CONNECT WITH US  

ರಾಮನಗರ : ದರ್ಶನ್‌ ಅಭಿಮಾನಿಗಳಿಗೆ ಲಾಠಿ ರುಚಿ ; ನೂಕು ನುಗ್ಗಲು 

ರಾಮನಗರ: ಇಲ್ಲಿನ ಹೆದ್ದಾರಿಯಲ್ಲಿ  ನಿರ್ಮಾಣವಾಗಿರುವ ನೂತನ ಎಂ.ಎಸ್‌.ಗೋಲ್ಡ್‌&ಡೈಮಂಡ್‌ ಮಳಿಗೆ ಉದ್‌ಘಾಟನೆಗೆ ಆಗಮಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ನೋಡಲು ಸಾವಿರಾರು ಜನ ಮುಗಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ದರ್ಶನ್‌ ನೋಡಲೆಂದು ಸಾವಿರಾರು ಜನರು ಜಮಾವಣೆಗೊಂಡಿದ್ದರು. ಸಂಚಾರವೂ ಅಸ್ತವ್ಯಸ್ತ ಗೊಂಡಿತ್ತು. 

ದರ್ಶನ್‌ ನೋಡುತ್ತಿದ್ದಂತೆ ಜನರು ಮುಗಿ ಬಿದ್ದಿದ್ದು, ಪೊಲೀಸರು ನಿಯಂತ್ರಿಸಲು ಸಾಧ್ಯವಾಗದೆ ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. 

ಅಭಿಮಾನಿಗಳ ಆಕ್ರೋಶ 
ಸಮಾರಂಭದ ವೇದಿಕೆಯಲ್ಲಿ ಪರಭಾಷಾ ಹಾಡುಗಳನ್ನು ಗಾಯಗರು ಹಾಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ದರ್ಶನ್‌ ಅಭಿನಯದ ಚಿತ್ರಗಳ ಹಾಡನ್ನು ಹಾಡುವಂತೆ  ನೀರಿನ ಬಾಟಲ್‌ ಎಸೆದಿದ್ದು, ವಿದ್ಯುತ್‌ ಕಂಬದಲ್ಲಿದ್ದ ಟ್ಯೂಬ್‌ಲೈಟ್‌ ಪುಡಿಯಾಗಿದೆ. 

Trending videos

Back to Top