ್ನು ನಮ್ಮ ಇತಿಹಾಸ ಕಂಡಿದೆ. ವಿದೇಶಿ ದಾಳಿಕೋರರ ವಿರುದ್ಧದ ಕಾದಾಟದಲ್ಲಿ ಅಂದು ನಾವು ಕಂಡ ಸೋಲುಗಳ ನೆನಪು ವರ್ಷಗಳ ಬಳಿಕವೂ ನಮ್ಮನ್ನು ಕಾಡುತ್ತಿರುತ್ತದೆ. ಆದರೆ ಇಂಥದಕ್ಕೆಲ್ಲ ಏನು ಕಾರಣ ಎಂಬುದು ನಮಗೆ ಅರ್ಥವಾಗುವುದೇ ಇಲ್ಲ.

200 ವರ್ಷಗಳ ಹಿಂದೆ ನಡೆದ ಕಾಳಗ, ತಮ್ಮ ಯುದ್ಧ ಕಲೆಯ ಗುಣಮಟ್ಟದ ದ್ಯೋತಕ ಹೇಗೋ ಹಾಗೆಯೇ ಹಿಂದುಗಳ ಮೇಲಿನ ವಿಜಯ ಕೂಡ ಹೌದೆಂದು ಮಹಾರಾಷ್ಟ್ರದ ಮಹಾರರು ವಾದಿಸುತ್ತಿರುವುದು ನಿಜವಾದರೂ, ಇಂಥ ಹೆಮ್ಮೆ ಸಮಂಜಸವೇ ಅಥವಾ ಅಲ್ಲವೇ ಎಂಬ ಪ್ರಶ್ನೆಯೊಂದು ಎದುರಾಗುವುದಂತೂ ನಿಜ. ಪುಣೆಯ ಸಮೀಪದ ಭೀಮಾ ಕೋರೆಗಾಂವ್‌ ಗ್ರಾಮದ ಲ್ಲೊಂದು ಶಿಲಾ ನಿರ್ಮಿತ ವಿಜಯಸ್ತಂಭವಿದೆ. 1987ರ ಜನವರಿ ಯಲ್ಲಿ ದ್ವಿತೀಯ ಬಾಜಿರಾವ್‌ ಪೇಶ್ವೆಯ ಸೇನಾ ಪಡೆಗಳ ಮೇಲೆ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ಸಾಧಿಸಿದ ವಿಜಯವನ್ನು ನೆನಪಿಸುತ್ತಿರುವ ಸೂಚಿಶಿಖಾ ಸ್ತಂಭವಿದು. ಯುದ್ಧದಲ್ಲಿ ಪ್ರಾಣತೆತ್ತ ಬ್ರಿಟಿಷ್‌ ಹಾಗೂ ಭಾರತೀಯ ಸೈನಿಕರ ನೆನಪಿಗಾಗಿ ನಿಲ್ಲಿಸಿದ ಕಂಬ ಇದು. 834 ಪದಾತಿಗಳ ಸಣ್ಣ ತುಕಡಿಯೊಂದು (ಇವರಲ್ಲಿ 500 ಮಂದಿ ಮಹಾರರು) ಸುಮಾರು 28,000 ಸೈನಿಕರ ನ್ನೊಳಗೊಂಡ ಪೇಶ್ವೆ ಕಡೆಯ ಪಡೆಗಳನ್ನು ಮಟ್ಟ ಹಾಕಿತು ಎಂದು ಈ ಸ್ಮಾರಕ ಸ್ತಂಭದಲ್ಲಿ ಬರೆಯಲಾಗಿದೆ. ಕೊರೆಗಾಂವ್‌ ಸಮರ ಮಹಾರರ ಹೋರಾಟದ ಹಿಂದಿನ ಅಪ್ರತಿಮ ಕೆಚ್ಚಿಗೆ ಉದಾಹರಣೆ ಎಂಬ ಅಭಿಪ್ರಾಯವನ್ನು ಮಹಾರಾಷ್ಟ್ರದ ಕೆಲ ಇತಿಹಾಸಕಾರರು ವ್ಯಕ್ತ ಪಡಿಸಿದ್ದಾರೆ. 1927ರಲ್ಲಿ ಈ ವಿಜಯ ಸ್ತಂಭ ಸ್ಥಳಕ್ಕೆ ಭೇಟಿ ನೀಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು, ಇದನ್ನು ಮಹಾರ್‌ ಸಮುದಾಯದ ಅಭಿಮಾನದ ಪುನಶೆòತನ್ಯ ಪ್ರಕ್ರಿಯೆಗೆ ಹುರುಪು ನೀಡುವ ಸ್ಫೂರ್ತಿ ಸ್ತಂಭವನ್ನಾಗಿ ಮಾರ್ಪಡಿಸಿದರು. ಸ್ವತಃ ಅಂಬೇಡ್ಕರ್‌ ಮಹಾರ್‌ ಸಮುದಾಯದವರು. ಅವರ ತಂದೆ ರಾಮ್‌ಜಿ ಸಖ್‌ಪಾಲ್‌ ಬ್ರಿಟಿಷ್‌ ಸೇನೆಯಲ್ಲಿ ಓರ್ವ ಕಿರಿಯ ಅಧಿಕಾರಿಯಾಗಿದ್ದರು. ಪುಣೆಯಲ್ಲಿ ಕೋರೆಗಾಂವ್‌ ಪಾರ್ಕ್‌ ಎಂಬ ಹೆಸರಿನ ಸೊಗಸಾದ ಉದ್ಯಾನವನವಿದೆ. ಇದಕ್ಕೂ ಕೋರೆಗಾಂವ್‌ ಸಮರಕ್ಕೂ ಸಂಬಂಧವಿರಲಾರದು.

ಕೋರೆಗಾಂವ್‌ನ ಸ್ತಂಭದಂಥದೇ ನೆನಪಿನ ಸ್ತಂಭವೊಂದು ಬೆಂಗಳೂರಿನ ನರಸಿಂಹರಾಜ ಚೌಕದಲ್ಲಿತ್ತು. 1792ರಲ್ಲಿ ಟಿಪ್ಪು ಸೇನೆಯೊಂದಿಗಿನ ಬ್ರಿಟಿಷರು ನಡೆಸಿದ್ದ ಸಮರದಲ್ಲಿ ಸಾವನ್ನಪ್ಪಿದ ಬ್ರಿಟಿಷ್‌ ಸೈನಿಕರ ಸ್ಮಾರಕಾರ್ಥ ಸ್ಥಾಪಿಸಲಾಗಿದ್ದ ಸ್ತಂಭ ಇದು. (ಈ ಸಮರ ಎರಡನೆಯ ಮೈಸೂರು ಕದನವೆಂದೂ ಪ್ರಸಿದ್ಧ). 35 ಅಡಿಗಳಷ್ಟು ಎತ್ತರವಾಗಿದ್ದ ಈ ಸ್ಮಾರಕ ಸಮಾಧಿ ಸ್ತಂಭ ಕಾಲ ಕಳೆದಂತೆ, ಅವಮಾನದ ಸ್ತಂಭವೆಂದು ಪರಿಗಣಿಸಲ್ಪಟ್ಟಿತು. ಈ ಸಮರದಲ್ಲಿ ಟಿಪ್ಪುವಿನ ಸೇನಾಪಡೆ ಪಡೆದ ಸೋಲನ್ನು ಈ ಕಂಬ ನೆನಪಿಸುತ್ತಿತ್ತು. ಬ್ರಿಟಿಷ್‌ ಪಡೆಗಳು ಬೆಂಗಳೂರಿನಲ್ಲಿ ಮಹಾ ಮಾರಣ ಹೋಮಕ್ಕೆ ಹಾಗೂ ಎಗ್ಗಿಲ್ಲದ ಲೂಟಿ, ದರೋಡೆಗೆ ಕಾರಣರಾದರು. ಅವರ ಈ ಕೃತ್ಯದಿಂದಾಗಿ ಇಂದಿನ ಕೋಟೆ ಪ್ರದೇಶ ಹಾಗೂ ಕಲಾಸಿಪಾಳ್ಯಂ ಪ್ರದೇಶಗಳು ಬೃಹತ್‌ ಸಮಾಧಿ ಸ್ಥಳಗಳಾಗಿ ಪರಿವರ್ತಿತವಾದವು. ಟಿಪ್ಪು ಸುಲ್ತಾನ್‌ ಕುರಿತ ಪರ ಅಥವಾ ವಿರೋಧಿ ಭಾವನೆ ಅಥವಾ ಅಭಿಪ್ರಾಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರು ಅಥವಾ ಕೋಮುವಾದವೆಂದು ಹೀಗಳೆಯುವವರು ಅಂದಿನ ದಿನಗಳಲ್ಲಿ ಇರಲಿಲ್ಲ. ಈ ನಡುವೆ ಹೆಚ್ಚಿನವರು ಟಿಪ್ಪು ಸುಲ್ತಾನ್‌ ಓರ್ವ ವೀರದೊರೆ ಎಂದು, ಆತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆ 
ಎಂದು ನಂಬಿದ್ದು ನಿಜ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿ ಕಟ್ಟಡದ ಇದಿರಲ್ಲಿದ್ದ ಈ ಸಮಾಧಿಸ್ತಂಭವನ್ನು 1964ರಲ್ಲಿ ಕೆಡವಿ ಹಾಕಲಾಯಿತು. ಸಮಾಧಿ ಸ್ತಂಭದ ರಸ್ತೆಗೆ ನೃಪತುಂಗ ರಸ್ತೆ ಎಂದು ಪುನರ್‌ನಾಮಕರಣ ಮಾಡಲಾ ಯಿತು. ಹಳೇ ಬೆಂಗಳೂರಿನ ಮಂದಿ ಹಾಗೂ ಇತಿಹಾಸದ ಅರಿವುಳ್ಳ ಜನರನ್ನು ಹೊರತುಪಡಿಸಿದರೆ, ಐತಿಹಾಸಿಕ ಮಹತ್ವದ ಈ ರಸ್ತೆಯ ಹಳೆಯ ಹೆಸರು ಯಾರಿಗೂ ನೆನಪಿಲ್ಲ. ಈ ಸ್ತಂಭವನ್ನು ಕಿತ್ತು ಕೆಡವಿದ್ದಕ್ಕೆ ಕನ್ನಡ ಚಳವಳಿಕಾರರು ಮಾತ್ರವಲ್ಲ, ಆಗಿನ ಬೆಂಗಳೂರಿನ ಮೇಯರ್‌ ಜಿ. ನಾರಾಯಣ ಅವರಂಥವರೂ ಕಾರಣ. ಜಿ. ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ನಾಡಿಗೆ ಸೇವೆ ಸಲ್ಲಿಸಿದವರು.

ಹೀಗೆ ಚರಿತ್ರೆಯನ್ನಾಗಲಿ, 19ನೆಯ ಶತಮಾನದಲ್ಲಿ ಇಲ್ಲಿ ಮೆರೆದಾಡಿದ ಬ್ರಿಟಿಷ್‌ ಸಾಮ್ರಾಜ್ಯದ ಅಬ್ಬರವನ್ನಾಗಲಿ ಮಹಾರ್‌ ಸಮುದಾಯ ಅವಲೋಕಿಸುವ ರೀತಿಗೂ ಕನ್ನಡಿಗರು ವೀಕ್ಷಿಸುವ ರೀತಿಗೂ ಮೂಲಭೂತ ವ್ಯತ್ಯಾಸವಿದೆ. "ಇದು ರಾಷ್ಟ್ರಕ್ಕೆ ಅವಮಾನ ತರುವ ಸ್ಮಾರಕ' ಎಂದು ಹೇಳಿಕೊಂಡು ಅಯೋಧ್ಯೆಯ ಬಾಬ್ರಿ ಮಸೀದಿಯೆಂಬ ಹೆಸರಿನ ವಿವಾದಿತ ಕಟ್ಟಡವನ್ನು ಅಥವಾ ಬೆಂಗಳೂರಿನ ಸಮಾಧಿ ಸ್ತಂಭವನ್ನು ನೆಲಸಮಗೊಳಿಸುವ ಮೂಲಕ ನಾವು ಚರಿತ್ರೆಯನ್ನು ಪರಿಷ್ಕರಿಸಿ ಬರೆಯಲು ಸಾಧ್ಯವಿಲ್ಲ ವೆಂದು ನಾನು ಬಲ್ಲೆ. ಕೋರೆಗಾಂವ್‌ನ ಸ್ತಂಭ ಬ್ರಿಟಿಷರೆದುರು ನಾವು ಶರಣಾದೆವೆಂಬ ಕತೆಯನ್ನು ಬಿತ್ತರಿಸುತ್ತದೆ. ಈ ಸ್ಮಾರಕ ಈಗ ಹೇಗಿದೆಯೋ ಹಾಗೆಯೇ ಇರಲಿ. ಆಗ ಭಾರತದಲ್ಲಿದ್ದ ಬ್ರಿಟಿಷರ ಸಂಖ್ಯೆ ಕೆಲವೇ ಲಕ್ಷಗಳು (ಎರಡು ಲಕ್ಷ ಎನ್ನುವವರಿದ್ದಾರೆ). ಭಾರತ ವಿಭಜನೆಗಿಂತ ಮುಂಚೆ ಇದ್ದ ಭಾರತೀಯರ ಸಂಖ್ಯೆ 36 ಕೋಟಿ. ಹಾಗಿದ್ದರೂ ಅವರೇ ನಮ್ಮ ಮೇಲೆ ಯಜಮಾನಿಕೆ ಸ್ಥಾಪಿಸಿದರು, ನಮ್ಮ ಜನರನ್ನು ತಮ್ಮ ಸೇನೆ ಹಾಗೂ ಪೊಲೀಸು ಪಡೆಗೆ ಸೇರ್ಪಡೆಗೊಳಿಸಿ ಆಡಳಿತ ನಡೆಸಿದರು.

ಮಹಾರ್‌ ಸಮುದಾಯ ಎಂಥ ಹೀನ ಧೋರಣೆಯಿಂದ, ಅಸ್ಪೃಶ್ಯತೆಯ ಭಾವನೆಯಿಂದ ಹಾಗೂ ಸಮಾಜದಲ್ಲಿನ ಮೇಲು- ಕೀಳು ಭಾವದಂಥ ಪೀಡೆಗಳಿಂದ ಸಂಕಟ ಪಟ್ಟಿರಬಹುದಾದರೂ, ಕೋರೆಗಾಂವ್‌ ಸಮರದ 200ನೆಯ ವರ್ಷಾಚರಣೆಯ ವಿಷಯದಲ್ಲಿ ಅವರನ್ನು ಬೆಂಬಲಿಸುವುದು ನಿಜಕ್ಕೂ ಕಷ್ಟವೆನಿಸುತ್ತದೆ. ಆ ಯುದ್ಧದಲ್ಲಿ ಅವರು ಆಗಿನ ದಿನಗಳಲ್ಲಿ ತಮ್ಮ ದೊಡ್ಡ ಶತ್ರುಗಳಾಗಿದ್ದ ಮರಾಠರ ಕಡೆಯಿಂದ ತಮಗೆ ಎದುರಾಗುತ್ತಿದ್ದ ಸವಾಲುಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿಯೇ ಬ್ರಿಟಿಷರಿಗೆ ನೆರವಿತ್ತರು. ಮಹಾರಾಷ್ಟ್ರದ ಮಹಾರರು ಅಥವಾ ಆ ರಾಜ್ಯದ ಇತರ ದಲಿತರು ಭಾರತ ಗಣರಾಜ್ಯದ ಪರವಾಗಿ ತಾವು ನೀಡಿದ ಹೋರಾಟವನ್ನು ನೆನಪಿಸಿಕೊಂಡು ಅದನ್ನು ಆಚರಿಸಬೇಕಿತ್ತು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ (1857) ಬ್ರಿಟಿಷ್‌-ಭಾರತೀಯ ಸೇನೆಯಲ್ಲಿದ್ದ ಮಹಾರ್‌ ಸೈನಿಕರು ಬ್ರಿಟಿಷರ ವಿರುದ್ಧ ದಂಗೆಯೆದ್ದು ಹೋರಾಟ ನಡೆಸಿದ್ದರು. ಕೋರೆಗಾಂವ್‌ ಸಮರ ಅಥವಾ ಇನ್ನಿತರ ಯುದ್ಧಗಳಲ್ಲಿ ಮಹಾರರು ತೋರಿದ್ದ ನಿಷ್ಠೆಯ ಹೊರತಾಗಿಯೂ ಬ್ರಿಟಿಷರು ಅವರಿಗೆ ದ್ರೋಹವೆಸಗಿದ್ದರ ಹಿಂದಿನ ಕಾರಣಗಳ ಪೈಕಿ ಇದೂ ಒಂದು. ಬ್ರಿಟಿಷರು ಮಹಾರರನ್ನು ಭಾರತದಲ್ಲಿನ ಸಮರ ಕಲೆಗೆ ಸಂಬಂಧಿಸಿದ ವಿಷಯಗಳ ಯಾದಿಯಿಂದ ಹೊರಗಿಟ್ಟರು. ದೊಡ್ಡ ಸಂಖ್ಯೆಯಲ್ಲಿ ಮಹಾರ್‌ ಸೈನಿಕರನ್ನು ವಜಾ ಗೊಳಿಸಿದರು. ಸೇನೆಗೆ ಅವರನ್ನು ಸೇರಿಸಿಕೊಳ್ಳುವುದನ್ನೇ ನಿಲ್ಲಿಸಿದರು.

ಮಹಾರರ ಸೇನಾ ಸೇರ್ಪಡೆಗಿದ್ದ ನಿಷೇಧವನ್ನು ತೆಗೆದು ಹಾಕುವಂತೆ ಗೋಪಾಲಕೃಷ್ಣ ಗೋಖಲೆಯವರು ಡಾ| ಅಂಬೇಡ್ಕರರಿಗಿಂತ ಕೆಲ ದಶಕಗಳ ಮುಂಚೆಯೇ ಹೋರಾಟ ನಡೆಸಿದರು. ಅಂಬೇಡ್ಕರ್‌ ಅವರು 1941ರಲ್ಲಿ ವೈಸರಾಯ್‌ ಲಿನ್‌ಲಿತ್‌ಗೊà ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾದಾಗ ಈ ಪ್ರಯತ್ನದಲ್ಲಿ ಯಶಸ್ಸು ಕಂಡರು.

ದಲಿತರು ನಡೆಸಿದ ಕೋರೆಗಾಂವ್‌ ಸಮರದ 200ನೆಯ ನೆನಪಿನ ಆಚರಣೆ ಮಹಾರಾಷ್ಟ್ರದ ಕೆಲವೊಂದು ವರ್ಗಗಳ ಜನರನ್ನು ಕೆರಳಿಸಿದ್ದು ನಿಜವಾದರೂ, ಈ ಸಂಬಂಧದಲ್ಲಿ ಎರಡೂ ಬಣಗಳು ನಡೆಸಿದ ಹಿಂಸಾಕೃತ್ಯಗಳನ್ನು ಖಂಡಿಸಲೇಬೇಕು. ಯಾವ ವರ್ಗದ ಜನರೇ ಆಗಿರಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಲೇಕೂಡದು. ಕೋರೆಗಾಂವ್‌ ಆಚರಣೆಯನ್ನು ವಿರೋಧಿಸಿ ದವರಲ್ಲಿ ಬಹುಸಂಖ್ಯಾಕ ಮರಾಠರೂ ಸೇರಿದ್ದಾರೆ. ಕೋರೆಗಾಂವ್‌ ಸಮರವನ್ನು "ಮರೆತ ಯುದ್ಧ'ವೆಂಬ ಹೆಸರಿನಿಂದ ಚರಿತ್ರೆಯಿಂದ ಅಳಿಸಿ ಹಾಕುವಂತಿಲ್ಲ. ಯಾಕೆಂದರೆ, ನಮ್ಮ ಚರಿತ್ರೆಯ ಬಹುಮುಖ್ಯ ತಿರುವುಗಳಲ್ಲಿ ಇದೂ ಒಂದು. ಕೋರೆಗಾಂವ್‌ ಯುದ್ಧವಾಗಿ ಒಂದು ತಿಂಗಳ ಬಳಿಕ ಎರಡನೆಯ ಬಾಜಿರಾವ್‌ ಪೇಶ್ವೆ, ಬ್ರಿಟಿಷರ ವಿರುದ್ಧದ ಇನ್ನೊಂದು ಯುದ್ಧದಲ್ಲಿ ಸೋತು ಶರಣಾದ ಬಳಿಕ ಬ್ರಿಟಿಷರು ಪೇಶ್ವೆ ಪರಂಪರೆಯನ್ನೇ ನಿಷೇಧಿಸಿದರು. ಆತನನ್ನು ಕಾನ್ಪುರದ ಬಳಿಯ ಬಿಥೂರ್‌ಗೆ ಓಡಿಸ ಲಾಯಿತು. ಅಲ್ಲಿ ಆತ 1818ರಲ್ಲಿ ಕೇವಲ 22ರ ಹರೆಯದಲ್ಲೇ ಸಾವನ್ನಪ್ಪಿದ್ದನ್ನು ಚರಿತ್ರೆ ಕಂಡಿದೆ. ಮುಂದೆ ಆತನ ಮಲಮಗನಾದ ನಾನಾ ಸಾಹೇಬ್‌ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದು ಹೋರಾಡಿದ. "ಮರಾಠರ ಪತನದ ಬಳಿಕ, ಭಾರತದ ನೆಲದ ಮೇಲಿನ ಬ್ರಿಟಿಷ್‌ ಸಾಮ್ರಾಜ್ಯದ ಪ್ರಭಾವ ಹಾಗೂ ಅಧಿಕಾರ ಮಾಂತ್ರಿಕ ವೇಗ ಹಾಗೂ ತೀವ್ರತೆಯನ್ನು ಪಡೆದುಕೊಂಡಿತು' ಎಂದಿದ್ದಾರೆ ಪ್ರಸಿದ್ಧ ಇತಿಹಾಸಕಾರ, ಡಾ| ಕಾಲೀ ಕಿಂಕರ್‌ ದತ್ತಾ ಅವರು.

200 ವರ್ಷಗಳ ಹಿಂದಿನ ಕೋರೆಗಾಂವ್‌ ಸಮರದಲ್ಲಿ ಜಯ ಲಭಿಸಲು ತಮ್ಮ ಸಾಮರ್ಥ್ಯ ಕಾರಣವೆಂದು ಮಹಾರಾಷ್ಟ್ರದ ಮಹಾರರು ಅಭಿಮಾನ ಪಡುತ್ತಿದ್ದರೂ, ವಾಸ್ತವವಾಗಿ ಇದರ ಕೀರ್ತಿ ಬ್ರಿಟಿಷರ ಶಸ್ತ್ರ ಸಾಮರ್ಥ್ಯ ಹಾಗೂ ದಕ್ಷ ಮಿಲಿಟರಿ ಸಂಘಟನೆಗೆ ಸೇರಬೇಕು ಎಂದೂ ವಾದಿಸಬಹುದಾಗಿದೆ. 17 ಹಾಗೂ 18ನೆಯ ಶತಮಾನದವರೆಗೂ ಯುದ್ಧಗಳಲ್ಲಿ ಬಿಲ್ಲು, ಬಾಣ, ಖಡ್ಗ, ಭರ್ಚಿಗಳನ್ನೇ ಬಳಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಭರ್ಚಿಗಳು ಹಿಂದೆ ಬಿದ್ದವು. ಕೋವಿಗಳು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮುಂದೆ ಬಂದವು. ಶಿವಾಜಿ ಆಡಳಿತ ದಡಿಯಲ್ಲಿ ಗೆರಿಲ್ಲಾ ಯುದ್ಧ ಕಲೆಯಲ್ಲಿ ಪರಿಣತಿ ಸಾಧಿಸಿದ್ದ ಮರಾಠರು ಮುಂದೆ ಕ್ರಮೇಣ ಅದನ್ನು ಕೈಬಿಟ್ಟರು. ಆ ದಿನಗಳಲ್ಲಿ ಆಧುನಿಕ ಮಿಲಿಟರಿ ವ್ಯವಸ್ಥೆಗೆ ಪರ್ಯಾಯವಾದ ಯುದ್ಧಕಲೆ ಯೊಂದನ್ನು ರೂಪಿಸಲು ಭಾರತೀಯರಿಂದ ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕಾಗಿ ಪ್ಲಾಸಿ ಕದನ (1757) ಹಾಗೂ ಬಕ್ಸಾರ್‌ ಕದನ(1764)ದಂಥ ಐತಿಹಾಸಿಕ ಮಹಣ್ತೀದ ಯುದ್ಧಗಳಲ್ಲಿ ರಾಬರ್ಟ್‌ ಕ್ಲೈವ್‌ ಹಾಗೂ ಹೆಕ್ಟರ್‌ ಮನ್ರೊàರಂಥವರ ನೇತೃತ್ವದಲ್ಲಿದ್ದ ಚಿಕ್ಕಗಾತ್ರದ ಸೇನಾ ತುಕಡಿಗಳು ದೊಡ್ಡ ಸಂಖ್ಯೆಯಲ್ಲಿದ್ದ ಭಾರತೀಯ ಸೈನಿಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾದವು. ಮೊಘಲರು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸಿದ್ದು ಗನ್‌ಪೌಡರ್‌ ಮೂಲಕ ಎಂಬ ಮಾತೇ ಇದೆಯಲ್ಲ? ಸ್ವಾತಂತ್ರ್ಯ ದೊರೆತ ಬಳಿಕ ಕೂಡ ಕಾಶ್ಮೀರದ ಭಾಗಗಳು ಕಳೆದು ಕೊಂಡ ನಂತರವೂ ನಾವು ಯುದ್ಧ ನಿರ್ವಹಣೆ ಕಲೆಯಲ್ಲಿ ಯಾವುದೇ ಪಾಠ ಕಲಿಯಲಿಲ್ಲ. 1942ರಲ್ಲಿ ಸಾಕಷ್ಟು ಸಿದ್ಧತೆಯಿಲ್ಲದ ನಮ್ಮ ಸೇನೆ ಚೀನಿಯರೆದುರಿಗೆ ಕೈ ಚೆಲ್ಲಿತ್ತು. ಕಾರ್ಗಿಲ್‌ ಯುದ್ಧದಲ್ಲಿ ದೊರೆತ ವಿಜಯ, ಈ ಕ್ಷೇತ್ರದಲ್ಲಿನ ನಮ್ಮ ಸಾಧನೆಯ ಶುಭಾರಂಭ ಎನ್ನಬಹುದೇನೋ.

ಅರಕೆರೆ ಜಯರಾಮ್‌

Trending videos

Back to Top