CONNECT WITH US  

ದೇವಾಲಯ ಸಾಮರಸ್ಯದ ಸ್ಥಳಗಳು

ರಾಮನಗರ: ದೇವಾಲಯಗಳಲ್ಲಿ ನಡೆಯುವ ವಿಶೇಷ ಸಂದರ್ಭಗಳ ವೇಳೆ ಗ್ರಾಮಸ್ಥರೆಲ್ಲರೂ ಒಂದೇ ಕಡೆ ಸೇರಿ, ದ್ವೇಷ, ಅಸೂಯೆ, ವೈರತ್ವ ಮರೆತು ಒಗ್ಗಟ್ಟಾಗಿ ದೇವರ ಸೇವೆಯಲ್ಲಿ ತೊಡಗುವುದರಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತವೆ. ಹೀಗಾಗಿ ದೇವಾಲಯಗಳು ಸಾಮರಸ್ಯದ ಸ್ಥಳಗಳಾಗಿವೆ ಎಂದು ಮಾಜಿ ಶಾಸಕ ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಕೈಲಾಂಚ ಹೋಬಳಿಯ ಚನ್ನಮಾನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾರಮ್ಮದೇವಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವಾಲಯಗಳು ನೆಮ್ಮದಿಯ ತಾಣಗಳಾಗಿದ್ದು ಇಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ಮನಸ್ಸಿಗೆ ಶಾಂತಿ ತಂದುಕೊಡುತ್ತವೆ ಎಂದು ಹೇಳಿದರು. 

 ವಾಜಪೇಯಿ ಸ್ಮರಿಸಿದ ಅನಿತಾ: ಇದೇ ವೇಳೆ ಅನಿತಾ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಸ್ಮರಿಸಿದರು. ದೇಶವಿಂದು ಒಬ್ಬ ಸಜ್ಜನ ರಾಜಕರಣಿಯನ್ನು ಕಳೆದುಕೊಂಡಿದೆ. ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಜನ ಇಷ್ಟಪಡುತ್ತಾರೆ, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. 

ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯ: ನೂತನವಾಗಿ ನಿರ್ಮಿಸಿರುವ ಮಾರಮ್ಮ ದೇವಿ ದೇವಲಾಯದಲ್ಲಿ ಪ್ರಾಣ ಪ್ರತಿಷ್ಠೆ ಸೇರಿದಂತೆ ಹೋಮ, ಹವನ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ರಾಮನಗರದ ಬಲಮುರಿ ದೇವಾಲಯದ ಪ್ರಧಾನ ಅರ್ಚಕ ಗಣೇಶ್‌ ಭಟ್‌ ಮತ್ತು ತಂಡ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಜಿಪಂ ಸದಸ್ಯೆ ಪ್ರಭಾವತಿ, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ರಾಜಣ್ಣ, ತಾಪಂ ಸದಸ್ಯರುಗಳಾದ ಭದ್ರಯ್ಯ, ಲಕ್ಷಿಕಾಂತ್‌, ಜೆಡಿಎಸ್‌ ರಾಜ್ಯ ವಕ್ತಾರ ಬಿ.ಉಮೇಶ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ಅಶ್ವತ್ಥ್, ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ, ತಾಲೂಕು ಕುರುಬರ ಸಂಘಧ ಉಪಾಧ್ಯಕ್ಷ ನಾಗೇಶ್‌,

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಾಸ್ಕರ್‌, ಕಾರ್ಯದರ್ಶಿ ರೇವಣ್ಣ, ಗೌರವಾಧ್ಯಕ್ಷ ಹೊನ್ನಯ್ಯ, ಗ್ರಾಮದ ಪ್ರಮುಖರಾದ ಅಪ್ಪಾಜಣ್ಣ, ಬೋರಲಿಂಗಯ್ಯ, ಡೇರಿ ಅರ್ಕೇಶ್‌, ರಾಚಾಚಾರಿ, ಸಿ.ಎಂ. ಮಲವಯ್ಯ, ಶಿವರಾಮಯ್ಯ, ಎಚ್‌. ಸುರೇಶ್‌, ರಾಮಕೃಷ್ಣಯ್ಯ, ಗುತ್ತಲಯ್ಯ, ಶಶಿಕುಮಾರ್‌, ಹರೀಶ್‌ ಇದ್ದರು. 

Trending videos

Back to Top