CONNECT WITH US  

ಅಭ್ಯರ್ಥಿ ಆಯ್ಕೆ ವರಿಷ್ಠರ ತೀರ್ಮಾನವೇ ಅಂತಿಮ 

ಕನಕಪುರ: ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಯಾರೆಂಬುದನ್ನು ಈಗಲೇ ಹೇಳಲಾಗದು, ಸಮ್ಮಿಶ್ರ ಸರ್ಕಾರ ಇರುವುದರಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. 

ತಾಲೂಕಿನ ಮರಳವಾಡಿ ಗ್ರಾಮದ ಕೋಟೆ ಇಷ್ಟಾರ್ಥ ಗಣಪತಿ ದೇವಾಲಯದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿ ಆಯೋಜಿಸಿದ್ದ ಅತಿರುದ್ರ ಮಹಾಯಾಗ ಮತ್ತು ಶತಚಂಡಿಕಾಯಾಗ ಹಾಗೂ ಗಣಪತಿ ಸಹಸ್ರನಾಮ ಪೂರ್ವಕ ಕೋಟಿ ದುರ್ವಾಚನೆ ಮಹೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ನಾಡಿನ ಜನರ ಆಶೀರ್ವಾದ ಹಾಗೂ ದೇವರ ಅನುಗ್ರಹದಿಂದ ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದು, ಉತ್ತಮ ಆಡಳಿತ ನೀಡಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ವಿವಾದಗಳು ಬರದಿರಲಿ ಎಂದು ಪ್ರಾರ್ಥಿಸಿದ್ದಾಗಿ ಹೇಳಿದ ಅವರು, ಮಹಿಳೆಯರು, ಮಕ್ಕಳು, ರೈತರಿಗೆ, ಅಂಗವಿಕಲರಿಗೂ ಎಲ್ಲರ ಅಭಿವೃದ್ಧಿಗೆ ಕುಮಾರಸ್ವಾಮಿಯವರು ಶ್ರಮಿಸುತ್ತಾರೆ ಎಂದು ಹೇಳಿದರು. 

ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ , ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ತಾಪಂ ಸದಸ್ಯರಾದ ಕೆ.ಎನ್‌.ರಾಮು, ಶಿಲ್ಪಾ ಶಿವಾನಂದ , ಮುಖಂಡರಾದ ಭೈರೇಗೌಡ, ತಮ್ಮಣ್ಣ , ಕೃಷ್ಣಮೂರ್ತಿ, ರಹಮತ್ತುಲ್ಲಾ, ನಾರಾಯಣಗೌಡ, ನಾಗರಾಜು, ರಾಜು, ಮಲ್ಲೇಶ್‌, ಜಿ.ಕೆ.ರಂಗಣ್ಣ ಜಯರಾಮೇಗೌಡ , ಬಸವರಾಜು , ಮಹದೇವ್‌, ನರಸಿಂಹ ಇದ್ದರು.


Trending videos

Back to Top