ಸುಟ್ಟು ಕರಕಲಾದ ಬಿಗ್‌ಬಾಸ್‌ ಮನೆ


Team Udayavani, Feb 23, 2018, 12:56 PM IST

bigboss-house.jpg

ರಾಮನಗರ: ಕನ್ನಡ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್‌ ಬಾಸ್‌ ಮನೆಗೆ ಬೆಂಕಿ ಬಿದ್ದಿದೆ! ಬಿಗ್‌ ಬಾಸ್‌ ಕಾರ್ಯಕ್ರಮದ ಚಿತ್ರೀಕರಣ ನಡೆಯುತ್ತಿದ್ದ ಬೃಹತ್‌ ಬಂಗಲೆಯ ಬಹುತೇಕ ಭಾಗ ಸುಟ್ಟು ಭಸ್ಮವಾಗಿದೆ. ಅವಘಡಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಕಾರಣವಿರಬಹುದು ಎನ್ನಲಾಗಿದ್ದು, ತನಿಖೆ ನಂತರವಷ್ಟೇ ಘಟನೆಯ ನೈಜ ಕಾರಣ ಸ್ಪಷ್ಟವಾಗಲಿದೆ.

ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿ ಬಿಗ್‌ ಬಾಸ್‌ ಮನೆಯ ಅದ್ಧೂರಿ ಸೆಟ್‌ ಇದೆ. ಕನ್ನಡಿಗರ ಮನೆಮಾತಾಗಿರುವ ಈ ಜನಪ್ರಿಯ ರಿಯಾಲಿಟಿ ಶೋಗೆ ಬಳಕೆಯಾಗುತ್ತಿದ್ದ ಬೃಹತ್‌ ಮನೆಯಲ್ಲಿ ಬಿಗ್‌ಬಾಸ್‌ ನ ಐದು ಸೀಸನ್‌ಗಳ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ.

ಇತ್ತೀಚೆಗಷ್ಟೇ ಐದನೇ ಸೀಸನ್‌ ಮುಗಿದಿದ್ದು, ಚಂದನ್‌ ಶೆಟ್ಟಿ “ಬಿಗ್‌ಬಾಸ್‌’ ಆಗಿ ಹೊರಹೊಮ್ಮಿದ್ದರು. ಆದರೆ ಪ್ರಸ್ತುತ ಆಕಸ್ಮಿಕ ಬೆಂಕಿ ತಗುಲಿ ಇಡೀ ಸೆಟ್‌ ಸುಟ್ಟು ಕರಕಲಾಗಿದೆ. ಗುರುವಾರ ಬೆಳಿಗಿನಜಾವ 3.30ರ ಸಮಯದಲ್ಲಿ ಘಟನೆ ಸಂಭವಿಸಿದ್ದು, ಕೋಟ್ಯಾಂತರ ರೂ. ಮೌಲ್ಯದ ನಷ್ಟವುಂಟಾಗಿದೆ.

ಬಿಗ್‌ಬಾಸ್‌ ಶೂಟಿಂಗ್‌ ನಡೆಯುತ್ತಿದ್ದ ಮನೆ, ಪ್ರವಾಸಿಗರ ವೀಕ್ಷಣೆಗೆ ನಿರ್ಮಿಸಿದ್ದ ಬಿಗ್‌ ಬಾಸ್‌ ಮಾದರಿ ಮನೆ ಮತ್ತು ವ್ಯಾಕ್ಸ್‌ ಮ್ಯೂಸಿಯಂ (ಮೇಣದ ಪ್ರತಿಮೆಗಳ ಸಂಗ್ರಹಾಲಯ) ಕೂಡ ಬೆಂಕಿಗೆ ಆಹುತಿಯಾಗಿದೆ. ಬೆಳಗಿನ ಜಾವ ಮೊದಲು ವ್ಯಾಕ್ಸ್‌ ಮ್ಯೂಸಿಯಂಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಿಗ್‌ ಬಾಸ್‌ ಮನೆಗೂ ಹರಡಿದೆ. ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಹೊತ್ತಿ ಉರಿದಿವೆ.

ಬಿಗ್‌ಬಾಸ್‌ ಮನೆಯಿಂದ ದಟ್ಟ ಹೊಗೆ ಹೊರಬರುವವರೆಗೂ ಅಲ್ಲಿ ಬೆಂಕಿ ಬಿದ್ದಿರುವ ವಿಷಯ ಫಿಲಂಸಿಟಿಯಲ್ಲಿ ಕಾವಲಿಗಿದ್ದ ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿಲ್ಲ. ಆದರೆ ಬಿಗ್‌ ಬಾಸ್‌ ಮನೆಯಿಂದ ದಟ್ಟ ಹೊಗೆ ಹರಡಿದ್ದನ್ನು ಕಂಡ ಸೆಕ್ಯೂರಿಟಿ ಗಾರ್ಡ್‌ಗಳು, ತಕ್ಷಣ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ. ಜತೆಗೆ ಅಲ್ಲೇ ಇದ್ದ ಸಿಬ್ಬಂದಿ ನೆರವಿನೊಂದಿಗೆ ಸ್ವತಃ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಆರಿಸಲು ಸಾಧ್ಯವಾಗಲಿಲ್ಲ.

ಸತತ ಐದು ಗಂಟೆ ಕಾರ್ಯಾಚರಣೆ: ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಸಮೀಪದಲ್ಲೇ ಇರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಹಾಗೂ ಬಾಷ್‌ ಕಂಪನಿಗಳು ನೆರವಿಗೆ ಧಾವಿಸಿದ್ದು, ತಮ್ಮಲ್ಲಿರುವ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿವೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸುವ ಮೊದಲೇ ಈ ಖಾಸಗಿ ವಾಹನಗಳು ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದವು. 

ನಂತರ ರಾಮನಗರ, ಚನ್ನಪಟ್ಟಣ, ಕನಕಪುರ, ಕೆಂಗೇರಿ, ಬೆಂಗಳೂರು ಕಡೆಯಿಂದ ಆಗಮಿಸಿದ ಸುಮಾರು 30 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗ್ನಿ ಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು.

ಭಸ್ಮವಾದ ಭವ್ಯ ಬಂಗಲೆ!: ಬೆಳಗಿನಜಾವ 3.30ರ ಸುಮಾರಿಗೆ ವ್ಯಾಕ್ಸ್‌ ಮ್ಯೂಸಿಯಂನಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ನಂತರ ಕಲೆವೇ ಕ್ಷಣಗಳಲ್ಲಿ ಬೆಂಕಿ ಬಿಗ್‌ಬಾಸ್‌ ಮನೆಗೂ ಅವರಿಸಿ ಪಕ್ಕದಲ್ಲಿದ್ದ ಮಾದರಿ ಬಿಗ್‌ ಬಾಸ್‌ ಮನೆಗೂ ಹಬ್ಬಿದೆ. ಬಿಗ್‌ಬಾಸ್‌ ರಿಯಾಲಿಟಿ ಶೋಗಾಗಿಯೇ ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿ ಭವ್ಯವಾದ ಮನೆ ನಿರ್ಮಾಣವಾಗಿತ್ತು.

ಇಲ್ಲಿ ಬಿಗ್‌ ಬಾಸ್‌ ರಿಯಾಲಿಟಿ ಶೋದ ಚಿತ್ರೀಕರಣ ನಡೆಯುತ್ತಿತ್ತು. ಇನ್ನು ಬಿಗ್‌ಬಾಸ್‌ ಮನೆಗೆ ಭೇಟಿ ಕೊಡಲು ಪ್ರವಾಸಿಗರು ಹಾತೊರೆಯುತ್ತಿದ್ದ ಕಾರಣ ಫಿಲಂ ಸಿಟಿಯ ಆಡಳಿತ, ಬಿಗ್‌ಬಾಸ್‌ ಮನೆಯ ಮಾದರಿ ಮನೆ ನಿರ್ಮಿಸಿತ್ತು. ಆಮೂಲಕ ಪ್ರವಾಸಿಗರು ಸಹ ಬಿಗ್‌ಬಾಸ್‌ ಮನೆಯೊಳಗೆ ಹೋಗಿ ಸರ್ಧಿಗಳು ಪಡೆಯುವ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಿಗಿನ ಜಾವ ನಡೆದ ಬೆಂಕಿ ಅವಘಡದಲ್ಲಿ ಈ ಎರಡೂ ಮನೆಗಳು ಭಸ್ಮವಾಗಿವೆ.

ಬೆಂಕಿ ಬಿಸಿಗೆ ಕರಗಿದ ಪ್ರತಿಮೆಗಳು: ಬೆಂಕಿ ಅವಘಡದಿಂದಾಗಿ ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿದ್ದ ವ್ಯಾಕ್ಸ್‌ ಮ್ಯೂಸಿಯಂನಲ್ಲಿ ಮಹಾತ್ಮಗಾಂಧಿ, ಐನ್‌ಸ್ಟಿನ್‌, ಮದರ್‌ ಥೆರೆಸಾ, ಬಿಲ್‌ ಕ್ಲಿಂಟನ್‌, ದಲೈಲಾಮ, ಮೋನಾಲಿಸಾ, ಚಾರ್ಲಿ ಚಾಪ್ಲಿನ್‌ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಹಾಗೂ ಪ್ರಸಿದ್ಧ ವ್ಯಕ್ತಿಗಳ, ಪ್ರಾಣಿ ಪಕ್ಷಿಗಳ, ಡಿಸ್ನಿ ಪಾತ್ರಗಳು ಸೇರಿದಂತೆ 60ಕ್ಕೂ ಹೆಚ್ಚು ಮೇಣದ ಪ್ರತಿಮೆಗಳಿದ್ದವು. ಗುರುವಾರ ಬೆಳಗಿನಜಾವ ಕಾಣಿಸಿಕೊಂಡ ಬೆಂಕಿಯ ಬಿಸಿಗೆ ಈ ಎಲ್ಲ ಪ್ರತಿಮೆಗಳು ಕರಗಿ ಹೋಗಿವೆ. 10 ವರ್ಷಗಳ ಹಿಂದೆ ಈ ಮ್ಯೂಸಿಯಂ ಸ್ಥಾಪನೆಯಾಗಿದ್ದು, ಇದು ಭಾರತದ ಪ್ರಥಮ ವ್ಯಾಕ್ಸ್‌ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ತನಿಖೆಯಿಂದ ಕಾರಣ ಸ್ಪಷ್ಟ: ಬಿಗ್‌ಬಾಸ್‌ ಮನೆಗೆ ಬೆಂಕಿ ಬೀಳಲು ಶಾರ್ಟ್‌ ಸರ್ಕಿಟ್‌ ಕಾರಣ ಎಂದು ಶಂಕಿಸಲಾಗಿದೆ. ಆದರೆ ವಿಧಿವಿಜ್ಞಾನ ತನಿಖೆಯ ವರದಿ ಬಂದ ನಂತರವಷ್ಟೇ ನಿಜ ಕಾರಣ ತಿಳಿಯಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌, ಡಿವೈಎಸ್ಪಿ ತಮ್ಮಯ್ಯ ಹಾಗೂ ಫಿಲಂ ಸಿಟಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.