ರಾಜ್ಯಸಭಾ ಚುನಾವಣೆ: ದುಡ್ಡಿನ ದೊಡ್ಡಪ್ಪಗಳಿಗೆ ಮಣೆ


Team Udayavani, Mar 28, 2018, 7:48 AM IST

election.jpg

ನಮ್ಮ ಸಂವಿಧಾನದಲ್ಲಿ ರಾಜ್ಯಸಭೆಯನ್ನು “ರಾಜ್ಯಗಳ ಪರಿಷತ್‌’ (ಕೌನ್ಸಿಲ್‌ ಆಫ್ ಸ್ಟೇಟ್ಸ್‌) ಹಾಗೂ ಲೋಕಸಭೆಯನ್ನು “ಜನಪ್ರತಿ ನಿಧಿಗಳ ಪರಿಷತ್‌’ ಅಥವಾ “ಜನಪ್ರತಿನಿಧಿ ಸಭೆ’ (ಹೌಸ್‌ ಆಫ್ ಪೀಪಲ್‌) ಎಂಬ ಹೆಸರಿನಿಂದ ಸೂಚಿಸಲಾಗಿದೆ. ಈ ಎರಡೂ ಸದನ ಗಳನ್ನು ಈಗಿರುವ ರಾಜ್ಯಸಭೆ – ಲೋಕಸಭೆ ಎಂಬ ಜನಪ್ರಿಯ ಹೆಸರುಗಳಿಂದ ಕರೆಯಲಾರಂಭಿಸಿದ್ದು 1954ರ ಬಳಿಕವಷ್ಟೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ ಹೇಗಿರುತ್ತದೆಯೆಂಬುದರತ್ತ ಒಮ್ಮೆ ಗಮನ ಹರಿಸಿ ದರೆ, ರಾಜ್ಯಗಳ ಪ್ರತಿನಿಧಿಗಳ ಸಭೆಯೆಂಬ ಈ ಸದನ ನಿಜಕ್ಕೂ “ರಾಜ್ಯ ರಹಿತ ಪ್ರತಿನಿಧಿಗಳ ಸಭೆ’ಯಾಗಿ ಬಿಟ್ಟಿದೆಯೇ ಎಂದು ಅಚ್ಚರಿ ಪಡುವಂತಾಗುತ್ತದೆ. ಕರ್ನಾಟಕದೊಂದಿಗೆ ಮೂಲ ಬೇರು ಗಳನ್ನೇ ಹೊಂದಿರದ ರಾಜಕಾರಣಿಗಳನ್ನು, ಕೈಗಾರಿಕೋದ್ಯಮಿ ಗಳನ್ನು ಹಾಗೂ ಇತರರನ್ನು ನಮ್ಮ ಗೌರವಾನ್ವಿತ ಶಾಸಕರು ಇಂದು ರಾಜ್ಯಸಭೆಗೆ ಆಯ್ದು ಕಳುಹಿಸುತ್ತಿದ್ದಾರೆ. ತೀರಾ ಇತ್ತೀಚಿನ ಉದಾ ಹರಣೆಯೆಂದರೆ, ಕೇರಳ ಮೂಲದ ಕೈಗಾರಿಕೋದ್ಯಮಿ ರಾಜೀವ್‌ ಚಂದ್ರಶೇಖರ್‌ ಅವರನ್ನು ಭಾರತೀಯ ಜನತಾಪಕ್ಷದ ಅಭ್ಯರ್ಥಿ ಯಾಗಿ ಆಯ್ಕೆ ಮಾಡಿರುವುದು. ಅವರು ಕೆಲ ವರ್ಷಗಳಿಂದ ಬಿಜೆಪಿಯೊಂದಿಗೆ ಸ್ನೇಹಯುತ ಸಂಪರ್ಕ ವಿರಿಸಿಕೊಂಡಿದ್ದರೂ ಅದರೊಳಗೆ ಪ್ರವೇಶ ಪಡೆದಿರುವುದು ಈಚೆಗಷ್ಟೆ. ರಾಜೀವ್‌ ಚಂದ್ರಶೇಖರ್‌ ಕರ್ನಾಟಕದ ಹೊರಗಿನ ವರಲ್ಲವೇ ಎಂಬ ಪ್ರಶ್ನೆ ಈಚೆಗೆ ಕ್ಷೀಣ ದನಿಯಲ್ಲಿ ಕೇಳಿ ಬಂದದ್ದು ನಿಜ.

“ಕರ್ನಾಟಕ ಹಾಗೂ ಬೆಂಗಳೂರಿನ ಪರವಾಗಿ ದನಿಯೆತ್ತುತ್ತ ಬಂದಿರುವ ಹಾಗೂ ಇಲ್ಲಿನ ಜನರಿಗಾಗಿ ಬಹಳಷ್ಟನ್ನು ಮಾಡಿರುವ ರಾಜೀವ್‌ ಚಂದ್ರಶೇಖರ್‌ ಅವರನ್ನು ಇಲ್ಲಿಂದ ರಾಜ್ಯಸಭೆಗೆ ಆಯ್ಕೆ ಮಾಡಿದರೆ ತಪ್ಪೇನು?’ ಎಂದು ಯಾರಾದರೂ ಪ್ರಶ್ನಿಸಿದಲ್ಲಿ, ಈ ಪ್ರಶ್ನೆಯನ್ನು ತಪ್ಪು ಎನ್ನುವಂತಿಲ್ಲ. ಎಲ್ಲೋ ದೂರದ ನಕ್ಷತ್ರವಾದ ಹಿಂದಿ ಚಿತ್ರ ನಟಿ – ನರ್ತಕಿ ಹೇಮಮಾಲಿನಿಯವರನ್ನು 2011ರಲ್ಲಿ ನಡೆದ ಉಪಚುನಾವಣೆಯೊಂದರಲ್ಲಿ ಇಲ್ಲಿಂದ ರಾಜ್ಯ ಸಭೆಗೆ ಆಯ್ಕೆ ಮಾಡಲಾಗಿತ್ತೆಂಬುದನ್ನು ನೆನಪಿಸಿಕೊಂಡಲ್ಲಿ ಮೇಲಿನ ಪ್ರಶ್ನೆ ತುಂಬ ಅರ್ಥಪೂರ್ಣವೇ ಹೌದು. ಆಕೆಯನ್ನು ಗೆಲ್ಲಿಸಿದ್ದು ಕೂಡ ಇದೇ ಬಿಜೆಪಿ. ಈ ಚಿತ್ರತಾರೆ ಇಂದು ತನ್ನ ಲೋಕಸಭಾ ಕ್ಷೇತ್ರವಾದ ಉತ್ತರಪ್ರದೇಶದ ಮಥುರಾದಲ್ಲಿ ಕಾಣಿಸಿ ಕೊಳ್ಳುವುದಕ್ಕಿಂತಲೂ ಸ್ವತ್ಛ ನೀರಿನ ಸಾಧನವೊಂದರ ಟಿ.ವಿ. ಜಾಹೀರಾತಿನಲ್ಲಿ ಕಾಣಿಸಿ ಕೊಳ್ಳುತ್ತಿರುವುದೇ ಹೆಚ್ಚು! ರಾಜ್ಯದ ಜನರ ಬಗ್ಗೆ ಈಕೆ ಎಷ್ಟೊಂದು “ಜಾಗರೂಕತೆ’ಯಿಂದ ಇದ್ದಾರೆಂದರೆ, ತನ್ನ ದೂರವಾಣಿ (ಸ್ಥಿರ ಅಥವಾ ಚರ) ಸಂಖ್ಯೆಗಳನ್ನು ಈಕೆ ಎಲ್ಲೂ ಜಾಹೀರು ಮಾಡುವ ಗೋಜಿಗೆ ಹೋಗಿಲ್ಲ; ಎಲ್ಲೇ ಆಗಲಿ ಹೇಳಿಕೆ ಕೊಡುವುದಿಲ್ಲ. ಭಾಷಣವನ್ನಾಗಲಿ, ಸಂವಾದವನ್ನಾಗಲಿ ಮಾಡುವು ದಿಲ್ಲ. ಬಹುಶಃ ಇಂಥ “ಕ್ಷುಲ್ಲಕ ವಿಷಯ’ಗಳನ್ನು ಕಟ್ಟಿಕೊಂಡು ಏಕೆ ತೊಂದರೆ ತಂದುಕೊಳ್ಳಬೇಕು ಎಂಬ ಧೋರಣೆ ಈಕೆಯದು.

ಎರಡು ವರ್ಷಗಳ ಹಿಂದೆ ಬಿಜೆಪಿಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕರ್ನಾಟಕ ವಿಧಾನಸಭೆ ಯಿಂದ ಗೆಲ್ಲಿಸಿ ರಾಜ್ಯಸಭೆಗೆ ಕಳುಹಿಸಿತ್ತು. ಈ ಹಿಂದೆ ಕರ್ನಾಟಕದಿಂದ ಯಾರೂ ರಕ್ಷಣಾ ಸಚಿವರಾಗಿರಲಿಲ್ಲ. ಇದಕ್ಕೂ ಮುನ್ನ ಇದೇ ಪಕ್ಷ ಇಂದು ಉಪರಾಷ್ಟ್ರಪತಿಯಾಗಿರುವ ಎಂ.ವೆಂಕಯ್ಯ ನಾಯ್ಡು ಅವರನ್ನು ಎರಡು ಬಾರಿ ಚುನಾಯಿಸಿತ್ತು. ರಾಜೀವ್‌ ಚಂದ್ರಶೇಖರ್‌, ನಿರ್ಮಲಾ ಸೀತಾರಾಮನ್‌ ಅಥವಾ ವೆಂಕಯ್ಯ ನಾಯ್ಡು ಒಂದರ್ಥದಲ್ಲಿ “ರಾಜ್ಯ ರಹಿತರು’, ಏಕೆಂದರೆ ಇವರುಗಳಿಗೆ ಸ್ವಂತ ರಾಜ್ಯಗಳಲ್ಲಿ ರಾಜಕೀಯ ನೆಲೆಯೆಂಬುದು ಇಲ್ಲ ಅಥವಾ ಇವರು ಯಾವ ಪಕ್ಷದಲ್ಲಿದ್ದಾರೋ ಆ ರಾಜಕೀಯ ಪಕ್ಷ ಇವರಿರುವ ರಾಜ್ಯಗಳಲ್ಲಿ ಇವರನ್ನು ಗೆಲ್ಲಿಸು ವಷ್ಟು ಸಂಖ್ಯೆಯ ಶಾಸಕರನ್ನು ಹೊಂದಿಲ್ಲ.

ಇಲ್ಲಿ ಕೇಳಲೇಬೇಕಿರುವ ಇನ್ನೊಂದು ಪ್ರಶ್ನೆ “ರಾಜ್ಯಸಭೆಯ ಸದಸ್ಯತ್ವವನ್ನು ಒಂದು ವೃತ್ತಿಯನ್ನಾಗಿ ಮಾರ್ಪಡಿಸಬೇಕೆ? ಈ ಪ್ರಶ್ನೆ ಉದ್ಭವಿಸಲು ಕಾರಣವಿದೆ. ಅದೇ ವ್ಯಕ್ತಿ ಪದೇ ಪದೇ ಆಯ್ಕೆ ಯಾಗುವುದನ್ನು ನೋಡುತ್ತಿದ್ದೇವೆ. ರಾಜೀವ್‌ ಚಂದ್ರಶೇಖರ್‌ ಈಗಾಗಲೇ ರಾಜ್ಯದಿಂದ ಎರಡು ಅವಧಿಗಳಿಗೆ ಆಯ್ಕೆಯಾಗಿದ್ದಾರೆ; ಮೂರನೆಯ ಅವಧಿಗೂ ಆಯ್ಕೆಯಾಗುವ ಅದೃಷ್ಟ ಅವರದಾಗಿದೆ. ಬಿಜೆಪಿ ತನ್ನ ಹಳೆಯ ಹಾಗೂ ಪಕ್ಷ ನಿಷ್ಠ ಸದಸ್ಯರಲ್ಲೊಬ್ಬರನ್ನು ಆಯ್ಕೆ ಮಾಡಬಹುದಿತ್ತು. ಹಾಗೆ ನೋಡಿದರೆ ರಾಜೀವ್‌ ಚಂದ್ರಶೇಖರ್‌ ಅವರ ಆಯ್ಕೆ ಕರ್ನಾಟಕ ಚುನಾವಣೆಗೆ ಯಾವ ರೀತಿಯಲ್ಲೂ ಸಹಾಯಕವಾಗದು.

ಕೇಂದ್ರದ ಮಾಜಿ ಸಚಿವರುಗಳಾದ ದಿವಂಗತ ಬಿ. ಶಂಕರಾನಂದ ಹಾಗೂ ಸಿ.ಕೆ. ಜಾಫ‌ರ್‌ ಶರೀಫ್ ನೇರ ಚುನಾವಣೆಗಳಲ್ಲಿ ಹಲವಾರು ಬಾರಿ, ಸಂಸತ್ತಿಗೆ ಆಯ್ಕೆಯಾಗಿದ್ದರು. ರಾಜ್ಯಸಭಾ ಚುನಾವಣೆಗಳು ಪರೋಕ್ಷ ಆಯ್ಕೆ ವಿಧಿಯಿಂದ ನಡೆಯುವಂತೆ ಆಗಿರುವುದರಿಂದ ಅವು ಅಧಿಕಾರಕ್ಕೆ ಸುಲಭದ ದಾರಿಗಳು! ಈಗ ರಾಜೀವ್‌ ಚಂದ್ರಶೇಖರ್‌ಗಾಗಿ “ಸದಸ್ಯತ್ವದ ಏಕಸ್ವಾಮ್ಯ ಅವಕಾಶ’ ವನ್ನು ಸೃಷ್ಟಿಸುವ ಬದಲಿಗೆ, ಬಿಜೆಪಿ ತನ್ನಲ್ಲಿದ್ದ ಅರ್ಹ ಸದಸ್ಯರುಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಬಹುದಿತ್ತಲ್ಲವೆ?

ಖಾಯಂ ವಾಸ ನೆಲೆ ಹಾಗೂ ರಾಜ್ಯಸಭಾ ಸದಸ್ಯತ್ವ

ಈ ಹಿಂದೆ ಕಮ್ಯುನಿಸ್ಟ್‌ ನಾಯಕ ಭೂಪೇಶ್‌ ಗುಪ್ತಾರಂಥ ಸದಸ್ಯರು 1952ರಿಂದ ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರೆ ಇದಕ್ಕೆ ಕಾರಣ ಅವರ ಸಂಸದೀಯ ವ್ಯವಹಾರದ ಅನುಭವ ಸಂಪನ್ನತೆ ಹಾಗೂ ಪ್ರತಿಭಾವಂತ ವ್ಯಕಿಣ್ತೀ. ದೇಶಕ್ಕೆ ಇಂಥ ಸಂಸದರ ಅಗತ್ಯ ಇದ್ದೇ ಇತ್ತು. ಇಂದು ಬಿಜೆಪಿಯ ಬಂಡಾಯ ನಾಯಕ ರಾಂ ಜೇಠ್ಮಲಾನಿ ಐದನೆಯ ಅವಧಿಗೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಅವರು ಒಂದು ಅವಧಿಗೆ ನಾಮಾಂಕಿತ ಸದಸ್ಯರಾಗಿದ್ದರು.

ರಾಜ್ಯ ರಹಿತ ಸಂಸತ್ಸದಸ್ಯರುಗಳ ಪಾಲಿಗೆ ಅನುಕೂಲವಾಗುವ ರೀತಿಯಲ್ಲಿ 2003ರಲ್ಲಿ, 1951ರ ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದು ಪಡಿ ತರುವ ಮೂಲಕ “ಖಾಯಂ ನೆಲೆ/ವಾಸದ ನಿಯಮ’  ವನ್ನು ಕೈಬಿಡಲಾಯಿತು. ಯಾವನೇ ವ್ಯಕ್ತಿ ಇಂದು ತನ್ನದಲ್ಲದ ಇತರ ಯಾವುದೇ ರಾಜ್ಯದಿಂದ ಮೇಲ್ಮನೆಗೆ ಆಯ್ಕೆಯಾಗಬಹು ದಾಗಿದೆ. 1993ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌. ಶೇಷನ್‌ ಅವರು ಹೀಗೆ ಸಾಮಾನ್ಯ ನಿವಾಸಿಗಳಲ್ಲದಿದ್ದರೂ ಕೆಲವು ರಾಜ್ಯಗಳಿಂದ ಆಯ್ಕೆಯಾಗಿದ್ದ 20 ರಾಜ್ಯಸಭಾ ಸದಸ್ಯರಿಗೆ ನೋಟೀಸು ನೀಡಿದ್ದರು. ನಮ್ಮವರೇ ಆದ ಎಸ್‌.ಆರ್‌. ಬೊಮ್ಮಾಯಿ ಒಡಿಶಾದಿಂದ ಆಯ್ಕೆಯಾಗಿದ್ದರು. ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕೂಡ ಗುಜರಾತಿನಲ್ಲಿ ತಾನು ವಾಸಿಸುತ್ತಿದ್ದೇ ನೆಂಬುದಕ್ಕೆ ತಮಗಿದ್ದ ಎಲ್‌ಪಿಜಿ ಸಂಪರ್ಕ ಪುರಾವೆ ಸಲ್ಲಿಸಿ ಆ ರಾಜ್ಯದಿಂದ ಚುನಾಯಿತರಾಗಿದ್ದರು. ಅಷ್ಟೇಕೆ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರು ಆಯ್ಕೆಯಾದುದು ತಮ್ಮ ಸ್ವಂತ ರಾಜ್ಯವಾದ ಪಂಜಾಬಿನಿಂದಲ್ಲ, ಅಸ್ಸಾಮಿನಿಂದ.

ಆದರೂ ಕುಲ್‌ದೀಪ್‌ ನಯ್ಯರ್‌ ಹಾಗೂ ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಖಾಯಂ ವಾಸದ ನಿಯಮಕ್ಕೆ ತರಲಾಗಿದ್ದ ತಿದ್ದುಪಡಿಯ ಸಿಂಧುತ್ವವನ್ನೇ ಎತ್ತಿ ಹಿಡಿಯಿತು. ಈ ಕಾಯ್ದೆ ಇಂದು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನೈಜ ವಾಸಸ್ಥಳದ ಬಗ್ಗೆ ಪ್ರಾಮಾಣಿಕ ವಿವರ ಸಲ್ಲಿಸಲು ಅನುಕೂಲ ಮಾಡಿ ಕೊಟ್ಟಿದೆ. ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌, ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ನಿರ್ಮಲಾ ಸೀತಾರಾಮನ್‌ ಮುಂತಾದ ಅರ್ಹ ವ್ಯಕ್ತಿಗಳಿಗೆ ರಾಜ್ಯಸಭಾ ಸದಸ್ಯರಾಗುವ ಅನುಕೂಲತೆಯನ್ನು ಒದಗಿಸಿಕೊಟ್ಟಿದೆ.

ಇದು ಒಂದೆಡೆಯಾದರೆ, ಇನ್ನೊಂದೆಡೆ ಚಿಂತೆಗೀಡು ಮಾಡುತ್ತಿರುವ ಸಮಸ್ಯೆಯನ್ನೂ ನಾವು ಗಮನಿಸಬೇಕಾಗಿದೆ.

ಇದೆಂದರೆ ಜನಸೇವೆಯ ಗಂಧಗಾಳಿಯೂ ಇಲ್ಲದ ಹಣದ ಮೂಟೆಗಳಾದ ವಾಣಿಜ್ಯೋದ್ಯಮಿಗಳು ಹಾಗೂ ಕೈಗಾರಿಕೋದ್ಯ ಮಿಗಳು ಆಯ್ಕೆಯಾಗುತ್ತಿರುವುದು. ರಾಜ್ಯದಿಂದ ರಾಜ್ಯಸಭೆಗೆ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ಸೂಪರ್‌ ಶ್ರೀಮಂತ ವರ್ಗದ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಆಯ್ಕೆ ಯಾಗುವುದನ್ನು ನೋಡುತ್ತಿದ್ದೇವೆ.

ಕರ್ನಾಟಕದ ಅಥವಾ ಇತರ ಕೆಲ ರಾಜ್ಯಗಳ ಮೇಲ್ಮನೆ ಚುನಾವಣೆಯಲ್ಲೂ ಇದೇ ಕತೆ. ದುಡ್ಡಿನ ದೊಡ್ಡಪ್ಪರ ಆಯ್ಕೆಯ ಬಗ್ಗೆ ಹಾಗೂ ರಾಜ್ಯಸಭಾ ಸದಸ್ಯ ಸ್ಥಾನಗಳನ್ನು ಪಕ್ಷದ ಅಧಿ ನಾಯಕರುಗಳು ಹರಾಜುಹಾಕುತ್ತಿರುವ ಬಗ್ಗೆ ಇದೇ ಅಂಕಣದಲ್ಲಿ ಈ ಹಿಂದೆ ಸಾಕಷ್ಟು ಬಾರಿ ಬರೆದದ್ದಾಗಿದೆ.

ಆಯ್ಕೆಗೆ ಸಂಪತ್ತು ಮಾನದಂಡ?

ಶ್ರೀಮಂತ ವ್ಯಕ್ತಿಯೊಬ್ಬರು ಸಂಸತ್ತಿಗೆ ಕಾಲಿರಿಸಬೇಕೆಂದು ಬಯಸಿದರೆ, ಇದಕ್ಕೆ ಯಾವುದೇ ನಿರ್ಬಂಧವೆಂಬುದು ಇರಲಾ ರದು. ಆದರೂ ಆತನ/ಆಕೆಯ ಅರ್ಹತೆಗೆ ಸಂಪತ್ತೂಂದೇ ಮಾನ ದಂಡವಾಗಬಾರದು. ಕಳೆದ ಕೆಲ ದಶಕಗಳಲ್ಲಿ ಅದರಲ್ಲೂ ಮುಖ್ಯವಾಗಿ ಉದಾರೀಕರಣದತ್ತ ನಾವು ಮುಖಮಾಡಿದ ಬಳಿಕದ ವರ್ಷಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದ ಚಿತ್ತ ರಾಜಕಾರಣ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯತ್ತ ಹೊರಳಿರು ವುದನ್ನು ನೋಡುತ್ತ ಬಂದಿದ್ದೇವೆ. ಹಿಂದಿನ ಕಾಲದಲ್ಲಿ, ಅಂತೆಯೇ ಸಮಾಜವಾದದ ಪ್ರಭಾವವಿದ್ದ ದಿನಗಳಲ್ಲಿ, ಮಂತ್ರಿ ಮಹೋದ ಯರುಗಳು ವಾಣಿಜ್ಯೋದ್ಯಮಿಗಳಿಗೆ ಹಾಗೂ ಕೈಗಾರಿಕೋದ್ಯ ಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದರು; ಚುನಾವಣೆ ಮತ್ತಿತರ ಕಾರ್ಯಗಳಿಗಾಗಿ ಬೇಕಿದ್ದ ಹಣಕ್ಕೆ ಅವರನ್ನೇ ಅವಲಂಬಿಸಿದ್ದರು. ಈಗ ಹಾಗಲ್ಲ, ಸ್ವತಃ ಕೈಗಾರಿಕೋದ್ಯಮಿ – ವಾಣಿಜ್ಯೋದ್ಯಮಿಗಳೇ ಸಂಸತ್ತಿಗೆ ಆಯ್ಕೆಯಾಗುತ್ತಿದ್ದಾರೆ; ನೀತಿ ರೂಪಣೆಯ ವಿಷಯದಲ್ಲಿ ಅವರೇ ಮಂತ್ರಿಗಳ ತಲೆಯ ಮೇಲೆ ಕುಳಿತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಸಂಸತ್‌ ಸದನದಲ್ಲಿ ಮಾತನಾಡುವ ಬದಲಿಗೆ, ಸ್ಥಾಯಿ ಸಮಿತಿಗಳಲ್ಲಿ ತಮ್ಮ ಪ್ರಭಾವವನ್ನು ಮರೆಯುತ್ತಿ ದ್ದಾರೆ. ತಮಗೆ ಇಷ್ಟ ಬಂದ ಸಮಿತಿಗಳಿಗೆ ನೇಮಕಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಮುಂದೆ ಹಿರಿಯ ಅಧಿಕಾರಿಗಳಿಗೆ ತಮ್ಮ ಬಳಿ ಬರುವಂತೆ ಫ‌ರ್ಮಾನು ಹೊರಡಿಸುತ್ತಾರೆ.

ಉದಾಹರಣೆಗೆ ನೆಲಕಚ್ಚಿದ ಕಿಂಗ್‌ ಫಿಶರ್‌ ವಿಮಾನಯಾನ ಸಂಸ್ಥೆಯ ವಿಜಯಮಲ್ಯ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದರು. ಕರ್ನಾಟಕ ಭೂ ವ್ಯವಹಾರ ಪಾರಂಗತರೊಬ್ಬರು ಸ್ಥಿರಾಸ್ತಿ ಮಸೂದೆಗೆ ಸಂಬಂಧಿಸಿದ ಸಮಿತಿಯ ಸದಸ್ಯರಾಗಿದ್ದರು. ಇಂಥ ಆರ್ಥಿಕಾಸಕ್ತಿ ಕುರಿತ ಪ್ರಶ್ನೆಗಳು ಸಾರ್ವಜನಿಕರ ಮನಸ್ಸಿಗೆ ತಟ್ಟುವುದೇ ಇಲ್ಲ.

ರಾಜಕೀಯ-ಪ್ರಜಾಪ್ರಭುತ್ವ ಹಾಗೂ ವಾಣಿಜೋದ್ಯಮಗಳ ನಡುವಿನ ಗಡಿಗೆರೆ ಮಸುಕಾಗುತ್ತ ಬರುತ್ತಿದೆ. ಈ ಹಿಂದೆಲ್ಲ ವಾಣಿಜ್ಯ ಕ್ಷೇತ್ರದ ಮಂದಿ, ಕೈಗಾರಿಕಾ ರಂಗದ ಮಂದಿ ಹಾಗೂ ಮಾಜಿ ಮಹಾ ರಾಜರಂಥವರು ಸ್ವತಂತ್ರ ಪಾರ್ಟಿ, ಜನಸಂಘ ಅಥವಾ ಪ್ರಜಾ ಸೋಶಲಿಸ್ಟ್‌ ಪಾರ್ಟಿಯ ಸದಸ್ಯರಾಗಿ ಆಯ್ಕೆಯಾ ಗುತ್ತಿದ್ದುದು ನಿಜ. ಕಾಂಗ್ರೆಸ್‌ ಪಕ್ಷವೂ ಇಂಥವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದೆ. ಒಮ್ಮೆಯಂತೂ ಕರ್ನಾಟಕ ಪ್ರಮುಖ ವಿರೋಧ ಪಕ್ಷವಾಗಿದ್ದ ಪ್ರಜಾ ಸೋಶಲಿಸ್ಟ್‌ ಪಾರ್ಟಿ, ಸಮಾಜ ವಾದದ ಗಂಧಗಾಳಿ ಇಲ್ಲದಿದ್ದ ಉದ್ಯಮ ದೊರೆಗಳನ್ನು ಹಾಗೂ ಊಳಿಗ ಮಾನ್ಯ ದಣಿಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿತ್ತು. ಇಂದಿನ ವ್ಯಾಪಾರ, ಕೈಗಾರಿಕೆ, ಸ್ಥಿರಾಸ್ತಿ ವ್ಯವಹಾರ ಅಥವಾ ಕ್ಯಾಪಿಟೇಶನ್‌ ಶುಲ್ಕಗಳ ಲಾಬಿಯ ಸದಸ್ಯರಂತೂ ಹಿಂದಿನವರಿಗಿಂತ ಜಾಣರು. ಲೋಕಸಭೆಗೆ ನಡೆಯುವ ಭಾರೀ ಸೆಣಸಾಟದ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಿಂತ ರಾಜ್ಯಸಭಾ ಚುನಾವಣೆಯ ಮೂಲಕ ಅಧಿಕಾರದ ರಾಜ್ಯಪಥವನ್ನು ಪ್ರವೇಶಿಸುವುದೇ ಹೆಚ್ಚು ಸುಲಭ ಎಂಬುದನ್ನು ಇವರು ಅರ್ಥಮಾಡಿಕೊಂಡಿದ್ದಾರೆ. ಅಲ್ಲದೆ ರಾಜ್ಯಸಭಾ ಚುನಾವಣೆಗೆ ಲೋಕಸಭಾ ಚುನಾವಣೆಯಂತೆ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಿಲ್ಲ; ಅದಕ್ಕಿಂತ ಇದೇ ಅಗ್ಗದ ವ್ಯವಹಾರ! ವಿಜಯ ಮಲ್ಯ ಎಂ.ಎ.ಎಂ. ರಾಮಸ್ವಾಮಿ, ಡಿ. ಕುಪೇಂದ್ರ ರೆಡ್ಡಿ , ಅಷ್ಟೇಕೆ ರಾಜೀವ್‌ ಚಂದ್ರಶೇಖರ್‌ರಂಥವರು ರಾಜ್ಯ ಸಭೆಗೆ ಆಯ್ಕೆಯಾಗಲು ತನ್ನ ಪಾಲಿನ ನೆರವಿತ್ತಿರುವ ಜೆಡಿಎಸ್‌, ಇಂಥವರೆಲ್ಲ ರೈತ ಸಮುದಾಯದ ಪ್ರತಿನಿಧಿಗಳು ಎಂದು ಹೇಳಲು ಸಿದ್ಧವಿದೆಯೆ?

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.