CONNECT WITH US  

ಬಾವಿಗೆ ಹಾರಿ ಗೃಹಿಣಿ ಆತ್ಮಹತ್ಯೆ 

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಗೃಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಮಂಗಳವಾರಪೇಟೆ ಸಮೀಪದ ಅಪ್ಪಗೆರೆ ಬಳಿ ನಡೆದಿದೆ. ಪಟ್ಟಣದ ಮಂಗಳವಾರಪೇಟೆ ನಿವಾಸಿ ಗೀತಾ(30) ಮೃತ ಗೃಹಿಣಿ.

ಮಂಗಳವಾರಪೇಟೆಯ ಚಿಕ್ಕಮಾಸ್ತಯ್ಯ ಎಂಬುವರ ಮಗ ಮದನ್‌ರ ಪತ್ನಿಯಾದ ಈಕೆ ಶಾಲೆಯಿಂದ ಮಕ್ಕಳನ್ನು ಕರೆತರುವುದಾಗಿ ಹೇಳಿ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಡಿಕೆ ಹೊಸಹಳ್ಳಿ ಗ್ರಾಮದ ಶಿವಣ್ಣರ ಮಗಳಾದ ಈಕೆಯನ್ನು ಮಂಗಳವಾರಪೇಟೆಯ ಮದನ್‌ ಜತೆ ಕೆಲವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

ಇಬ್ಬರು ಮಕ್ಕಳನ್ನು ಹೊಂದಿರುವ ಮದನ್‌ ರೇಷ್ಮೆನೂಲು ತೆಗೆಯುವ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top