ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ವಿಪ್ರ ವರ್ಗಕ್ಕೆ ಭರವಸೆಯ ತುಪ್ಪ!


Team Udayavani, Jul 11, 2018, 9:10 AM IST

brahmana.jpg

ಸ್ಥಳೀಯವಾಗಿ ಬಲಿಷ್ಠವಾಗಿದ್ದ ಜಾತಿ-ಸಮುದಾಯಗಳ ಜನರು ಭೂ ಸುಧಾರಣೆಯ ನೆಪದಲ್ಲಿ ಬ್ರಾಹ್ಮಣರನ್ನು ಬದಿಗೊತ್ತಿ ಇವರ ಜಮೀನನ್ನು ಆಕ್ರಮಿಸಿಕೊಂಡರು. ಬ್ರಾಹ್ಮಣರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದು ನೆಲೆಸಲು ಹೀಗೆ ಭೂಮಿ ಕಳೆದುಕೊಂಡದ್ದೇ ಮುಖ್ಯ ಕಾರಣ. ಅನೇಕ ಗ್ರಾಮಗಳಲ್ಲಿ ಬ್ರಾಹ್ಮಣರನ್ನು ಅಕ್ಷರಶಃ “ಗುಡಿಸಿ’ ಹಾಕಲಾಗಿದೆ; ಅವರ ಮನೆಗಳು, ಅಗ್ರಹಾರಗಳು ಇಂದು ಬಹುತೇಕ ಬಿಕೋ ಎನ್ನುತ್ತಿವೆ. ಅನೇಕ ಹಳ್ಳಿಗಳಲ್ಲಿ ಸ್ಥಳೀಯ ಗ್ರಾಮ ಪುರೋಹಿತ/ಅರ್ಚಕನೆಂಬ ಹೆಸರಿನಲ್ಲಿ ಎಲ್ಲೋ ಒಬ್ಬ “ಒಂಟಿ ಬ್ರಾಹ್ಮಣ’ ಮಾತ್ರ ಕಾಣಿಸಿಕೊಂಡಾನು. 

ಒಬ್ಬ ಪತ್ರಕರ್ತನಾಗಿ ನಾನು ಮುಖ್ಯಮಂತ್ರಿ ಕುಮಾರಸ್ವಾಮಿಯವರ 2018-19ರ ಬಜೆಟ್‌ನಲ್ಲಿ ಹೊಸದೇನಾದರೂ ಇದೆಯೇ ಎಂದು ಸಹಜವಾಗಿಯೇ ಕಣ್ಣು ಹಾಯಿಸಿದಾಗ ನನಗೊಂದು ಹೊಸ ವಿಷಯ ಸಿಕ್ಕಿಯೇ ಬಿಟ್ಟಿತು. ಅದೆಂದರೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು ಎಂಬ ಘೋಷಣೆ. ರೈತರ ಸಾಲಮನ್ನಾ ಕುರಿತ ಇನ್ನೊಂದು ಘೋಷಣೆ ಕುರಿತಂತೆ ಮಾಧ್ಯಮಗಳಲ್ಲಿ ಬಹಳಷ್ಟು ಲೇಖನಗಳು ಕಾಣಿಸಿಕೊಂಡಿವೆ; ಸಾಕಷ್ಟು ಮಂದಿ ಈ ಬಗ್ಗೆ ಹುಯಿಲೆಬ್ಬಿಸಿದ್ದಾರೆ. 

ಹಾಗಾಗಿ ಈ ನಿರ್ಧಾರವನ್ನು ತೀರಾ ಹೊಸದೆಂದು ಹೇಳುವ ಹಾಗಿಲ್ಲ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸ್ಥಾಪನೆ ಕುರಿತಂತೆ ಹೇಳುವುದಾದರೆ, ಕುಮಾರಸ್ವಾಮಿ ತಮ್ಮ ಹಿಂದಿನ ಇಬ್ಬರು ಬ್ರಾಹ್ಮಣ ಮುಖ್ಯಮಂತ್ರಿಗಳು ಮಾಡಲು ಸಾಧ್ಯವಾಗದೆ ಹೋದ ಕೆಲಸವನ್ನು ಈಗ ಮಾಡಿ ತೋರಿಸಿದಂತಾಗಿದೆ. ಈ ಭೂತಪೂರ್ವ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ರಾಮಕೃಷ್ಣ ಹೆಗಡೆಯವರು ತಮ್ಮನ್ನು “ಜಾತ್ಯತೀತ ರಾಷ್ಟ್ರೀಯ ನಾಯಕ’ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಾರಣ ಪ್ರಜಾಪೂರ್ವಕವಾಗಿಯೇ ಈ ಕೆಲಸ ಮಾಡಲಿಲ್ಲ. ಹೆಗಡೆಯವರ ಉತ್ತರಾಧಿಕಾರಿಯಾದ ಆರ್‌. ಗುಂಡೂರಾವ್‌ ಇನ್ನಷ್ಟು ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಇದನ್ನು ಮಾಡುತ್ತಿದ್ದರೇನೋ. ಗುಂಡೂರಾವ್‌ ಅವರು ಅಧಿಕಾರ ಕಳೆದುಕೊಂಡ ಮೇಲೆ ಬ್ರಾಹ್ಮಣ ವರ್ಗದ ಕಲ್ಯಾಣದ ತೀವ್ರ ಪ್ರತಿಪಾದಕರಾಗಿ ಕಾಣಿಸಿಕೊಂಡವರು.

ಹಾಗೆ ನೋಡಿದರೆ, ಬಜೆಟ್‌ನಲ್ಲಿ ಉಲ್ಲೇಖೀಸದೆ ಬಿಟ್ಟಿರುವ ಇನ್ನೊಂದು ಘೋಷಣೆಯಿದೆ. ಅದೆಂದರೆ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸ್ಥಾಪನೆ ಕುರಿತ ನಿರ್ಧಾರ. ಕುಮಾರಸ್ವಾಮಿ ತಮ್ಮ ಈ ಬಜೆಟ್‌ನಲ್ಲಿ ಇನ್ನೊಂದು ಘೋಷಣೆಯನ್ನೂ ಮಾಡಿದ್ದಾರೆ – ಶಂಕರ ಜಯಂತಿ ಆಚರಿಸುವ ಸರಕಾರದ ನಿರ್ಧಾರ ಕುರಿತ ಘೋಷಣೆ ಇದು. ಈ ಘೋಷಣೆಯ ಮೂಲಕ ಅವರು “ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಮುಖಂಡರನ್ನು ಹೊರಗಿಟ್ಟು ಸರಕಾರಿ ಪ್ರಾಯೋಜಿತ ಜಯಂತಿಗಳನ್ನು ಆಚರಿಸಬೇಕೆನ್ನುವ ಸಿದ್ದರಾಮಯ್ಯ ಸರಕಾರದ ಪಕ್ಷಪಾತಿ ಧೋರಣೆಯನ್ನು ತಿರಸ್ಕರಿಸಿದಂತಾಗಿದೆ. ವಸ್ತುತಃ ಶಂಕರಾಚಾರ್ಯರು ಬ್ರಾಹ್ಮಣ ವರ್ಗಕ್ಕಷ್ಟೇ ಸೀಮಿತರಲ್ಲ; ಅವರು ಅದ್ಭುತ ಹಿಂದೂ ತತ್ವಜ್ಞಾನಿಗಳಲ್ಲೊಬ್ಬರು. 

ಬ್ರಾಹ್ಮಣ ಸಮುದಾಯದಲ್ಲಿನ ದುರ್ಬಲ ವರ್ಗಗಳಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ವಿಷಯದಲ್ಲಿ ನಮ್ಮ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಎಷ್ಟೋ ಮುಂದಿವೆ. 2014ರಲ್ಲಿಯೇ ಆಂಧ್ರಪ್ರದೇಶ ಬ್ರಾಹ್ಮಣ ಕಲ್ಯಾಣ ನಿಗಮ ಅಸ್ತಿತ್ವಕ್ಕೆ ಬಂದಿದೆ; ಇದಾದ ಎರಡು ವರ್ಷಗಳ ಬಳಿಕ ತೆಲಂಗಾಣ ಬ್ರಾಹ್ಮಣ ಸಂರಕ್ಷಣ ಪರಿಷದ್‌ (ಕಲ್ಯಾಣ ಮಂಡಳಿ) ಸ್ಥಾಪನೆಗೊಂಡಿತು.

ಆರ್ಥಿಕ ಹಿಂದುಳಿದಿರುವಿಕೆಗೆ ಸೂಕ್ತ ಪರಿಹಾರ ಕಂಡುಕೊಳ್ಳ ಬೇಕೆಂಬ ಉಲ್ಲೇಖ ನಮ್ಮ ಸಂವಿಧಾನದಲ್ಲಿ ಇಲ್ಲ; ಬ್ರಾಹ್ಮಣ ಹಾಗೂ ವೈಶ್ಯ ಸಮುದಾಯಕ್ಕಾಗಿ ಕಲ್ಯಾಣ ಕ್ರಮ ಕೈಗೊಳ್ಳುವ ಕರ್ನಾಟಕ ಸರಕಾರದ ನಿರ್ಧಾರ ಇಂಥ ಲೋಪವನ್ನು ನೀಗಿಸುವ ನಿಟ್ಟಿನಲ್ಲಿ ಸ್ವಾಗತಾರ್ಹ ಪ್ರಯತ್ನವೇ ಹೌದು. ಸಂವಿಧಾನ ಕೇವಲ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತಷ್ಟೇ ಹೇಳುತ್ತದೆ. ಸುಪ್ರೀಂ ಕೋರ್ಟ್‌ ಕೂಡ ತನ್ನ ಹಲವಾರು ತೀರ್ಪು/ನಿರ್ದೇಶಗಳಲ್ಲಿ ಆರ್ಥಿಕ ಹಿಂದುಳಿದಿರುವಿಕೆಯ ಪ್ರಸ್ತಾವವನ್ನು ತಿರಸ್ಕರಿಸಿದೆ. ನಮ್ಮ ಸಂವಿಧಾನದ ಮಾರ್ಗದರ್ಶಿ ಸೂತ್ರದಲ್ಲೊಂದು (46ನೆಯ ವಿಧಿ) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಹಾಗೂ ಇತರ ದುರ್ಬಲ ವರ್ಗಗಳವರ ಶೈಕ್ಷಣಿಕ ಹಾಗೂ ಆರ್ಥಿಕ ಹಿತಾಸಕ್ತಿಗಳ ಕುರಿತು ಉಲ್ಲೇಖೀಸುತ್ತದಾದರೂ, ಈ ಸೂತ್ರ “ಮುಂದುವರಿದಿರುವ ವರ್ಗ’ಗಳಲ್ಲಿರುವ ಆರ್ಥಿಕ ದುರ್ಬಲರಿಗೆ ಅನ್ವಯಿಸುವುದಿಲ್ಲ ವೆಂದೇ ನ್ಯಾಯಾಂಗ ತಜ್ಞರ ಅಭಿಪ್ರಾಯ. ಸುಪ್ರೀಂ ಕೋರ್ಟಿನ ಭೂತಪೂರ್ವ ನ್ಯಾಯಾಧೀಶ ಪಿ.ಬಿ. ಸಾವಂತ್‌ ಇಂಥವರಲ್ಲೊ ಬ್ಬರು. ಆರ್ಥಿಕ ಸ್ಥಿತಿಗತಿಯ ಆಧಾರದಲ್ಲಿ ಹಿಂದುಳಿದಿರುವಿಕೆಯನ್ನು ಗುರುತಿಸುವ ಕೆಲಸವಾಗಬೇಕು ಎಂಬಂಥ ಸಲಹೆಗಳು ಹಾಗೂ ಬೇಡಿಕೆಗಳು ವ್ಯಕ್ತವಾಗಿವೆಯಾದರೂ ಇವೆಲ್ಲ ಸಮಾಜದ ಗಣ್ಯ ವರ್ಗಕ್ಕೆ ಸೇರಿರುವ ಸಂಗತಿಗಳು ಎಂಬ ನಿಲುವಿನೊಂದಿಗೆ ಅವೆಲ್ಲವನ್ನೂ ತಿರಸ್ಕರಿಸಲಾಗಿದೆ. ಆದರೂ ಶಿಕ್ಷಣ ಹಾಗೂ ಸರಕಾರಿ ಹುದ್ದೆಗಳ ಮೀಸಲಾತಿಗೆ ಪ್ರಯತ್ನಿಸುವವರ ಹಿಂದುಳಿದ ವರ್ಗಗಳ ಪೈಕಿ ಕೆನೆಪದರ ಹಂತದಲ್ಲಿರುವವರನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಮಾನದಂಡವನ್ನು ಸುಪ್ರೀಂ ಕೋರ್ಟ್‌ ಚಾಲ್ತಿಗೆ ತಂದಿದೆ. 
ಆದರೆ ಇಂಥ ಮಾನದಂಡದಿಂದ ಪರಿಶಿಷ್ಟರಿಗೆ ವಿನಾಯಿತಿ ನೀಡಲಾಗಿದೆ; ಅವರ ಆರ್ಥಿಕ ಸಾಮರ್ಥ್ಯ ಎಷ್ಟೇ ಇದ್ದರೂ 
ಅವರು ಮೀಸಲಾತಿಗೆ ಅರ್ಹರು ಎಂಬಂಥ ವಾತಾವರಣ ಈಗ ನಮ್ಮಲ್ಲಿದೆ. 

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕೆಲಸ ಕರ್ನಾಟಕದಲ್ಲಿ ದೀರ್ಘ‌ಕಾಲದಿಂದಲೂ ನಡೆಯುತ್ತ ಬಂದಿದೆ; ಈ ಕ್ರಮ 1921ರಿಂದಲೇ ಚಾಲ್ತಿಯಲ್ಲಿದೆ. ಒಂದು ಕಾಲದಲ್ಲಿ ಇಲ್ಲಿ ಮುಂದುವರಿದ ವರ್ಗಗಳಲ್ಲಿನ ಆರ್ಥಿಕ ದುರ್ಬಲರಿಗೆ ಮೀಸಲಾತಿ ಒದಗಿಸುವ ಸಲುವಾಗಿಯೇ “ವಿಶೇಷ ಗುಂಪು’ (ಸ್ಪೆಶಲ್‌ ಗ್ರೂಪ್‌) ಎಂಬ ವರ್ಗವೊಂದನ್ನು ಸೃಷ್ಟಿಸಲಾಗಿತ್ತು. ಹಾವನೂರು ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಅಸ್ತಿತ್ವಕ್ಕೆ ತರಲಾದ “ಹೊಸವರ್ಗ’ ಇದು. ಈ ವಿಶೇಷ ವರ್ಗದ ಪ್ರಸ್ತಾವವನ್ನು ಸುಪ್ರೀಂ ಕೋರ್ಟಿನಲ್ಲಿ ವಸಂತ ಕುಮಾರ್‌ ಹಾಗೂ ಕರ್ನಾಟಕ ಸರಕಾರದ ನಡುವಣ ಪ್ರಕರಣದಲ್ಲಿ ಪ್ರಶ್ನಿಸಲಾಯಿತು. ನ್ಯಾಯಮೂರ್ತಿ ಡಿ.ಎ. ದೇಸಾಯಿ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸುವಾಗ ಆರ್ಥಿಕ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕು ಎಂದು ಅಭಿಪ್ರಾಯಪಟ್ಟದ್ದು ಇದೇ ಪ್ರಕರಣದಲ್ಲಿ. ಆದರೆ ಅವರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿಲ್ಲ. 

ಕುಮಾರಸ್ವಾಮಿ ಅವರು ಅಷ್ಟೊಂದು ಸುಭದ್ರವಲ್ಲದ ಮೈತ್ರಿ ಸರಕಾರದ ನೇತೃತ್ವ ವಹಿಸಿದ್ದಾರೇನೋ ಹೌದು. ಆದರೆ ಬ್ರಾಹ್ಮಣರದು ಮುಂದುವರಿದ ವರ್ಗ; ಹಾಗಾಗಿ ಅವರಿಗೆ ಸರಕಾರಿ ಸೌಲಭ್ಯಗಳ ಅಗತ್ಯವಿಲ್ಲ ಎಂಬ ಧೋರಣೆಯಿರಿಸಿಕೊಂಡ ದೀರ್ಘ‌ಕಾಲದ ಸಂಪ್ರದಾಯವೊಂದನ್ನು ಮುರಿಯುವ ಧೈರ್ಯವನ್ನು ಈ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಬಗೆಗಿನ ಘೋಷಣೆಯ ಮೂಲಕ ಪ್ರದರ್ಶಿಸಿದ್ದಾರೆ. ಇಂಥ ಸಂಪ್ರದಾಯ ಶುರುವಾದದ್ದು ಹಳೇ ಮೈಸೂರು ಭಾಗದಲ್ಲಿ; ಹಿಂದುಳಿದ ವರ್ಗ ಗಳ ಅಥವಾ ಬ್ರಾಹ್ಮಣೇತರರ ಆಂದೋಲನವೊಂದು ಆರಂಭ ವಾ ದಾಗ. ಇದಕ್ಕೆ ಮುನ್ನವೇ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ನ್ಯಾ| ಲೆಸ್ಲಿ ಮಿಲರ್‌ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಹಳೇ ಮೈಸೂರಿನಂತೆಯೇ, ಭೂತಪೂರ್ವ ಮದ್ರಾಸ್‌ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕ ಜಿಲ್ಲೆಗಳಲ್ಲೂ ಮೀಸಲಾತಿ ವ್ಯವಸ್ಥೆಯಿತ್ತು. ಹಳೇ ಹೈದರಾಬಾದ್‌ ಜಿಲ್ಲೆಗಳಲ್ಲಿ ಮುಸ್ಲಿಮರು ವಿಶೇಷ ಸವಲತ್ತುಗಳ ವರ್ಗಕ್ಕೆ ಸೇರಿದವರಾಗಿದ್ದರು. ಬ್ರಾಹ್ಮಣೇತರರ ವರ್ಗದವರ ಹಾಗೂ ಮುಂದೆ ನಡೆದ ಹಿಂದುಳಿದ ವರ್ಗದವರ ಆಂದೋಲನ, “ಬ್ರಾಹ್ಮಣರು ಎಲ್ಲ ತೆರನ ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿ ಅವಕಾಶಗಳನ್ನು ಪಡೆದುಕೊಳ್ಳುತ್ತಿ ದ್ದಾರೆ; ಉಳಿದವರ ಅವಕಾಶಗಳನ್ನು ಕಬಳಿಸುತ್ತಿದ್ದಾರೆ’ ಎಂಬ ವಾದದ ಫ‌ಲಶ್ರುತಿಯಾಗಿತ್ತು. ಸ್ವಾತಂತ್ರ ಪೂರ್ವದಲ್ಲೂ, ಆ ಮೇಲಿನ ಹಲವಾರು ವರ್ಷಗಳಲ್ಲೂ ಬ್ರಾಹ್ಮಣ ವಿರೋಧಿ ಧೋರಣೆ ಯೆಂಬುದು ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಅತ್ಯಂತ ಪ್ರಬಲವಾಗಿತ್ತು.

ಕರ್ನಾಟಕದಲ್ಲಿ ನಗರಪ್ರದೇಶದಲ್ಲಿ ಬ್ರಾಹ್ಮಣರ ಸ್ಥಿತಿ ಸ್ವಲ್ಪ ಮಟ್ಟಿಗೆ “ದಟ್ಟ ಕೆನೆಪದರ’ದ ಹಂತ ತಲುಪಿದೆಯಾದರೂ ಒಟ್ಟಾರೆಯಾಗಿ ರಾಜ್ಯದಲ್ಲಿ ಅವರ ಬಡತನದ ಸ್ಥಿತಿಗೆ ಹಾದಿ ಮಾಡಿಕೊಟ್ಟಿರುವ ಕಾರಣಗಳು ಹಲವಾರಿವೆ. ನಮ್ಮ ಸರಕಾರಿ ಸೇವೆಗಳಲ್ಲಿ ಅವರಿಗೆ ಸಿಕ್ಕಿರುವ ಪ್ರಾತಿನಿಧ್ಯದ ಪ್ರಮಾಣ, ಉಳಿದವರಿಗೆ ಹೋಲಿಸಿದರೆ ತೀರಾ ಇಳಿಕೆ ಕಂಡಿದೆ – ಕೇವಲ ಶೇಕಡಾ ನಾಲ್ಕರಷ್ಟು ಅಷ್ಟೇ. ವಿದ್ಯಾವಂತ , ಅರೆ ವಿದ್ಯಾವಂತ ಬ್ರಾಹ್ಮಣ ಯುವಕ- ಯುವತಿಯರು ಸರಕಾರಿ ಉದ್ಯೋಗವನ್ನು ನಿರೀಕ್ಷಿಸುವಂತಿಲ್ಲ; ಅಂಥ ಅವಕಾಶವನ್ನು ನಿರಾಕರಿಸಲಾಗಿದೆ. ಒಂದು ವೇಳೆ ಸರಕಾರಿ ನೌಕರಿ ದೊರೆತರೂ ಇತರ ಕೆಲವೊಂದು ವರ್ಗಗಳಿಗೆ ಮೀಸಲಾತಿ ಹಾಗೂ ಭಡ್ತಿಯಲ್ಲೂ ಮೀಸಲಾತಿಯಂಥ ಅವಕಾಶಗಳು ಹೆಚ್ಚಿರುವುದರಿಂದ ಬ್ರಾಹ್ಮಣ ಉದ್ಯೋಗಿಗಳು ಹಿಂದುಳಿಯಬೇ ಕಾಗಿ ಬಂದಿದೆ. 

ಕೆಲ ಬ್ರಾಹ್ಮಣ ಯುವಕ-ಯುವತಿಯರು ಐಎಎಸ್‌ ಅಥವಾ ಇತರ ರಾಷ್ಟ್ರಮಟ್ಟದ ಸೇವೆಗಳಿಗೆ ಸೇರ್ಪಡೆಗೊಂ ಡರೂ, ಹಾಗೆ ಸೇರ್ಪಡೆಗೊಳ್ಳುವುದು “ಅದೃಷ್ಟದ ಆಟ’ ಎಂಬಂತಾಗಿದೆ. ಉನ್ನತ ಶಿಕ್ಷಣಾವಕಾಶ ಒತ್ತಟ್ಟಿಗಿರಲಿ, ಎಸ್‌ಎಸ್‌ಎಲ್‌ಸಿ ಬಳಿಕದ ವಿದ್ಯಾವಕಾಶವೂ ಬ್ರಾಹ್ಮಣ ಮಕ್ಕಳ ಕೈಗೆಟುಕದ ಹಾಗಾಗಿದೆ. ಇನ್ನು ವೃತ್ತಿಪರ ಕೋರ್ಸುಗಳತ್ತ ಕೈ ಚಾಚೋಣವೆಂದರೆ, “ಜನರಲ್‌ ಕೆಟಗರಿ’ಯಲ್ಲಿ ತೀವ್ರ ಪೈಪೋಟಿಯಿರುವುದರಿಂದ; ಖಾಸಗಿ ವೃತ್ತಿಪರ ಕಾಲೇಜುಗಳು ದುಬಾರಿ ಶುಲ್ಕಗಳನ್ನು ವಿಧಿಸುವುದರಿಂದ ಅರ್ಹ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೂ ಒಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. 

ರಾಜ್ಯದಲ್ಲಿ ಹಾಗೂ ದೇಶದಲ್ಲಿ ಚಾಲ್ತಿಯಲ್ಲಿರುವ ಸಮಾಜವಾದಿ ಧೋರಣೆಯ ಶಾಸನಗಳು, ವಿಶೇಷವಾಗಿ ಬ್ರಾಹ್ಮಣ ವರ್ಗದ ಮೇಲೆ ತಮ್ಮದೇ ದುಷ್ಪರಿಣಾಮ ಬೀರಿವೆ. ಉದಾಹರಣೆಗೆ ಶ್ಯಾನುಭೋಗ ಹುದ್ದೆಯಂಥ ಗ್ರಾಮೀಣ ಮಟ್ಟದ ವಂಶ ಪಾರಂಪರ್ಯ ಹುದ್ದೆಗಳ ರದ್ದತಿ ಕಾಯಿದೆ, ಇನಾಂ ಹಿಡುವಳಿ ಹಕ್ಕನ್ನು ಅನೂರ್ಜಿತಗೊಳಿಸಿದ ಕಾಯಿದೆ; ಎಲ್ಲಕ್ಕಿಂತ ಮುಖ್ಯವಾಗಿ 1961 ಹಾಗೂ 1974ರ ಭೂ ಸುಧಾರಣಾ ಕಾಯಿದೆಗಳು. ಭೂ ಸುಧಾರಣಾ ಕಾಯ್ದೆಯಂತೂ ಅತ್ಯಂತ ಕ್ರೂರ ಹಾಗೂ ಹಿನ್ನಡೆ ಧೋರಣೆಯ ಶಾಸನವೆಂಬ ಆಕ್ಷೇಪಕ್ಕೆ ಗುರಿಯಾಗಿದೆ.

ಸಾವಿರಾರು ಬ್ರಾಹ್ಮಣ ಕುಟುಂಬಗಳು ತಮ್ಮ ಕೃಷಿ ಭೂಮಿಯನ್ನು ಗೇಣಿಗೆ ನೀಡಿದ್ದರಿಂದ ಭೂಮಿ ಕಳೆದುಕೊಳ್ಳಬೇಕಾಗಿ ಬಂತು. ಕರಾವಳಿ ಜಿಲ್ಲೆಗಳು, ಶಿವಮೊಗ್ಗ , ಮೈಸೂರು, ಮಂಡ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೂಡ ಸಾವಿರಾರು ಜಮೀನಾªರರು ಈ ಕಾಯಿದೆಯಿಂದಾಗಿ ತತ್ತರಿಸುವಂತಾಯಿತು. ಸ್ಥಳೀಯವಾಗಿ ಬಲಿಷ್ಠವಾಗಿದ್ದ ಜಾತಿ- ಸಮುದಾಯಗಳ ಜನರು ಭೂ ಸುಧಾರಣೆಯ ನೆಪದಲ್ಲಿ ಇವರುಗಳನ್ನು ಬದಿಗೊತ್ತಿ ಇವರ ಜಮೀನನ್ನು ಆಕ್ರಮಿಸಿಕೊಂಡರು. ಬ್ರಾಹ್ಮಣರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದು ನೆಲೆಸಲು ಹೀಗೆ ಭೂಮಿ ಕಳೆದುಕೊಂಡದ್ದೇ ಮುಖ್ಯ ಕಾರಣ. ಅನೇಕ ಗ್ರಾಮಗಳಲ್ಲಿ ಬ್ರಾಹ್ಮಣರನ್ನು ಅಕ್ಷರಶಃ “ಗುಡಿಸಿ’ ಹಾಕಲಾಗಿದೆ; ಅವರ ಮನೆಗಳು, ಅಗ್ರಹಾರಗಳು ಇಂದು ಬಹುತೇಕ ಬಿಕೋ ಎನ್ನುತ್ತಿವೆ. ಅನೇಕ ಹಳ್ಳಿಗಳಲ್ಲಿ ಸ್ಥಳೀಯ ಗ್ರಾಮ ಪುರೋಹಿತ/ಅರ್ಚಕನೆಂಬ ಹೆಸರಿನಲ್ಲಿ ಎಲ್ಲೋ ಒಬ್ಬ “ಒಂಟಿ ಬ್ರಾಹ್ಮಣ’ ಮಾತ್ರ ಕಾಣಿಸಿಕೊಂಡಾನು. 

ಹಾವನೂರು ವರದಿಗೆ ಬರೆದ ಸಮೀಕ್ಷಾ ಬರಹವೊಂದರಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿಂದಿನ ಅಧ್ಯಕ್ಷ ಪಿ.ಎಚ್‌. ಕೃಷ್ಣ ರಾವ್‌ ಅವರು, “ಕರ್ನಾಟಕದಲ್ಲಿ ಬ್ರಾಹ್ಮಣನೆಂದರೆ ಇಂದು ಕಿರುಕುಳಕ್ಕೊಳಗಾದ ವರ್ಗಕ್ಕೆ ಸೇರಿದವನು, ಬ್ರಾಹ್ಮಣನಾಗಿ ಹುಟ್ಟಿದ್ದಾನೆಂಬ ಕಾರಣಕ್ಕಾಗಿಯೇ ಎಂಬಂತೆ ಸರಕಾರದ ತಾರತಮ್ಯ ಧೋರಣೆಗೆ ಬಲಿಯಾಗುತ್ತಿದ್ದಾನೆ’ ಎಂದು ಹೇಳಿರುವುದಕ್ಕೆ ಇದೂ ಒಂದು ಕಾರಣ.
ಕರ್ನಾಟಕದ ರಾಜಕೀಯದಲ್ಲಿ, ಅಷ್ಟೇಕೆ, ಸಾರ್ವಜನಿಕ ಜೀವನದಲ್ಲಿ ಕೂಡ ಬ್ರಾಹ್ಮಣರು ಅಪ್ರಸ್ತುತರಾಗುತ್ತಿದ್ದಾರೆಂದರೆ ಇದಕ್ಕೆ ಕಾರಣ, ಹಳ್ಳಿಗಳಲ್ಲಿ ಅವರ ಬೇರು ಕಿತ್ತು ಹೋಗಿರುವುದು ಹಾಗೂ ಅವರ ಜನಸಂಖ್ಯಾ ಪ್ರಮಾಣ ತೀರಾ ಅಲ್ಪವಾಗಿರುವುದು. ನೂತನ ವಿಧಾನಸಭೆಯ 12 ಮಂದಿ ಬ್ರಾಹ್ಮಣ ಸದಸ್ಯರು ಹಾಗೂ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬ್ರಾಹ್ಮಣ ಸದಸ್ಯರು ಹಾಗೆ ಗೆಲುವು ಸಾಧಿಸಲು ಕಾರಣ ಅವರ ವೈಯಕ್ತಿಕ ವರ್ಚಸ್ಸೇ. ಬ್ರಾಹ್ಮಣರು ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿ ಇದ್ದವರು; ಕಾಂಗ್ರೆಸ್‌ ಹಾಗೂ ಬಿಜೆಪಿಯಂಥ ರಾಜಕೀಯ ಪಕ್ಷಗಳನ್ನು ಕಟ್ಟುವಲ್ಲೂ ಮುಖ್ಯಪಾತ್ರ ವಹಿಸಿದವರು. ಅವರು ಪದೇ ಪದೇ ಮಾಡುತ್ತಿದ್ದ ಪ್ರಮಾದವೆಂದರೆ ಚುನಾವಣೆಯಲ್ಲಿ ಗೆಲ್ಲುವ ತಿಲಮಾತ್ರದ ಸಾಧ್ಯತೆಯೂ ಇಲ್ಲದಂಥ ಜನಸಂಘ ಹಾಗೂ ಕಮ್ಯುನಿಸ್ಟ್‌ ಪಕ್ಷಗಳಿಗೆ ಸೇರ್ಪಡೆ ಆಗುತ್ತಿದ್ದುದು.

ಪ್ರಸ್ತಾವಿತ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಗ್ರಾಮೀಣ ಪ್ರದೇಶದಲ್ಲಿ ಬಡ ಅರ್ಚಕನ ಪಾಲಿಗೆ ಪ್ರಯೋಜನಕಾರಿಯಾಗಲಿ. ನಮ್ಮ ವಿವಾಹ ಮಂಟಪಗಳಲ್ಲಿ ಸ್ವಾದಿಷ್ಟ ಭೋಜನ ತಯಾರಿಸಿಕೊಡುವ ಬಾಣಸಿಗ ಬಂಧುವಿನ ನೆರವಿಗೆ ಬರಲಿ. ಯಾವುದೋ ಖಾಸಗಿ ಶಾಲೆಯಲ್ಲಿ ನಾಮ್‌ಕೇ ವಾಸ್ತೆ ಸಂಬಳ ಪಡೆದು ದುಡಿಯುತ್ತಿರುವ ಅಧ್ಯಾಪಕನತ್ತ ಲಕ್ಷ್ಯವಹಿಸಲಿ. ಅಥವಾ ಸಾಹುಕಾರನೊಬ್ಬನ ಕೈಕೆಳಗೆ “ರೈಟರ್‌’ ಕೆಲಸ ಮಾಡುತ್ತ ಬದುಕುತ್ತಿರುವ ಕಷ್ಟಜೀವಿಯ ಸಹಾಯಕ್ಕೆ ಒದಗಿಬರಲಿ.

ಇನ್ನು, ಆರ್ಥಿಕಾನುಕೂಲ ಕುಟುಂಬದ (ಸ್ಥಿತಿವಂತ) ಬ್ರಾಹ್ಮಣನ ಬಗ್ಗೆ ಹೇಳುವುದಾದರೆ, ಹೀಗೊಂದು ಬ್ರಾಹ್ಮಣಾಭಿವೃದ್ಧಿ ಸ್ಥಾಪಿಸುವ ಬಗೆಗಿನ ಸರಕಾರದ ನಿರ್ಧಾರ ಕುರಿತ ವರದಿಯತ್ತ ಕಣ್ಣು ಹಾಯಿಸುವ ಗೋಜಿಗೂ ಹೋಗಲಾರ!

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.