CONNECT WITH US  

ಪರವಾನಗಿ ಇಲ್ಲದ ಕ್ಲಿನಿಕ್‌ಗಳಿಗೆ ಬೀಗ

ಕುದೂರು: ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‌ನಾಥ್‌ರವರು ತಾಲೂಕಿನ ಕ್ಲಿನಿಕ್‌ಗಳ ಮೇಲೆ ಶುಕ್ರವಾರ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 

ಪರವಾನಗಿ ಇಲ್ಲದ ಕ್ಲಿನಿಕ್‌ಗಳು: ಕುದೂರಿನಲ್ಲಿ ಪರವಾನಗಿ ಪಡೆಯದೆ ನಡೆಸುತ್ತಿದ್ದ ಕ್ಲಿನಿಕ್‌ಒಂದಕ್ಕೆ ಬೀಗ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದೂರಿನ ಡಾ.ರಘು ಕ್ಲಿನಿಕ್‌, ಡಾ.ಜಯಣ್ಣ ಸುಶೃತ, ಗಣೇಶ, ಮಂಗಳೂರು, ಸೋಲೂರಿನ ನ್ಯಾಷನಲ್‌, ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ನಲ್ಲಿರುವ ಶ್ರೀರಂಗ, ಕೃಷ್ಣಪ್ರಸಾದ್‌, ಡಾ.ಸತ್ಯನಾರಾಯಣರಾಜು ಮಾಲಿಕತ್ವದ ಪ್ರಶಾಂತ ಕ್ಲಿನಿಕ್‌,

ಡಾ.ಜ್ಯೋತಿರಾಜುರವರ ಪ್ರಶಾಂತ ಕ್ಲಿನಿಕ್‌, ಶ್ರೀನಿವಾಸ್‌ ಮಕ್ಕಳ ಚಿಕಿತ್ಸಾಲಯ, ವಿನಾಯಕ ಕ್ಲಿನಿಕ್‌ ಮಾಲೀಕರು ಪರವನಗಿ ಪಡೆಯದೇ ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿರುವುದು ಕಂಡು ಬಂದಿದೆ ಎಂದು ದಾಖಲೆ ಸಮೇತ ವಿವರಿಸಿದರು. ಮಾಗಡಿ ತಾಲೂಕಿನಲ್ಲಿ 11 ಲ್ಯಾಬ್‌ಗಳಲ್ಲಿ ಚೈತನ್ಯ ಡಯಾಗ್ನೊಸ್ಟಿಕ್‌ ಸೆಂಟರ್‌, ಹರ್ಷಿತಾ ಲ್ಯಾಬ್‌, ಜೆ.ಕೆ.ಸೋಲೂರಿನ ಸ್ನೇಹಾಲಯ ಲ್ಯಾಬ್‌ಗಳು ಪರವಾನಗಿ ಪಡೆದಿವೆ ಎಂದು ಹೇಳಿದರು.  

ದಾಖಲೆ ಸಲ್ಲಿಕೆ: ಎಸ್‌ಆರ್‌ಎಸ್‌ ಲ್ಯಾಬ್‌, ಬಾಸಾಲ್ಯಾಬ್‌, ಕುದೂರಿನ ಆರ್‌.ವಿ.ಲ್ಯಾಬ್‌, ಸುಶೃತ ಲ್ಯಾಬ್‌, ಧರ್ಮಸ್ಥಳ ಮಂಜುನಾಥ ಲ್ಯಾಬ್‌ ಪರವಾನಗಿ ಪಡೆದಿಲ್ಲ. ಸೋಲೂರಿನ ರವಿ ಲ್ಯಾಬ್‌ ಮತ್ತು ನ್ಯಾಷನಲ್‌ ಲ್ಯಾಬ್‌ ಪರವಾನಗಿ ಪಡೆಯಲು ದಾಖಲೆ ಸಲ್ಲಿಸಿದ್ದಾರೆ ಎಂದು ಹೇಳಿದರು.  
ಮಾಗಡಿ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಕ್ಲಿನಿಕ್‌ಗಳು ಹಾಗೂ 11 ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತವೆ. ಅದರಲ್ಲಿ ಮಾಗಡಿಯ ಚೌಡೇಶ್ವರಿ ಕ್ಲಿನಿಕ್‌, ಮಹಾಂತೇಶ್‌ ಕಣ್ಣಿ ನ ಚಿಕಿತ್ಸಾಲಯ, ಸೋಲೂರಿನ ಸ್ನೇಹಾಲಯ ಕ್ಲಿನಿಕ್‌ಗಳು ಕೆಪಿಎಂಇ ಕಾಯಿದೆ ಅಡಿ ಪರವಾನಗಿ ಪಡೆದಿವೆ ಎಂದು ಹೇಳಿದರು.

ಮಾಗಡಿಯ ಡಾ.ರಘುವನ್‌ ರವರ ಧರ್ಮಸ್ಥಳ, ಡಾ.ವಿದ್ಯಾ ಮಾಲಿಕತ್ವದ ಧರ್ಮಸ್ಥಳ ಕ್ಲಿನಿಕ್‌ ಗಳು, ಮಂಗಳೂರು ಕ್ಲಿನಿಕ್‌, ಮಾತೃಶ್ರೀ ಕ್ಲಿನಿಕ್‌, ಮೈಸೂರು ಕ್ಲಿನಿಕ್‌, ಲಕ್ಷ್ಮೀ ಕ್ಲಿನಿಕ್‌, ರವಿ ಕ್ಲಿನಿಕ್‌, ಪ್ರಶಂತ್‌ ಕ್ಲಿನಿಕ್‌, ಮಂಜುನಾಥ ಕ್ಲಿನಿಕ್‌, ಪರವಾನಗಿ ಪಡೆಯಲು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.  

Trending videos

Back to Top